ಆಂಡ್ರಾಯ್ಡ್‌ 13 ನಲ್ಲಿ ಈ ಫೀಚರ್ಸ್‌ಗಳು ನಿಮಗೆ ಲಭ್ಯವಾಗಲಿವೆ!

|

ಗೂಗಲ್‌ನ ಆಂಡ್ರಾಯ್ಡ್‌ 13 ಅಪ್‌ಡೇಟ್‌ ಸದ್ಯದಲ್ಲೇ ಎಲ್ಲಾ ಡಿವೈಸ್‌ಗಳಲ್ಲಿಯೂ ಲಭ್ಯವಾಗಲಿದೆ. ಪ್ರಸ್ತುತ ಗೂಗಲ್‌ನ ಪಿಕ್ಸೆಲ್‌ ಡಿವೈಸ್‌ಗಳಲ್ಲಿ ಮಾತ್ರ ಆಂಡ್ರಾಯ್ಡ್‌ 13 ಅನ್ನು ಹೊರತರಲಾಗಿದೆ. ಇನ್ನು ಆಂಡ್ರಾಯ್ಡ್‌ 13 ಆಂಡ್ರಾಯ್ಡ್‌ 12 ಆವೃತ್ತಿಯ ಉತ್ತರಾಧಿಕಾರಿಯಾಗಿದೆ. ಆಂಡ್ರಾಯ್ಡ್‌ 13 ಅಲ್ಲಿ ಹಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಇದರಿಂದ ಬಳಕೆದಾರರಿಗೆ ಆಂಡ್ರಾಯ್ಡ್‌ ಡಿವೈಸ್‌ಗಳನ್ನು ಬಳಸುವಾಗ ಇನ್ನಷ್ಟು ಉತ್ತಮ ಅನುಭವ ಸಿಗಲಿದೆ ಎನ್ನಲಾಗಿದೆ.

ಗೂಗಲ್‌

ಹೌದು, ಗೂಗಲ್‌ನ ಆಂಡ್ರಾಯ್ಡ್‌ 13 ಇದೀಗ ಗೂಗಲ್‌ ಪಿಕ್ಸೆಲ್‌ ಡಿವೈಸ್‌ಗಳಲ್ಲಿ ಲಭ್ಯವಾಗಲಿದೆ. ಈ ಮೂಲಕ ಆಂಡ್ರಾಯ್ಡ್‌ 12 ನಿಂದ ಆಂಡ್ರಾಯ್ಡ್‌ 13 ಗೆ ಅಪ್ಡೇಟ್‌ ಆಗುವ ಕಾಲ ಸನ್ನಿಹಿತವಾಗಿದೆ. ಇನ್ನು ಆಂಡ್ರಾಯ್ಡ್‌ 13 ಒಳಗೊಂಡಿರುವ ಫೀಚರ್ಸ್‌ಗಳ ಬಗ್ಗೆ ಸಾಕಷ್ಟು ಕುತೂಹಲ ಗರಿಗೆದರಿದೆ. ಏಕೆಂದರೆ ಆಂಡ್ರಾಯ್ಡ್‌ 13 ಆಪಲ್‌ನ ಐಒಎಸ್‌ ಮಾದರಿಯಲ್ಲಿರಲಿದೆ ಎನ್ನಲಾಗ್ತಿದೆ. ಅದರಲ್ಲೂ ಎನ್‌ಕ್ರಿಪ್ಡ್‌ ಮಾಡಿದ 1-1 ಸಂದೇಶ ಸಂಭಾಷಣೆಗಳನ್ನು ಸೇರಿಸಬಹುದು ಅನ್ನೊದು ಸಾಕಷ್ಟು ಆಸಕ್ತಿದಾಯಕವಾಗಿದೆ. ಹಾಗಾದ್ರೆ ಆಂಡ್ರಾಯ್ಡ್‌ 13 ಒಳಗೊಂಡಿರುವ ಅತ್ಯುತ್ತಮ ಫೀಚರ್ಸ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೋರ್‌ ಮೆಟೀರಿಯಲ್‌ ಯು

ಮೋರ್‌ ಮೆಟೀರಿಯಲ್‌ ಯು

ಆಂಡ್ರಾಯ್ಡ್‌ 13 ಒಳಗೊಂಡಿರುವ ಪ್ರಮುಖ ಫೀಚರ್ಸ್‌ಗಳಲ್ಲಿ ಮೆಟೀರಿಯಲ್ ಯು ಒಂದಾಗಿದೆ. ಇದರಲ್ಲಿ ನಿಮ್ಮ ವಾಲ್‌ಪೇಪರ್ ಅನ್ನು ಆಧರಿಸಿ ನಿಮ್ಮ ಯೂಸರ್‌ ಇಂಟರ್ಫೇಸ್ (UI) ಅನ್ನು ಪರ್ಸನಲೈಜ್ಡ್‌ ಮಾಡಬಹುದಾಗಿದೆ. ಇದು ಆಂಡ್ರಾಯ್ಡ್‌ನ ಕಲರ್‌ ಪ್ಯಾಲೆಟ್ ಮೇಲೆ ಪ್ರಭಾವ ಬೀರುತ್ತದೆ. ಅಂದರೆ ನಿಮ್ಮ ವಾಲ್‌ಪೇಪರ್‌ಗೆ ಸೆಟ್‌ ಮಾಡಲು ಆಂಡ್ರಾಯ್ಡ್‌ ಕಲರ್‌ ಸ್ಕೀಮ್‌ ಅನ್ನು ಅಳವಡಿಸಿಕೊಳ್ಳಲಿದೆ. ಅಲ್ಲದೆ ಥರ್ಡ್-ಪಾರ್ಟಿ ಅಪ್ಲಿಕೇಶನ್ ಐಕಾನ್‌ಗಳನ್ನು ಸೇರಿಸಲು ಈ ಫಿಚರ್ಸ್‌ ಅನ್ನು ವಿಸ್ತರಿಸಲಾಗುತ್ತಿದೆ. ಅಲ್ಲದೆ ಮೀಡಿಯಾ ಕಂಟ್ರೋಲ್‌ಗಳನ್ನು ಕವರ್ ಮಾಡಲು ಗೂಗಲ್‌ ಮೆಟೀರಿಯಲ್ ಯು ಅನ್ನು ಸಹ ವಿಸ್ತರಿಸಿದೆ.

ಪ್ರತಿ ಅಪ್ಲಿಕೇಶನ್ ಭಾಷೆಯ ವೈಯಕ್ತೀಕರಣ

ಪ್ರತಿ ಅಪ್ಲಿಕೇಶನ್ ಭಾಷೆಯ ವೈಯಕ್ತೀಕರಣ

ಆಂಡ್ರಾಯ್ಡ್‌ 13 ಅಲ್ಲಿ ಮಲ್ಟಿ ಲ್ಯಾಂಗ್ವೇಜ್‌ ಆಯ್ಕೆಯು ನಿಮಗೆ ಉಪಯುಕ್ತ ಎನಿಸಲಿದೆ. ಇದರಲ್ಲಿ ನೀವು ನಿಮ್ಮ ಆದ್ಯತೆಯ ಭಾಷೆಯನ್ನು ಪ್ರತಿ ಅಪ್ಲಿಕೇಶನ್ ಆಧಾರದ ಮೇಲೆ ಸೆಟ್‌ ಮಾಡಬಹುದಾಗಿದೆ. ಆದರೆ ಬೀಟಾಸ್‌ ಸಮಯದಲ್ಲಿ ಇದನ್ನು ಎಲ್ಲಾ ಅಪ್ಲಿಕೇಶನ್‌ಗಳಿಗೆ ಅನ್ವಯಿಸಲಾಗುವುದಿಲ್ಲ. ಬದಲಿಗೆ ಡೆವಲಪರ್‌ಗಳು ಈ ಕಾರ್ಯವನ್ನು ಅನುಮತಿಸಬೇಕಾಗುತ್ತದೆ. ಇದಲ್ಲದೆ ನೀವು ನಿಮ್ಮ ಆದ್ಯತೆಯ ಭಾಷೆಯಲ್ಲಿ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳನ್ನು ಸರ್ಚ್‌ ಮಾಡಬಹುದು. ಇದು ಭವಿಷ್ಯದಲ್ಲಿ ಸಾಕಷ್ಟು ಉಪಯುಕ್ತವಾಗಲಿದೆ.

RCS ಮೆಸೇಜಿಂಗ್ ಸುಧಾರಣೆಗಳು

RCS ಮೆಸೇಜಿಂಗ್ ಸುಧಾರಣೆಗಳು

ಇನ್ನು ಆಂಡ್ರಾಯ್ಡ್‌ 13 ಅಲ್ಲಿ ಕಂಡು ಬರುವ ಪ್ರಮುಖ ಫೀಚರ್ಸ್‌ ಅಂದರೆ ಗೂಗಲ್‌ ತನ್ನ ಶಾರ್ಟ್‌ ಮೆಸೇಜ್‌ ಸರ್ವಿಸ್‌ ಅನ್ನು (SMS) ರಿಚ್ ಕಮ್ಯುನಿಕೇಶನ್ ಸರ್ವಿಸ್‌ಗೆ (RCS) ಅಪ್‌ಗ್ರೇಡ್ ಮಾಡುತ್ತಿರುವುದು. ಈ ಸೇವೆಯಲ್ಲಿ ನಿಮಗೆ 1-1 ಸಂಭಾಷಣೆಗಳಿಗೆ ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್ ಸೇರಿದಂತೆ ಉತ್ತಮ ಪ್ರೈವೆಸಿ ಫೀಚರ್ಸ್‌ಗಳು ಲಭ್ಯವಾಗಲಿವೆ. ಇನ್ನು RCSನಲ್ಲಿ ನೀವು ಗುಣಮಟ್ಟದ ಫೋಟೋ ಶೇರ್‌ ಕೂಡ ಮಾಡಬಹುದಾಗಿದೆ.

ಆಂಡ್ರಾಯ್ಡ್ ಫೋಟೋ ಪಿಕ್ಕರ್

ಆಂಡ್ರಾಯ್ಡ್ ಫೋಟೋ ಪಿಕ್ಕರ್

ಆಂಡ್ರಾಯ್ಡ್‌ 13 ಅಪ್ಡೇಟ್‌ನಲ್ಲಿ ನೀವು iOS ಗೆ ಹೋಲುವ ಫೋಟೋ-ಪಿಕ್ಕಿಂಗ್ ಆಯ್ಕೆಗಳನ್ನು ಕಾಣಬಹುದು. ಇದರಿಂದ ಆಂಡ್ರಾಯ್ಡ್‌ನಲ್ಲಿ ನೀವು ಅಪ್ಲಿಕೇಶನ್‌ಗೆ ಯಾವ ಫೋಟೋಗಳು ಮತ್ತು ವೀಡಿಯೊಗಳಿಗೆ ಪ್ರವೇಶವಿದೆ ಎಂಬುದನ್ನು ಆಯ್ಕೆ ಮಾಡಬಹುದು.

ಗೂಗಲ್‌ ವ್ಯಾಲೆಟ್‌ನಲ್ಲಿ ಅಪ್ಡೇಟ್‌

ಗೂಗಲ್‌ ವ್ಯಾಲೆಟ್‌ನಲ್ಲಿ ಅಪ್ಡೇಟ್‌

ಗೂಗಲ್‌ ವ್ಯಾಲೆಟ್‌ ಅನ್ನು ಕೇವಲ ಸರ್ವಿಸ್‌ ಆಧಾರಿತ ಪಾವತಿ ವಿಧಾನಗಳನ್ನು ಮೀರಿ ವಿಸ್ತರಿಸುವ ಪ್ರಯತ್ನ ಆಂಡ್ರಾಯ್ಡ್‌ 13 ಅಲ್ಲಿ ಮಾಡಲಾಗಿದೆ. ಅದರಂತೆ ಗೂಗಲ್‌ ವಾಲೆಟ್‌ನಲ್ಲಿ ನೀವು ಹೊಸ ಜೆನೆರಿಕ್ ಕಾರ್ಡ್ ಟ್ಯಾಬ್ ಅನ್ನು ಕಾಣಬಹುದು. ಇದು ಸದಸ್ಯತ್ವ ಕಾರ್ಡ್‌ಗಳು ಮತ್ತು ಕಾಯ್ದಿರಿಸುವಿಕೆಗಳಂತಹ ಹಿಂದಿನ ಪಾಸ್ ಪ್ರಕಾರಗಳನ್ನು ಸೇವ್‌ ಮಾಡಲು ಅವಕಾಶ ನೀಡಲಿದೆ.

Best Mobiles in India

English summary
Google's Android 13 update is rolling out to Pixel devices now. Android 13 expands upon features introduced with last year’s Android 12.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X