ಗೂಗಲ್‌ ಮೀಟ್‌ನಲ್ಲಿ ಹೊಸ ಗ್ರೂಪ್‌ ರಚಿಸುವುದು ಹೇಗೆ?...ಈ ಕ್ರಮ ಅನುಸರಿಸಿ

|

ಗೂಗಲ್‌ನ ಎಲ್ಲಾ ಆಪ್‌ಗಳಂತೆಯೇ ಗೂಗಲ್‌ ಮೀಟ್‌ ಸಹ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಈ ಆಪ್‌ನಲ್ಲಿ ಕೆಲವು ಹೊಸ ಫೀಚರ್ಸ್‌ ಪರಿಚಯಿಸಲಾಗಿದ್ದು, ಎಲ್ಲಾ ಗೂಗಲ್‌ ಮೆಸೆಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮೀಟ್‌ ಆಪ್‌ ರನ್‌ ಮಾಡಲು ಮುಂದಾಗಿದೆ. ಇದರ ನಡುವೆ ಗೂಗಲ್‌ ಮೀಟ್‌ ಉತ್ತಮ ಗುಣಮಟ್ಟದ ವಿಡಿಯೋ ಕಾನ್ಫರೆನ್ಸಿಂಗ್‌ಗೆ ಅನುಕೂಲ ಮಾಡಿಕೊಡಲಿದ್ದು, ಒಂದು ಬಾರಿಯ ಸಭೆಯಲ್ಲಿ ಗರಿಷ್ಠ 60 ನಿಮಿಷಗಳವರೆಗೆ ಇದನ್ನು ಬಳಕೆ ಮಾಡಬಹುದು ಹಾಗೆಯೇ ಒಮ್ಮೆಲೆ 100 ಸದಸ್ಯರು ಭಾಗಿಯಾಗಬಹುದಾದ ಆಯ್ಕೆಯನ್ನು ನೀಡಲಾಗಿದೆ.

ಗೂಗಲ್‌ಮೀಟ್‌

ಹೌದು, ಈ ವರ್ಷದ ಮೊದಲಲ್ಲಿ ಗೂಗಲ್‌ಮೀಟ್‌ನಲ್ಲಿ ಹೊಸ ಫೀಚರ್ಸ್ ಪರಿಚಯಿಸಿ ಗೂಗಲ್ Duo ಆಪ್‌ಗೆ ವಿಲೀನ ಗೊಳಿಸಿತ್ತು. ಈ ಮೂಲಕ ಬಳಕೆದಾರರು ಸರಳ ರೀತಿಯಲ್ಲಿ ಯಾವುದೇ ವ್ಯಕ್ತಿ ಅಥವಾ ಗ್ರೂಪ್‌ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಹಾಗೂ ವಿಡಿಯೋ ಕರೆಗಳನ್ನು ನಿಗದಿಪಡಿಸಿಕೊಳ್ಳಲು ಅನುಕೂಲ ಮಾಡಲಿದೆ. ಹಾಗೆಯೇ Duo ಮತ್ತು ಗೂಗಲ್‌ ಮೀಟ್‌ ನ ವಿಲೀನದಿಂದ ಗೂಗಲ್‌ ಅಕೌಂಟ್‌ ಇರುವ ಯಾರೇ ಆದರೂ ಒಂದೇ ಆಪ್‌ ಮೂಲಕ ಈ ಸೇವೆ ಪಡೆಯಬಹುದಾಗಿದೆ.

ಗೂಗಲ್‌ ಮೀಟ್‌ನಲ್ಲಿ ಗ್ರೂಪ್‌ ರಚಿಸುವುದು ಹೇಗೆ?

ಗೂಗಲ್‌ ಮೀಟ್‌ನಲ್ಲಿ ಗ್ರೂಪ್‌ ರಚಿಸುವುದು ಹೇಗೆ?

ಎಲ್ಲರೂ ಸಹ ಈ ಆಪ್‌ಅನ್ನು ಬಳಕೆ ಮಾಡಬಹುದಾಗಿದ್ದು, ನೀವೇನಾದರೂ ಗೂಗಲ್‌ ಮೀಟ್ ಗ್ರೂಪ್ ಹೊಂದಿರದ ಸಂಪರ್ಕಗಳ ಗ್ರೂಪ್‌ಗೆ ತಕ್ಷಣಕ್ಕೆ ಏನಾದರೂ ಕರೆ ಮಾಡಬೇಕಾದ ಸಂದರ್ಭಗಳು ಬರಬಹುದು. ಇಂತಹ ಸನ್ನಿವೇಶಗಳನ್ನ ನಿಭಾಯಿಸುವ ಕಾರಣಕ್ಕೆ ಗೂಗಲ್‌ ಮೀಟ್‌ನಲ್ಲಿ ತಕ್ಷಣವೇ ಹೊಸ ಗ್ರೂಪ್‌ ರಚನೆ ಮಾಡುವ ಅವಕಾಶ ನೀಡಿದೆ. ಅದರಂತೆ ಈ ಕೆಳಗೆ ನೀಡಲಾದ ಮಾಹಿತಿಯಂತೆ ಗ್ರೂಪ್‌ ರಚಿಸಿಕೊಳ್ಳಿ.

ಹಂತ 1

ಹಂತ 1

ಮೊದಲು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ನಲ್ಲಿ ಗೂಗಲ್ ಮೀಟ್‌ ಆಪ್‌ ಓಪನ್‌ ಮಾಡಿ ನಂತರ ಡಿಸ್‌ಪ್ಲೇಯ ಕೆಳಗಿನ ಬಲ ಮೂಲೆಯಲ್ಲಿ ಲಭ್ಯವಿರುವ 'ನ್ಯೂ' ಬಟನ್ ಮೇಲೆ ಟ್ಯಾಪ್ ಮಾಡಿ. ಇದಾದ ಬಳಿಕ 'ಕಾಲ್ ಎ ಗ್ರೂಪ್' ಆಯ್ಕೆಯ ಮೇಲೆ ಟ್ಯಾಪ್ ಮಾಡಿ.

ಹಂತ 2

ಹಂತ 2

'ಕಾಲ್ ಎ ಗ್ರೂಪ್' ಆಯ್ಕೆ ಮೇಲೆ ಟ್ಯಾಪ್ ಮಾಡಿದ ನಂತರ ನೀವು ಗ್ರೂಪ್‌‌ ಕರೆಗೆ ಸೇರಿಸಲು ಬಯಸುವ ಸಂಪರ್ಕಗಳನ್ನು ಆಯ್ಕೆ ಮಾಡಿಕೊಳ್ಳಿ. ನಂತರ ಡಿಸ್‌ಪ್ಲೇ ಮೇಲಿನ ಬಲ ಮೂಲೆಯಲ್ಲಿ ಕಾಣಿಸುವ 'ನೆಕ್ಸ್ಟ್' ಬಟನ್‌ ಮೇಲೆ ಟ್ಯಾಪ್‌ ಮಾಡಿ.

 ಹಂತ 3

ಹಂತ 3

'ನೆಕ್ಸ್ಟ್' ಬಟನ್‌ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಗ್ರೂಪ್‌ಗೆ ಹೆಸರನ್ನು ಹೊಂದಿಸಬೇಕಿದೆ. ಅದಕ್ಕೆ ಮೀಟ್ ಆಪ್‌ನಲ್ಲಿ 'ಪೆನ್‌' ಐಕಾನ್‌ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ ಹಾಗೂ ಗ್ರೂಪ್‌ಗೆ ಹೆಸರನ್ನು ನೀಡಿ. ಈ ವೇಳೆ ನೀಡಲಾದ ಹೆಸರು ಎಲ್ಲಾ ಸದಸ್ಯರಿಗೂ ಕಾಣಿಸಿಕೊಳ್ಳುತ್ತದೆ. ಬಳಿಕ ಕರೆ ಮಾಡಲು 'ಸ್ಟಾರ್ಟ್‌' ಬಟನ್ ಮೇಲೆ ಟ್ಯಾಪ್‌ ಮಾಡಿದರೆ ಅವರಿಗೆ ಆಹ್ವಾನದ ಲಿಂಕ್‌ ರವಾನೆಯಾಗುತ್ತದೆ. ಅದರ ಮೂಲಕ ಎಲ್ಲರೂ ಗ್ರೂಪ್‌ ಕರೆಗೆ ಸೇರಿಕೊಳ್ಳಬಹುದು.

 ಗೂಗಲ್‌ಮೀಟ್‌

ಈ ಫೀಚರ್ಸ್‌ ಗೂಗಲ್‌ಮೀಟ್‌ನಲ್ಲಿ ಇರುವ ಹಾಗೆಯೇ ಜೂಮ್‌ ನಲ್ಲೂ ಸಹ ಲಭ್ಯವಿದೆ. ಇತ್ತೀಚಿನ ಅಪ್‌ಡೇಟ್‌ ಅನ್ವಯ ಜೂಮ್ ರೂಮ್‌ಗಳು ಮತ್ತು ಗೂಗಲ್‌ ಮೀಟ್‌ ಡಿವೈಸ್‌ಗಳಲ್ಲಿ ಮೀಟಿಂಗ್ ಕೋಡ್ ಅನ್ನು ನಮೂದಿಸುವ ಮೂಲಕ ಗೂಗಲ್‌ ಮೀಟ್‌ ಮೀಟಿಂಗ್‌ಗಳಿಗೆ ಸೇರಿಕೊಳ್ಳಬಹುದಾಗಿದೆ. ಆದರೆ, ಸೇರಿಸಿಕೊಳ್ಳುವ ಪ್ರಕ್ರಿಯೆಯ ಹಕ್ಕನ್ನು ಗ್ರೂಪ್‌ನ ನಿರ್ವಾಹಕರಿಗೆ ನೀಡಲಾಗಿದೆ. ಈ ಮೂಲಕ ಗೂಗಲ್‌ ಮೀಟ್‌ ಹಾಗೂ ಜೂಮ್‌ ಆಪ್‌ ಮೂಲಕ ಒಂದೇ ಮೀಟಿಂಗ್‌ ಗೆ ಸೇರಿಕೊಳ್ಳುವ ಅವಕಾಶ ನೀಡಲಾಗಿದೆ. ಅಂತೆಯೇ ಮೀಟಿಂಗ್‌ ಉದ್ದೇಶಕ್ಕೆ ಭಿನ್ನ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಳ್ಳುವುದನ್ನು ಗೂಗಲ್‌ ತಪ್ಪಿಸಿದೆ.

Best Mobiles in India

English summary
Like all Google apps, Google Meet has also taken a prominent place. In the meantime, learn how to create a group on Google Meet.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X