ಗೂಗಲ್‌ ಸರ್ಚ್‌ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತಿ ತೆಗೆದುಹಾಕಲು ಇಲ್ಲಿದೆ ಅವಕಾಶ!

|

ಗೂಗಲ್‌ ಸರ್ಚ್‌ ಮಾಡುವಾಗ ನಿಮ್ಮ ಫೋನ್‌ ನಂಬರ್‌ ಮತ್ತು ನಿಮ್ಮ ವಿಳಾಸ ಕಂಡು ಬಂದರೆ ಏನಾಗಬೇಡ. ಅಪರಿಚಿತರಿಗೆ ಸುಲಭವಾಗಿ ನಿಮ್ಮ ಫೋನ್‌ ನಂಬರ್‌ ಸಿಕ್ಕಿಬಿಟ್ಟರೆ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಹೆಚ್ಚಿನ ಜನರು ಗೂಗಲ್‌ ಸರ್ಚ್‌ನಲ್ಲಿ ತಮ್ಮ ಫೋನ್‌ ನಂಬರ್‌ ಇಲ್ಲವೇ ವಿಳಾಸ ಕಂಡುಬರದಂತೆ ಎಚ್ಚರ ವಹಿಸುತ್ತಾರೆ. ಹಾಗೊಂದು ವೇಳೆ ನಿಮ್ಮ ಫೋನ್‌ ನಂಬರ್‌ ಗೂಗಲ್‌ ಸರ್ಚ್‌ನಲ್ಲಿ ದೊರೆಯುತ್ತಿದೆ ಎಂದು ತಿಳಿದುಬಂದರೆ ಅದನ್ನು ತೆಗೆದುಹಾಕುವುದಕ್ಕೆ ಗೂಗಲ್‌ ಅವಕಾಶ ನೀಡಿದೆ.

ಗೂಗಲ್‌ ಸರ್ಚ್‌

ಹೌದು, ಗೂಗಲ್‌ ಸರ್ಚ್‌ ರಿಸಲ್ಟ್‌ನಲ್ಲಿ ನಿಮ್ಮ ಫೋನ್‌ ನಂಬರ್‌ ಕಂಡು ಬಂದರೆ ಆ ಮಾಹಿತಿಯನ್ನು ತೆಗೆದುಹಾಕಲು ನೀವು ಗೂಗಲ್‌ಗೆ ರಿಕ್ವೆಸ್ಟ್‌ ಕಳುಹಿಸಬಹುದಾಗಿದೆ. ಗೂಗಲ್‌ ಸರ್ಚ್‌ನಲ್ಲಿ ವೈಯುಕ್ತಿಕವಾಗಿ ಗುರುತಿಸಬಹುದಾದ ಮಾಹಿತಿ ತೆಗೆದುಹಾಕುವುದಾಗಿ ಗೂಗಲ್‌ ತನ್ನ ಬ್ಲಾಗ್‌ ಪೋಸ್ಟ್‌ನಲ್ಲಿ ಪ್ರಕಟಿಸಿದೆ. ಇದಕ್ಕಾಗಿ ಗೂಗಲ್‌ ಹೊಸ ಫೀಚರ್ಸ್‌ ಅನ್ನು ಹೊರತಂದಿರುವುದಾಗಿ ಹೇಳಿದೆ. ಹಾಗಾದ್ರೆ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ಗೂಗಲ್‌ ಸರ್ಚ್‌ನಲ್ಲಿ ಕಾಣದಂತೆ ಮಾಡುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಸರ್ಚ್‌

ಗೂಗಲ್‌ ಸರ್ಚ್‌ ರಿಸಲ್ಟ್‌ನಲ್ಲಿ ನಿಮ್ಮ ಫೋನ್‌ ನಂಬರ್‌, ವಿಳಾಸ ಹಾಗೂ ವೈಯುಕ್ತಿಕ ಮಾಹಿತಿಯನ್ನು ನೀವು ನೋಡಿದರೆ ಅದನ್ನು ತೆಗೆದುಹಾಕುವುದಕ್ಕೆ ಅವಕಾಶವಿದೆ. ಇದಕ್ಕಾಗಿ ಗೂಗಲ್‌ಗೆ ರಿಕ್ವೆಸ್ಟ್‌ ಕಳುಹಿಸಬೇಕಾಗುತ್ತದೆ. ಬಳಕೆದಾರರು ತಮ್ಮ ಸೂಕ್ಷ್ಮ, ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯ ಮೇಲೆ ಹೆಚ್ಚಿನ ಕಂಟ್ರೋಲ್‌ ತೆಗೆದುಕೊಳ್ಳವುದಕ್ಕಾಗಿ ಗೂಗಲ್‌ ಹೊಸ ಫೀಚರ್ಸ್‌ ಅನ್ನು ಕೂಡ ಪರಿಚಯಿಸಿದೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕುವುದು ಸುಲಭವಾಗಲಿದೆ.

ಇಮೇಲ್

ಇನ್ನು ಬಳಕೆದಾರರು ತಮ್ಮ ಫೋನ್ ಸಂಖ್ಯೆ, ಇಮೇಲ್ ವಿಳಾಸ ಅಥವಾ ಭೌತಿಕ ವಿಳಾಸದಂತಹ ಮಾಹಿತಿ ಗೂಗಲ್‌ನಲ್ಲಿ ಕಂಡುಬಂದರೆ ನಿಮ್ಮ ವೈಯುಕ್ತಿಕ ಮಾಹಿತಿಯನ್ನು ತೆಗೆದುಹಾಕಲು ರಿಕ್ವೆಸ್ಟ್‌ ಮಾಡಬಹುದು. ಸರ್ಚ್‌ ರಿಸಲ್ಟ್‌ನಲ್ಲಿ ನಿಮ್ಮ ವೈಯುಕ್ತಿಕ ಮಾಹಿತ ಕಾಣಿಸಿಕೊಂಡರೆ ನಿಮ್ಮ ಮಾಹಿತಿ ಬೇರೆಯವರು ಕದಿಯುವ ಸಾಧ್ಯತೆಯಿದೆ. ಹಾಗೆಯೇ ನಿಮ್ಮ ವೈಯುಕ್ತಿಕ ಮಾಹಿತಿಯ ಮೂಲಕ ವಂಚಕರು ನಿಮ್ಮನ್ನು ವಂಚಿಸಬಹುದು.

ಗೂಗಲ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ರಿಕ್ವೆಸ್ಟ್‌ ಕಳುಹಿಸಲು ಹೀಗೆ ಮಾಡಿ?

ಗೂಗಲ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ರಿಕ್ವೆಸ್ಟ್‌ ಕಳುಹಿಸಲು ಹೀಗೆ ಮಾಡಿ?

ಹಂತ:1 ಮೊದಲಿಗೆ ಗೂಗಲ್‌ ಸಪೋರ್ಟ್‌ ಪೇಜ್‌ಗೆ ಭೇಟಿ ನೀಡಿ
ಹಂತ:2 ಇದರಲ್ಲಿ ಗೂಗಲ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಲು ರಿಕ್ವೆಸ್ಟ್‌ ಆಯ್ಕೆ ಕಾಣಬಹುದು.
ಹಂತ:3 ಇಲ್ಲಿ ಸಂಬಂಧಿತ ಲಿಂಕ್‌ಗಳಿಂದ ಬೆಂಬಲಿತವಾದ ಅಧಿಕೃತ ಮಾಹಿತಿಯನ್ನು ಒದಗಿಸುವ ಮೂಲಕ ಫಾರ್ಮ್ ಅನ್ನು ಭರ್ತಿ ಮಾಡಿ.
ಹಂತ:4 ಈಗ ಗೂಗಲ್‌ ಸರ್ಚ್‌ ರಿಸಲ್ಟ್‌ ನಲ್ಲಿ ನಿಮ್ಮ ಯಾವೆಲ್ಲಾ ಮಾಹಿತಿಯನ್ನು ತೆಗೆದುಹಾಕಬೇಕು ಎನ್ನುವ ಅಗತ್ಯ ವಿವರಗಳನ್ನು ಭರ್ತಿ ಮಾಡಿದ ನಂತರ ಫಾರ್ಮ್ ಅನ್ನು ಸಬ್ಮಿಟ್‌ ಮಾಡಿ.

ನೀವು ಈ ಫಾರ್ಮ್ ಅನ್ನು ಭರ್ತಿ ಮಾಡಿದ ನಂತರ, ನಿಮ್ಮ ರಿಕ್ವೆಸ್ಟ್‌ ಅನ್ನು ಸ್ವೀಕರಿಸಿದೆ ಎಂದು ದೃಢೀಕರಿಸುವ ರೆಸ್ಪಾನ್ಸ್‌ ಅನ್ನು ಗೂಗಲ್‌ನಿಂದ ಬರಲಿದೆ. ಇದಾದ ನಂತರ ಗೂಗಲ್‌ ನಿಮ್ಮ ವಿನಂತಿಯನ್ನು ಪರಿಶೀಲಿಸುತ್ತದೆ. ಹಾಗೆಯೇ ಹೆಚ್ಚಿನ ಮಾಹಿತಿಯನ್ನು ಒದಗಿಸಲು ನಿಮ್ಮನ್ನು ಕೇಳಬಹುದು. ಈ ಎಲ್ಲಾ ಮಾಹಿತಿಯನ್ನು ಆಧರಿಸಿ ಗೂಗಲ್‌ ಕ್ರಮಗಳನ್ನು ತೆಗೆದುಕೊಂಡರೆ, ನಿಮಗೆ ಮೇಲ್ ಮೂಲಕ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎನ್ನುವುದನ್ನು ತಿಳಿಸಲಿದೆ.

ಗೂಗಲ್‌

ಇದಲ್ಲದೆ ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಲ್‌ ರೆಕಾರ್ಡಿಂಗ್‌ ಮಾಡುವ ಅಪ್ಲಿಕೇಶನ್‌ಗಳನ್ನು ಸ್ಟಾಪ್‌ ಮಾಡುವುದಕ್ಕೆ ಗೂಗಲ್‌ ಮುಂದಾಗಿದೆ. ಇದಕ್ಕಾಗಿ ಗೂಗಲ್‌ ಪ್ಲೇ ಸ್ಟೋರ್‌ನ ನೀತಿಗಳಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿದೆ. ಆಂಡ್ರಾಯ್ಡ್‌ನ ಆಕ್ಸೆಸಿಬಿಲಿಟಿ ನೀತಿಯನ್ನು ಅಪ್ಡೇಟ್‌ ಮಾಡಲಿದೆ. ಅದರಂತೆ ರಿಮೋಟ್ ಕಾಲ್‌ ಆಡಿಯೊ ರೆಕಾರ್ಡಿಂಗ್‌ ಅನುಮತಿಸುವ ಅಪ್ಲಿಕೇಶನ್‌ಗಳಿಗೆ ಪ್ಲೇ ಸ್ಟೋರ್‌ ಅವಕಾಶ ನೀಡುವುದಿಲ್ಲ ಎನ್ನಲಾಗಿದೆ. ಇನ್ನು ರೆಕಾರ್ಡಿಂಗ್ ಅಪ್ಲಿಕೇಶನ್‌ಗೆ ಪ್ರವೇಶವಿಲ್ಲದೆ, ಲೋಕಲ್‌ ಕಾಲ್‌ ರೆಕಾರ್ಡಿಂಗ್ ಮಾಡುವುದಕ್ಕೆ ಇನ್ಮುಂದೆ ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮೇ 11 ರಿಂದ ಈ ನಿಯಮಗಳು ಜಾರಿಗೆ ಬರಲಿವೆ ಎಂದು ಗೂಗಲ್‌ ವಿವರಿಸಿದೆ.

Best Mobiles in India

English summary
Here's how to request Google to remove your personal information

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X