ವಾಟ್ಸಾಪ್‌ನಲ್ಲಿ ಪೋಲ್‌ ಕ್ರಿಯೆಟ್‌ ಮಾಡುವುದು ಹೇಗೆ? ಇದರಿಂದಾಗುವ ಲಾಭವೇನು?

|

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಹಲವು ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಕಾಲಕಾಲಕ್ಕೆ ತಕ್ಕಂತೆ ಅಗತ್ಯ ಫೀಚರ್ಸ್‌ಗಳನ್ನು ನೀಡುವ ಮೂಲಕ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಅದರಂತೆ ಇದೀಗ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಕ್ರಿಯೇಟ್‌ ಪೋಲ್‌ ಫೀಚರ್ಸ್‌ ಅನ್ನು ಸೇರ್ಪಡೆ ಮಾಡಿದೆ. ಇದು ಹೆಸರೇ ಸೂಚಿಸುವಂತೆ ವಾಟ್ಸಾಪ್‌ನಲ್ಲಿ ಪೋಲ್‌(ಸಮೀಕ್ಷೆ) ನಡೆಸುವುದಕ್ಕೆ ಅವಕಾಶ ನೀಡಲಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ಆಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಹೊಸ ಕ್ರಿಯೇಟ್‌ ಪೋಲ್‌ ಫೀಚರ್ಸ್‌ ಪರಿಚಯಿಸಿದೆ. ಇದರ ಮೂಲಕ ಬಳಕೆದಾರರು ವಾಟ್ಸಾಪ್‌ ಗ್ರೂಪ್‌ ಮತ್ತು ವೈಯಕ್ತಿಕ ಚಾಟ್‌ಗಳಲ್ಲಿ ಸಮೀಕ್ಷೆ ನಡೆಸುವುದಕ್ಕೆ ಅನುಮತಿಸಲಿದೆ. ಇನ್ನು ಈ ಫೀಚರ್ಸ್‌ ವಾಟ್ಸಾಪ್‌ನ ಮೊಬೈಲ್‌ ಆವೃತ್ತಿಗೆ ಮಾತ್ರ ಲಭ್ಯವಾಗಲಿದೆ. ಇದು ಮುಂದಿನ ದಿನಗಳಲ್ಲಿ ವೆಬ್‌ ಆವೃತ್ತಿಯಲ್ಲಿ ಕೂಡ ದೊರೆಯಲಿದೆ ಎನ್ನಲಾಗಿದೆ. ಹಾಗಾದ್ರೆ ವಾಟ್ಸಾಪ್‌ನಲ್ಲಿ ಹೊಸ ಕ್ರಿಯೆಟ್‌ ಪೋಲ್‌ ಫೀಚರ್ಸ್‌ ಅನ್ನು ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಪೋಲ್‌ ಫೀಚರ್ಸ್‌ ಸಾಕಷ್ಟು ಆಕರ್ಷಕವಾಗಿದೆ. ಈ ಫೀಚರ್ಸ್‌ ಮೂಲಕ ನೀವು ಯಾವುದೇ ಪ್ರಶ್ನೆಯನ್ನು ಪೋಲ್‌ ಕ್ರಿಯೆಟ್‌ ಮಾಡಿ ಉತ್ತರವನ್ನು ತಿಳಿದುಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಗ್ರೂಪ್‌ ಅಥವಾ ಸ್ನೇಹಿತರ ಚಾಟ್‌ಗೆ ಹೋಗಿ ಕೆಳಗಿನ ಎಡ ಮೂಲೆಯಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡುವ ಮೂಲಕ ಪೋಲ್‌ ಆಯ್ಕೆ ಮಾಡಬಹುದು. ಇದರ ಮೂಲಕ ನೀವು ಪೋಲ್‌ ಕ್ರಿಯೆಟ್‌ ಮಾಡಬಹುದಾಗಿದೆ. ಇದಕ್ಕಾಗಿ ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ವಾಟ್ಸಾಪ್‌ನಲ್ಲಿ ಪೋಲ್‌ ಕ್ರಿಯೆಟ್‌ ಮಾಡುವುದು ಹೇಗೆ?

ವಾಟ್ಸಾಪ್‌ನಲ್ಲಿ ಪೋಲ್‌ ಕ್ರಿಯೆಟ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ವಾಟ್ಸಾಪ್‌ ಅಪ್ಲಿಕೇಶನ್‌ ತೆರೆಯಿರಿ
ಹಂತ:2 ಇದರಲ್ಲಿ ನೀವು ಸಮೀಕ್ಷೆಯನ್ನು ರಚಿಸಲು ಬಯಸುವ ವೈಯಕ್ತಿಕ ಚಾಟ್ ಅಥವಾ ಗುಂಪನ್ನು ತೆರೆಯಿರಿ.
ಹಂತ:3 ನಂತರ, ಮೆಸೇಜ್‌ ಬಾಕ್ಸ್‌ನ ಬದಿಯಲ್ಲಿರುವ ಅಟ್ಯಾಚ್ ಬಟನ್ ಮೇಲೆ ಟ್ಯಾಪ್ ಮಾಡಿ
ಹಂತ:4 ಪೋಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ:5 ಕ್ರಿಯೇಟ್ ಪೋಲ್ ವಿಂಡೋದಲ್ಲಿ ನಿಮ್ಮ ಪ್ರಶ್ನೆಯನ್ನು ಸೇರಿಸಿ.

ಪೋಲ್

ಹಂತ:6 ಇದರಲ್ಲಿ ಸಮೀಕ್ಷೆಗೆ ವೋಟ್‌ ಮಾಡಲು ಆಯ್ಕೆಗಳನ್ನು ಸೇರಿಸಿ. ನೀವು 12 ಆಯ್ಕೆಗಳನ್ನು ಸೇರಿಸಬಹುದು.
ಹಂತ:7 ಇದೀಗ ಆರ್ಡರ್ ಅನ್ನು ಬದಲಾಯಿಸಲು ನೀವು ಪೋಲ್ ಆಯ್ಕೆಗಳ ಬಲಭಾಗದಲ್ಲಿ ಲಭ್ಯವಿರುವ 'ಹ್ಯಾಂಬರ್ಗರ್' ಐಕಾನ್ ಅನ್ನು ಟ್ಯಾಪ್ ಮಾಡಿ ಮತ್ತು ಡ್ರ್ಯಾಗ್ ಮಾಡಬಹುದು.
ಹಂತ:8 ಒಮ್ಮೆ ನೀವು ಪ್ರಶ್ನೆಗಳು ಮತ್ತು ಆಯ್ಕೆಗಳನ್ನು ಸೇರಿಸಿದರೆ, ಗ್ರೀನ್‌ ಸೆಂಡ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:9 ಇದೀಗ ನಿಮ್ಮ ಪೋಲ್‌ ಅನ್ನು ಕ್ರಿಯೆಟ್‌ ಆಗಿರುತ್ತದೆ.

ವಾಟ್ಸಾಪ್‌

ಇನ್ನು ನೀವು ವಾಟ್ಸಾಪ್‌ ಪೋಲ್‌ಗೆ ವೋಟ್‌ ಮಾಡಲು ಬಳಕೆದಾರರಿಗೆ 12 ಆಯ್ಕೆಗಳನ್ನು ಸೇರಿಸಲು ಅನುಮತಿಸಲಿದೆ. ಈ ಫೀಚರ್ಸ್‌ ಬಳಕೆದಾರರಿಗೆ ಪೋಲ್‌ ಕ್ರಿಯೆಟ್‌ ಮಾಡಲು ಮತ್ತು ನಿಮ್ಮ ಆಯ್ಕೆಯ ಪ್ರಕಾರ ಲಭ್ಯವಿರುವ ಆಯ್ಕೆಯನ್ನು ಸರಳವಾಗಿ ಟ್ಯಾಪ್ ಮಾಡುವ ಮೂಲಕ ವೋಟ್‌ ಮಾಡಲು ಅವಕಾಶ ನೀಡಲಿದೆ. ಇದಲ್ಲದೆ ಪೋಲ್‌ ಅಡಿಯಲ್ಲಿ ಲಭ್ಯವಿರುವ ಬಹು ಅಥವಾ ಎಲ್ಲಾ ಆಯ್ಕೆಗಳನ್ನು ಸಹ ನೀವು ಆಯ್ಕೆ ಮಾಡಬಹುದು.

ರಿಸಲ್ಟ್‌

ಇದಲ್ಲದೆ ಪ್ರತಿ ಬಾರಿ ಹೊಸ ವೋಟ್‌ ಅನ್ನು ಸೇರಿಸಿದಾಗ ಆಟೋಮ್ಯಾಟಿಕ್‌ ಆಗಿ ಅಪ್ಡೇಟ್‌ ಮಾಡಲಾಗುತ್ತದೆ. ಇದರಲ್ಲಿ 'ವೀಕ್ಷಣೆ ಮತಗಳು' ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಪೋಲ್‌ ರಿಸಲ್ಟ್‌ ಅನ್ನು ಯಾರು ವೀಕ್ಷಿಸಿದ್ದಾರೆ ಎಂಬ ಮಾಹಿತಿಯನ್ನು ವಾಟ್ಸಾಪ್‌ ಬಳಕೆದಾರರು ವೀಕ್ಷಿಸಬಹುದು. ಇದಕ್ಕಾಗಿ ನೀವು ಮತದಾನಕ್ಕೆ ಹೋಗಿ ಮತ್ತು "Vew Votes" ಅನ್ನು ಟ್ಯಾಪ್ ಮಾಡುವ ಮೂಲಕ ಯಾರು ಮತವನ್ನು ನೀಡಿದ್ದಾರೆ ಮತ್ತು ಇತರರು ಯಾವ ಆಯ್ಕೆಯನ್ನು ಆರಿಸಿದ್ದಾರೆ ಎಂಬುದನ್ನೂ ತಿಳಿಯಬಹುದಾಗಿದೆ.

Best Mobiles in India

English summary
WhatsApp poll feature is only available for mobile version and is expected to come for WhatsApp for Web version soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X