ನಿಮ್ಮ ಆಂಡ್ರಾಯ್ಡ್‌ ಫೋನಿನಲ್ಲಿ ಜಾಹೀರಾತುಗಳನ್ನು ಬ್ಲಾಕ್‌ ಮಾಡಲು ಈ ಕ್ರಮ ಅನುಸರಿಸಿ!

|

ಇಂದಿನ ದಿನಗಳಲ್ಲಿ ಡಿಜಿಟಲ್‌ ಜಾಹೀರಾತು ಸಾಕಷ್ಟು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ನೀವು ಯಾವುದೇ ವೆಬ್‌ಸೈಟ್‌ ತೆರೆದರೂ ಡಿಜಿಟಲ್‌ ಜಾಹೀರಾತು ಪ್ರದರ್ಶನ ಆಗೋದು ನಿಮಗೆಲ್ಲಾ ತಿಳಿದೆ ಇದೆ. ಅಷ್ಟೇ ಅಲ್ಲ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ಅಪ್ಲಿಕೇಶನ್‌ ತೆರೆದರೂ ಜಾಹೀರಾತು ಕಾಣಿಸೋದು ನಿವೆಲ್ಲಾ ಗಮನಿಸಿರಬಹುದು. ಕೆಲವೊಂದು ಸಮಯದಲ್ಲಿ ಜಾಹೀರಾತು ಪ್ರದರ್ಶನ ಆಗೋದು ನಿಮಗೆ ಕಿರಿಕಿರಿ ಎನಿಸಿಬಿಡುತ್ತದೆ.

ಆಂಡ್ರಾಯ್ಡ್‌

ಹೌದು, ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಆಗಾಗ ಪ್ರದರ್ಶನ ಆಗುವ ಅನಗತ್ಯ ಜಾಹೀರಾತುಗಳು ಬೇಸರಕ್ಕೆ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಸಾಕಷ್ಟು ಮಂದಿ ಸ್ಮಾರ್ಟ್‌ಫೋನ್‌ ಬಳಸುವಾಗ ಜಾಹೀರಾತು ಪ್ರದರ್ಶನ ಆಗದಂತೆ ನಿರ್ಬಂಧಿಸಲು ಪ್ರಯತ್ನಿಸುತ್ತಾರೆ. ಬ್ರೌಸಿಂಗ್‌ ಸಮಯದಲ್ಲಿ ಜಾಹೀರಾತು ಬ್ಲಾಕ್‌ ಮಾಡಲು ಥರ್ಡ್‌ ಪಾರ್ಟಿ ಅಪ್ಲಿಕೇಶನ್‌ ಬಳಸುತ್ತಾರೆ.ಇದಲ್ಲದೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಜಾಹೀರಾತುಗಳನ್ನು ಬ್ಲಾಕ್‌ ಮಾಡಲು DNS ಸೆಟ್ಟಿಂಗ್‌ ಅನ್ನು ಬಳಸಬಹುದು. ಹಾಗಾದ್ರೆ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಖಾಸಗಿ DNS ಸೆಟ್ಟಿಂಗ್ ಆಯ್ಕೆ ಬಳಸಿ ಜಾಹೀರಾತು ಬ್ಲಾಕ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಜಾಹೀರಾತುಗಳನ್ನು ನಿರ್ಬಂಧಿಸುವುದು ಹೇಗೆ?

ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಜಾಹೀರಾತುಗಳನ್ನು ನಿರ್ಬಂಧಿಸುವುದು ಹೇಗೆ?

ಹಂತ:1 ಪ್ರೈವೇಟ್‌ DNS ಸೆಟ್ಟಿಂಗ್ ಸರ್ಚ್ ಮಾಡಿ
ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಪ್ರೈವೇಟ್‌ DNS ಆಯ್ಕೆಯನ್ನು ಹುಡುಕಿ. ಈ ಆಯ್ಕೆಯನ್ನು ಸಾಮಾನ್ಯವಾಗಿ ನೆಟ್‌ವರ್ಕ್ ಮತ್ತು ಕನೆಕ್ಟಿವಿಟಿ ಬ್ಯಾನರ್ ಅಡಿಯಲ್ಲಿ ನೀಡಲಾಗಿರುತ್ತದೆ. ಒಂದು ವೇಳೆ ನಿಮಗೆ ಕಂಡುಬರದಿದ್ದರೆ, ಸೆಟ್ಟಿಂಗ್ಸ್‌ನಲ್ಲಿ "ಪ್ರೈವೇಟ್‌ DNS" ಎಂದು ಟೈಪ್ ಮಾಡಿದರೆ ಕಾಣಲಿದೆ. ಪ್ರೈವೇಟ್‌ DNS ಸಾಮಾನ್ಯವಾಗಿ Android 9.0 ಪೈ ಮತ್ತು ಅದಕ್ಕಿಂತ ಹೆಚ್ಚಿನದರಲ್ಲಿ ಕಾನ್ಫಿಗರ್ ಮಾಡಬಹುದಾಗಿದೆ.

ಹಂತ:2 'ಪ್ರೈವೇಟ್‌ DNS ಪ್ರೊವೈಡರ್‌ ಹೋಸ್ಟ್ ಹೆಸರು' ಆಯ್ಕೆಮಾಡಿ
ಪ್ರೈವೇಟ್‌ DNS ಫೀಚರ್ಸ್‌ ಅನ್ನು ಟ್ಯಾಪ್ ಮಾಡಿದಾಗ, ನಿಮಗೆ ಆಫ್, ಆಟೋ ಮತ್ತು ಪ್ರೈವೇಟ್‌ DNS ಪ್ರೊವೈಡರ್‌ ಹೋಸ್ಟ್ ಹೆಸರು ಎಂಬ ಮೂರು ಆಯ್ಕೆಗಳು ಕಾಣಲಿವೆ. ಇದರಲ್ಲಿ ಮೂರನೇ ಆಯ್ಕೆಯನ್ನು ಆರಿಸಿ. ಇದರಲ್ಲಿ ನೀವು ನಿಮ್ಮ ಸ್ವಂತ DNS ಹೋಸ್ಟ್‌ನೇಮ್ ಪ್ರೊವೈಡರ್ ಅನ್ನು ನಮೂದಿಸಲು ಕಾಲಮ್ ಅನ್ನು ಕಾಣಬಹುದು.

ಹಂತ 3: 'dns.adguard.com' ಎಂದು ಟೈಪ್ ಮಾಡಿ
ನಿಮಗೆ ಕಂಡುಬರುವ ಕಾಲಂನಲ್ಲಿ ಯಾವುದೇ ಉಲ್ಲೇಖಗಳಿಲ್ಲದೆಯೇ ‘dns.adguard.com' ಎಂದು ಟೈಪ್ ಮಾಡಿ ಮತ್ತು ಸೇವ್‌ ಮಾಡಿ. ಇದೀಗ ನಿಮ್ಮ ಫೋನ್ AdGuard ನ DNS ಸರ್ವರ್ ಅನ್ನು ಬಳಸುತ್ತದೆ. ಇದರಿಂದ ನಿಮ್ಮ ಡಿವೈಸ್‌ನಲ್ಲಿ ಯಾವುದೇ ಜಾಹೀರಾತುಗಳು ಪ್ರದರ್ಶನವಾಗದಂತೆ ಬ್ಲಾಕ್‌ ಮಾಡಲಿದೆ.

ಜಾಹೀರಾತು

ಹೀಗೆ ಮಾಡುವ ಮೂಲಕ ನೀವು ಯಾವುದೇ ಬ್ರೌಸರ್‌ ಅನ್ನು ತೆರೆದರೂ ಜಾಹೀರಾತು ಪ್ರದರ್ಶನವಾಗುವುದಿಲ್ಲ. ಅಲ್ಲದೆ ಕೆಲವು ಅಪ್ಲಿಕೇಶನ್‌ಗಳಲ್ಲಿ ಸಂಪೂರ್ಣವಾಗಿ ಜಾಹೀರಾತು-ಮುಕ್ತವಾಗಿರಲಿದೆ. ಇದಲ್ಲದೆ ಆಫ್‌ಲೈನ್‌ ಗೇಮ್‌ಗಳು ಹಾಗೂ ಗೂಗಲ್‌ ಕ್ರೋಮ್‌ನಲ್ಲಿ ಜಾಹಿರಾತು ಬ್ಲಾಕ್‌ ಮಾಡಲು ಹಲವು ಅವಕಾಶಗಳಿವೆ. ಇದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಆಫ್‌ಲೈನ್ ಗೇಮ್‌ಗಳಲ್ಲಿ ಜಾಹೀರಾತುಗಳನ್ನು ಬ್ಲಾಕ್‌ ಮಾಡುವುದು ಹೇಗೆ?

ಆಫ್‌ಲೈನ್ ಗೇಮ್‌ಗಳಲ್ಲಿ ಜಾಹೀರಾತುಗಳನ್ನು ಬ್ಲಾಕ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿ ಮತ್ತು ರಿಸ್ಟೋರ್‌ ಮಾಡಿ, ಆದರೆ ಅದನ್ನು ತಕ್ಷಣವೇ ತೆರೆಯಬೇಡಿ. ಆಫ್‌ಲೈನ್‌ನಲ್ಲಿಯೂ ಜಾಹಿರಾತು ಪ್ರದರ್ಶಿಸುವ ಅಪ್ಲಿಕೇಶನ್‌ ಅಥವಾ ಗೇಮ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಬೇಕಾಗುತ್ತದೆ. ಏಕೆಂದರೆ ಈ ಅಪ್ಲಿಕೇಶನ್/ಗೇಮ್‌ನ ಅಪ್ಲಿಕೇಶನ್ ಡೇಟಾ ಫೋಲ್ಡರ್‌ನಲ್ಲಿ ಕ್ಲೀನ್ ಸ್ಲೇಟ್ ಅಗತ್ಯವಿದೆ. ಅಪ್ಲಿಕೇಶನ್/ಗೇಮ್ ಅನ್ನು ರಿಸ್ಟೋರ್‌ ಮಾಡಿದ ನಂತರ ಏಕಾಏಕಿ ತೆರೆಯಲು ಹೋಗಬಾರದು.

ಹಂತ:2 ಅಪ್ಲಿಕೇಶನ್/ಗೇಮ್‌ನ 'app info'' ಪೇಜ್‌ ತೆರೆಯಿರಿ. ನೀವು ಯಾವ ಅಪ್ಲಿಕೇಶನ್‌ನಲ್ಲಿ ಜಾಹಿರಾತುಗಳನ್ನು ಬ್ಲಾಕ್‌ ಮಾಡಲು ಬಯಸುತ್ತೀರೋ ಆ ಅಪ್ಲಿಕೇಶನ್‌ನ 'app info' ಪೇಜ್‌ ಓಪನ್‌ ಮಾಡಿ. ಈ ವಿಧಾನ ಒಂದು ವೇಳೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸದಿದ್ದರೆ, ನಿಮ್ಮ ನಿರ್ದಿಷ್ಟ Android ಸ್ಕಿನ್/ROM ನಲ್ಲಿ ಅಪ್ಲಿಕೇಶನ್ ಮಾಹಿತಿ ಪುಟವನ್ನು ತೆರೆಯಿರಿ.

ಹಂತ:3 ಇಂಟರ್ನೆಟ್ ಸಂಪರ್ಕ ಕಡಿತಮಾಡುವ ಮೂಲಕ ಕೂಡ ಜಾಹಿರಾತು ಬ್ಲಾಕ್‌ ಮಾಡಬಹುದು. ಇದಕ್ಕಾಗಿ ನೀವು 'app info' ಪೇಜ್‌ನಲ್ಲಿ 'ನೆಟ್‌ವರ್ಕ್', 'ಮೊಬೈಲ್ ಡೇಟಾ ಮತ್ತು ವೈಫೈ' ವಿಭಾಗವನ್ನು ನೋಡಿ. ಇದರಲ್ಲಿ ವೈಫೈ ಅಥವಾ ಮೊಬೈಲ್ ಡೇಟಾದಲ್ಲಿ ಸಂಪರ್ಕಿಸಿದಾಗ ಇಂಟರ್ನೆಟ್‌ಗೆ ಆ ಅಪ್ಲಿಕೇಶನ್‌ನ ಪ್ರವೇಶವನ್ನು ನಿಷ್ಕ್ರಿಯಗೊಳಿಸಲು ನೀವು ಹೆಚ್ಚಿನ ಆಯ್ಕೆಗಳನ್ನು ಹುಡುಕಬೇಕು. ಇವುಗಳನ್ನು ಆಫ್‌ ಮಾಡುವ ಮೂಲಕ ನಿಮ್ಮ ಅಪ್ಲಿಕೇಶನ್ ಯಾವುದೇ ರೀತಿಯಲ್ಲೂ ಇಂಟರ್‌ನೆಟ್‌ ಕನೆಕ್ಟ್‌ ಆಗದಂತೆ ಮಾಡಬಹುದು. ಏಕೆಂದರೆ ಇದು ಆಫ್‌ಲೈನ್‌ ಅಪ್ಲಿಕೇಶನ್‌ ಆಗಿರುವುದರಿಂದ ಇಂಟರ್‌ನೆಟ್‌ ಅವಶ್ಯಕತೆ ಇರುವುದಿಲ್ಲ. ಇಂಟರ್‌ನೆಟ್‌ ಕನೆಕ್ಟ್‌ ಆದರೆ ಜಾಹಿರಾತುಗಳು ಬರುತ್ತವೆ. ಆದರಿಂದ ಇಂಟರ್‌ನೆಟ್‌ ಇಲ್ಲದೆ ಹೋದರೆ ಜಾಹಿರಾತು ಪ್ರದರ್ಶನಕ್ಕೆ ತಡೆ ಹಾಕಲಿದೆ.

ಜಾಹಿರಾತು/ಆಡ್ ಬ್ಲಾಕರ್ ಅಪ್ಲಿಕೇಶನ್

ಜಾಹಿರಾತು/ಆಡ್ ಬ್ಲಾಕರ್ ಅಪ್ಲಿಕೇಶನ್

ಇಂಟರ್ನೆಟ್‌ ಬಳಕೆಯ ವೇಳೆ ಜಾಹಿರಾತು ಕಿರಿ ಕಿರಿ ತಡೆಯಲು ಸ್ಮಾರ್ಟ್‌ಫೋನ್‌ನಲ್ಲಿ ಆಡ್ ಬ್ಲಾಕರ್ ಆಪ್ ಬಳಕೆ ಮಾಡಬಹುದಾಗಿದೆ. ಇದು ಸ್ಮಾರ್ಟ್‌ಫೋನ್‌ ಜಾಹಿರಾತುಗಳನ್ನು, ಇಂಟರ್ನೆಟ್ ಬಳಕೆಯ ವೇಳೆಯ ಜಾಹಿರಾತುಗಳನ್ನು ಮತ್ತು ಸರ್ಚ್ ಇಂಜಿನ್ ಆಪ್‌ಗಳಲ್ಲಿ ಬ್ರೌಸ್ ಮಾಡುವಾಗ ಕಾಣಿಸುವ ಜಾಹಿರಾತುಗಳನ್ನು ತಡೆಯಲಿದೆ. ಆಂಡ್ರಾಯ್ಡ್ ಫೋನಿನಲ್ಲಿ ad-blocker APK ಪ್ಲಸ್‌ ಆಪ್‌ ಅನ್ನು ಇನ್‌ಸ್ಟಾಲ್‌ ಮಾಡಬಹುದಾಗಿದೆ.

ಆಡ್‌ಬ್ಲಾಕರ್ ಪ್ಲಸ್‌ ಅಪ್ಲಿಕೇಶನ್

ಆಡ್‌ಬ್ಲಾಕರ್ ಪ್ಲಸ್‌ ಅಪ್ಲಿಕೇಶನ್

* ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಅನ್ನು ಬ್ರೌಸರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
* ಫೈಲ್ ಮ್ಯಾನೇಜರ್ ಆಪ್‌ ತೆರೆದು ಆಡ್‌ಬ್ಲಾಕರ್ ಪ್ಲಸ್‌ ಆಪ್‌ನ APK ಫೈಲ್ ನೋಡಿ.
* ಆಡ್‌ಬ್ಲಾಕರ್ ಪ್ಲಸ್‌ ಆಪ್‌ APK ಫೈಲ್‌ ಇನ್‌ಸ್ಟಾಲ್ ಮಾಡಿರಿ.
* ಆನಂತರ ಆಪ್ ತೆರೆದು ಓಕೆ ಆಯ್ಕೆ ಸೆಲೆಕ್ಟ್ ಮಾಡಿರಿ.

ಇತರೆ ಆಡ್ ಬ್ಲಾಕರ್ ಅಪ್ಲಿಕೇಶನ್‌ಗಳು

ಇತರೆ ಆಡ್ ಬ್ಲಾಕರ್ ಅಪ್ಲಿಕೇಶನ್‌ಗಳು

ಇತರೆ ಆಡ್ ಬ್ಲಾಕರ್ ಆಪ್ಸ್ ಸ್ಮಾರ್ಟ್‌ಫೋನ್‌ ಇಂಟರ್ನೆಟ್‌ ಬಳಕೆ ಮಾಡುವಾಗ ನಡು ನಡುವೆ ಕಾಣಿಸುವ ಜಾಹಿರಾತುಗಳ ಕಿರಿ ಕಿರಿಯನ್ನು ದೂರಾಗಿಸಲು ಆಡ್‌ಬ್ಲಾಕರ್ ಪ್ಲಸ್‌ ಆಪ್‌ ಬಳಸಬಹುದಾಗಿದೆ. ಇದರೊಂದಿಗೆ ಆಡ್‌ಗಾರ್ಡ್‌ (AdGuard) , ಆಡ್‌ಲಾಕ್ (AdLock) ಮತ್ತು ಆಡ್‌ಅವೇ (AdAway) ಅಪ್ಲಿಕೇಶನ್‌ಗಳು ಸಹ ನೆಟ್‌ ಬ್ರೌಸ್‌ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಜಾಹಿರಾತು ತಡೆಗೆ ನೆರವಾಗಲಿವೆ.

Best Mobiles in India

English summary
Here's how you can block ads on any Android smartphone in a few easy steps, without root access or any third-party applications.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X