ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

|

ಗೂಗಲ್‌ ಪೇ ಜನಪ್ರಿಯ ಯುಪಿಐ ಆಧಾರಿತ ಪಾವತಿ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ಯಾಶ್‌ಬ್ಯಾಕ್‌ ಆಫರ್‌, ರಿವಾರ್ಡ್‌ ಆಫರ್‌ಗಳನ್ನು ನೀಡುವ ಮೂಲಕ ಬಳಕೆದಾರರನ್ನು ಆಕರ್ಷಿಸಿದೆ. ಇನ್ನು ಗೂಗಲ್‌ ಪೇ ಅಪ್ಲಿಕೇಶನ್‌ ಹಲವು ಭಾಷೆಗಳನ್ನು ಬೆಂಬಲಿಸಲಿದೆ. ಸದ್ಯ ಇದೀಗ ಗೂಗಲ್‌ ತನ್ನ ಯುಪಿಐ ಆಧಾರಿತ ಅಪ್ಲಿಕೇಶನ್‌ ಗೂಗಲ್‌ಪೇ ನಲ್ಲಿ ಹಿಂಗ್ಲಿಷ್ ಭಾಷಾ ಬೆಂಬಲವನ್ನು ಸೇರಿಸಿದೆ. ಇದರೊಂದಿಗೆ ಇಂಗ್ಲಿಷ್, ಹಿಂದಿ, ಬೆಂಗಾಲಿ, ಗುಜರಾತಿ, ಮರಾಠಿ ಸೇರಿದಂತೆ ಒಟ್ಟು 10 ವಿವಿಧ ಭಾಷಾ ಬೆಂಬಲವನ್ನು ಗೂಗಲ್‌ ಪೇ ಬೆಂಬಲಿಸುತ್ತದೆ.

ಗೂಗಲ್‌

ಹೌದು, ಗೂಗಲ್‌ ಪೇ ಅಪ್ಲಿಕೇಶನ್‌ ಇದೀಗ ಹಿಂಗ್ಲಿಷ್ ಭಾಷೆಯನ್ನು ಬೆಂಬಲಿಸಲಿದೆ. ಗೂಗಲ್‌ ತನ್ನ ಗೂಗಲ್‌ ಪೇ ಅಪ್ಲಿಕೇಶನ್‌ಲ್ಲಿ ಹಿಂಗ್ಲಿಷ್‌ ಭಾಷಾ ಬೆಂಬಲವನ್ನು ಸೇರ್ಪಡೆ ಮಾಡಿದೆ. ಇನ್ನು ನೀವು ಕೂಡ ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಹಿಂಗ್ಲಿಷ್‌ ಭಾಷೆಯನ್ನು ಬಳಸುವುದು ಸುಲಭವಾಗಿದೆ. ಇದಕ್ಕಾಗಿ ನೀವು ಗೂಗಲ್‌ ಪೇ ಅಪ್ಲಿಕೇಶನ್‌ ಅನ್ನು ಇತ್ತೀಚಿನ ಆವೃತ್ತಿಗೆ ಅಪ್ಡೇಟ್‌ ಮಾಡಬೇಕಾದ ಅಗತ್ಯವಿದೆ. ಹಾಗಾದ್ರೆ ನಿಮ್ಮ ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಗೂಗಲ್‌ ಪೇ ಅಪ್ಲಿಕೇಶನ್‌ನಲ್ಲಿ ಭಾಷೆಯನ್ನು ಬದಲಾಯಿಸುವುದು ಹೇಗೆ?

ಹಂತ:1 ಮೊದಲಿಗೆ ಗೂಗಲ್‌ ಪೇ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿ ತೋರಿಸಿರುವ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:3 ಇದರಲ್ಲಿ ಸೆಟ್ಟಿಂಗ್ಸ್‌ ಮೆನುಗೆ ಹೋಗಿ
ಹಂತ:4 ನಂತರ ಪರ್ಸನಲ್‌ ಇನ್ಫರ್‌ಮೇಶನ್‌ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ:5 ಇದರಲ್ಲಿ ನೀವು ಭಾಷಾ ಆಯ್ಕೆ ಕಾಣಲಿದೆ
ಹಂತ:6 ಇದೀಗ ನೀವು ಬಯಸಿದ ಭಾಷೆಯನ್ನು ಆಯ್ಕೆ ಮಾಡಬಹುದು.

ಗೂಗಲ್‌

ಪ್ರಸ್ತುತ ಗೂಗಲ್‌ ಪೇ ನಲ್ಲಿ ಹಿಂಗ್ಲಿಷ್‌ ಭಾಷೆಯನ್ನು ಸೇರ್ಪಡೆ ಮಾಡಲಾಗಿದೆ. ನೀವು ಕೂಡ ಹಿಂಗ್ಲಿಷ್‌ ಭಾಷೆಯನ್ನು ಬಳಸಬೇಕು ಎನಿಸಿದರೆ ಮೇಲಿನ ಆಯ್ಕೆಗಳನ್ನು ಅನುಸರಿಸುವ ಮೂಲಕ ಆಯ್ಕೆ ಮಾಡಬಹುದು. ಇನ್ನು ಗೂಗಲ್‌ ಪೇ ಬೆಂಬಲಿಸುವ 10 ಭಾಷಾ ಬೆಂಬಲದಲ್ಲಿ, 6 ವಿವಿಧ ಪ್ರದೇಶಗಳನ್ನು ಒಳಗೊಂಡಿದೆ. ಈ 6 ಪ್ರಾದೇಶಿಕ ಭಾಷೆಗಳಲ್ಲಿ ಬೆಂಗಾಲಿ, ಗುಜರಾತಿ, ಕನ್ನಡ, ತೆಲುಗು, ಮರಾಠಿ ಮತ್ತು ತಮಿಳು ಭಾಷೆಗಳು ಸೇರಿವೆ.

ಗೂಗಲ್‌

ಇದಲ್ಲದೆ ಗೂಗಲ್‌ ಪೇ ತನ್ನ ಬಳಕೆದಾರರಿಗೆ ಈಗಾಗಲೇ ಅಪರಿಚಿತ ಸಂಖ್ಯೆಗಳಿಂದ ಬರುವ ಮನಿ ರಿಕ್ವೆಸ್ಟ್‌ ಸಂಖ್ಯೆಗಳನ್ನು ಬ್ಲಾಕ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದರಿಂದ ಅಪರಿಚಿತರಿಗೆ ಹಣ ಕಳುಹಿಸುವುದನ್ನು ತಪ್ಪಿಸಲು ಅವಕಾಶ ನೀಡಿದೆ. ಇದಕ್ಕಾಗಿ ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ನಿಮ್ಮ ಆಂಡ್ರಾಯ್ಡ್‌ ಫೋನ್‌ನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್ ತೆರೆಯಿರಿ
* ನೀವು ನಿರ್ಬಂಧಿಸಲು ಬಯಸುವ ಬಳಕೆದಾರರ ಚಾಟ್‌ಬಾಕ್ಸ್ ತೆರೆಯಿರಿ
* ಮೇಲಿನ ಎಡ ಮೂಲೆಯಲ್ಲಿರುವ ಮೂರು ಲಂಬ ರೇಖೆಗಳ ಮೇಲೆ ಟ್ಯಾಪ್ ಮಾಡಿ ಮತ್ತು "ಬ್ಲಾಕ್" ಆಯ್ಕೆಮಾಡಿ.

ಐಫೋನ್ ಮೂಲಕ ಗೂಗಲ್‌ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ

ಐಫೋನ್ ಮೂಲಕ ಗೂಗಲ್‌ ಪೇ ನಲ್ಲಿ ಕೆಲವರನ್ನು ಬ್ಲಾಕ್ ಮಾಡಲು ಹೀಗೆ ಮಾಡಿ

* ಐಫೋನ್/ಐಪಾಡ್‌ ನಲ್ಲಿ ಗೂಗಲ್‌ ಪೇ ಅಪ್ಲಿಕೇಶನ್ ತೆರೆಯಿರಿ
* ನಿಮ್ಮ ಪರದೆಯ ಕೆಳಗಿನಿಂದ, ನಿಮ್ಮ ಸಂಪರ್ಕಗಳನ್ನು ನೋಡಲು ಮೇಲಕ್ಕೆ ಸ್ಲೈಡ್ ಮಾಡಿ
* ನೀವು ನಿರ್ಬಂಧಿಸಲು ಬಯಸುವ ವ್ಯಕ್ತಿಯ ಹೆಸರನ್ನು ಟ್ಯಾಪ್ ಮಾಡಿ
* 'ಮೋರ್' ಆಯ್ಕೆ ಟ್ಯಾಪ್ ಮಾಡಿ ಮತ್ತು ನಂತರ 'ಬ್ಲಾಕ್' ಆಯ್ಕೆಮಾಡಿ.

Best Mobiles in India

English summary
Google Pay now supports a total of 10 different language support including English, Hindi, Bengali, Gujarati, Marathi, among a few others.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X