IRCTC ಇ-ವ್ಯಾಲೆಟ್‌ನಲ್ಲಿ ಹಣವನ್ನು ಡೆಪಾಸಿಟ್‌ ಮಾಡುವುದು ಹೇಗೆ?

|

ಭಾರತದಲ್ಲಿ ರೈಲು ಸಾರಿಗೆ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ದೇಶದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಸಂಚರಿಸುವುದಕ್ಕೆ ಹೆಚ್ಚಿನ ಜನರು ರೈಲು ಸಾರಿಗೆಯನ್ನು ಅವಲಂಭಿಸಿದ್ದಾರೆ. ಇದೇ ಕಾರಣಕ್ಕೆ ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ(IRCTC) ರೈಲು ಪ್ರಯಾಣಿಕರಿಗೆ ಹಲವು ಅನುಕೂಲಕರ ಸೇವೆಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ವ್ಯವಸ್ಥೆ ಕೂಡ ಒಂದಾಗಿದೆ. ಇದಕ್ಕಾಗಿ ನೀವು ಭಾರತೀಯ ರೈಲ್ವೆಯ IRCTC ವೆಬ್‌ಸೈಟ್ ಗೆ ಬೇಟಿ ನೀಡಬೇಕಾಗುತ್ತದೆ.

IRCTC

ಹೌದು, IRCTC ವೆಬ್‌ಸೈಟ್‌ ಮೂಲಕ ಪ್ರಯಾಣಿಕರು ತಮ್ಮ ರೈಲು ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದೀಗ IRCTC ಇ-ವ್ಯಾಲೆಟ್‌ ಅನ್ನು ಕೂಡ ಹೊಂದಿದೆ. ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ ಮಾಡುವವರು IRCTC ಇ-ವ್ಯಾಲೆಟ್‌ನಲ್ಲಿ ಹಣವನ್ನು ಸೇರಿಸಬಹುದಾಗಿದೆ. ಇದು ಪೇಟಿಎಂ ಇ-ವ್ಯಾಲೆಟ್‌ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. IRCTC ಇ-ವ್ಯಾಲೇಟ್‌ ಮೂಲಕ ತಮ್ಮ ಟಿಕೆಟ್‌ಗಳಿಗೆ ಹಣ ಪಾವತಿ ಮಾಡುವುದಕ್ಕೆ ಅವಕಾಶ ಸಿಗಲಿದೆ. ಹಾಗಾದ್ರೆ IRCTC ಇ-ವ್ಯಾಲೆಟ್‌ಗೆ ನೋಂದಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

IRCTC

IRCTC ಇ-ವ್ಯಾಲೆಟ್‌ನಲ್ಲಿ ಹಣ ಸೇರಿಸುವ ಮೂಲಕ ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಮಾಡುವ ಹಣ ಪಾವತಿಸಬಹುದಾಗಿದೆ. ಇದರಿಂದ ನೀವು ಪ್ರತಿಬಾರಿಯೂ ನಿಮ್ಮ ಅಕೌಂಟ್‌ನಿಂದ ಹಣ ಪಾವತಿಸುವುದು ತಪ್ಪಲಿದೆ. ಇದಲ್ಲದೆ IRCTC ಯಿಂದ ಲಭ್ಯವಾಗುವ ಸೇವೆಗಳಿಗೂ ಕೂಡ ಹಣ ಪಾವತಿಸುವುದಕ್ಕೆ ಸಾಧ್ಯವಾಗಲಿದೆ. ಹಾಗಾದ್ರೆ ನಿಮ್ಮ IRCTC ಇ-ವ್ಯಾಲೆಟ್‌ಗೆ ನೀವು ಹೇಗೆ ಹಣವನ್ನು ಸೇರಿಸಬಹುದು ಮತ್ತು ಅದನ್ನು ಬಳಸಿಕೊಂಡು ಟಿಕೆಟ್‌ಗಳನ್ನು ಬುಕ್ ಮಾಡುವುದಕ್ಕೆ ಈ ಕೆಳಗಿನ ಹಂತಗಳಲ್ಲಿ ತಿಳಿಯಿರಿ.

IRCTC ಇ-ವ್ಯಾಲೆಟ್‌ಗೆ ನೋಂದಾಯಿಸುವುದು ಹೇಗೆ?

IRCTC ಇ-ವ್ಯಾಲೆಟ್‌ಗೆ ನೋಂದಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ.
ಹಂತ:2 ಇದರಲ್ಲಿ IRCTC ಇ-ವ್ಯಾಲೆಟ್‌ ವಿಭಾಗಕ್ಕೆ ಹೋಗಿ ಮತ್ತು ರಿಜಿಸ್ಟರ್‌ ನೌ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ:3 IRCTC ಇ-ವ್ಯಾಲೆಟ್‌ ನೋಂದಣಿಗಾಗಿ ಬಳಕೆದಾರರು ಪ್ಯಾನ್ ಅಥವಾ ಆಧಾರ್ ಅನ್ನು ಪರಿಶೀಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ.
ಹಂತ:4 ಪರಿಶೀಲನೆಯನ್ನು ಮಾಡಿದ ನಂತರ, IRCTC ಇ-ವ್ಯಾಲೆಟ್‌ ನೋಂದಣಿ ಶುಲ್ಕವನ್ನು ಪಾವತಿಸಲು ಪೇಮೆಂಟ್‌ ಪೇಜ್‌ ಕಾಣಿಸಿಕೊಳ್ಳುತ್ತದೆ. ತೆರಿಗೆಯನ್ನು ಹೊರತುಪಡಿಸಿ 50 ರೂ.ಗಳಿಗೆ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಪಾವತಿ ಯಶಸ್ವಿಯಾದ ನಂತರ, ಬಳಕೆದಾರರು ಲಾಗ್ ಔಟ್ ಆಗಲಿದ್ದಾರೆ. ತಮ್ಮ IRCTC ಇ-ವ್ಯಾಲೆಟ್‌ಗಳನ್ನು ರೀಚಾರ್ಜ್ ಮಾಡಲು ಅವರು ತಮ್ಮ IRCTC ಖಾತೆಗಳಿಗೆ ಮತ್ತೆ ಲಾಗಿನ್ ಆಗಬೇಕಾಗುತ್ತದೆ.

IRCTC ಇ-ವ್ಯಾಲೆಟ್‌ನಲ್ಲಿ ಹಣವನ್ನು ಡೆಪಾಸಿಟ್‌ ಮಾಡುವುದು ಹೇಗೆ?

IRCTC ಇ-ವ್ಯಾಲೆಟ್‌ನಲ್ಲಿ ಹಣವನ್ನು ಡೆಪಾಸಿಟ್‌ ಮಾಡುವುದು ಹೇಗೆ?

ಹಂತ:1 ಮೊದಲು ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ.
ಹಂತ:2 ನಂತರ IRCTC ಇ-ವ್ಯಾಲೆಟ್‌ ವಿಭಾಗಕ್ಕೆ ಹೋಗಿ ಮತ್ತು IRCTC ಇ-ವ್ಯಾಲೆಟ್‌ ಡೆಪಾಸಿಟ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದೀಗ, ನೀವು ವರ್ಗಾಯಿಸಲು ಬಯಸುವ ಹಣದ ಮೊತ್ತವನ್ನು ಆಯ್ಕೆಮಾಡಿ.
ಹಂತ:4 ನಂತರ ಡ್ರಾಪ್‌ಡೌನ್ ಮೆನುವಿನಿಂದ ಪಾವತಿ ಆಯ್ಕೆಯನ್ನು ಆರಿಸಿ ಮತ್ತು ಪಾವತಿ ಮಾಡಲು ಸಬ್ಮಿಟ್‌ ಬಟನ್ ಕ್ಲಿಕ್ ಮಾಡಿ.

ಬಳಕೆದಾರರು ತಮ್ಮ IRCTC ಇ ವ್ಯಾಲೆಟ್‌ಗಳಲ್ಲಿ ಕನಿಷ್ಠ 100ರೂ.ಗಳಿಂದ ಗರಿಷ್ಠ 10,000 ರೂ.ಗಳ ತನಕ ಠೇವಣಿ ಮಾಡಬಹುದಾಗಿದೆ.

IRCTC ಇ-ವ್ಯಾಲೆಟ್‌ ಬಳಸಿಕೊಂಡು ಟಿಕೆಟ್ ಬುಕ್ ಮಾಡುವುದು ಹೇಗೆ?

IRCTC ಇ-ವ್ಯಾಲೆಟ್‌ ಬಳಸಿಕೊಂಡು ಟಿಕೆಟ್ ಬುಕ್ ಮಾಡುವುದು ಹೇಗೆ?

ಹಂತ:1 ಮೊದಲು ನಿಮ್ಮ IRCTC ಖಾತೆಗೆ ಲಾಗಿನ್ ಮಾಡಿ.
ಹಂತ:2 ನಂತರ ನೀವು ಪ್ರಯಾಣಿಸಬೇಕಾದ ರೈಲು ಮಾರ್ಗ, ಪ್ರಯಾಣಿಕರ ವಿವರ ಹಾಗೂ ದಿನಾಂಕವನ್ನು ಆಯ್ಕೆಮಾಡಿ.
ಹಂತ:3 ನೀವು ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ, ಟಿಕೆಟ್ ಬುಕ್ ಮಾಡಲು ಮುಂದುವರಿಯಿರಿ.
ಹಂತ:4 ಈಗ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಪಾವತಿ ಆಯ್ಕೆಗೆ ಹೋಗಿ.
ಹಂತ:5 ಪಾವತಿ ವಿಭಾಗದ ಅಡಿಯಲ್ಲಿ, IRCTC ಇ-ವ್ಯಾಲೆಟ್‌ ಆಯ್ಕೆಯನ್ನು ಆಯ್ಕೆಮಾಡಿ.
ಹಂತ:6 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಹಿವಾಟಿನ ಪಾಸ್‌ವರ್ಡ್ ಅನ್ನು ನಮೂದಿಸಿ.
ಹಂತ:7 ಇದೀಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ನೀವು OTP ಅನ್ನು ಪಡೆಯುತ್ತೀರಿ. ಖಚಿತಪಡಿಸಲು OTP ಅನ್ನು ನಮೂದಿಸಿ.

ಇದೀಗ ನಿಮ್ಮ ಟಿಕೆಟ್‌ಗೆ ಬೇಕಾದ ಹಣದ ಮೊತ್ತವನ್ನು ನಿಮ್ಮ ಇ-ವ್ಯಾಲೆಟ್‌ನಿಂದ ಕಡಿತಗೊಳಿಸಲಾಗುತ್ತದೆ. ಇದಲ್ಲದೆ IRCTC ಇ-ವ್ಯಾಲೆಟ್‌ನಿಂದ 10 ರೂಪಾಯಿಗಳ ಹೆಚ್ಚುವರಿ ವಹಿವಾಟು ಶುಲ್ಕವನ್ನು ಕೂಡ ಕಡಿತಗೊಳಿಸಲಾಗುತ್ತದೆ.

Most Read Articles
Best Mobiles in India

Read more about:
English summary
here is a step-by-step guide of how users can book a ticket using IRCTC eWallet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X