50GB ವರೆಗೆ ಕ್ಲೌಡ್ ಸ್ಟೋರೇಜ್ ಸೇವೆಯನ್ನು ಉಚಿತವಾಗಿ ಪಡೆಯಲು ಹೀಗೆ ಮಾಡಿ?

|

ಇಂದಿನ ಡಿಜಿಟಲ್‌ ಜಮಾನದಲ್ಲಿ ನಿಮ್ಮ ಫೈಲ್‌ಗಳು ಮತ್ತು ಡೇಟಾವನ್ನು ಬ್ಯಾಕಪ್‌ ಮಾಡಲು ಹೆಚ್ಚಿನ ಕ್ಲೌಡ್‌ ಸ್ಟೋರೇಜ್‌ ಸೇವೆಗಳನ್ನು ಬಳಸುತ್ತಾರೆ. ಅದರಲ್ಲೂ ಆಂಡ್ರಾಯ್ಡ್‌ ಡಿವೈಸ್‌ ಬಳಸುವವರು ಗೂಗಲ್‌ ಡ್ರೈವ್‌ ಅನ್ನು ಬಳಸುತ್ತಾರೆ. ಇನ್ನು ಗೂಗಲ್‌ ಡ್ರೈವ್‌ ಒಟ್ಟು 15GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ನೀಡತ್ತಿದೆ. ಉಚಿತ ಸ್ಟೋರೇಜ್‌ ಸ್ಪೇಸ್‌ ಮಿತಿಯನ್ನು ಮೀರಿದರೆ, ಹೆಚ್ಚುವರಿ ಕ್ಲೌಡ್‌ ಸ್ಟೋರೇಜ್‌ಗಾಗಿ ಗೂಗಲ್‌ ಒನ್‌ ಕ್ಲೌಡ್ ಸ್ಟೋರೇಜ್ ಪ್ಲಾನ್‌ಗೆ ಸೈನ್ ಅಪ್ ಮಾಡಬೇಕಾಗುತ್ತದೆ.

ಗೂಗಲ್‌

ಹೌದು, ಗೂಗಲ್‌ ಡ್ರೈವ್‌ನಲ್ಲಿ ನಿಮಗೆ ಉಚಿತವಾಗಿ 15GB ಸ್ಟೋರೇಜ್‌ ಸ್ಪೇಸ್‌ ದೊರೆಯಲಿದೆ. ಒಂದು ವೇಳೆ ನಿಮ್ಮ ಸ್ಟೋರೇಜ್‌ ಸ್ಪೇಸ್‌ ಮಿತಿಯನ್ನು ಮೀರಿದರೆ ಗೂಗಲ್‌ ಒನ್‌ ಪ್ಲಾನ್‌ಗೆ ಚಂದಾದಾರರಾಗಬೇಕಾಗುತ್ತದೆ. ಒಂದು ವೇಳೆ ನೀವು ಹಣಕೊಟ್ಟು ಚಂದಾದಾರಾಗಲು ಬಯಸದೇ ಹೋದರೆ ಉಚಿತವಾಗಿ ಹೆಚ್ಚಿನ ಸ್ಟೋರೇಜ್‌ ಪಡೆಯುವುದಕ್ಕೆ ಕೆಲವು ಅವಕಾಶಗಳಿವೆ. ಇದಕ್ಕಾಗಿ ನೀವು ಕೆಲವು ಟ್ರಿಕ್ಸ್‌ ಉಪಯೋಗಿಸಬೇಕಾಗುತ್ತದೆ. ಹಾಗಾದ್ರೆ ಉಚಿತವಾಗಿ 50GB ಕ್ಲೌಡ್‌ ಸ್ಟೋರೇಜ್‌ ಅನ್ನು ಪಡೆದುಕೊಳ್ಳುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

50GB ಕ್ಲೌಡ್ ಸ್ಟೋರೇಜ್ ಸ್ಪೇಸ್‌ ಅನ್ನು ಉಚಿತವಾಗಿ ಪಡೆಯುವುದು ಹೇಗೆ?

50GB ಕ್ಲೌಡ್ ಸ್ಟೋರೇಜ್ ಸ್ಪೇಸ್‌ ಅನ್ನು ಉಚಿತವಾಗಿ ಪಡೆಯುವುದು ಹೇಗೆ?

ಭಾರತದಲ್ಲಿ 50GB ತನಕ ಉಚಿತವಾಗಿ ಸ್ಟೋರೇಜ್‌ ಸ್ಪೇಸ್‌ ನೀಡುವ ಯಾವುದೇ ಕ್ಲೌಡ್‌ ಸ್ಟೋರೇಜ್‌ ಸೇವೆ ಲಭ್ಯವಿಲ್ಲ. ಆದರೆ ನೀವು 50GB ತನಕ ಸ್ಟೋರೇಜ್‌ ಸ್ಪೇಸ್‌ ಪಡೆಯುವುದಕ್ಕೆ ಅವಕಾಶವಿದೆ. ಇದಕ್ಕಾಗಿ ನೀವು ಎರಡು ಹೊಸ ಗೂಗಲ್‌ ಅಕೌಂಟ್‌ಗಳನ್ನು ಕ್ರಿಯೆಟ್‌ ಮಾಡಬೇಕಾಗುತ್ತದೆ. ನೀವು ಈ ಎರಡು ಅಕೌಂಟ್‌ಗಳಿಂದ ಒಟ್ಟು 30GB ಸ್ಟೋರೇಜ್‌ ಸ್ಪೇಸ್‌ ಅನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಹಾಗಂತ ನೀವು ಈ ಎರಡು ಹೊಸ ಉಚಿತ ಖಾತೆಗಳನ್ನು ಕ್ರಿಯೆಟ್‌ ಮಾಡುವುದರಿಂದ ನಿಮ್ಮನ್ನು ಮಿತಿಗೊಳಿಸುವ ಯಾವುದೇ ಆಯ್ಕೆಯನ್ನು ಗೂಗಲ್‌ ಹೊಂದಿಲ್ಲ.

ಗೂಗಲ್‌

ಇನ್ನು ನೀವು ಹೊಸ ಗೂಗಲ್‌ ಅಕೌಂಟ್‌ ರಚಿಸಲು ಒಂದು ನಿಮಿಷಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ನಿಮ್ಮ ಹೆಸರು, ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಸೆಟ್‌ ಮಾಡುವ ಮೂಲಕ ಗೂಗಲ್‌ ಅಕೌಂಟ್‌ ಅನ್ನು ಕ್ರಿಯೆಟ್‌ ಮಾಡಬಹುದು. ಎಲ್ಲಾ ಖಾತೆಗಳನ್ನು ಒಂದೇ ಸ್ಥಳದಲ್ಲಿ ಪ್ರವೇಶಿಸಲು ಗೂಗಲ್‌ ಅವಕಾಶ ನೀಡಿರುವುದರಿದ ಎರಡು ಅಕೌಂಟ್‌ಗಳನ್ನು ಕಂಟ್ರೋಲ್‌ ಮಾಡುವುದು ತುಂಬಾ ಸುಲಭವಾಗಿದೆ. ಆದರಿಂದ ನೀವು ಎರಡು ಖಾತೆಗಳನ್ನು ಹೊಂದಿದ್ದರೆ, ನೀವು ಜಿ-ಮೇಲ್‌, ಗೂಗಲ್‌ ಫೋಟೋಸ್‌ ಮತ್ತು ಗೂಗಲ್‌ ಡ್ರೈವ್‌ ಅಪ್ಲಿಕೇಶನ್‌ಗಳನ್ನು ಎರಡು ಅಕೌಂಟ್‌ಗಳಲ್ಲೂ ಬಳಸಬಹುದು.

ಸ್ವದೇಶಿ

ಇದಲ್ಲದೆ ಸ್ವದೇಶಿ ಕ್ಲೌಡ್‌ ಸ್ಟೋರೇಜ್‌ ಸೇವೆಯಾದ ಡಿಜಿಬಾಕ್ಸ್ ಅನ್ನು ಸೈನ್‌ ಇನ್‌ ಆದರೆ ನಿಮಗೆ 20GB ಉಚಿತ ಸ್ಟೋರೇಜ್‌ ಸ್ಪೇಸ್‌ ದೊರೆಯಲಿದೆ. ಇದರಲ್ಲಿ ಖಾತೆಯನ್ನು ರಚಿಸಲು, ನಿಮ್ಮ ಡಿಜಿಸ್ಪೇಸ್ ಮತ್ತು ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆ ಸೇರಿದಂತೆ ಇತರ ವಿವರಗಳನ್ನು ನಮೂದಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗೂಗಲ್‌ ಎರಡು ಅಕೌಂಟ್‌ನಿಂದ 30GB ಸ್ಟೋರೇಜ್‌ ಮತ್ತು ಡಿಜಿಬಾಕ್ಸ್‌ನ 20GB ಸ್ಟೋರೇಜ್‌ ಸ್ಪೇಸ್‌ ಉಚಿತವಾಗಿ ಸಿಗಲಿದೆ. ಇದೆಲ್ಲವೂ ಸೇರಿ ಒಟ್ಟು 50GB ಸ್ಟೋರೇಜ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

ಗೂಗಲ್‌

ಇನ್ನುಳಿದಂತೆ ಗೂಗಲ್‌ ಡ್ರೈವ್‌ ಇತ್ತೀಚಿಗೆ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಸೆಕ್ಯುರ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಮೂಲಕ ನಿಮಗೆ ಯಾವುದೇ ಅಪಾಯಕಾರಿ ಫೈಲ್‌ಗಳ ವಿರುದ್ಧ ರಕ್ಷಣೆ ನೀಡಲಿದೆ. ಏಕೆಂದರೆ ಅಜ್ಞಾತ ಸೈಟ್‌ಗಳಿಂದ ಫೈಲ್‌ಗಳು ಅಪಾಯಕಾರಿ ವೈರಸ್‌ಗಳನ್ನು ಹೊಂದಿರುವ ಸಾದ್ಯತೆ ಇರುತ್ತದೆ. ಇದಲ್ಲದೆ ಕೆಲವು ಜನರು ನೇರವಾಗಿ ಜಿ-ಮೇಲ್‌ನಲ್ಲಿ ಗೂಗಲ್‌ ಡ್ರೈವ್ ಲಿಂಕ್ ಮಾಡಿದ ಫೈಲ್‌ಗಳನ್ನು ಸ್ವೀಕರಿಸುತ್ತಾರೆ. ಇಂತಹ ಅಜ್ಞಾತ ಫೈಲ್‌ಗಳಿಂದ ನಿಮ್ಮ ಡೇಟಾದ ಮೇಲೆ ಆಗಬಹುದಾದ ಪರಿಣಾಮವನ್ನು ತಡೆಯುವುದಕ್ಕೆ ಹೊಸ ಫೀಚರ್ಸ್‌ ಸಹಾಯ ಮಾಡಲಿದೆ.

ಗೂಗಲ್‌

ಸದ್ಯ ಈ ಫೀಚರ್ಸ್‌ ಅನ್ನು ಗೂಗಲ್‌ ಡ್ರೈವ್‌ನಲ್ಲಿ ಡೀಫಾಲ್ಟ್ ಆಗಿ ಆಕ್ಟಿವ್‌ ಮಾಡಿರುವುದರಿಂದ ನೀವು ಆನ್ ಮಾಡಬೇಕಾದ ಅಗತ್ಯವಿಲ್ಲ. ನೀವು ಅಪ್ಲಿಕೇಶನ್‌ನಲ್ಲಿ ಅನುಮಾನಾಸ್ಪದ ಅಥವಾ ಅಪಾಯಕಾರಿ ಫೈಲ್ ಅನ್ನು ತೆರೆದರೆ ಗೂಗಲ್‌ ಡ್ರೈವ್ ಆಟೋಮ್ಯಾಟಿಕ್‌ ನಿಮಗೆ ಆಲರ್ಟ್‌ ಸಂದೇಶವನ್ನು ನೀಡಲಿದೆ. ಅದರಲ್ಲೂ ಮಾಲ್ವೇರ್, ಫಿಶಿಂಗ್ ಮತ್ತು ransomware ನಿಂದ ಬಳಕೆದಾರರು ಮತ್ತು ಅವರ ದಾಖಲೆಗಳನ್ನು ಸೆಕ್ಯುರ್‌ ಮಾಡಲು ಇದು ಸ್ಕ್ರೀನ್‌ ಮೇಲ್ಭಾಗದಲ್ಲಿ ಹಳದಿ ಬಣ್ಣದ ಎಚ್ಚರಿಕೆಯ ಬ್ಯಾನರ್ ಅನ್ನು ಡಿಸ್‌ಪ್ಲೇ ಮಾಡಲಿದೆ.

Best Mobiles in India

Read more about:
English summary
Google doesn’t have any policy that limits you from creating new free accounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X