ಈ ಟೆಕ್ ದಿಗ್ಗಜರನ್ನು ನೀವು ಅನುಸರಿಸಿದರೆ ಗೆಲುವು ಗ್ಯಾರಂಟಿ

By Suneel
|

ಕೆಲವೊಂದು ಮನೆಗಳಲ್ಲಿ ಬೆಳಿಗ್ಗೆ ಲಘು ಉಪಹಾರಕ್ಕೆ (ಬ್ರೇಕ್‌ಫಾಸ್ಟ್‌)ಗೆ ಏನ್‌ ಮಾಡಬೇಕು ಎಂದು ರಾತ್ರಿಯೇ ನಿರ್ಧರಿಸಿಬಿಟ್ಟಿರುತ್ತಾರೆ. ಆದ್ರೆ ಹಳ್ಳಕಡೆ ಇಂದಿಗೂ ಸಹ ಈ ಬ್ರೇಕ್‌ಫಾಸ್ಟ್‌ ಲಘು ಉಪಹಾರಗಳು ಕೆಲವು ಹಬ್ಬ ಮತ್ತು ವಿಶೇಷದಿನಗಳಿಗೆ ಮಾತ್ರ ಸೀಮಿತವಾಗಿರುತ್ತವೆ. ಏನಪ್ಪಾ ಟೆಕ್ನಾಲಜಿ ಬಗ್ಗೆ ಹೇಳ್ತಿದೋರು ಇವತ್ತು ಆಹಾರದ ಬಗ್ಗೆ ಹೇಳ್ತಿದಾರೆ ಅಂತಿರಾ. ಅದಕ್ಕೆ ಕಾರಣ ವಿದೆ. ನಮ್ಮ ಈ ಟೆಕ್ನಾಲಜಿ ಕ್ಷೇತ್ರದ ಕೆಲವು ಸಾಧಕರು ತಮ್ಮ ದಿನವನ್ನು ಯಾವ ರೀತಿ ಪ್ರಾರಂಭಿಸುತ್ತಾರೆ ಎಂಬುದು ಕುತೂಹಲಕಾರಿ ವಿಷಯವಾಗಿದೆ.

ಓದಿರಿ:ಫೇಸ್‌ಬುಕ್‌ನಲ್ಲಿನ ವೀಡಿಯೊಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ

ಪ್ರಪಂಚದ ಪ್ರಖ್ಯಾತ ಟೆಕ್‌ ಉದ್ಯಮಿಗಳು ತಮ್ಮ ದಿನದ ಆರಂಭದಲ್ಲಿ ದೇಹಕ್ಕೆ ಬೇಕಾದ ಇಂಧನ, ಅಂದ್ರೆ ಲಘು ಆಹಾರ ಸೇವಿಸುವ ಹಾಗೂ ಅವರು ಬೆಳಿಗ್ಗೆಯೇ ಏನನ್ನು ತಿನ್ನಲು ಇಷ್ಟಪಡುತ್ತಾರೆ ಎಂಬುದು ವಿಶೇಷವಾಗಿದೆ. ಈ ಲೇಖನದಲ್ಲಿ ತಿಳಿಸಿರುವ ಕೆಲವು ಉದ್ಯಮಿಗಳು ದಿನನಿತ್ಯ ಬ್ರೇಕ್‌ಫಾಸ್ಟ್‌ಗೆ ಅಂತದೇ ಆಹಾರ ತಿನ್ನಬೇಕು ಎಂದು ನಿರ್ಧರಿಸಿದ್ದಾರಂತೆ. ಅದರಲ್ಲೂ ಪ್ರಪಂಚದ ಪ್ರಖ್ಯಾತ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಅವರ ಬ್ರೇಕ್‌ಫಾಸ್ಟ್‌ ಏನನ್ನು ತಿನ್ನಲು ಇಷ್ಟಪಡುತ್ತಾರೆ ಎಂಬುದು ಇನ್ನೂ ವಿಶೇಷವಾಗಿದೆ. ಟೆಕ್‌ ಕ್ಷೇತ್ರದ ಪ್ರಮುಖ ಉದ್ಯಮಿಗಳು ತಮ್ಮ ದಿನವನ್ನು ಯಾವ ಆಹಾರ ತಿನ್ನುವುದರ ಮೂಲಕ ಆರಂಭಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ರಿಚರ್ಡ್‌ ಬ್ರಾನ್ಸನ್‌

ರಿಚರ್ಡ್‌ ಬ್ರಾನ್ಸನ್‌

ವರ್ಜಿನ್‌ ಗ್ರೂಪ್‌ ಸಂಸ್ಥಾಪಕರಾದ ರಿಚರ್ಡ್‌ ಬ್ರಾನ್ಸನ್‌ರವರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಫ್ರೂಟ್‌ಸಾಲಡ್ ಮತ್ತು ಒಣಗಿದ ಹಣ್ಣುಗಳನ್ನು ಹಾಲಿನ ಹೊತೆಗೆ ಸೇವಿಸುತ್ತಾರಂತೆ.

ಚೆರಿಲ್‌ ಬ್ಯಾಚೆಲ್ಡರ್

ಚೆರಿಲ್‌ ಬ್ಯಾಚೆಲ್ಡರ್

ಪಾಪೇಸ್ ಲೂಸಿಯಾನ ಕಿಚೆನ್‌ ಕಂಪನಿಯ ಸಿಇಓ'ಆದ 'ಚೆರಿಲ್‌ ಬ್ಯಾಚೆಲ್ಡರ್'‌ ರವರು ತಮ್ಮ ಬೆಳಿಗ್ಗೆಯ ಲಘು ಆಹಾರಕ್ಕಾಗಿ ಬೇಯಿಸಿದ ಮೊಟ್ಟೆ ಹಾಗೂ ಒಣಗಿಸಿದ ಬೇಕನ್‌ (ಹಂದಿ ಮಾಂಸ) ಟೋಸ್ಟ್‌ ಅನ್ನು ತಿನ್ನುತ್ತಾರಂತೆ.

ಜಾಕ್‌ ಡಾರ್ಸೆ

ಜಾಕ್‌ ಡಾರ್ಸೆ

ಸ್ಕ್ವೇರ್‌ ಕಂಪನಿ ಸಿಇಓ ಮತ್ತು ಟ್ವಿಟರ್‌ ಸಹ-ಸಂಸ್ಥಾಪಕರಾದ ಜಾಕ್‌ ಡಾರ್ಸೆರವರು ಬೆಳಿಗ್ಗೆಯೇ ಎರಡು ಬೇಯಿಸಿದ ಮೊಟ್ಟೆಗಳು ಮತ್ತು ಸೋಯಾ ಸಾಸ್‌ ಅನ್ನುಬ್ರೇಕ್‌ ಫಾಸ್ಟ್‌ಗಾಗಿ ತಿನ್ನುತ್ತಾರಂತೆ.

ಬ್ರಾಡ್ ಲಾಂಡೆ

ಬ್ರಾಡ್ ಲಾಂಡೆ

Birchbox ಎಂಬುದು ನ್ಯೂಯಾರ್ಕ್‌ ಸಿಟಿ ಮೂಲದ ಆನ್‌ಲೈನ್‌ ಮೇಕಪ್‌ ಸೇವೆಯ ಕಂಪನಿಯಾಗಿದೆ. ಇದರ ಮುಖ್ಯಸ್ಥರಾದ ಬ್ರಾಡ್‌ ಲಾಂಡೆ ಯವರು ಬಿಸಿಯಾದ ನಿಂಬೆಹಣ್ಣಿನ ರಸವನ್ನು ಮಾತ್ರ ಕುಡಿಯುತ್ತಾರೆ.

 ಪಯಲ್‌ ಕಡಾಕಿಯಾ

ಪಯಲ್‌ ಕಡಾಕಿಯಾ

ಅಮೇರಿಕದ ದೈಹಿಕ ಫಿಟ್‌ನೆಸ್‌ ಕಂಪನಿಯ ಸಂಸ್ಥಾಪಕಿ ಮತ್ತು ಸಿಇಓ ಪಯಲ್‌ ಕಡಾಕಿಯಾ ರವರು ತಮ್ಮ ಬ್ರೇಕ್‌ಫಾಸ್ಟ್‌ಗೆ "ಹಣ್ಣುಗಳ ಜೊತೆಗೆ ವೆಂಟಿ ಸಿಟ್ರಸ್‌ ಇರುವ ಕಿತ್ತಳೆ, ನಿಂಬೆ ರಸ ಬೆರೆಸಿದ ಚಹಾವನ್ನು ಮಾತ್ರ ಸೇವಿಸುತ್ತಾರಂತೆ.

 ಕ್ಯಾಥೆರಿನ್‌ ಪವರ್‌

ಕ್ಯಾಥೆರಿನ್‌ ಪವರ್‌

Clique Media ಸಹ-ಸಂಸ್ಥಾಪಕಿ ಮತ್ತು ಸಿಇಓ 'ಕ್ಯಾಥೆರಿನ್‌ ಪವರ್‌' ರವರ ಬ್ರೇಕ್‌ಫಾಸ್ಟ್‌ ಆಹಾರ ವಿಶಿಷ್ಟವಾಗಿದ್ದು ಬಹುಶಃ ಇದು ಕಡಿಮೆಯಲ್ಲಿ ಅತಿ ಕಡಿಮೆ. ಅವರು ಕೇವಲ ಒಂದು ಮೊಟ್ಟೆ ಟೋಸ್ಟ್‌ ಜೊತೆಗೆ ಅವೋಕಾಡೊ ತಿನ್ನುತ್ತಾರಂತೆ.

ಮಾರ್ಕ್‌ ಜುಕರ್‌ಬರ್ಗ್‌

ಮಾರ್ಕ್‌ ಜುಕರ್‌ಬರ್ಗ್‌

ದಿನನಿತ್ಯ ಬೆಳಿಗ್ಗೆ ಕೆಲವರು ನಾನು ಅದನ್ನೆ ತಿನ್ನಬೇಕು, ಇದನ್ನೇ ತಿನ್ನಬೇಕು ಅಂತ ಏನೇನು ಯೋಚಿಸಿದ್ರೆ ನಮ್ಮ ಫೇಸ್‌ಬುಕ್‌ ಸಿಇಓ ಮಾರ್ಕ್‌ ಜುಕರ್‌ಬರ್ಗ್‌ ಮಾತ್ರ ಆ ಸನ್ನಿವೇಶದಲ್ಲಿ ಏನ್‌ ಆಹಾರ ಸಿಗುತ್ತೊ ಅದನ್ನೇ ತಿನ್ನುತಾರಂತೆ ಇತರರ ರೀತಿ ಮೊದಲೇ ನಿಶ್ಚಯಿಸುದಿಲ್ಲವಂತೆ.

Best Mobiles in India

English summary
Here’s How The World’s Leading Entrepreneurs Start Their Day. Zuckerberg’s Is A Surprise. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X