ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ನೀಡುವ ಬೆಸ್ಟ್‌ ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳು!

|

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಇದರಲ್ಲಿ ನೆಟ್‌ಫ್ಲಿಕ್ಸ್‌ ಕೂಡ ಮುಂಚೂಣಿಯಲ್ಲಿದೆ. ಇನ್ನು ನೆಟ್‌ಫ್ಲಿಕ್ಸ್‌ ತನ್ನ ಚಂದಾದಾರರಿಗೆ ನಾಲ್ಕು ವಿಭಿನ್ನ ಪ್ಲಾನ್‌ಗಳನ್ನು ನೀಡುತ್ತಿದೆ. ಇದರಲ್ಲಿ ಮೊಬೈಲ್‌ ಓನ್ಲಿ ಪ್ಲಾನ್‌ 149ರೂ.ಗಳಿಂದ ರಿಂದ ಪ್ರಾರಂಭವಾಗುತ್ತದೆ. ಈ ಪ್ಲಾನ್‌ನಲ್ಲಿ ಒಳಕೆದಾರರು ಒಂದು ಮೊಬೈಲ್ ಡಿವೈಸ್‌ನಲ್ಲಿ ಮಾತ್ರ ಸ್ಟ್ರೀಮಿಂಗ್‌ ಸೇವೆಯನ್ನು ಪ್ರವೇಶಿಸಲು ಅನುಮತಿಸುತ್ತದೆ. ಈ ಚಂದಾದಾರಿಕೆಯ ಪ್ಲಾನ್‌ ಮಾತ್ರವಲ್ಲದೆ ಇತರೆ ಮಾರ್ಗಗಳಿಂದಲೂ ಕೂಡ ನೀವು ಮೆಟ್‌ಫ್ಲಿಕ್ಸ್‌ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ.

ನೆಟ್‌ಫ್ಲಿಕ್ಸ್‌

ಹೌದು, ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಪ್ಲಾನ್‌ ಮಾತ್ರವಲ್ಲದೆ ಟೆಲಿಕಾಂ ಕಂಂಪೆನಿಗಳು ನೀಡುವ ಪ್ಲಾನ್‌ಗಳ ಮೂಲಕವೂ ನೆಟ್‌ಫ್ಲಿಕ್ಸ್‌ ಪ್ರವೇಶಿಸಬಹುದು. ಅಂದರೆ ಟೆಲಿಕಾಂ ಕಂಪೆನಿಗಳಾದ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ವಿ ತಮ್ಮ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ಸಹ ನೀಡುತ್ತಿವೆ. ಇವುಗಳಲ್ಲಿ ಈ ಟೆಲಿಕಾಂಗಳು ವಿಭಿನ್ನ ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ವಿಭಿನ್ನ OTT ಚಂದಾದಾರಿಕೆಯನ್ನು ಸಂಯೋಜಿಸಿದ್ದಾರೆ. ಹಾಗಾದ್ರೆ ಯಾವೆಲ್ಲಾ ಪೋಸ್ಟ್‌ ಪೇಯ್ಡ್‌ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಪಡೆಯಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್

ಏರ್‌ಟೆಲ್

ಏರ್‌ಟೆಲ್ ಟೆಲಿಕಾಂ ಎರಡು ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಸೇವೆಯನ್ನು ನೀಡುತ್ತಿದೆ. ಇದರಲ್ಲಿ 1,199ರೂ. ಬೆಲೆಯ ಫ್ಯಾಮಿಲಿ ಪ್ಲಾನ್‌ ಅಪ್‌ಗ್ರೇಡ್ ಮಾಡುವ ಚಂದಾದಾರರು ನೆಟ್‌ಫ್ಲಿಕ್ಸ್‌ನ ಮೂಲ ಯೋಜನೆಗೆ ಮಾಸಿಕ ಪ್ರವೇಶವನ್ನು ಪಡೆಯುತ್ತಾರೆ. ಆದರೆ 1,599ರೂ.ಬೆಲೆಯ ಪ್ಲಾನ್‌ಗೆ ಅಪ್‌ಗ್ರೇಡ್ ಮಾಡುವವರು ನೆಟ್‌ಫ್ಲಿಕ್ಸ್ ಸ್ಟ್ಯಾಂಡರ್ಡ್ ಪ್ಲಾನ್‌ಗೆ ಪ್ರವೇಶವನ್ನು ಪಡೆಯುತ್ತಾರೆ. ಇದಲ್ಲದೆ ಫ್ಯಾಮಿಲಿ ಫ್ಲಾನ್‌ 1199ರೂ. ಯೋಜನೆಯು ತಿಂಗಳಿಗೆ 150 GB ಡೇಟಾ ಪ್ರಯೋಜನ ನೀಡುತ್ತಿದೆ. ಆದರೆ 1599ರೂ. ಪ್ಲಾನ್‌ನಲ್ಲಿ ತಿಂಗಳಿಗೆ 250GB ಡೇಟಾವನ್ನು ಪಡೆಯಬಹುದಾಗಿದೆ. ಜೊತೆಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇನ್ನು 1199ರೂ. ಬೆಲೆಯ ಯೋಜನೆಯಲ್ಲಿ ಬಳಕೆದಾರರು ಇಬ್ಬರು ಕುಟುಂಬ ಸದಸ್ಯರನ್ನು ಸೇರಿಸಬಹುದು. ಆದರೆ 1,599ರೂ.ಬೆಲೆಯ ಯೋಜನೆಯಲ್ಲಿ 3 ಕುಟುಂಬ ಆಡ್-ಆನ್‌ಗಳನ್ನು ಕಾಣಬಹುದಾಗಿದೆ.

ವೋಡಾಫೋನ್‌ ಐಡಿಯಾ

ವೋಡಾಫೋನ್‌ ಐಡಿಯಾ

ವೋಡಾಫೋನ್‌ ಐಡಿಯಾ ಟೆಲಿಕಾಂ ಮೂರು ಉನ್ನತ ಶ್ರೇಣಿಯ REDX ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಈ ಮೂರು ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ ಸ್ಟ್ರೀಮಿಂಗ್‌ ಸರ್ವಿಸ್‌ ಅನ್ನು ನೀಡಲಿದೆ. ಇದು ನಿಮಗೆ ಮೊಬೈಲ್ ಮತ್ತು ಟಿವಿಯಲ್ಲಿ ಸೇವೆಯನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇದರಲ್ಲಿ 1,099ರೂ.ಬೆಲೆಯ ವೈಯಕ್ತಿಕ ಪ್ಲಾನ್‌ ಮತ್ತು 1,699ರೂ. (3 ಸಂಪರ್ಕಗಳು) ಮತ್ತು 2,299ರೂ. (5 ಸಂಪರ್ಕಗಳು) ಬೆಲೆಯ ಫ್ಯಾಮಿಲಿ ಪ್ಲ್ಯಾನ್‌ಗಳು ಸೇರಿವೆ. ಈ ಎಲ್ಲಾ ಪ್ಲ್ಯಾನ್‌ಗಳು ಕೂಡ ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತವೆ. ಅಂದರೆ ಈ ಪ್ಲಾನ್‌ಗಳ ಪ್ರಾಥಮಿಕ ಸದಸ್ಯರು ಮಾತ್ರ ನೆಟ್‌ಫ್ಲಿಕ್ಸ್‌ ಚಂದಾದಾರಿಕೆಯನ್ನು ಪಡೆಯಬಹುದಾಗಿದ್ದು, ಆರು ತಿಂಗಳ ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ಜಿಯೋ ಪೋಸ್ಟ್‌ಪೇಯ್ಡ್ ಚಂದಾದಾರರು 399ರೂ. ಮೌಲ್ಯದ ಪರ್ಸನಲ್‌ ಪ್ಲಾನ್‌ ಮತ್ತು 599ರೂ, 799ರೂ, ಮತ್ತು 999ರೂ, ಮೌಲ್ಯದ ಫ್ಯಾಮಿಲಿ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್‌ಗೆ ಬಂಡಲ್ ಪ್ರವೇಶವನ್ನು ನೀಡಲಾಗುತ್ತದೆ. ಆದರೆ ಈ ಪ್ಲಾನ್‌ಗಳ ಚಂದಾದಾರರು ನೆಟ್‌ಫ್ಲಿಕ್ಸ್‌ ಅಪ್ಲಿಕೇಶನ್‌ನೊಂದಿಗೆ ಮೊಬೈಲ್ ಡಿವೈಸ್‌ನಲ್ಲಿ ಮಾತ್ರ ಪ್ರವೇಶಿಸಲು ಸಾಧ್ಯವಾಗಲಿದೆ. ಅಂದರೆ ನೀವು ಪಡೆಯುವ ನೆಟ್‌ಫ್ಲಿಕ್ಸ್ ಯೋಜನೆಯು ಮೊಬೈಲ್‌ಗೆ ಮಾತ್ರ ಸೀಮಿತವಾಗಿರಲಿದೆ.

ನೆಟ್‌ಫ್ಲಿಕ್ಸ್‌

ಇದಲ್ಲದೆ ನೆಟ್‌ಫ್ಲಿಕ್ಸ್‌ ಇತ್ತೀಚಿಗೆ ತನ್ನ ಹೊಸ ಪೋಸ್ಟ್‌ನಲ್ಲಿ, ನೆಟ್‌ಫ್ಲಿಕ್ಸ್ ಚಿಲಿ, ಕೋಸ್ಟಾ ರಿಕಾ ಮತ್ತು ಪೆರುಗಳಲ್ಲಿ ಎರಡು ಹೊಸ ಫೀಚರ್ಸ್‌ಗಳನ್ನು ಪರೀಕ್ಷಿಸುವುದಾಗಿ ಹೇಳಿಕೊಂಡಿದೆ. ಇದರಲ್ಲಿ ನೀವು ಖಾತೆಗಳ ನಡುವೆ ಪಾಸ್‌ವರ್ಡ್‌ಗಳನ್ನು ಶೇರ್‌ ಮಾಡುವ ವಿಧಾನದಲ್ಲಿ ಹೊಸ ಬದಲಾವಣೆ ತರಲು ಮುಂದಾಗಿದೆ. ಕೇವಲ ಒಂದೇ ಚಂದದಾರಿಕೆಯಲ್ಲಿ ಹಲವರು ಉಪಯೋಗ ಪಡೆದುಕೊಳ್ಳುವುದನ್ನು ತಪ್ಪಿಸುವುದಕ್ಕೆ ನೆಟ್‌ಫ್ಲಿಕ್‌ ಮುಂದಾಗಿದೆ. ಇದರಿಂದ ನೀವು ಪಾಸ್‌ವರ್ಡ್‌ ಶೇರ್‌ ಮಾಡುವುದಕ್ಕೂ ಕೂಡ ಶುಲ್ಕವನ್ನು ಪಾವತಿಸಬೇಕಾಗಬಹುದು ಎಂದು ಹೇಳಲಾಗಿದೆ. ನೆಟ್‌ಫ್ಲಿಕ್ಸ್ ಇದನ್ನು ಸ್ಪಷ್ಟವಾಗಿ ಉಲ್ಲೇಖಿಸದಿದ್ದರೂ, ಈ ಹೊಸ "ಫೀಚರ್ಸ್‌" ಶೀಘ್ರದಲ್ಲೇ ಇತರ ಎಲ್ಲಾ ಪ್ರದೇಶಗಳಲ್ಲೂ ಬರಬಹುದು.

Best Mobiles in India

English summary
All three major telecom operators in the country offer different postpaid plans that are bundled with a Netflix subscription.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X