ಸ್ಮಾರ್ಟ್‌ಫೋನ್ ಹಾಳಾಗಲು ಬ್ಯಾಟರಿ ಕಾರಣ!..ಆದರೆ, ಬ್ಯಾಟರಿ ಹಾಳಾಗಲು ಕಾರಣಗಳೇನು ಗೊತ್ತಾ?

ಸ್ಮಾರ್ಟ್‌ಫೋನ್ ಹಾಳಾಗಲು ಬ್ಯಾಟರಿ ಕಾರಣ, ಬ್ಯಾಟರಿ ಹಾಳಾಗಲು ನಾವು ಕಾರಣ! ಈ ಒಂದು ಸತ್ಯವನ್ನು ತಿಳಿದ ಯಾವೋರ್ವ ಸ್ಮಾರ್ಟ್‌ಫೋನ್ ಬಳಕೆದಾರನು ಬ್ಯಾಟರಿ ವಿಷಯದಲ್ಲಿ ಈ ವರೆಗೂ ಮಾಡುತ್ತಿದ್ದ ತಪ್ಪುಗಳನ್ನು ಮಾಡುವುದಿಲ್ಲ

|

ಸ್ಮಾರ್ಟ್‌ಫೋನ್ ಹಾಳಾಗಲು ಬ್ಯಾಟರಿ ಕಾರಣ, ಬ್ಯಾಟರಿ ಹಾಳಾಗಲು ನಾವು ಕಾರಣ! ಈ ಒಂದು ಸತ್ಯವನ್ನು ತಿಳಿದ ಯಾವೋರ್ವ ಸ್ಮಾರ್ಟ್‌ಫೋನ್ ಬಳಕೆದಾರನು ಬ್ಯಾಟರಿ ವಿಷಯದಲ್ಲಿ ಈ ವರೆಗೂ ಮಾಡುತ್ತಿದ್ದ ತಪ್ಪುಗಳನ್ನು ಮಾಡುವುದಿಲ್ಲ ಮತ್ತು ಇತರರಿಗೂ ತಪ್ಪು ಮಾಡಲು ಬಿಡುವುದಿಲ್ಲ.!!

ಹೌದು, ಒಂದು ಸ್ಮಾರ್ಟ್‌ಫೋನ್ ಹಾಳಾಗಿದೆ ಎಂದರೆ ಅದಕ್ಕೆ ನೇರ ಹೊಣೆ ಯಾವಾಗಲೂ ಅದರ ಬ್ಯಾಟರಿಯದ್ದೆ ಆಗಿರುತ್ತದೆ ಎಂಬುದು ಮೊಬೈಲ್ ಪ್ರಪಂಚದ ಮಾತು.! ಏಕೆಂದರೆ ವಿದ್ಯುತ್ ಪ್ರವಾಹವೇ ಒಂದು ಎಲೆಕ್ಟ್ರಾನಿಕ್‌ ವಸ್ತುವಿನ ಜೀವಾಳವಾಗಿರುವುದರಿಂದ ಫೋನ್ ಹಾಳಾಗಲು ಬ್ಯಾಟರಿ ನೇರ ಕಾರಣ ಎನ್ನುತ್ತಾರೆ!!

ಸ್ಮಾರ್ಟ್‌ಫೋನ್ ಹಾಳಾಗಲು ಬ್ಯಾಟರಿ ಕಾರಣ!..ಆದರೆ, ಬ್ಯಾಟರಿ ಹಾಳಾಗಲು ಕಾರಣಗಳೇನು?

ಹಾಗಾಗಿ, ನಮ್ಮ ಸ್ಮಾರ್ಟ್‌ಫೋನ್ ಸುರಕ್ಷತೆಯಿಂದ ಇರಲು ನಾವು ಬ್ಯಾಟರಿಯನ್ನು ಸುರಕ್ಷೆ ಮಾಡುವುದು ಮುಖ್ಯ.! ಹಾಗಾದರೆ, ಬ್ಯಾಟರಿ ಹಾಳಾಗದಂತೆ ನಾವೇನು ಮಾಡಬೇಕು? ಬ್ಯಾಟರಿ ಸುರಕ್ಷತಗೆ ಇರುವ ಸಲಹೆಗಳು ಯಾವುವು? ಫೋನ್ ಬಿಸಿಯಾಗಲು ಕಾರಣಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯಿರಿ.!!

ಪವರ್ ಬ್ಯಾಂಕ್ ಬಳಸುವಾಗ ಎಚ್ಚರ!!

ಪವರ್ ಬ್ಯಾಂಕ್ ಬಳಸುವಾಗ ಎಚ್ಚರ!!

ಒಂದು ಪವರ್‌ಬ್ಯಾಂಕ್ ಖರೀದಿಸುವ ಮುನ್ನ ಆ ಪವರ್‌ಬ್ಯಾಂಕ್ ನೀವು ಬಳಸುವ ಸ್ಮಾರ್ಟ್‌ಫೋನ್ ಶಕ್ತಿಗೆ ಸಾಟಿಇದೆಯೇ ಎಂದು ಪರೀಕ್ಷಿಸಲೇಬೇಕು.! ಗುಣಮಟ್ಟದ ಪವರ್‌ಬ್ಯಾಂಕ್ ಖರೀದಿಸಿದರೆ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಅತೀ ಬಿಸಿಯಾಗುವಿಕೆ ಸಮಸ್ಯೆ ದೂರವಾಗುವುದು.!!

ಕಳಪೆ ಚಾರ್ಜರ್ ಕಳಪೆ ಸೇವೆ!!

ಕಳಪೆ ಚಾರ್ಜರ್ ಕಳಪೆ ಸೇವೆ!!

ಕಳಪೆ ಚಾರ್ಜರ್ಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ತಪ್ಪಿಸುವ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಹಾಗಾಗಿ, ಕಳಪೆ ಚಾರ್ಜರ್'ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚು.! ಇದು ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತದೆ!!

How to search your lost smartphone!!! ಕಳೆದು ಹೋದ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದೇಗೆ...?
ಫಾಸ್ಟ್  ಚಾರ್ಜರ್ ಬಗ್ಗೆ ಗಮನವಿರಲಿ!!

ಫಾಸ್ಟ್ ಚಾರ್ಜರ್ ಬಗ್ಗೆ ಗಮನವಿರಲಿ!!

ಯಾವಾಗಲೂ ಫಾಸ್ಟ್ ಚಾರ್ಜರ್'ಗಳನ್ನು ಬಳಸುವುದು ನಿಮ್ಮ ಫೋನ್ ಬ್ಯಾಟರಿಗೆ ಒಳ್ಳೆಯದಲ್ಲ. ಈ ಚಾರ್ಜರ್‌ನಲ್ಲಿ ಹೆಚ್ಚು ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. ಇದರಿಂದಲೂ ಕೆಲವೊಮ್ಮೆ ಸಾಫ್ಟ್‌ವೇರ್ ಕಾರ್ಯನಿರ್ವಹಣೆಯಲ್ಲಿ ಏರುಪೇರಾಗುತ್ತದೆ ಎಂಬುದು ತಿಳಿದಿರಲಿ.!!

ಪದೇ ಪದೇ ಚಾರ್ಜ್ ಮಾಡಬೇಡಿ.!!

ಪದೇ ಪದೇ ಚಾರ್ಜ್ ಮಾಡಬೇಡಿ.!!

ಪದೇ ಪದೇ ಚಾರ್ಜ್ ಮಾಡುವುದರಿಂದ ಬ್ಯಾಟರಿ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಮೊಬೈಲ್ ಬ್ಯಾಟರಿ ಶೇ. 20ರಷ್ಟಕ್ಕೆ ಬಂದಾಗ ಮಾತ್ರ ಶೇ 80ರಷ್ಟು ವರೆಗೆ ಚಾರ್ಜ್ ಮಾಡಿ. ಫೋನ್ ಬ್ಯಾಟರಿ ಸಂಪೂರ್ಣ ಮುಗಿಯುವವರೆಗೂ ಅಥವಾ ಪೂರ್ತಿಯಾಗುವವರೆಗೂ ಫೋನ್ ಚಾರ್ಜ್ ಮಾಡಬೇಡಿ.!!

ಪವರ್ ಸೇವರ್ ಆಪ್ ಬೇಕಾ?

ಪವರ್ ಸೇವರ್ ಆಪ್ ಬೇಕಾ?

ಜಾಹೀರಾತುಗಳನ್ನು ನಿಮ್ಮ ಫೋನ್ಗೆ ಲೋಡ್ ಮಾಡುವ ಬ್ಯಾಟರಿ ಸೇವ್ ಮಾಡುತ್ತೇವೆ ಎನ್ನುವ ಪವರ್ ಸೇವರ್ ಆಪ್‌ಗಳ ಬಳಕೆ ಖಂಡಿತ ಬೇಡ.!! ಆದರೆ, ಬಳಕೆದಾರರಿಗೆ ತೊಂದರೆ ನೀಡದ ಅಕ್ಯೂ' ಬ್ಯಾಟರಿ ಸೇವರ್‌ನಂತಹ ಆಪ್‌ಗಳನ್ನು ನೀವು ಬಳಸಬಹುದು.!!

Best Mobiles in India

English summary
Leaving your phone on the charger all night (or all day) is far better for your battery than running it down and charging it up. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X