ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗುವ ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು!

|

ಪ್ರಸ್ತುತ ದಿನಗಳಲ್ಲಿ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತಡೆ ರಹಿತ ವೇಗದ ಇಂಟರ್‌ನೆಟ್‌ ಬಳಕೆಗಾಗಿ ಹೆಚ್ಚಿನ ಜನರು ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೇ ಕಾರಣಕ್ಕೆ ದೇಶದ ಪ್ರಮುಖ ಬ್ರಾಂಡ್‌ಬ್ಯಾಂಡ್‌ ಸೇವಾ ಪೂರೈಕೆದಾರರಾದ ಏರ್‌ಟೆಲ್‌, ಜಿಯೋ, ಬಿಎಸ್‌ಎನ್‌ಎಲ್‌ ಟೆಲಿಕಾಂ ಕಂಪನಿಗಳು ಹಲವು ಬ್ರಾಡ್‌ಬ್ಯಾಂಡ್ ಪ್ಲಾನ್‌ಗಳನ್ನು ಪರಿಚಯಿಸಿವೆ. ಈ ಪ್ಲಾನ್‌ಗಳಲ್ಲಿ ಬಳಕೆದಾರರು ಅನಿಯಮಿತ ಕರೆ ಪ್ರಯೋಜನಗಳು ಮತ್ತು ಹೆಚ್ಚಿನ ವೇಗದ ಡೇಟಾದ ಲಾಭವನ್ನು ಪಡೆಯಬಹುದು.

ಬ್ರಾಡ್‌ಬ್ಯಾಂಡ್‌

ಹೌದು, ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳು ಬೇಡಿಕೆ ಪಡೆದುಕೊಂಡಿವೆ. ಏರ್‌ಟೆಲ್‌, ಜಿಯೋ, ಬಿಎಸ್‌ಎನ್‌ಎಲ್‌ ಟೆಲಿಕಾಂಗಳು ವಿವಿಧ ಬೆಲೆಯಲ್ಲಿ ಆಕರ್ಷಕ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿವೆ. ಇದರಲ್ಲಿ ಕೈಗೆಟಕುವ ಬೆಲೆಯ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಗ್ರಾಹಕರನ್ನು ಆಕರ್ಷಿಸಿವೆ. ಇದರಲ್ಲಿ 500 ರೂ.ಗಿಂತ ಕಡಿಮೆ ಬೆಲೆಯಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆಗಳನ್ನು ಸಹ ನೀಡುತ್ತಿವೆ. ಹಾಗಾದ್ರೆ 500ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಬಿ.ಎಸ್.ಎನ್.ಎಲ್

ಬಿ.ಎಸ್.ಎನ್.ಎಲ್

ಬಿ.ಎಸ್.ಎನ್.ಎಲ್ ಟೆಲಿಕಾಂ 329ರೂ. ಬೆಲೆಯಲ್ಲಿ ಇತ್ತೀಚಿಗೆ ಹೊಸ ಬ್ರಾಡ್‌ಬ್ಯಾಂಡ್ ಪ್ಲಾನ್‌ ಬಿಡುಗಡೆ ಮಾಡಿದೆ. ಇದೀಗ, ಈ ಪ್ಲಾನ್‌ ಆಯ್ದ ರಾಜ್ಯಗಳಲ್ಲಿ ಮಾತ್ರ ಲೈವ್ ಆಗಿದೆ. ಇನ್ನು ಈ ಅಗ್ಗದ ಪ್ಲಾನ್‌ನಲ್ಲಿ 1TB ಇಂಟರ್‌ನೆಟ್ ಡೇಟಾ ಲಭ್ಯವಿರುತ್ತದೆ. ಇದನ್ನು ನೀವು 20 Mbps ವೇಗದಲ್ಲಿ ಬಳಸಲು ಸಾಧ್ಯವಾಗುತ್ತದೆ. ಇದಲ್ಲದೆ ಈ ಪ್ಲಾನ್‌ನಲ್ಲಿ ಉಚಿತ ಧ್ವನಿ ಕರೆ ಮತ್ತು ದೈನಂದಿನ 100 SMS ಸಹ ಲಭ್ಯವಿರುತ್ತದೆ. ಈ ಬ್ರಾಡ್‌ಬ್ಯಾಂಡ್ ಯೋಜನೆಯು ಒಂದು ತಿಂಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಏರ್‌ಟೆಲ್ ಎಕ್ಸ್‌ಟ್ರೀಮ್

ಏರ್‌ಟೆಲ್ ಎಕ್ಸ್‌ಟ್ರೀಮ್

ಏರ್‌ಟೆಲ್ ಎಕ್ಸ್‌ಟ್ರೀಮ್ ಫೈಬರ್‌ 499 ರೂ ಬೆಲೆಯಲ್ಲಿ ಎಂಟ್ರಿ ಲೆವೆಲ್‌ ಬ್ರಾಡ್‌ಬ್ಯಾಂಡ್ ಪ್ಲಾನ್ ಹೊಂದಿದೆ. ಈ ಬ್ರಾಡ್‌ಬ್ಯಾಂಡ್ ಪ್ಲಾನ್‌ ಬಳಕೆದಾರರಿಗೆ 40Mbps ವೇಗದಲ್ಲಿ 3.3TB ವರೆಗೆ ಅನಿಯಮಿತ ಇಂಟರ್‌ನೆಟ್‌ ಪ್ರಯೋಜನ ನೀಡಲಿದೆ. ಅಲ್ಲದೆ ಬಳಕೆದಾರರು ಅನ್‌ಲಿಮಿಟೆಡ್‌ ಲೋಕಲ್‌ ಮತ್ತು ISD ಕರೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನವನ್ನು ಸಹನೀಡಲಾಗಿದೆ. ಇದಲ್ಲದೆ, ಬಳಕೆದಾರರು ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಗೆ ಚಂದಾದಾರಿಕೆಯನ್ನು ಸಹ ಪಡೆಯುತ್ತಾರೆ. ಈ ಪ್ಲಾನ್‌ 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ಜಿಯೋಫೈಬರ್‌ನ ಬ್ರೊನ್ಜ್ ಪ್ಲಾನ್‌ 399 ರೂ. ಬೆಲೆಯನ್ನು ಹೊಂದಿದೆ. ಈ ಪ್ಲಾನ್‌ನಲ್ಲಿ ನೀವು 30mbps ಇಂಟರ್ನೆಟ್ ವೇಗವನ್ನು ಪಡೆದುಕೊಳ್ಳಬಹುದು. ಜೊತೆಗೆ ಅನಿಯಮಿತ ಕರೆಯೊಂದಿಗೆ 3,300 FUP ಡೇಟಾ ಮಿತಿಯನ್ನು ನೀಡಲಿದೆ. ಆದರೆ ಈ ಬ್ರೊನ್ಜ್ ಪ್ಲಾನ್‌ ಯಾವುದೇ OTT ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆಯನ್ನು ನೀಡುವುದಿಲ್ಲ ಅನ್ನೊದು ಗಮನಾರ್ಹವಾಗಿದೆ.

ನೆಟ್‌ಪ್ಲಸ್

ನೆಟ್‌ಪ್ಲಸ್

ಇನ್ನು ನೆಟ್‌ಪ್ಲಸ್‌ ಕಂಪೆನಿ ಕೂಡ ಅಗ್ಗದ ಬೆಲೆಯ ಬ್ರಾಡ್‌ಬ್ಯಾಂಡ್‌ಗಳನ್ನು ನೀಡುತ್ತಿದೆ. ಉತ್ತರ ಭಾರತದ ಏಳು ರಾಜ್ಯಗಳಲ್ಲಿ ತನ್ನ ಸೇವೆಗಳನ್ನು ನೀಡುತ್ತಿರುವ ನೆಟ್‌ಫ್ಲಸ್‌ 1 Gbps ವರೆಗೆ ಇಂಟರ್ನೆಟ್ ಸಂಪರ್ಕವನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುವರಿಯಾಗಿ, ಕಂಪನಿಯು ತಿಂಗಳಿಗೆ 499 ರೂ ಬೆಲೆಯಲ್ಲಿ 40 Mbps ಇಂಟರ್ನೆಟ್ ವೇಗವನ್ನು ನೀಡುವ ಟ್ರೂಲಿ ಅನ್‌ಲಿಮಿಟೆಡ್‌ ಪ್ಲಾನ್‌ ಅನ್ನು ಸಹ ನೀಡುತ್ತಿದ್ದು, ಇದು GST ಯಿಂದ ವಿನಾಯಿತಿ ಪಡೆದಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಡೇಟಾ ಮತ್ತು ಕರೆ ಮಾಡುವ ಪ್ರಯೋಜನವನ್ನು ಪಡೆಯುತ್ತಾರೆ. ಹಾಗೆಯೇ ನೆಟ್‌ಪ್ಲಸ್‌ ಕೇವಲ 40 Mbps ಯೋಜನೆಯನ್ನು ನೀಡುತ್ತದೆ. ISP ಗಳು ನೀಡುವ ಹೆಚ್ಚಿನ ಬೆಲೆಯ ಯೋಜನೆಗಳೊಂದಿಗೆ ಮಾತ್ರ OTT ಚಂದಾದಾರಿಕೆ ಲಭ್ಯವಿದೆ.

Best Mobiles in India

English summary
To meet the demand of their users, Internet service provider companies of the country are coming up with many affordable broadband plans.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X