ಆಕ್ಟೋಬರ್‌ ತಿಂಗಳಿನಲ್ಲಿ ಎಂಟ್ರಿ ನೀಡಲಿರುವ ಬಹುನಿರೀಕ್ಷಿತ ಸ್ಮಾರ್ಟ್‌ಫೋನ್‌ಗಳು!

|

ಟೆಕ್‌ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯವೂ ಹೊಸ ಸ್ಮಾರ್ಟ್‌ಫೋನ್‌ಗಳ ಎಂಟ್ರಿ ಜೋರಾಗಿದೆ. ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ ತಯಾರಕರು ಕೂಡ ನವೀನ ಮಾದರಿಯ ಫೋನ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಪ್ರತಿ ತಿಂಗಳಿನಂತೆ ಆಕ್ಟೋಬರ್‌ ತಿಂಗಳಿನಲ್ಲಿಯೂ ಕೂಡ ಅನೇಕ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡಲು ಸಜ್ಜಾಗಿವೆ. ಈ ಸಾಲಿನಲ್ಲಿ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳ ಫೋನ್‌ಗಳು ಸಾಕಷ್ಟು ನಿರೀಕ್ಷೆಯನ್ನು ಸಹ ಹುಟ್ಟುಹಾಕಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಈ ತಿಂಗಳು ಹಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಕಾದು ನಿಂತಿವೆ. ಬಿಡುಗಡೆಯ ದಿನಾಂಕವನ್ನು ಈಗಾಗಲೇ ಗೊತ್ತುಪಡಿಸಿದ್ದು ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಿವೆ. ಇದರಲ್ಲಿ ಮೊಟೊರೊಲಾ, ಗೂಗಲ್‌ ಪಿಕ್ಸೆಲ್‌, ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಹಾಗಾದ್ರೆ ಆಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್ ಪಿಕ್ಸೆಲ್ 7

ಗೂಗಲ್ ಪಿಕ್ಸೆಲ್ 7

ಆಕ್ಟೋಬರ್‌ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಪ್ರಮುಖ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್‌ ಪಿಕ್ಸೆಲ್‌ 7 ಸರಣಿ ಕೂಡ ಒಂದಾಗಿದೆ. ಈ ಸರಣಿಯು ಇದೇ ಅಕ್ಟೋಬರ್ 6 ರಂದು ಬಿಡುಗಡೆಯಾಗಲಿದೆ. ಈ ಸರಣಿಯ ಗೂಗಲ್‌ ಪಿಕ್ಸಲ್ 7 ಮತ್ತು ಗೂಗಲ್ ಪಿಕ್ಸಲ್ 7 ಪ್ರೊ ಸ್ಮಾರ್ಟ್‌ಫೋನ್‌ಗಳು ಹೈ ಎಂಡ್‌ ಮಾದರಿಯ ಕ್ಯಾಮೆರಾ ಸೆನ್ಸಾರ್‌ ಹೊಂದಿರಲಿವೆ. ಜೊತೆಗೆ ಅಧಿಕ ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇಯನ್ನು ಒಳಗೊಂಡಿರಲಿವೆ. ಹಾಗೆಯೇ ಈ ಫೋನ್‌ಗಳು ಎರಡನೇ ತಲೆಮಾರಿನ Tensor G2 ಚಿಪ್‌ಸೆಟ್‌ ಅನ್ನು ಪಡೆದಿರಲಿವೆ.

ಇನ್ಫಿನಿಕ್ಸ್ ಜಿರೋ ಅಲ್ಟ್ರಾ

ಇನ್ಫಿನಿಕ್ಸ್ ಜಿರೋ ಅಲ್ಟ್ರಾ

ಇದೇ ಅಕ್ಟೋಬರ್ 5 ರಂದು ಇನ್ಫಿನಿಕ್ಸ್‌ ಜಿರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ ಜಾಗತಿಕ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ. ಈ ಸ್ಮಾರ್ಟ್‌ಫೋನ್‌ 6.7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಲಿದ್ದು, 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 920 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಲಿದೆ.

ಶಿಯೋಮಿ 12T

ಶಿಯೋಮಿ 12T

ಶಿಯೋಮಿ ಕಂಪೆನಿ ಕೂಡ ಆಕ್ಟೋಬರ್‌ ತಿಂಗಳಿನಲ್ಲಿ ಶಿಯೋಮಿ 12T ಸರಣಿಯನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಇದೇ ಅಕ್ಟೋಬರ್ 4 ರಂದು ಜಾಗತಿಕ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ ಸರಣಿ ಎಂಟ್ರಿ ನೀಡಲಿದೆ. ಇನ್ನು ಈ ಸರಣಿಯಲ್ಲಿ ಶಿಯೋಮಿ 12T ಮತ್ತು ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. ಇದರಲ್ಲಿ ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8+ Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಆದರೆ ಶಿಯೋಮಿ 12T ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 8100 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಶಿಯೋಮಿ 12T ಪ್ರೊ ಸ್ಮಾರ್ಟ್‌ಫೋನ್‌ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ಹೊಂದಿದೆ.

ಮೊಟೊ G72

ಮೊಟೊ G72

ಮೊಟೊರೊಲಾ ಕಂಪನಿ ಇದೇ ಅಕ್ಟೋಬರ್ 3 ರಂದು ಮೊಟೊ G72 ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲಿದೆ. ಈ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ಗೆ ಬರಲಿದೆ. ಇನ್ನು ಮೊಟೊ G72 ಸ್ಮಾರ್ಟ್‌ಫೋನ್ 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಈ ಡಿಸ್‌ಪ್ಲೇ 120Hz ಪೋಲೆಡ್ ಪ್ಯಾನೆಲ್ ಹೊಂದಿರಲಿದೆ. ಇದು ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

Best Mobiles in India

English summary
Here's list of smartphones expected to launch in October 2022

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X