ಯುಟ್ಯೂಬ್‌ನಲ್ಲಿ ವೀಡಿಯೋಗಳಿಗೆ ಸಬ್‌ಟೈಟಲ್‌ ಸೇರಿಸುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ನಿಮಗೆ ತಿಳಿದಿಲ್ಲದ ಭಾಷೆಯ ವೀಡಿಯೋಗಳನ್ನು ವೀಕ್ಷಿಸುವಾಗ ಸಬ್‌ಟೈಟಲ್‌ಗಳು ಸಾಕಷ್ಟು ಸಹಾಯ ಮಾಡುತ್ತವೆ. ಸಬ್‌ ಟೈಟಲ್‌ಗಳ ಮೂಲಕ ವೀಡಿಯೋದಲ್ಲಿರುವ ಕಂಟೆಂಟ್‌ ಅನ್ನು ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ಇವುಗಳಿಂದ ನಿಮ್ಮ ವೀಡಿಯೊಗಳು ವಿವಿಧ ಭಾಷೆಗಳನ್ನು ಮಾತನಾಡುವ ವಿಶಾಲವಾದ ಪ್ರೇಕ್ಷಕರನ್ನು ತಲುಪುವುದಕ್ಕೆ ಅವಕಾಶ ನೀಡಲಿದೆ. ಆದರೆ ಯುಟ್ಯೂಬ್‌ನಲ್ಲಿನ ವೀಡಿಯೋಗಳಿಗೆ ಸಬ್‌ಟೈಟಲ್‌ ಅನ್ನು ಹೇಗೆ ಆಡ್‌ ಮಾಡಿರುತ್ತಾರೆ ಅನ್ನೊದು ಕೆಲವರಿಗೆ ತಿಳಿದಿಲ್ಲ.

ಯುಟ್ಯೂಬ್‌

ಹೌದು, ಯುಟ್ಯೂಬ್‌ನಲ್ಲಿ ವೀಡಿಯೊಗಳನ್ನು ಅಪ್‌ಲೋಡ್‌ ಮಾಡುವಾಗ ಸಬ್‌ಟೈಟಲ್‌ ಸೇರಿಸುವುದು ಹೇಗೆ ಅನ್ನೊದು ತಿಳಿಯಲೇಬೇಕಾದ ವಿಚಾರವಾಗಿದೆ. ವೀಡಿಯೋ ಕ್ರಿಯೆಟರ್ಸ್‌ಗಳು ತಮ್ಮ ವೀಡಿಯೊಗಳನ್ನು ಎಲ್ಲಾ ಭಾಷೆಯ ಜನರಿಗೆ ತಲುಪಿಸಬೇಕಾದರೆ ಸಬ್‌ಟೈಟಲ್‌ಗಳ ವಿಷಯ ಬಹಳ ಪ್ರಮುಖವಾಗಿದೆ. ಹಾಗಾದ್ರೆ ನೀವು ನಿಮ್ಮ ಯುಟ್ಯೂಬ್‌ ವೀಡಿಯೊಗಳಿಗೆ ಸಬ್‌ಟೈಟಲ್‌ಗಳನ್ನು ಸೇರಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಯುಟ್ಯೂಬ್‌ ನಲ್ಲಿ ವೀಡಿಯೋ ಅಪ್‌ಲೋಡ್ ಮಾಡುವಾಗ ಸಬ್‌ಟೈಟಲ್‌ ಸೇರಿಸುವುದು ಹೇಗೆ?

ಯುಟ್ಯೂಬ್‌ ನಲ್ಲಿ ವೀಡಿಯೋ ಅಪ್‌ಲೋಡ್ ಮಾಡುವಾಗ ಸಬ್‌ಟೈಟಲ್‌ ಸೇರಿಸುವುದು ಹೇಗೆ?

ಮೊಬೈಲ್‌ನಲ್ಲಿ ಯುಟ್ಯೂಬ್‌ ಸ್ಟುಡಿಯೋ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ವೀಡಿಯೊಗಳಿಗೆ ಸಬ್‌ಟೈಟಲ್‌ಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಯುಟ್ಯೂಬ್‌ ವೀಡಿಯೋಗಳಿಗೆ ಸಬ್‌ಟೈಟಲ್‌ ಸೇರಿಸಬಹುದಾಗಿದೆ. ಇದಕ್ಕಾಗಿ ಈ ಕೆಳಗಿನ ಹಂತಗಳನ್ನು ಅನುಸರಿಸಿ.

* ಮೊದಲಿಗೆ ಯುಟ್ಯೂಬ್‌ ಸ್ಟುಡಿಯೋ ತೆರೆಯಿರಿ ಮತ್ತು ನಿಮ್ಮ ಚಾನಲ್‌ಗೆ ಲಾಗ್ ಇನ್ ಮಾಡಿ. ನಂತರ ವೀಡಿಯೊಗಳನ್ನು ಅಪ್‌ಲೋಡ್ ಮಾಡಿ ಐಕಾನ್ ಕ್ಲಿಕ್ ಮಾಡಬೇಕು. ಇದೀಗ ನೀವು ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿ. ನಂತರ ಅಪ್‌ಲೋಡ್ ಮಾಡುವಾಗ ವಿವರಗಳು, ಹಕ್ಕುಗಳ ನಿರ್ವಹಣೆ, ಇತ್ಯಾದಿಗಳಂತಹ ವಿವಿಧ ವಿಭಾಗಗಳು ಕಾಣುತ್ತವೆ. ನೀವು ವೀಡಿಯೊ ಎಲಿಮೆಂಟ್‌ಗಳಿಗೆ ಬಂದಾಗ, ನೀವು ಸಬ್‌ಟೈಟಲ್‌ಗಳನ್ನು ಸೇರಿಸುವ ಆಯ್ಕೆಯನ್ನು ಕಾಣಬಹುದು. ಇದರಲ್ಲಿ ಆಡ್‌ ಕ್ಲಿಕ್ ಮಾಡಿ ಮತ್ತು ಫೈಲ್ ಅನ್ನು ಅಪ್‌ಲೋಡ್ ಮಾಡಿ, ಸ್ವಯಂ-ಸಿಂಕ್ ಮಾಡಿ ಮತ್ತು ಟೈಪ್‌ ಮ್ಯಾನ್ಯುವಲ್‌ ಎಂಬ ಮೂರು ಆಯ್ಕೆಗಳನ್ನು ಕಾಣಬಹುದು.

* ಫೈಲ್ ಅನ್ನು ಅಪ್‌ಲೋಡ್ ಮಾಡಿ: ನೀವು ವೀಡಿಯೊದಲ್ಲಿ ಬಳಸಲಾದ ನಿಖರವಾದ ಸ್ಕ್ರಿಪ್ಟ್ ಫೈಲ್ ನಿಮ್ಮ ಬಳಿ ಇದ್ದರೆ, ನೀವು ಸಮಯದೊಂದಿಗೆ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಆದರೆ, ನೀವು ವೀಡಿಯೊದಲ್ಲಿ ಏನು ಹೇಳುತ್ತಿದ್ದೀರಿ ಎಂಬುದರೊಂದಿಗೆ ಸಿಂಕ್ರೊನೈಸ್ ಮಾಡಬೇಕಾದ ಪಠ್ಯವನ್ನು ನೀವು ಹೊಂದಿದ್ದರೆ, ನಂತರ ನೀವು ಸಮಯವಿಲ್ಲದೆ ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಂತರ ಯುಟ್ಯೂಬ್‌ ನಿಮ್ಮ ವೀಡಿಯೊದ ಪ್ರಕಾರ ಸಬ್‌ಟೈಟಲ್‌ಗಳನ್ನು ಆಟೋಮ್ಯಾಟಿಕ್‌ ಸಿಂಕ್ ಮಾಡುತ್ತದೆ.

ಸಬ್‌ಟೈಟಲ್‌

* ಆಟೋ-ಸಿಂಕ್: ಇದಲ್ಲದೆ ನೀವು ನಿಮ್ಮ ಟೈಟಲ್‌ಗಳನ್ನು ನೀವು ಕಾಪಿ ಮಾಡಬಹುದು ಮತ್ತು ಅವುಗಳನ್ನು ಪೇಸ್ಟ್‌ ಮಾಡಬಹುದು. ನೀವು ನಿಮ್ಮ ವೀಡಿಯೊದ ಪ್ರಕಾರ ಯುಟ್ಯೂಬ್‌ ಅವುಗಳನ್ನು ಆಟೋ-ಸಿಂಕ್ ಮಾಡುತ್ತದೆ.

* ಮ್ಯಾನುವಲ್‌ ಟೈಪ್: ಈ ಆಯ್ಕೆಯ ಮೂಲಕ, ನೀವು ವೀಡಿಯೊವನ್ನು ವೀಕ್ಷಿಸುತ್ತಿರುವಾಗ ನೀವು ಸಬ್‌ಟೈಟಲ್‌ಗಳನ್ನು ಮ್ಯಾನುವಲ್‌ ಆಗಿ ಟೈಪ್ ಮಾಡಬಹುದು.

* ನೀವು ಟೈಪ್‌ ಮಾಡಿದ ನಂತರ, ಸಬ್‌ಟೈಟಲ್‌ಗಳನ್ನು ಪರಿಶೀಲಿಸಿ ಮತ್ತು ಅವುಗಳನ್ನು ನಿಮ್ಮ ವೀಡಿಯೊದೊಂದಿಗೆ ಸೆಟ್‌ ಮಾಡಿ. ಟೈಮ್‌ಸ್ಟ್ಯಾಂಪ್‌ಗಳನ್ನು ಎಡಿಟ್‌ ಮಾಡುವ ಮೂಲಕ ನೀವು ಸಮಯವನ್ನು ಬದಲಾಯಿಸಬಹುದು. ನಂತರ ಸಬ್‌ಟೈಟಲ್‌ಗಳೊಂದಿಗೆ ಫೈನಲ್‌ ವೀಡಿಯೊವನ್ನು ಪ್ರಿವ್ಯೂ ಮಾಡಿ ಮತ್ತು ತಪ್ಪು ಕಂಡು ಬಂದರೆ ಟೆಕ್ಸ್ಟ್‌ ಅನ್ನು ಎಡಿಟ್‌ ಮಾಡಬಹುದು.

ಅಪ್‌ಲೋಡ್ ಮಾಡಿರುವ ಯುಟ್ಯೂಬ್‌ ವೀಡಿಯೊಗಳಿಗೆ ಸಬ್‌ಟೈಟಲ್‌ಗಳನ್ನು ಸೇರಿಸುವುದು ಹೇಗೆ?

ಅಪ್‌ಲೋಡ್ ಮಾಡಿರುವ ಯುಟ್ಯೂಬ್‌ ವೀಡಿಯೊಗಳಿಗೆ ಸಬ್‌ಟೈಟಲ್‌ಗಳನ್ನು ಸೇರಿಸುವುದು ಹೇಗೆ?

* ನೀವು ನಿಮ್ಮ ಯುಟ್ಯೂಬ್‌ ಚಾನಲ್‌ಗೆ ನೀವು ಲಾಗ್ ಇನ್ ಆಗಿದ್ದರೆ, ಮೇಲಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರದ ಐಕಾನ್ ಮೇಲೆ ಕ್ಲಿಕ್ ಮಾಡಿ, ನಂತರ ನಿಮ್ಮ ಚಾನಲ್‌ಗೆ ಭೇಟಿ ನೀಡಿ. ಇದೀಗ ಮ್ಯಾನೇಜ್‌ ವೀಡಿಯೋಸ್‌ ಕ್ಲಿಕ್ ಮಾಡಿ ಮತ್ತು ನೀವು ಸಬ್‌ಟೈಟಲ್‌ಗಳನ್ನು ಸೇರಿಸಲು ಬಯಸುವ ವೀಡಿಯೊವನ್ನು ತೆರೆಯಿರಿ.

* ಈಗ, ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಬಲಭಾಗದಲ್ಲಿರುವ ಸಬ್‌ಟೈಟಲ್‌ಗಳ ಮೇಲೆ ಕ್ಲಿಕ್ ಮಾಡಿ.

* ನಂತರ ಯುಟ್ಯೂಬ್‌ ನಿಮ್ಮ ವೀಡಿಯೊವನ್ನು ಆಟೋಮ್ಯಾಟಿಕ್‌ ಟ್ರಾನ್ಸ್ಕ್ರಿಬ್‌ ಆಗಿದ್ದರೆ, ನೀವು ಈ ಟೈಟಲ್‌ಗಳನ್ನು ಎಡಿಟ್‌ ಮಾಡಬಹುದು.

Best Mobiles in India

Read more about:
English summary
Adding subtitles to your YouTube videos will help you reach a wider audience.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X