ಜನವರಿ 8ಕ್ಕೆ ಹಾನರ್ ನಿಂದ ಮತ್ತೊಂದು ಫುಲ್ ಸ್ಕ್ರಿನ್ ಡಿಸ್ ಪ್ಲೇ ಫೋನ್ ಲಾಂಚ್..!

Written By: Lekhaka

ಹುವಾವೆ ಒಡೆತನದ ಹಾನರ್ ಕಂಪನಿಯೂ ಎರಡು ಸ್ಮಾರ್ಟ್ ಫೋನ್ ಗಳನ್ನು ಪರಿಚಯ ಮಾಡಿದ್ದು, ಹಾನರ್ 7X ಮತ್ತು ಹಾನರ್ V10 ಈಗಾಗಲೇ ಲಂಡನ್ ನಲ್ಲಿ ಕಳೆದ ವಾರ ಲಾಂಚ್ ಆಗಿತ್ತು. ಹಾನರ್ V10 ಸ್ಮಾರ್ಟ್ ಫೋನ್ ಗಳು ಮುಂದಿನ ವರ್ಷದ ಜನವರಿ 8 ರಂದು ಬಿಡುಗಡೆ ಮಾಡಲಿದೆ ಎನ್ನಲಾಗಿದೆ.

ಜನವರಿ 8ಕ್ಕೆ ಹಾನರ್ ನಿಂದ ಮತ್ತೊಂದು ಫುಲ್ ಸ್ಕ್ರಿನ್ ಡಿಸ್ ಪ್ಲೇ ಫೋನ್ ಲಾಂಚ್..!

ಈಗಾಗಲೇ ಹಾನರ್ 7X ಈಗಾಗಲೇ ಭಾರತದಲ್ಲಿ ಬಿಡುಗಡೆಯಾಗಿದ್ದು, ರೂ.12,999ಕ್ಕೆ ಮಾರಾಟವಾಗುತ್ತಿದ್ದು, ಅಮೆಜಾನ್ ನಲ್ಲಿ ಮಾತ್ರವೇ ಈ ಸ್ಮಾರ್ಟ್ ಫೋನ್ ದೊರೆಯಲಿದೆ ಎನ್ನಲಾಗಿದೆ. ಈಗ ಇದೇ ಮಾದರಿಯಲ್ಲಿ ಹಾನರ್ V10 ಸ್ಮಾರ್ಟ್ ಫೋನ್ ಸಹ ಭಾರತೀಯ ಮಾರುಕಟ್ಟೆಗೆ ಕಾಲಿಡಲಿದೆ.

ಜನವರಿಯಲ್ಲಿ ಹಾನರ್ V10 ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿದ್ದು, ಅಂದೇ ಈ ಸ್ಮಾರ್ಟ್ ಫೋನ್ ವಿಶ್ವ ಮಾರುಕಟ್ಟೆಯಲ್ಲಿಯೂ ಕಾಣಿಸಿಕೊಳ್ಳಲಿದೆ. ಈಗಾಗಲೇ ಈ ಫೋನ್ ಚೀನಾದಲ್ಲಿ ಬಿಡುಗಡೆಗೊಂಡಿದ್ದು, ಭಾರೀ ಯಶಸ್ಸು ಕಂಡಿದೆ ಎನ್ನಲಾಗಿದೆ.

ನಿಮ್ಮ ಮನೆಗೆ ಬೆಸ್ಟ್‌ TV ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ: ಕೇವಲ ರೂ.13,999ಕ್ಕೆ ಸ್ಮಾರ್ಟ್ LED TV..!

ಹಾನರ್ V10 ಸ್ಮಾರ್ಟ್ ಫೋನ್ 5.99 ಇಂಚಿನ ಬ್ರೆಜಿಲ್ ಲೈಸ್ ವಿನ್ಯಾಸವನ್ನು ಹೊಂದಿದ್ದು, FHD+ ರೆಸಲ್ಯೂಷನ್ ಡಿಸ್ ಪ್ಲೇ ಇದಾಗಿದ್ದು, ಆಕ್ಟಾ ಕೋರ್ ಕಿರನ್ 970 ಪ್ರೋಸೆಸರ್ ಹೊಂದಿರಲಿದೆ. ಇದಲ್ಲದೇ 6GB RAM ಮತ್ತು 128 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ಇದಲ್ಲದೇ ಈ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೆನ್ಸ್ ಕ್ಯಾಮೆರಾವನ್ನು ಕಾಣಬಹುದಾಗಿದ್ದು, 16 MP + 20MP ಕ್ಯಾಮೆರಾಗಳನ್ನು ನೋಡಬಹುದಾಗಿದೆ. ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 3750mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

Read more about:
English summary
Honor V10 that was launched along with the Honor 7X at an event in London is all set to be launched in India on January 8.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot