ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡುವುದು ಹೇಗೆ?

|

ಪ್ರಸ್ತುತ ದಿನಗಳಲ್ಲಿ ಪ್ರಯಾಣ ಮಾಡುವಾಗ ಗೂಗಲ್‌ ಮ್ಯಾಪ್‌ನ ಸಹಾಯ ಪಡೆದುಕೊಳ್ಳುವುದು ಸಾಮಾನ್ಯವಾಗಿದೆ. ಇದರಿಂದ ಬಳಕೆದಾರರು ತಾವು ತಲುಪಬೇಕಾದ ಸ್ಥಳವನ್ನು ತಲುಪುವುದಕ್ಕೆ ಸಹಾಯವಾಗಲಿದೆ. ಇದಲ್ಲದೆ ನೀವು ಸಾಗುವ ರಸ್ತೆಯಲ್ಲಿ ಬರುವ ಟೋಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಟ್ರಾಫಿಕ್‌ ವ್ಯವಸ್ಥೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಗೂಗಲ್‌ ಮ್ಯಾಪ್‌ನಲ್ಲಿ ತಿಳಿಯಬಹುದಾಗಿದೆ. ಅಲ್ಲದೆ ಗೂಗಲ್‌ ಮ್ಯಾಪ್‌ನಲ್ಲಿ ನೀವು ಸರ್ಚ್‌ ಮಾಡಿದ ಮಾಹಿತಿಯನ್ನು ಸೇವ್‌ ಮಾಡಲಿದೆ.

ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ನಲ್ಲಿ ನೀವು ಸರ್ಚ್‌ ಮಾಡುವ ಎಲ್ಲಾ ವಿಷಯವು ಕೂಡ ಸೆವ್‌ ಆಗಿರುತ್ತದೆ. ಇದರಿಂದ ನೀವು ಈಗಾಗಲೇ ಸರ್ಚ್‌ ಮಾಡಿರುವ ಸ್ಥಳಕ್ಕೆ ಮತ್ತೆ ಪ್ರಯಾಣಿಸಿದರೆ ನಿಮಗೆ ಸಹಾಯವಾಗಲಿದೆ. ಒಂದು ವೇಳೆ ನೀವು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಮಾಡಿರುವ ವಿಷಯವನ್ನು ಸೇವ್‌ ಮಾಡಲು ಬಯಸದಿದ್ದರೆ ಅದನ್ನು ಹಿಸ್ಟರಿಯಿಂದ ರಿಮೂವ್‌ ಮಾಡಲು ಅವಕಾಶವಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರಯಾಣ

ಹೆಚ್ಚಿನ ಜನರು ತಾವು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಮಾಡಿದ ವಿಷಯಗಳು ತಾವು ಪ್ರಯಾಣ ಮಾಡಿದ ವಿಷಯಗಳ ವಿವರ ತಿಳಿಯದಂತೆ ಮಾಡಲು ಬಯಸುತ್ತಾರೆ. ತಮ್ಮ ಪ್ರಯಾಣದ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸದವರು ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡಲು ಬಯಸುತ್ತಾರೆ. ಇದಕ್ಕಾಗಿ ಗೂಗಲ್‌ ಕೂಡ ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಹಿಸ್ಟರಿ ಡಿಲೀಟ್‌ ಮಾಡುವ ಅವಕಾಶ ನೀಡಲಿದೆ. ಇದಕ್ಕಾಗಿ ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಸರ್ಚ್‌ ಹಿಸ್ಟರಿಯನ್ನು ಡಿಲೀಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ನಂತರ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:3 ಇದರಲ್ಲಿ, ಗೇರ್ ಅಥವಾ ಸೆಟ್ಟಿಂಗ್‌ಗಳ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:4 ನಂತರ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಮ್ಯಾಪ್‌ ಹಿಸ್ಟರಿಯ ಮೇಲೆ ಟ್ಯಾಪ್ ಮಾಡಿ.
ಹಂತ:5 ಇದೀಗ ನೀವು ನಿಮ್ಮ ಗುರುತನ್ನು ದೃಢೀಕರಿಸಬೇಕಾಗಬಹುದು, ನಂತರ ನಿಮ್ಮ ಎಲ್ಲಾ ಸರ್ಚ್‌ ಹಿಸ್ಟರಿಯನ್ನು ಕಾಣಬಹುದು.
ಹಂತ:6 ನಂತರ, ಡಿಲೀಟ್‌ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿ ಮತ್ತು ಟೈಮ್‌ಲೈನ್‌ ಆಯ್ಕೆ ಮಾಡಬೇಕಾಗುತ್ತದೆ
ಹೀಗೆ ಮಾಡುವ ಮೂಲಕ ಗೂಗಲ್‌ ಮ್ಯಾಪ್‌ನಲ್ಲಿ ಹಿಸ್ಟರಿಯನ್ನು ಡಿಲೀಟ್‌ ಮಾಡಬಹುದಾಗಿದೆ.

ಗೂಗಲ್‌ ಮ್ಯಾಪ್‌ನಲ್ಲಿ ಟೈಮ್‌ಲೈನ್ ರಿಮೂವ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಟೈಮ್‌ಲೈನ್ ರಿಮೂವ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಮ್ಯಾಪ್‌ ಅನ್ನು ತೆರೆಯಿರಿ.
ಹಂತ:2 ಇದೀಗ ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿ.
ಹಂತ:3 ನಂತರ, ನಿಮ್ಮ ಟೈಮ್‌ಲೈನ್ ಅನ್ನು ಟ್ಯಾಪ್ ಮಾಡಿ.
ಹಂತ:4 ಇದೀಗ ಗೂಗಲ್‌ ಮ್ಯಾಪ್‌ ಅನ್ನು ನೀವು ಬಳಸಿದ ದಿನಾಂಕವನ್ನು ಆಯ್ಕೆ ಮಾಡಿ, ಇದರಲ್ಲಿ ನೀವು ಆ ದಿನ ಪ್ರಯಾಣಿಸಿದ ಟೈಮ್‌ಲೈನ್ ಮತ್ತು ಸ್ಥಳಗಳನ್ನು ನೀವು ನೋಡುತ್ತೀರಿ.
ಹಂತ:5 ಇದರಲ್ಲಿ ನೀವು ಮ್ಯಾಪ್‌ ಟೈಮ್‌ಲೈನ್ ಅನ್ನು ಎಡಿಟ್‌ ಮಾಡಬಹುದು. ನಂತರ ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಅದನ್ನು ಡಿಲೀಟ್‌ ಮಾಡಬಹುದು.

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ನಿಮ್ಮ ಮನೆಯ ವಿಳಾಸವನ್ನು ಎಡಿಟ್‌ ಮಾಡುವುದು ಹೇಗೆ?

ಹಂತ:1 ನಿಮ್ಮ Android ಫೋನ್‌ನಲ್ಲಿ Google ಮ್ಯಾಪ್‌ಅನ್ನು ಪ್ರಾರಂಭಿಸಿ
ಹಂತ:2 ಕೆಳಭಾಗದಲ್ಲಿ ಲಭ್ಯವಿರುವ ಸೇವ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ನಿಮ್ಮ ಮನೆ ಮತ್ತು ಕೆಲಸದ ವಿಳಾಸಗಳನ್ನು ತೋರಿಸುವ ಲೇಬಲ್‌ಗೆ ಸ್ವೈಪ್ ಮಾಡಿ.
ಹಂತ:4 ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ ಮತ್ತು ಹೋಮ್‌ ಎಡಿಟ್‌ ಅನ್ನು ಆಯ್ಕೆಮಾಡಿ.
ಹಂತ:5 ನೀವು ಕೆಲಸದ ವಿಳಾಸವನ್ನು ಬದಲಾಯಿಸಲು ಬಯಸಿದರೆ, ಎಡಿಟ್‌ ವರ್ಕ್‌ ಅನ್ನು ಆಯ್ಕೆಮಾಡಿ.
ಹಂತ:6 ಪ್ರಸ್ತುತ ವಿಳಾಸವನ್ನು ತೆರವುಗೊಳಿಸಿ, ನಂತರ ಹೊಸದನ್ನು ಸೇರಿಸಿ. ನೀವು ಮ್ಯಾಪ್‌ನಲ್ಲಿ ಹುಡುಕಬಹುದು ಅಥವಾ ಸರಳವಾಗಿ ಆಯ್ಕೆ ಮಾಡಬಹುದು.
ಹಂತ:7 ಇದಾದ ನಂತರ ನಿಮ್ಮ ಮನೆ ಅಥವಾ ಕೆಲಸದ ವಿಳಾಸವನ್ನು ಸಹ ನೀವು ಡಿಲೀಟ್‌ ಮಾಡಬಹುದು. ನಿಮಗೆ ಬೇಕಾಗಿರುವುದು ಮನೆಗಾಗಿ ತೆಗೆದುಹಾಕಿ ಆಯ್ಕೆಯನ್ನು ಆರಿಸಿ ಅಥವಾ ಉಳಿಸಿದ -> ಲೇಬಲ್ ಅಡಿಯಲ್ಲಿ ಕೆಲಸ ಮಾಡಬಹುದಾಗಿದೆ.

Best Mobiles in India

English summary
How to Clear search history on Google Maps

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X