ಫೀಚರ್‌ ಫೋನ್‌ ಖರೀದಿಸೋರಿಗೆ ನೋಕಿಯಾ ಕಂಪೆನಿಯ ಈ ಫೋನ್‌ಗಳು ಬೆಸ್ಟ್‌!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಅಬ್ಬರ ಜೋರಾಗಿದೆ. ಮೊಬೈಲ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಆವರಿಸಿಕೊಂಡಿವೆ. ಇದರ ನಡುವೆಯೂ ಫೀಚರ್‌ ಫೋನ್‌ಗಳು ಇನ್ನು ಕೂಡ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಇಂಟ್ರೆಸ್ಟಿಂಗ್‌ ವಿಚಾರವಾಗಿದೆ. ಇಂದಿಗೂ ಕೂಡ ಸ್ಮಾರ್ಟ್‌ಫೋನ್‌ ಬಳಕೆದಾರರು ಸಹ ಫೀಚರ್‌ ಫೋನ್‌ ಬಳಸುವುದಕ್ಕೆ ಬಯಸುತ್ತಾರೆ. ಸ್ಮಾರ್ಟ್‌ಫೋನ್‌ ಜೊತೆಗೊಂದು ಫೀಚರ್‌ ಫೋನ್‌ ಬಳಸುವ ಮಂದಿ ಬಹಳಷ್ಟು ಮಂದಿ ಇದ್ದಾರೆ. ಇದೇ ಕಾರಣಕ್ಕೆ ಈಗಲೂ ಕೂಡ ಹಲವು ಕಂಪೆನಿಗಳು ಫೀಚರ್‌ ಫೋನ್‌ಗಳನ್ನು ಪರಿಚಯಿಸುತ್ತಿವೆ.

ಫೀಚರ್‌

ಹೌದು, ಮಾರುಕಟ್ಟೆಯಲ್ಲಿ ಫೀಚರ್‌ ಫೋನ್‌ಗಳು ಇಂದಿಗೂ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಇದರಲ್ಲಿ ನೋಕಿಯಾ ಕಂಪೆನಿ ಫೀಚರ್‌ ಫೋನ್‌ಗಳ ವಿಚಾರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಇಂದಿನ ಜನರ ಅಗತ್ಯಗಳಿಗೆ ಅನುಗುಣವಾಗಿ ಫೀಚರ್‌ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಹಾಗಾದ್ರೆ ಮೊಬೈಲ್‌ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಫೀಚರ್‌ ಫೋನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್‌

ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್‌

ನೋಕಿಯಾ ಎಕ್ಸ್‌ಪ್ರೆಸ್‌ ಮ್ಯೂಸಿಕ್‌ (5310) ಭಾರತದಲ್ಲಿ 3,649ರೂ. ಬೆಲೆಗೆ ದೊರೆಯಲಿದೆ. ಇದು FM ರೇಡಿಯೋ ಮತ್ತು MP3 ಬೆಂಬಲವನ್ನು ನೀಡಲಿದೆ. ಇದಕ್ಕಾಗಿ ಮಿಸಲಾದ ಮ್ಯೂಸಿಕ್‌ ಬಟನ್‌ಗಳು ಮತ್ತು ಡ್ಯುಯಲ್ ಫ್ರಂಟ್ ಫೇಸಿಂಗ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಫೋನ್‌ 2.4 ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಫೀಚರ್‌ ಫೋನ್‌ 1,200mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

ನೋಕಿಯಾ 110

ನೋಕಿಯಾ 110

ನೋಕಿಯಾ 110 ಭಾರತದಲ್ಲಿ 1,699ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಈ ಫೀಚರ್‌ ಫೋನ್‌ 1.77 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ನೀವು ಮೆಮೊರಿ ಕಾರ್ಡ್‌ ಬಳಸುವುದಕ್ಕೆ ಅವಕಾಶವಿದ್ದು, ಮೆಮೊರಿ ಕಾರ್ಡ್‌ನಲ್ಲಿರುವ ಹಾಡುಗಳನ್ನು ಪ್ಲೇ ಮಾಡವುದಕ್ಕೆ MP3 ಪ್ಲೇಯರ್ ಅನ್ನು ನೀಡಲಾಗಿದೆ. ಇದು ಸ್ನೇಕ್‌ ಗೇಮ್‌ ಅನ್ನು ಒಳಗೊಂಡಿದ್ದು, ವಾಯರ್‌ಲೆಸ್‌ ಎಫ್‌ಎಂ ರೇಡಿಯೊವನ್ನು ಸಹ ಹೊಂದಿದೆ.

ನೋಕಿಯಾ 105 (2022)

ನೋಕಿಯಾ 105 (2022)

ನೋಕಿಯಾ 105 (2022) ಫೀಚರ್‌ ಫೋನ್‌ ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. ಈ ಫೋನ್‌ 1,299ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಫೀಚರ್‌ ಫೋನ್‌ 1.77 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದರಲ್ಲಿ ಕ್ಲಾಸಿಕ್‌ ಸ್ನೇಕ್‌ನಂತಹ ಪ್ರೀ ಲೋಡ್‌ ಗೇಮ್‌ಗಳನ್ನು ನೀಡಲಾಗಿದೆ. ಜೊತೆಗೆ ಇದು MP3 ಪ್ಲೇಯರ್‌ ಬೆಂಬಲಿಸಲಿದೆ. ಈ ಫೋನ್‌ನಲ್ಲಿ 2,000 ಕಂಟ್ಯಾಕ್ಟ್‌ಗಳನ್ನು ಮತ್ತು 500 SMS ಗಳನ್ನು ಸೇವ್‌ ಮಾಡುವುದಕ್ಕೆ ಅವಕಾಶವಿದೆ.

ನೋಕಿಯಾ 225 4G

ನೋಕಿಯಾ 225 4G

ನೋಕಿಯಾ 225 4G ಫೀಚರ್‌ ಫೋನ್‌ ಭಾರತದಲ್ಲಿ 3,749ರೂ. ಬೆಲೆಯಲ್ಲಿ ದೊರೆಯಲಿದೆ. ಈ ಫೋನ್‌ 2.4 ಇಂಚಿನ ಬಿಗ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೊಕ್ USM9117 ಚಿಪ್‌ಸೆಟ್ ಅನ್ನು ಹೊಂದಿದೆ. ಈ ಫೋನ್‌ನಲ್ಲಿ ನಿಮಗೆ FM ರೇಡಿಯೋ ಕೂಡ ಲಭ್ಯವಾಗಲಿದ್ದು, 64MB RAM ಅನ್ನು ಹೊಂದಿದೆ. ಇದು ಬ್ಲೂಟೂತ್ 5.0 ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಡ್ಯುಯಲ್‌ ಸಿಮ್‌ ಅನ್ನು ಬಳಸುವುದಕ್ಕೆ ಅವಕಾಶವಿದೆ. ಜೊತೆಗೆ 1,150mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಇದರಲ್ಲಿ ನೀಡಲಾಗಿದೆ.

ನೋಕಿಯಾ 2660 ಫ್ಲಿಪ್

ನೋಕಿಯಾ 2660 ಫ್ಲಿಪ್

ನೋಕಿಯಾ 2660 ಫ್ಲಿಪ್ ಫೀಚರ್‌ ಫೋನ್‌ ಆಕರ್ಷಕವಾದ ಮಡಚಬಹುದಾದ ವಿನ್ಯಾಸವನ್ನು ಹೊಂದಿದೆ. ಈ ಫೀಚರ್‌ ಫೋನ್‌ ಭಾರತದಲ್ಲಿ 4,549ರೂ. ಬೆಲೆಯನ್ನು ಹೊಂದಿದೆ. ಇನ್ನು ಈ ಫೋನ್‌ ಡ್ಯುಯಲ್ ಡಿಸ್‌ಪ್ಲೇ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ ಡಿಸ್‌ಪ್ಲೇ 2.8 ಇಂಚಿನ ಪ್ಯಾನೆಲ್ ಆಗಿದ್ದರೆ, ಔಟ್‌ಸೈಡ್‌ ಡಿಸ್‌ಪ್ಲೇ 1.77 ಇಂಚಿನ ಡಿಸ್‌ಪ್ಲೇ ಆಗಿದೆ.

Best Mobiles in India

Read more about:
English summary
Here's Best Nokia feature phones in indian market.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X