ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲು ಈ ಅಪ್ಲಿಕೇಶನ್‌ಗಳು ಬೆಸ್ಟ್‌!

|

ಇತ್ತೀಚಿನ ದಿನಗಳಲ್ಲಿ ಸ್ಪ್ಯಾಮ್‌ ಕರೆಗಳ ಕಿರಕಿರಿ ಸಾಮಾನ್ಯವಾಗಿ ಬಿಟ್ಟಿದೆ. ರೋಬೋ ಕಾಲ್‌ಗಳಿಂದ ಅನುಭವಿಸುವ ಕಿರಿಕಿ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡಲು ಬಯಸುತ್ತಾರೆ. ರೋಬೋ ಕಾಲ್‌ಗಳಿಂದ ದೂರ ಉಳಿಯುವುದಕ್ಕಾಗಿ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಹೊಸ ಹೊಸ ನಂಬರ್‌ಗಳಿಂದ ಸ್ಪ್ಯಾಮ್‌ ಕರೆಗಳು ಬರುತ್ತಲೇ ಇರುತ್ತವೆ. ಇವುಗಳನ್ನು ನಿಯಂತ್ರಿಸುವುದಕ್ಕೆ ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವ ಆಪ್‌ ಬಳಸುವುದು ಸೂಕ್ತವಾಗಿದೆ.

ಸ್ಪ್ಯಾಮ್‌

ಹೌದು, ಸ್ಪ್ಯಾಮ್‌ ಮತ್ತು ರೋಬೋ ಕಾಲ್‌ಗಳನ್ನು ನಿಯಂತ್ರಿಸುವುದಕ್ಕೆ ಪ್ಲೇ ಸ್ಟೋರ್‌ನಲ್ಲಿ ಹಲವು ಅಪ್ಲಿಕೇಶನ್‌ಗಳು ಲಭ್ಯವಿದೆ. ಇವುಗಳ ಮೂಲಕ ನಿಮಗೆ ಕಿರಿಕಿರಿ ಎನಿಸುವ ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಬಹುದು. ಅಲ್ಲದೆ ಹೊಸ ನಂಬರ್‌ಗಳಿಂದ ಬರುವ ಸ್ಪ್ಯಾಮ್‌ ಕರೆಗಳನ್ನು ಕೂಡ ನಿಯಂತ್ರಿಸುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ಸ್ಪ್ಯಾಮ್‌ ಕರೆಗಳನ್ನು ಬ್ಲಾಕ್‌ ಮಾಡುವುದಕ್ಕೆ ಬೆಸ್ಟ್‌ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಟ್ರೂಕಾಲರ್

ಟ್ರೂಕಾಲರ್

ಸ್ಮಾರ್ಟ್‌ಫೋನ್‌ ಬಳಕೆದಾರರು ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡುವುದಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಟ್ರೂ ಕಾಲರ್‌ ಅಪ್ಲಿಕೇಶನ್‌ ಬಳಸುತ್ತಾರೆ. ಇದೇ ಕಾರಣಕ್ಕೆ ಜಾಗತಿಕವಾಗಿ ಟ್ರೂ ಕಾಲರ್‌ ಅಪ್ಲಿಕೇಶನ್‌ 320 ಮಿಲಿಯನ್‌ಗಿಂತಲೂ ಹೆಚ್ಇನ ಡೌನ್‌ಲೋಡ್‌ ಅನ್ನು ಹೊಂದಿದೆ. ಟ್ರೂ ಕಾಲರ್‌ ಕಾಲರ್ ಐಡಿ ಡಿವೈಸ್‌ ಆಗಿದ್ದು, ಯಾವುದೇ ದೇಶೀಯ ಅಥವಾ ಅಂತರಾಷ್ಟ್ರೀಯ ಕರೆ ಮಾಡುವವರ ಹೆಸರನ್ನು ಸೂಚಿಸಲಿದೆ. ಅಲ್ಲದೆ ಹೆಸರು ಅಥವಾ ಸಂಖ್ಯೆಯನ್ನು ಬಳಸಿಕೊಂಡು ವೈಯಕ್ತಿಕ ಬಳಕೆದಾರರ ಪ್ರೊಫೈಲ್‌ಗಳನ್ನು ಹುಡುಕುವುದಕ್ಕೆ ಅನುಮತಿಸಲಿದೆ.

ಟ್ರ್ಯಾಪ್‌ಕಾಲ್

ಟ್ರ್ಯಾಪ್‌ಕಾಲ್

ಟ್ರ್ಯಾಪ್‌ಕಾಲ್ ಅಪ್ಲಿಕೇಶನ್‌ ಕೂಡ ಸ್ಪ್ಯಾಮ್‌ ಕಾಲ್‌ಗಳನ್ನು ಗುರುತಿಸುವುದಕ್ಕೆ ಸಹಾಯ ಮಾಡಲಿದೆ. ಇದರ ಮೂಲಕ ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಬಹುದಾಗಿದೆ. ಇನ್ನು ಟ್ರಾಪ್‌ಕಾಲ್ ನಿಯಮಿತವಾಗಿ ಅಪ್‌ಡೇಟ್ ಮಾಡಲಾದ ಬ್ಲಾಕ್‌ ಲಿಸ್ಟ್‌ ಬಳಸಿಕೊಂಡ ಆಟೋಮ್ಯಾಟಿಕ್‌ ಆಗಿ ಸ್ಪ್ಯಾಮ್‌ ಕಾಲ್‌ ಬ್ಲಾಕ್‌ ಮಾಡಲಿದೆ. ಇದಲ್ಲದೆ ಒಳಬರುವ ಕರೆಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಅನ್‌ಲಾಕ್ ಮಾಡಲು ಪ್ರೀಮಿಯಂ ಅಥವಾ ಅಲ್ಟಿಮೇಟ್ ಪ್ಯಾಕೇಜ್‌ ಕೂಡ ನೀಡಲಿದೆ. ಇದಕ್ಕಾಗಿ ನಿವು ಚಂದಾದಾರಿಕೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

ಹಿಯಾ

ಹಿಯಾ

ರೋಬೋ ಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ಬಳಸಬಹುದಾದ ಅತ್ಯುತ್ತಮ ಅಪ್ಲಿಕೇಶನ್‌ಗಳಲ್ಲಿ ಹಿಯಾ(Hiya)ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇದು ಸುಮಾರು 13 ಬಿಲಿಯನ್ ಕರೆಗಳನ್ನು ವಿಶ್ಲೇಷಿಸಬಹುದಾದ ಬೃಹತ್ ಡೇಟಾಬೇಸ್ ಅನ್ನು ಹೊಂದಿದೆ. ನಿಮ್ಮನ್ನು ಸಂಪರ್ಕಿಸುವ ಯಾವುದೇ ಸಂಖ್ಯೆಯು ಹಿಯಾ ಅಪ್ಲಿಕೇಶನ್‌ ಡೇಟಾಬೇಸ್ ಮೂಲಕ ರನ್ ಆಗಲಿದೆ, ಡೇಟಾಬೇಸ್‌ಗೆ ಹೊಂದಾಣಿಕೆಯಿದ್ದರೆ, ಆ ಸಂಖ್ಯೆಯನ್ನು ಆಟೋಮ್ಯಾಟಿಕ್‌ ಬ್ಲಾಕ್‌ ಮಾಡಲಿದೆ.

ರೋಬೋಕಿಲ್ಲರ್‌

ರೋಬೋಕಿಲ್ಲರ್‌

ಹೆಸರೇ ಸೂಚಿಸುವಂತೆ ರೋಬೋಕಾಲ್‌ಗಳನ್ನು ಬ್ಲಾಕ್‌ ಮಾಡುವುದಕ್ಕೆ ರೋಬೋಕಿಲ್ಲರ್‌ ಅಪ್ಲಿಕೇಶನ್‌ ಸೂಕ್ತವಾಗಿದೆ. ಇದು ತನ್ನ ಅಲ್ಗಾರಿದಮ್‌ ಅನ್ನು ಬಳಸಿಕೊಂಡು ಸ್ಪ್ಯಾಮ್‌ ಕಾಲ್‌ಗಳನ್ನು ಬ್ಲಾಕ್‌ ಮಾಡಲಿದೆ. "ಆಡಿಯೋ ಫಿಂಗರ್‌ಪ್ರಿಂಟಿಂಗ್" ಟೆಕ್ನಾಲಿಜಿಯನ್ನು ಈ ಅಪ್ಲಿಕೇಶನ್‌ ಹೊಂದಿದ್ದು, ನೈಜ ಸಮಯದಲ್ಲಿ ರೆಕಾರ್ಡಿಂಗ್‌ಗಳನ್ನು ಪರಿಶೀಲಿಸುತ್ತದೆ. ಅಲ್ಲದೆ ಸ್ಪ್ಯಾಮ್ ಕಾಲರ್ ಐಡಿ, ಐಚ್ಛಿಕ AI ಅಸಿಸ್ಟೆಂಟ್‌ ಕರೆಗಳನ್ನು ಕೂಡ ಇದರಲ್ಲಿ ಪ್ರಿ -ಸ್ಕ್ರೀನ್ ಮಾಡಬಹುದಾಗಿದೆ.

ಟೆಕ್ಸ್ಟ್ ಕಿಲ್ಲರ್ (TextKiller)

ಟೆಕ್ಸ್ಟ್ ಕಿಲ್ಲರ್ (TextKiller)

ಈ ಅಪ್ಲಿಕೇಶನ್‌ ಬಳಸಿಕೊಂಡು ನೀವು ಸ್ಪ್ಯಾಮ್‌ ಸಂದೇಶಗಳನ್ನು ಬ್ಲಾಕ್‌ ಮಾಡುವುದು ಸುಲಭವಾಗಿದೆ. ಕೇವಲ 0.01 ಸೆಕೆಂಡುಗಳಲ್ಲಿ ಒಳಬರುವ ಟೆಕ್ಸ್ಟ್‌ ಅನ್ನು ಸ್ಪ್ಯಾಮ್ ಎಂದು ತಿಳಿಸುವ ಸಾಮರ್ಥ್ಯವನ್ನು ಈ ಅಪ್ಲಿಕೇಶನ್‌ ಹೊಂದಿದೆ. ಇಮೇಲ್ ವಿಳಾಸಗಳು ಮತ್ತು ಫೋನ್ ಸಂಖ್ಯೆಯ ಶ್ರೇಣಿಗಳ ಆಧಾರದ ಮೇಲೆ ನೀವು ಇದರ ಸೆಟ್ಟಿಂಗ್‌ಗಳನ್ನು ಇನ್ನಷ್ಟು ಪರಿಷ್ಕರಿಸಬಹುದಾಗಿದೆ. ಇನ್ನು ಈ ಅಪ್ಲಿಕೇಶನ್‌ RoboKiller ನ ಬಿಲ್ಟ್-ಇನ್ ಸ್ಪ್ಯಾಮ್ ಟೆಕ್ಸ್ಟ್ ಬ್ಲಾಕಿಂಗ್ ಫೀಚರ್ಸ್‌ ಮಾದರಲಿಯಲ್ಲಿಯೇ ಕಾರ್ಯನಿರ್ವಹಿಸಲಿದೆ.

ಯುಮೇಲ್ (YouMail)

ಯುಮೇಲ್ (YouMail)

ಯುಮೇಲ್‌ ಅಪ್ಲಿಕೇಶನ್‌ ಆಟೋಮ್ಯಾಟಿಕ್‌ ಆಗಿ ರೋಬೋ ಕಾಲ್‌ಗಳನ್ನು ಬ್ಲಾಕ್‌ ಮಾಡುವ ಸಾಮರ್ಥ್ಯ ಹೊಂದಿದೆ. ಇದು ಸ್ಪ್ಯಾಮ್‌ ಎಂದು ಗುರುತಿಸುವ ಯಾವುದೇ ಕಾಲ್‌ ಅನ್ನು ಬ್ಲಾಕ್‌ ಮಾಡಲಿದೆ. ವಾಯ್ಸ್‌ ಮೇಲ್‌ಗಳನ್ನು ಕೂಡ ಬ್ಲಾಕ್‌ ಮಾಡುವ ಅವಕಾಶವನ್ನು ಇದರಲ್ಲಿ ಕಾಣಬಹುದಾಗಿದೆ. ಇದರ ಮೂಲಕ ನಿಮ್ಮ ಇನ್‌ಕಮ್ಮಿಂಗ್‌ ಕರೆಗಳನ್ನು ರೆಕಾರ್ಡ್‌ ಮಾಡಲಾಗ್ತಿದೆಯಾ ಅನ್ನೊದನ್ನ ಸಹ ಪತ್ತೆ ಹಚ್ಚಬಹುದಾಗಿದೆ.

Best Mobiles in India

Read more about:
English summary
Here's best robocall and spam call blocking apps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X