Subscribe to Gizbot

5 ವರ್ಷ ಉಚಿತವಾಗಿ ರಿಯಲನ್ಸ್ BIG TV, ಜೊತೆಗೆ ಉಚಿತ ಸೆಟಪ್ ಬಾಕ್ಸ್‌ ಪಡೆಯುವುದು ಹೇಗೆ..? ಸಿಂಪಲ್ ಟ್ರಿಕ್ಸ್..!

Written By:

ಅನಿಲ್ ಅಂಬಾನಿ ಮಾಲೀಕತ್ವದ ರಿಯಲನ್ಸ್ ಬಿಗ್ ಟಿವಿ ಒಂದೇ ಒಂದು ದಿನದಲ್ಲಿ ಭಾರತೀಯ DTH ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದು, ಅಣ್ಣ ಅಂಬಾನಿ ರಿಲಯನ್ಸ್ ಮಾಲೀಕತ್ವದ ಜಿಯೋವನ್ನು ಮೀರಿಸುವ ಆಫರ್ ವೊಂದನ್ನು ನೀಡಿದ್ದಾರೆ. ಟೆಲಿಕಾಂ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದ ಜಿಯೋ ಫೋನ್ ಮಾರಾಟದ ತಂತ್ರವನ್ನು ತಮ್ಮ ಬಿಗ್ TV ಮಾರಾಟಕ್ಕೆ ಬಳಕೆ ಮಾಡಿಕೊಂಡಿದ್ದಾರೆ.

BIG TV, ಜೊತೆಗೆ ಉಚಿತ ಸೆಟಪ್ ಬಾಕ್ಸ್‌ ಪಡೆಯುವುದು ಹೇಗೆ..? ಸಿಂಪಲ್ ಟ್ರಿಕ್ಸ್..!

ಒಂದು ವರ್ಷದ ಉಚಿತ ಸೇವೆಯ ಜೊತೆಯಲ್ಲಿ ಹಿಂದಿರುಗಿಸುವ ಠೇವಣಿಯೊಂದಿಗೆ ಸೆಟಪ್ ಬಾಕ್ಸ್ ಅನ್ನು ಗ್ರಾಹಕರಿಗೆ ನೀಡುತ್ತಿದೆ. ಪ್ರೀ ಬುಕ್ ಮಾಡಲು ರೂ.499 ಪಾವತಿ ಮಾಡಬೇಕಾಗಿದ್ದು, ನಂತರದಲ್ಲಿ ಸೆಟಪ್ ಬಾಕ್ಸ್ ಸ್ವೀಕರಿಸುವ ಸಂದರ್ಭದಲ್ಲಿ ರೂ.1500 ನೀಡಬೇಕಾಗಿದೆ. ಈ ಹಿನ್ನಲೆಯಲ್ಲಿ ಈ ಉಚಿತ ಸೆಟಪ್ ಬಾಕ್ಸ್ ಬುಕ್ ಮಾಡುವುದ ಹೇಗೆ ಎಂಬುದನ್ನು ತಿಳಿಸಿಕೊಡುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಾರ್ಚ್ ಒಂದರಿಂದ:

ಮಾರ್ಚ್ ಒಂದರಿಂದ:

ಮಾರ್ಷ್ 1 ರಿಂದ ರಿಯಲನ್ಸ್ ಬಿಗ್ TV ಪ್ರೀ ಬುಕ್ ಮಾಡಬಹುದಾಗಿದೆ, ಅಂದು ಬೆಳಿಗ್ಗೆ 10 ಗಂಟೆಯಿಂದ ಆರಂಭವಾಗಲಿದೆ. ಇದಕ್ಕಾಗಿ ನೀವು ರೂ.499 ನೀಡಿ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ನೀವು Reliancedigitaltv.com ಗೆ ಭೇಟಿ ನೀಡಬೇಕಾಗಿದೆ.

ಮೊದಲ ವರ್ಷ ಉಚಿತ:

ಮೊದಲ ವರ್ಷ ಉಚಿತ:

ರಿಯಲನ್ಸ್ ಬಿಗ್ TV 500ಕ್ಕೂ ಹೆಚ್ಚು ಚಾನಲ್ ಗಳನ್ನು ಐದು ವರ್ಷ ಉಚಿತವಾಗಿ ನೀಡಿದೆ. ಇದರಲ್ಲಿ HD ಚಾನಲ್‌ಗಳು ಸೇರಿಕೊಂಡಿವೆ ಎನ್ನಲಾಗಿದೆ. ಅಲ್ಲದೇ HD ಚಾನಲ್‌ಗಳು ಒಂದು ವರ್ಷ ಉಚಿತವಾಗಿ ದೊರೆಯಲಿದೆ.

ನಿಮ್ಮ Aadhaar ದುರುಪಯೋಗವಾಗಿದೆಯೇ..? ಪತ್ತೆ ಹಚ್ಚುವುದು ಹೇಗೆ..?
ಉಚಿತ ಸೆಟಪ್ ಬಾಕ್ಸ್:

ಉಚಿತ ಸೆಟಪ್ ಬಾಕ್ಸ್:

ರೂ.1999 ಪಾವತಿಸುವ ಬಳಕೆದಾರರಿಗೆ ರಿಯಲನ್ಸ್ ಬಿಗ್ TV ಸೆಟಪ್ ಬಾಕ್ಸ್ ಎಫಿಕ್ಟಿವ್ ಆಗಿ ಉಚಿತವಾಗಿದೆ. ಮೂರು ವರ್ಷಗಳ ನಂತರ ಬಳಕೆದಾರರಿಗೆ ಸೇವೆಯು ಇಷ್ಟವಾಗದೆ ಇದಲ್ಲಿ ಜಿಯೋ ಫೋನ್ ಮಾದರಿಯಲ್ಲಿ ಸೆಟಪ್ ಬಾಕ್ಸ್ ಹಿಂದಿರುಗಿಸಿ ಹಣವನ್ನು ವಾಪಸ್ಸು ಪಡೆಯಬಹುದಾಗಿದೆ.

ಬುಕ್ ಮಾಡುವುದು ಹೇಗೆ:

ಬುಕ್ ಮಾಡುವುದು ಹೇಗೆ:

ಹಂತ 01: ಮೊದಲಿಗೆ Reliancedigitaltv.com ವೆಬ್ ಪೇಜ್ ಓಪನ್ ಮಾಡಿ.

ಹಂತ 02:

ಹಂತ 02:

ನಂತರ Get Digital TV ಎಂಬ ಆಯ್ಕೆ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳಲಿದ್ದು, ಅದ ಮೇಲೆ ಕ್ಲಿಕ್ ಮಾಡಿ.

ಹಂತ 03:

ಹಂತ 03:

ನಂತರದಲ್ಲಿ ಮೂರು ಆಯ್ಕೆಗಳು ಕಾಣಿಸಿಕೊಳ್ಳಲಿದ್ದು, ಮೊದಲನೆಯದರಲ್ಲಿ ಯಾವ ಮಾದರಿಯ ಸೆಟಪ್ ಬಾಕ್ಸ್ ಬೇಕು ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಿ,

ಹಂತ 04:

ಹಂತ 04:

ಇದರಲ್ಲಿ ಸ್ಟ್ಯಾಂಡರ್ಡ್ ಸೆಟ್-ಟಾಪ್ ಬಾಕ್ಸ್, HD ಸೆಟ್-ಟಾಪ್ ಬಾಕ್ಸ್ ಮತ್ತು HD DVR ಸೆಟ್-ಟಾಪ್ ಬಾಕ್ಸ್ ವಿಡಿಯೋ ರೆಕಾರ್ಡಿಂಗ್ ಎಂಬ ಮೂರು ಆಯ್ಕೆಗಳು ಇರಲಿವೆ.

ಹಂತ 05:

ಹಂತ 05:

ವಿವ್ ಆಲ್ ಆಫರ್ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು, ಇದರಲ್ಲಿ ನಿಮಗೆ ಬೇಕಾದ ಪ್ಲಾನ್ ಆಯ್ಕೆ ಮಾಡಿಕೊಳ್ಳಿ.

ಹಂತ 06:

ಹಂತ 06:

ಮೂರನೇ ಆಯ್ಕೆಯಲ್ಲಿ ನಿಮಗೆ ಬೈ ಆನ್‌ ಲೈನ್ ಆಯ್ಕೆಯೂ ಕಾಣಿಸಿಕೊಳ್ಳಲಿದ್ದು, ಅದರಲ್ಲಿ ಪ್ರಿ ಬುಕಿಂಗ್ ಹಣವನ್ನು ಪಾವತಿ ಮಾಡಿ. ಉಚಿತ ಬಿಗ್ ಸೇವೆಯನ್ನು ಆನಂದಿಸಿ.

ಪ್ರೀ ಬುಕಿಂಗ್:

ಪ್ರೀ ಬುಕಿಂಗ್:

ಈ ಮೇಲೆ ತಿಳಿಸಿದ್ದು, ಒಂದು ಮಾದರಿಯಾಗಿದ್ದು, ಇದಲ್ಲದೇ ಕೊನೆಯಲ್ಲಿ ಪ್ರೀ ಬುಕಿಂಗ್ ಆಯ್ಕೆಯಿದ್ದು, ಇದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭರ್ತಿ ಮಾಡಿ. ಹಣವನ್ನು ಭರ್ತಿ ಮಾಡಿ. ನಿಮಗೆ ಎಷ್ಟು ಬೇಕಾದರು ಕನೆಕ್ಷನ್ ಅನ್ನು ಪಡೆಯಬಹುದಾಗಿದೆ. ಈ ಸೇವೆಯೂ ಲಿಮಿಟ್ ಆಗಿದ್ದು, ಬೇಗ ಬುಕ್ ಮಾಡಿದವರಿಗೆ ಮಾತ್ರವೇ ಲಭ್ಯ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
How to book HD HEVC set-top-box from Reliance Big TV. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot