ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್‌ ಲಾಂಚ್; ಏನೆಲ್ಲಾ ಫೀಚರ್ಸ್‌ ಪಡೆದಿದೆ?

|

ಸ್ಮಾರ್ಟ್‌ಫೋನ್‌ ತಯಾರಿಕಾ ವಿಭಾಗದಲ್ಲಿ ಹಾನರ್‌ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಈ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದ್ದು, ಆಕರ್ಷಕ ಫೀಚರ್ಸ್‌ ಪಡೆದಿರಲಿವೆ. ಇದೀಗ ಹಾನರ್‌ ಪ್ಲೇ 30M (Honor Play 30M ) ಎಂಬ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಲಾಗಿದ್ದು, ಈ ಫೋನ್ 120Hz ರಿಫ್ರೆಶ್ ರೇಟ್ ಹೊಂದಿದೆ.

ಹಾನರ್‌ ಕಂಪೆನಿ

ಹೌದು, ಹಾನರ್‌ ಕಂಪೆನಿ ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್‌ ಅನ್ನು ಅನಾವರಣ ಮಾಡಿದ್ದು, ಇದು 5G ಡಿವೈಸ್ ಆಗಿದೆ. ಹಾಗೆಯೇ ಎಲ್‌ಸಿಡಿ ಡಿಸ್‌ಪ್ಲೇ ಹಾಗೂ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 480G ಪ್ಲಸ್ ಚಿಪ್‌ಸೆಟ್‌ ನ ಬಲ ಪಡೆದುಕೊಂಡಿದ್ದು, ಜೊತೆಗೆ 6GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಇದರಲ್ಲಿದೆ. ಇನ್ನುಳಿದಂತೆ ಈ ಫೋನ್‌ನ ಇತರೆ ಫೀಚರ್ಸ್‌ ಹಾಗೂ ಬೆಲೆ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಡಿಸ್‌ಪ್ಲೇ ವಿನ್ಯಾಸ

ಡಿಸ್‌ಪ್ಲೇ ವಿನ್ಯಾಸ

ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್ 6.5 ಇಂಚಿನ ಎಲ್‌ಸಿಡಿ ಹೆಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, 270 ಪಿಪಿಐ ಸಾಂದ್ರತೆ ಜೊತೆಗೆ 1600 x 720 ಪಿಕ್ಸೆಲ್‌ ರೆಸಲ್ಯೂಶನ್ ನೀಡಲಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480G ಪ್ಲಸ್ ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 6GB RAM ಹಾಗೂ 128GB ಇಂಟರ್ನಲ್‌ ಸ್ಟೋರೇಜ್‌ ಆಯ್ಕೆ ಪಡೆದುಕೊಂಡಿದ್ದು, ಇದು ಆಡ್ರಾಯ್ಡ್‌ ಓಎಸ್ 12 ರಲ್ಲಿ ರನ್‌ ಆಗಲಿದೆ. ಇದರ ಜೊತೆಗೆ ಈ ಫೋನ್‌ ಅಡ್ರಿನೊ 619 ಗ್ರಾಫಿಕ್ ಪ್ರೊಸೆಸರ್ ಯೂನಿಟ್ ಬಲ ಪಡೆದುಕೊಂಡಿದೆ.

ಕ್ಯಾಮೆರಾ ವಿಶೇಷತೆ

ಕ್ಯಾಮೆರಾ ವಿಶೇಷತೆ

ಹಾನರ್‌ ಪ್ಲೇ 30M ಸ್ಮಾರ್ಟ್‌ಫೋನ್ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮರಾ ಹಾಗೂ 2 ಮೆಗಾಪಿಕ್ಸೆಲ್ ಡೆಪ್ತ ಸೆನ್ಸರ್ ಜೊತೆಗೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗೆಯೇ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದರಲ್ಲಿದೆ. ಈ ಕ್ಯಾಮೆರಾಗಳಿಗೆ ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ ಹಾಗೂ ಕನೆಕ್ಟಿವಿಟಿ

ಬ್ಯಾಟರಿ ಹಾಗೂ ಕನೆಕ್ಟಿವಿಟಿ

ಈ ಫೋನ್‌ 10W ವೇಗದ ಚಾರ್ಜಿಂಗ್‌ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದೆ. ಅದರಂತೆ ಈ ಫೋನ್ 8.69 ಮಿಮೀ ದಪ್ಪ ಮತ್ತು 194 ಗ್ರಾಂ ತೂಕ ಹೊಂದಿದೆ. ಇನ್ನು 3.5mm ಆಡಿಯೊ ಜಾಕ್‌, ಬ್ಲೂಟೂತ್ ಆವೃತ್ತಿ 5.1, A2DP, LE ಹಾಗೂ ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ವೈ-ಫೈ802.11 a/b/g/n/ac, ಡ್ಯುಯಲ್-ಬ್ಯಾಂಡ್ ಕನೆಕ್ಟಿವಿಟಿ ಆಯ್ಕೆಯನ್ನು ಹೊಂದಿದೆ.

ಬೆಲೆ ಹಾಗೂ ಇತರೆ

ಬೆಲೆ ಹಾಗೂ ಇತರೆ

ಈ ಸ್ಮಾರ್ಟ್‌ಫೋನ್‌ ಸದ್ಯಕ್ಕೆ ಚೀನಾದಲ್ಲಿ ಮಾತ್ರ ಲಭ್ಯವಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್‌ಗೆ CNY 1,299 (ಭಾರತದಲ್ಲಿ ಸುಮಾರು ರೂ. 14,800ರೂ.) ಅನ್ನು ನಿಗದಿ ಮಾಡಲಾಗಿದೆ. ಹಾಗೆಯೇ ಈ ಫೋನ್‌ ಅರೋರಾ ಬ್ಲೂ, ಮ್ಯಾಜಿಕ್ ನೈಟ್ ಬ್ಲಾಕ್ ಮತ್ತು ಟೈಟಾನಿಯಂ ಎಂಪ್ಟಿ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಇನ್ನು ಜಾಗತಿಕವಾಗಿ ಈ ಸ್ಮಾರ್ಟ್‌ಫೋನ್‌ ಯಾವಾಗ ಭಾರತದ ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತದೆ ಎಂಬ ವಿವರವನ್ನು ಹಾನರ್‌ ಬಹಿರಂಗಪಡಿಸಿಲ್ಲ.

ಸ್ಮಾರ್ಟ್‌ಫೋನ್‌

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ಗೂ ಮೊದಲು ಇದೇ ಸರಣಿಯ ಹಾನರ್‌ ಪ್ಲೇ 30 ಸ್ಮಾರ್ಟ್‌ಫೋನ್ ಅನ್ನು ಮೇ ತಿಂಗಳಲ್ಲಿ ಹಾನರ್‌ ಕಂಪೆನಿ ಅನಾವರಣ ಮಾಡಿತ್ತು. ಈ ಸ್ಮಾರ್ಟ್‌‌ಫೋನ್‌ 5G ಕನೆಕ್ಟಿವಿಟಿ ಮತ್ತು ಸಿಂಗಲ್ ರಿಯರ್ ಕ್ಯಾಮೆರಾ ಆಯ್ಕೆಯನ್ನು ಹೊಂದಿದ್ದು, ಇದರ ಕ್ಯಾಮೆರಾ ಮಾಡ್ಯೂಲ್ ಐಫೋನ್ 13 ನಲ್ಲಿರುವಂತೆಯೇ ಕಾಣಿಸುತ್ತದೆ. ಹಾಗೆಯೇ ಈ ಡಿವೈಸ್‌ ಸ್ನಾಪ್‌ಡ್ರಾಗನ್ 480+ SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 8GB RAM ಸ್ಟೋರೇಜ್‌ ಸಾಮರ್ಥ್ಯ ಪಡೆದುಕೊಂಡಿದೆ.

Best Mobiles in India

English summary
Honor has taken a leading position in the smartphone segment. Accordingly, the new Honor Play 30M smartphone has been unveiled.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X