ಯೂಟ್ಯೂಬ್ ಶಾರ್ಟ್ಸ್ ಅನ್ನು ರೀಮಿಕ್ಸ್ ಮಾಡಲು ಹೀಗೆ ಮಾಡಿ?

|

ಗೂಗಲ್‌ ಒಡೆತನದ ಯುಟ್ಯೂಬ್‌ ಜನಪ್ರಿಯ ವೀಡಿಯೊ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಯುಟ್ಯೂಬ್‌ನಲ್ಲಿ ವೀಡಿಯೋ ಮತ್ತು ಮ್ಯೂಸಿಕ್‌ ಎರಡು ಕೂಡ ದೊರೆಯುವುದರಿಂದ ಬಳಕೆದಾರರ ನೆಚ್ಚಿನ ಮನರಂಜನೆಯ ತಾಣವಾಗಿದೆ. ಇನ್ನು ಯುಟ್ಯೂಬ್‌ ಕೂಡ ತನ್ನ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಬಳಕೆದಾರರಿಗೆ ತಮ್ಮ ಸ್ವಂತ ಶಾರ್ಟ್‌ಗಳಲ್ಲಿ ಹೊಸ ಟೂಲ್‌ಕಿಟ್‌ನ ಸಹಾಯದಿಂದ ಯುಟ್ಯೂಬ್‌ ಶಾರ್ಟ್ಸ್‌ ಅನ್ನು 5 ಸೆಕೆಂಡುಗಳವರೆಗೆ ರೀಮಿಕ್ಸ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಯುಟ್ಯೂಬ್‌

ಹೌದು, ಯುಟ್ಯೂಬ್‌ನಲ್ಲಿ ಶಾರ್ಟ್‌ ವೀಡಿಯೊಗಳನ್ನು 5 ಸೆಕೆಂಡುಗಳವರೆಗೆ ರಿಮಿಕ್ಸ್‌ ಕ್ರಿಯೆಟ್‌ ಮಾಡಲು ಅನುಮತಿಸಲಿದೆ. ಯುಟ್ಯೂಬ್‌ನ ಆಡಿಯೊ ಲೈಬ್ರರಿಯಿಂದ ಮ್ಯೂಸಿಕ್‌ನಲ್ಲಿ ರಿಮಿಕ್ಸ್‌ ಮಾಡಲು ಶಾರ್ಟ್ಸ್‌ ಕ್ರಿಯೆಟ್‌ ಟೂಲ್ಸ್‌ ಬಳಸಿಕೊಳ್ಳಬಹುದಾಗಿದೆ. ನಿಮ್ಮ ಸ್ವಂತ ಶಾರ್ಟ್‌ ವೀಡಿಯೊಗಳನ್ನು ಕ್ರಿಯೆಟ್‌ ಮಾಡುವ ರಿಮಿಕ್ಸ್‌ ಮಾಡಬಹುದಾಗಿದೆ. ರಚನೆಕಾರರು ತಮ್ಮ ವೀಡಿಯೊಗಳನ್ನು ರೀಮಿಕ್ಸ್ ಮಾಡಲು ಬಯಸದಿದ್ದರೆ, ಯುಟ್ಯೂಬ್‌ ಸ್ಟುಡಿಯೋದಲ್ಲಿ ಆಯ್ಕೆಯಿಂದ ಹೊರಗುಳಿಯುವ ಆಯ್ಕೆಯನ್ನು ಸಹ ಹೊಂದಿರುತ್ತಾರೆ. ಹಾಗಾದ್ರೆ ಯುಟ್ಯೂಬ್‌ ಶಾರ್ಟ್ಸ್‌ ಅನ್ನು ರೀಮಿಕ್ಸ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಟ್ಯೂಬ್‌

ಯುಟ್ಯೂಬ್‌ನಲ್ಲಿ ನಿಮ್ಮ ಶಾರ್ಟ್ಸ್‌ ಅನ್ನು ರೀಮಿಕ್ಸ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಆದರೆ ಯುಟ್ಯೂಬ್‌ನ ಅಧಿಕೃತ ಸಂಗೀತ ಪಾಲುದಾರರಿಂದ ಹಕ್ಕುಸ್ವಾಮ್ಯದ ವಿಷಯವನ್ನು ಹೊಂದಿರುವ ಮ್ಯೂಸಿಕ್‌ ವೀಡಿಯೊಗಳು ರೀಮಿಕ್ಸ್ ಮಾಡಲು ಅರ್ಹವಾಗಿಲ್ಲ ಎಂಬುದು ಗಮನಿಸಬೇಕಿದೆ. ಸದ್ಯ ಈ ಫೀಚರ್ಸ್‌ ಐಒಎಸ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಆದರೆ ಈ ವರ್ಷದ ಅಂತ್ಯಕ್ಕೆ ಇಲ್ಲವೇ ಮುಂದಿನ ವರ್ಷ ಇದು ಆಂಡ್ರಾಯ್ಡ್ ಬಳಕೆದಾರರಿಗೆ ಸಹ ಲಭ್ಯವಾಗಲಿದೆ ಎನ್ನಲಾಗಿದೆ.

ಯೂಟ್ಯೂಬ್ ಶಾರ್ಟ್ಸ್ ಅನ್ನು ರೀಮಿಕ್ಸ್ ಮಾಡುವುದು ಹೇಗೆ?

ಯೂಟ್ಯೂಬ್ ಶಾರ್ಟ್ಸ್ ಅನ್ನು ರೀಮಿಕ್ಸ್ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಫೋನ್‌ನಲ್ಲಿ ಯುಟ್ಯೂಬ್‌ ಅಪ್ಲಿಕೇಶನ್ ತೆರೆಯಿರಿ
ಹಂತ:2 ಸಂಬಂಧಿಸಿದ ವೀಡಿಯೊಗೆ ಹೋಗಿ
ಹಂತ:3 ಇದರಲ್ಲಿ ಮೂರು ಚುಕ್ಕೆಗಳ ಮೆನುವಿನಲ್ಲಿ ಟ್ಯಾಪ್ ಮಾಡಿ ಮತ್ತು "ಕಟ್" ಆಯ್ಕೆಮಾಡಿ
ಹಂತ:4 ಲಾಂಗ್‌-ಫಾರ್ಮ್‌ ವೀಡಿಯೊಗಳಿಗಾಗಿ, ನೀವು "ಕ್ರಿಯೆಟ್‌" ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
ಹಂತ:5 ಇದೀಗ ರೀಮಿಕ್ಸ್ ಆಯ್ಕೆಗಳಿಂದ "ಕಟ್" ಮಾಡಿ

ಬಳಕೆದಾರರು

ಇನ್ನು ಬಳಕೆದಾರರು ಶಾರ್ಟ್‌ನಲ್ಲಿ ಬಳಸಲು ಬಯಸುವ ವೀಡಿಯೊದ ಯಾವ ಭಾಗವನ್ನು ಬೇಕಾದರೂ ಆಯ್ಕೆ ಮಾಡಬಹುದು. ಅಲ್ಲದೆ ಬಳಕೆದಾರರು ಯೂಟ್ಯೂಬ್‌ನಲ್ಲಿನ ವೀಡಿಯೊಗಳಿಂದ ಸಣ್ಣ ಆಡಿಯೊ ಕ್ಲಿಪ್‌ಗಳನ್ನು ಸ್ಪ್ಲೈಸ್ ಮಾಡಬಹುದು. ಆದರೆ ಬಳಕೆದಾರರು ಅರ್ಹವಾದ ವೀಡಿಯೊಗಳು ಮತ್ತು ಕಿರುಚಿತ್ರಗಳಿಂದ 1 ರಿಂದ 5 ಸೆಕೆಂಡುಗಳ ಭಾಗಗಳನ್ನು ಕ್ಲಿಪ್ ಮಾಡಲು ಮತ್ತು ಅವರ ಸ್ವಂತ ಶಾರ್ಟ್ಸ್‌ಗಳಲ್ಲಿ ಬಳಸಬಹುದಾಗಿದೆ.

ಯುಟ್ಯೂಬ್‌

ಇದಲ್ಲದೆ ಯುಟ್ಯೂಬ್‌ ಶಾರ್ಟ್ಸ್ ಅನ್ನು ನೀವು ವೆಬ್ ಮತ್ತು ಟ್ಯಾಬ್ಲೆಟ್‌ಗಳ ಮೂಲಕ ಪ್ರವೇಶಿಸಬಹುದು ಎಂದು ಯುಟ್ಯೂಬ್‌ ಹೇಳಿದೆ. ಈ ಶಾರ್ಟ್ಸ್ ಗಳು ಹೊಸ ಶಾರ್ಟ್ಸ್ ಟ್ಯಾಬ್‌ನಲ್ಲಿ ಗೋಚರಿಸುತ್ತವೆ. ಇದರೊಂದಿಗೆ ಯುಟ್ಯೂಬ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವೀಡಿಯೊಗಳಿಗೆ ರಿಯಾಕ್ಷನ್‌ ನೀಡುವುದಕ್ಕೆ ಬಳಕೆದಾರರನ್ನು ಸಕ್ರಿಯಗೊಳಿಸಲು ಹೊಸ ಮಾರ್ಗವನ್ನು ಪರೀಕ್ಷಿಸುತ್ತಿದೆ. ಇದಕ್ಕಾಗಿ ಕಂಪನಿಯು ಟೈಮ್ಡ್ ಎಮೋಜಿಗಳು ಎಂಬ ಫೀಚರ್ಸ್‌ ಅನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಇದು ವೀಡಿಯೊದಲ್ಲಿ ನಿರ್ದಿಷ್ಟ ಕ್ಷಣದಲ್ಲಿ ಎಮೋಜಿಯೊಂದಿಗೆ ರಿಯಾಕ್ಷನ್‌ ನೀಡಲು ವೀಕ್ಷಕರಿಗೆ ಅವಕಾಶ ನೀಡಲಿದೆ.

ಯುಟ್ಯೂಬ್‌

ಇನ್ನು ಯುಟ್ಯೂಬ್‌ ತನ್ನ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಟೈಂ ರಿಯಾಕ್ಷನ್‌ ಫೀಚರ್ಸ್‌ ಪರೀಕ್ಷಿಸುತ್ತಿದೆ. ಇದು ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಈ ಫೀಚರ್ಸ್‌ ಮೂಲಕ ಬಳಕೆದಾರರು ಎಮೋಜಿಗಳ ಮೂಲಕ ನಿರ್ಧಷ್ಟ ಸಮಯದಲ್ಲಿ ರಿಯಾಕ್ಷನ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಈಗಾಗಲೇ ಯೂಟ್ಯೂಬ್‌ ತನ್ನ ವೀಡಿಯೊಗಳಿಗೆ ಡಿಸ್‌ಲೈಕ್‌ ಕೌಂಟ್‌ ಅನ್ನು ಬ್ಯಾನ್‌ ಮಾಡಿದೆ. ಬದಲಿಗೆ ವೀಡಿಯೊಗಳಲ್ಲಿ ಸೌಂಡ್‌ಕ್ಲೌಡ್‌ ರೀತಿಯ ಟೈಂ ಕಾಮೆಂಟ್‌ಗಳ ಮೂಲಕ ಸಂವಹನ ನಡೆಸಲು ಇತರ ಮಾರ್ಗಗಳನ್ನು ಪರೀಕ್ಷಿಸುತ್ತಿದೆ.

Best Mobiles in India

English summary
YouTube will now let users create remixes of up to 5 seconds of YouTube or Shorts with the help of a new toolkit in their own Shorts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X