ಫೇಸ್‌ಬುಕ್ ಸಿಇಒಗೆ ಹೋಲಿಸಿದರೆ ಆಪಲ್ ಸಿಇಒ ಗಳಿಸಿದ್ದೇಷ್ಟು ಗೊತ್ತಾ..?

By GizBot Bureau
|
How to recharge your mobile number using Facebook

ದೊಡ್ಡ ದೊಡ್ಡ ಸಂಸ್ಥೆಗಳು ಎಂದ ಮೇಲೆ ಸ್ಪರ್ಧೆಗಳು, ಹೋಲಿಕೆಗಳು ನಡೆಯುವುದು ಸರ್ವೇ ಸಾಮಾನ್ಯ. ಅದೇ ರೀತಿ ಫೇಸ್ ಬುಕ್ ಸಿಇಓ ಮತ್ತು ಆಪಲ್ ಸಿಇಓ ಗಳ ನಡುವೆ ಒಂದು ಹೋಲಿಕೆ ಮಾಡುವ ವರದಿ ಬಿಡುಗಡೆಗೊಂಡಿದೆ. ಅದರಲ್ಲಿ ಯಾರು ಹೆಚ್ಚು ಸಂಪಾದಿಸಿದ್ದಾರೆ ಎಂಬುದನ್ನು ತಿಳಿಸಲಾಗಿದೆ. ಆ ಬಗೆಗಿನ ವರದಿ ಇಲ್ಲಿದೆ. ಮುಂದೆ ಓದಿ.

ಫೇಸ್‌ಬುಕ್ ಸಿಇಒಗೆ ಹೋಲಿಸಿದರೆ ಆಪಲ್ ಸಿಇಒ ಗಳಿಸಿದ್ದೇಷ್ಟು ಗೊತ್ತಾ..?


ವಿಶ್ವದ ಅತೀ ಹೆಚ್ಚು ಲಾಭ ಗಳಿಕೆಯ ಕಂಪೆನಿಗಳಲ್ಲಿ ಆಪಲ್ ಕೂಡ ಒಂದು ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಂದ ಮೇಲೆ ಈ ಕಂಪೆನಿಯ ಸಿಇಓ ಅತೀ ಹೆಚ್ಚು ಹಣವನ್ನು ಗಳಿಸುತ್ತಿರುತ್ತಾರೆ ಎಂಬುದು ಅಷ್ಟೇ ನಿಜ. ಆಪಲ್ ಸಿಇಓ ಪಟ್ಟವನ್ನು ಟಿಮ್ ಕುಕ್ ಏರಿದ ಮೇಲೆ ಅವರು ಗಳಿಸಿದ ಒಟ್ಟು ಹಣದ ಬಗ್ಗೆ ಒಂದು ಸಂಸ್ಥೆ ವಿವರ ನೀಡಿದೆ. ಇದರಲ್ಲಿ ಯಾವುದೇ ಸಂಖ್ಯೆಯ ವ್ಯತ್ಯಾಸವನ್ನೂ ಅದು ಮಾಡಿಲ್ಲ ಎಂದು ಕೂಡ ತಿಳಿಸಿದೆ.

2011 ರಿಂದ ಟಿಮ್ ಕುಕ್ ಎಷ್ಟು ಸಂಪಾದನೆ ಮಾಡಿದ್ದಾರೆ ಎಂಬುದನ್ನು ತಿಳಿಸಲಾಗಿದೆ ಮತ್ತು ಅದರ ಒಟ್ಟು ಮೊತ್ತ ಬರೋಬ್ಬರಿ $701 ಮಿಲಿಯನ್ ಅಂದರೆ ಅವರ ಒಟ್ಟು ಸಂಬಳ ಇದುವರೆಗೆ ಅಂದಾಜು 4,970 ಕೋಟಿ ರುಪಾಯಿ. ಅಷ್ಟೇ ಅಲ್ಲ ಕುಕ್ $650,382,235 ಅಂದಾಜು 4,610 ಕೋಟಿ ರುಪಾಯಿಯನ್ನು ಸ್ಟಾಕ್ ಅವಾರ್ಡ್ ನಿಂದ ಅವರು ಪಡೆದಿದ್ದಾರೆ. ಆದರೆ ನಿಮಗೆ ನೆನಪಿರಲಿ ಈ ಮೊತ್ತ ಅವರು ಆಪಲ್ ನಲ್ಲಿ ಸಿಇಓ ಹುದ್ದೆಗೆ ಏರಿದ ನಂತರ ಮೊತ್ತವಾಗಿದೆ.

ಫೇಸ್‌ಬುಕ್ ಸಿಇಒಗೆ ಹೋಲಿಸಿದರೆ ಆಪಲ್ ಸಿಇಒ ಗಳಿಸಿದ್ದೇಷ್ಟು ಗೊತ್ತಾ..?

ಈ ಮೊತ್ತ ನಿಮಗೆ ದೊಡ್ಡದಾಗಿ ಅನ್ನಿಸುತ್ತಿದ್ದರೂ ಕೂಡ ಫೇಸ್ ಬುಕ್ ಸಿಇಓ ಮಾರ್ಕ್ ಜ್ಯೂಕ್ ಬರ್ಗ್ ರಿಗಿಂತ ಕುಕ್ ಹಿಂದೆ ಇದ್ದಾರೆ ಎಂದರೆ ನೀವು ನಂಬಲೇ ಬೇಕು. ಹಾಗಾದ್ರೆ ಫೇಸ್ ಬುಕ್ ಸಿಇಓ ಸಂಬಳ ಎಷ್ಟು ಎಂದು ಕೇಳುತ್ತಿದ್ದೀರಾ?

ಈ ವರದಿಯನ್ನು ತಯಾರಿಸಿರುವ ಹಿರಿಯ ಸಂಶೋಧನಾ ವಿಶ್ಲೇಷಕರಾಗಿರುವ ಅಲೆಕ್ಸ್ ನೋಲ್ಟಾನ್ ಹೇಳುವ ಪ್ರಕಾರ ಕುಕ್ ಹೊರತು ಪಡಿಸಿದರೆ ಇದೇ ಸಮಯದಲ್ಲಿ ಅತೀ ಹೆಚ್ಚು ಹಣ ಸಂಪಾದನೆ ಮಾಡಿದ್ದು ಮಾರ್ಕ್ ಜ್ಯೂಕ್ ಬರ್ಗ್ ಮಾತ್ರ. ಅವರದ್ದು ಎರಡು ವರ್ಷಕ್ಕೆ 1.2 ಮಿಲಿಯನ್ ಅಂತೆ. ಜ್ಯೂಕ್ ಬರ್ಗ್ ರ ಸ್ಟ್ರೈಕ್ ಬೆಲೆ 0.06 ಡಾಲರ್ ಮತ್ತು ಇದೇ ಸಮಯಕ್ಕೆ ಅವರು ಮಾಡಿದ ಒಟ್ಟು ಹಣ

$5.8 ಬಿಲಿಯನ್ ಅಂದರೆ ಅಂದಾಜು 41,124 ಕೋಟಿ ಡಾಲರ್.

ಫೇಸ್‌ಬುಕ್ ಸಿಇಒಗೆ ಹೋಲಿಸಿದರೆ ಆಪಲ್ ಸಿಇಒ ಗಳಿಸಿದ್ದೇಷ್ಟು ಗೊತ್ತಾ..?


ನಿಮಗೆ ವಿಚಾರ ತಿಳಿದಿಲ್ಲದೇ ಇದ್ದರೆ, ಕುಕ್ ಇತ್ತೀಚೆಗೆ 5 ಮಿಲಿಯನ್ ಡಾಲರ್ ಅಂದರೆ ಅಂದಾಜು 35 ಕೋಟಿ ರುಪಾಯಿ ಯನ್ನು ಚಾರಿಟಿಯೊಂದಕ್ಕೆ ದಾನ ನೀಡಿದ್ದಾರೆ ಮತ್ತು ಅವರು ಇದನ್ನು ಇತರರ ಆರೋಗ್ಯಕ್ಕಾಗಿ ವಿನಿಯೋಗ ಮಾಡಬೇಕು ಎಂದು ಬಯಸಿದ್ದಾರೆ.

ಇನ್ನೇನು ಕೆಲವೇ ದಿನಕ್ಕೆ ಆಪಲ್ ಸಂಸ್ಥೆ ಹೊಸದಾಗಿ ಮೂರು ಐಫೋನ್ ಗಳನ್ನು ಬಿಡುಗಡೆಗೊಳಿಸಲು ಪ್ಲಾನ್ ಮಾಡಿದೆ. ಈಗಾಗಲೇ ಆಪಲ್ ಸಂಸ್ಥೆ ಅದಕ್ಕಾಗಿ ಎಲ್ಲರಿಗೂ ಆಮಂತ್ರಣವನ್ನೂ ಕೂಡ ಕಳುಹಿಸಿಕೊಟ್ಟಿದೆ. ಕ್ಯೂಪರ್ಟಿನೋದ ಸ್ಟೀವ್ ಜಾಬ್ಸ್ ಥಿಯೇಟರ್ ನಲ್ಲಿ ಇದರ ಕಾರ್ಯಕ್ರಮವು ಜರುಗಲಿದೆ.

ಕಳೆದ ಬಾರಿಯಂತೆಯೇ ಕಾರ್ಯಕ್ರಮದ ದಿನಾಂಕ ಬುಧವಾರವೇ ಆಗಿದೆ. ಯುಎಸ್ ನಲ್ಲಿ ಅದೇ ಶುಕ್ರವಾರದಿಂದ ಪ್ರೀ ಆರ್ಡರ್ ಗಳನ್ನು ಸ್ವೀಕರಿಸಲು ಪ್ರಾರಂಭಿಸಲಾಗುತ್ತದೆ. ಅಂದರೆ ಸೆಪ್ಟೆಂಬರ್ 14 ರಿಂದ ಹೊಸದಾಗಿ ಬಿಡುಗಡೆಗೊಳ್ಳುವ ಐಫೋನ್ ಗಳಿಗಾಗಿ ಆರ್ಡರ್ ಮಾಡಬಹುದು. ಹೆಚ್ಚು ಕಡಿಮೆ ಸೆಪ್ಟೆಂಬರ್ 21 ರಿಂದ ಮಾರಾಟ ಪ್ರಕ್ರಿಯೆಗಳು ಆರಂಭವಾಗಬಹುದು. ಸದ್ಯಕ್ಕೆ ಹೊಸ ಫೋನ್ ಬಗೆಗಿನ ನಿರೀಕ್ಷೆಯ ಮಟ್ಟ ಗರಿಗೆದರಿದೆ.

Best Mobiles in India

English summary
Here’s how much Apple CEO earned in the last seven years as compared to the Facebook CEO. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X