ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೇಟಾ ಬಳಕೆಯನ್ನು ಕಂಟ್ರೋಲ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳು ಅನಿಯಮಿತ ಡೇಟಾ ಪ್ಲಾನ್‌ಗಳನ್ನು ನೀಡುತ್ತಾ ಬಂದಿವೆ. ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಏರ್‌ಟೆಲ್, ಜಿಯೋ, ವಿ ಟೆಲಿಕಾಂಗಳು ಹಲವು ಆಯ್ಕೆಯ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳಲ್ಲಿ ನೀವು ದೈನಂದಿನ ಡೇಟಾ ಪ್ರಯೋಜನವನ್ನು ಪಡೆಯಬಹುದು. ಇದಲ್ಲದೆ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳಲ್ಲಿಯೂ ಕೂಡ ನೀವು ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಆದರೆ ನಿಮ್ಮ ಡೇಟಾ ಯೂಸ್‌ ಲಿಮಿಟ್‌ ಕ್ರಾಸ್‌ ಮಾಡಿದ ನಂತರ ಡೇಟಾ ಇದ್ದರೂ ಕೂಡ ಇಂಟರ್‌ನೆಟ್‌ ವೇಗ ಕಡಿಮೆ ಆಗಲಿದೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಡೇಟಾ ಯೂಸ್‌ ಲಿಮಿಟ್‌ ಮೀರಿದ ನಂತರ ಸೇವಾ ಪೂರೈಕೆದಾರರ ನ್ಯಾಯಯುತ ಬಳಕೆಯ ನೀತಿ (FUP) ಅಡಿಯಲ್ಲಿ ಡೇಟಾ ವೇಗವನ್ನು ಅತ್ಯಂತ ಕಡಿಮೆ ಮಟ್ಟಕ್ಕೆ ಥ್ರೊಟಲ್ ಮಾಡಲಾಗುತ್ತದೆ. ಇದರಿಂದ ನಿಮ್ಮ ಇಂಟರ್‌ನೆಟ್‌ ವೇಗ ನಿಧಾನಗತಿಯಲ್ಲಿ ಇರಲಿದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ನಿಮ್ಮ ಡೇಟಾ ಬಳಕೆಯ ಲಿಮಿಟ್‌ ಅನ್ನು ಪರಿಶೀಲಿಸುವು ಹೇಗೆ? ಡೇಟಾ ಯೂಸ್‌ ಲಿಮಿಟ್‌ ಅನ್ನು ಸೆಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೇಟಾ ಯೂಸ್‌ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೇಟಾ ಯೂಸ್‌ ಲಿಮಿಟ್‌ ಸೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ, ನೆಟ್‌ವರ್ಕ್ / ಸಿಮ್ / ಇಂಟರ್ನೆಟ್ ಅನ್ನು ಹುಡುಕಿ. ನೀವು ಬಯಸಿದ ಸಬ್‌-ಮೆನುವಿಗೆ ತ್ವರಿತವಾಗಿ ಸೆಟ್ಟಿಂಗ್‌ಗಳ ಮೆನುವಿನಲ್ಲಿ ಡೇಟಾ ಅಥವಾ ಡೇಟಾ ಸೇವರ್ ಅನ್ನು ಟೈಪ್ ಮಾಡಬಹುದು.
ಹಂತ:2 ಇಂಟರ್‌ನೆಟ್ ಅಡಿಯಲ್ಲಿ ಸೇವಾ ಪೂರೈಕೆದಾರರ ಹೆಸರಿನ ಪಕ್ಕದಲ್ಲಿರುವ ಸೆಟ್ಟಿಂಗ್ಸ್‌ ಐಕಾನ್ ಅನ್ನು ಟ್ಯಾಪ್ ಮಾಡಿ.
ಹಂತ:3 ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಡೇಟಾ ಆಲರ್ಟ್‌ ಮತ್ತು ಲಿಮಿಟ್‌ ಅನ್ನು ಆಯ್ಕೆಮಾಡಿ.
ಹಂತ:4 ಮೊಬೈಲ್ ಡೇಟಾ ಯೂಸ್‌ ಸರ್ಕಲ್‌ ಟ್ಯಾಪ್ ಮಾಡಿ ಮತ್ತು ನಿಮ್ಮ ಡೇಟಾ ಯೂಸ್‌ ಸರ್ಕಲ್‌ ಅವಧಿಯನ್ನು ಸೆಟ್‌ ಮಾಡಲು ಇದೀಗ ಸಾಧ್ಯವಾಗುತ್ತದೆ.
ಹಂತ:5 ಡೇಟಾ ಲಿಮಿಟ್‌ ಅನ್ನು ಎಂಟ್ರಿ ಮಾಡಲು ಡೇಟಾ ಲಿಮಿಟ್‌ ಅನ್ನು ಸೆಟ್‌ ಮಾಡಿ ಆಯ್ಕೆಯನ್ನು ಟ್ಯಾಪ್ ಮಾಡಿ.
ಹೀಗೆ ಮಾಡುವ ಮೂಲಕ ಡೇಟಾ ಮಿತಿಯನ್ನು ಸೆಟ್‌ ಮಾಡಬಹುದಾಗಿದೆ.

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಬಳಸುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಡೇಟಾ ಸೇವರ್ ಮೋಡ್ ಅನ್ನು ಬಳಸುವುದು ಹೇಗೆ?

ಈ ವಿಧಾನದ ಮೂಲಕ ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ಡೇಟಾ ಬಳಸುವುದು ತಡೆಯಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.
ಹಂತ:1 ಮೊದಲಿಗೆ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ನೆಟ್‌ವರ್ಕ್/ಸಿಮ್/ಇಂಟರ್‌ನೆಟ್ ಅನ್ನು ಹುಡುಕಿ.
ಹಂತ:2 ಡೇಟಾ ಸೇವರ್‌ಗಾಗಿ ಸರ್ಚ್‌ ಮಾಡಿ ಮತ್ತು ಟಾಗಲ್ ಮಾಡಿ.

ವೈಫೈ ನಲ್ಲಿ ಮಾತ್ರ ಆಟೋ-ಅಪ್ಡೇಟ್‌ ಆಕ್ಟಿವಿಟಿ ಮಾಡುವುದು ಹೇಗೆ?

ವೈಫೈ ನಲ್ಲಿ ಮಾತ್ರ ಆಟೋ-ಅಪ್ಡೇಟ್‌ ಆಕ್ಟಿವಿಟಿ ಮಾಡುವುದು ಹೇಗೆ?

ಸ್ಮಾರ್ಟ್‌ಫೋನ್‌ನಲ್ಲಿರುವ ಅಪ್ಲಿಕೇಶನ್‌ಗಳು ಇಂಟರ್‌ನೆಟ್‌ ಕನೆಕ್ಟಿವಿಟಿ ಹೊಂದಿದ ತಕ್ಷಣವೇ ಆಟೋ ಮ್ಯಾಟಿಕ್‌ ಅಪ್ಡೇಟ್‌ ತೆಗೆದುಕೊಳ್ಳುತ್ತವೆ. ಆದರೆ ನೀವು ನಿಮ್ಮ ಸ್ಮಾರ್ಟ್‌ಫೋನ್ ವೈ-ಫೈ ನೆಟ್‌ವರ್ಕ್‌ಗೆ ಸಂಪರ್ಕಗೊಂಡಾಗ ಮಾತ್ರ ಆಟೋ ಅಪ್ಡೇಟ್‌ ತೆಗೆದುಕೊಳ್ಳುವಂತೆ ಸೆಟ್ಟಿಂಗ್ಸ್‌ ಬದಲಾಯಿಸಬಹುದು, ಅದು ಹೇಗೆ ಅನ್ನೊದನ್ನ ಕೆಳಗಿನ ಹಂತಗಳಲ್ಲಿ ತಿಳಿಯಿರಿ.
ಹಂತ:1 ಗೂಗಲ್‌ ಪ್ಲೇ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲಿನ ಬಲ ಮೂಲೆಯಲ್ಲಿರುವ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:2 ಪಾಪ್-ಅಪ್ ಮೆನುವಿನಿಂದ ಸೆಟ್ಟಿಂಗ್‌ಗಳನ್ನು ಟ್ಯಾಪ್ ಮಾಡಿ ಮತ್ತು ನೆಟ್‌ವರ್ಕ್ ಆದ್ಯತೆಗಳನ್ನು ಆಯ್ಕೆಮಾಡಿ.
ಹಂತ:3 ಸಬ್‌ ಮೆನು ಅಡಿಯಲ್ಲಿ, ಅಪ್ಲಿಕೇಶನ್ ಡೌನ್‌ಲೋಡ್ ಆದ್ಯತೆ, ಸ್ವಯಂ-ಅಪ್‌ಡೇಟ್ ಅಪ್ಲಿಕೇಶನ್‌ಗಳು ಮತ್ತು ಸ್ವಯಂ-ಪ್ಲೇ ವೀಡಿಯೊಗಳು ಆಯ್ಕೆಗಳು ಕಾಣಲಿವೆ. ಇದರಲ್ಲಿ ಎಲ್ಲಾ ಮೂರು ಆಯ್ಕೆಗಳಿಗೆ ವೈ-ಫೈ ಮೂಲಕ ಮಾತ್ರ ಆಯ್ಕೆಮಾಡಿ.

Best Mobiles in India

English summary
Service providers have Fair Usage Policy that can throttle mobile Internet speed drastically.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X