ನಿಮ್ಮ ಜಿಯೋ ಸಂಖ್ಯೆಯಿಂದ ಕಾಲರ್ ಟ್ಯೂನ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

|

ಜಿಯೋ ಸಂಸ್ಥೆ ತನ್ನ ಗ್ರಾಹಕರಿಗೆ ಉಚಿತ ಕಾಲರ್‌ ಟ್ಯೂನ್‌ ಸೇವೆಯ ಮೂಲಕ ಕಾಲರ್‌ ಟ್ಯೂನ್‌ ಸೆಟ್‌ ಮಾಡುವ ಅವಕಾಶ ನೀಡಿದೆ. ಜಿಯೋ ಟ್ಯೂನ್ಸ್ ಕಾಲರ್ ಟ್ಯೂನ್ಸ್ ಸೇವೆಯ ಮೂಲಕ ಪ್ರಿಪೇಯ್ಡ್ ಅಥವಾ ಪೋಸ್ಟ್‌ಪೇಯ್ಡ್ ಸಂಖ್ಯೆಯಲ್ಲಿ ಉಚಿತ ಕಾಲರ್ ಟ್ಯೂನ್ ಸೆಟ್‌ಮಾಡಬಹುದಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಮಂದಿ ತಮಗಿಷ್ಟವಾದ ಟ್ಯೂನ್‌ ಅನ್ನು ಸೆಟ್‌ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ರಿಂಗ್‌ಟೋನ್‌ ಸೆಟ್‌ ಮಾಡುವುದಕ್ಕೆ ಬಯಸುವುದಿಲ್ಲ. ಹಾಗೊಂದು ವೇಳೆ ಜಿಯೋ ಕಾಲರ್‌ ಟ್ಯೂನ್‌ ಅನ್ನು ಡಿ ಆಕ್ಟಿವೇಟ್‌ ಮಾಡಬೇಕು ಎಂದು ಕೊಂಡರೆ ಅದಕ್ಕೂ ಕೂಡ ಅವಕಾಶವಿದೆ.

ಜಿಯೋ

ಹೌದು, ಜಿಯೋ ಸಂಸ್ಥೆಯು ತನ್ನ ಜಿಯೋ ಟ್ಯೂನ್ಸ್ ಲೈಬ್ರರಿಯಲ್ಲಿ ಹಾಡುಗಳ ಮಹಾ ಸಂಗ್ರಹವನ್ನು ಹೊಂದಿದೆ. ಇದರಿಂದ ನಿಮ್ಮ ಜಿಯೋ ಟ್ಯೂನ್ ಅನ್ನು ನೀವು ಆಯ್ಕೆ ಮಾಡಬಹುದು. ಹಾಗೆಯೇ ಹೆಲೋ ಟ್ಯೂನ್ ಸೆಟ್‌ ಮಾಡಿದ ನಂತರ ನಿಮಗೆ ಇಷ್ಟವಾಗದೇ ಹೋದಲ್ಲಿ ಅದನ್ನು ತೆಗೆದು ಹಾಕಬಹುದು. ಜಿಯೋ ಕಾಲರ್ ಟ್ಯೂನ್ ಸೇವೆಯನ್ನು ಸ್ಥಗಿತ ಮಾಡಲು ಮೂರು ಆಯ್ಕೆಗಳು ಇವೆ. ಇದರಲ್ಲಿ ಎಸ್‌ಎಮ್‌ಎಸ್‌ ಮೂಲಕ, ಮೈ ಜಿಯೋ ಆಪ್‌ ಮೂಲಕ ಹಾಗೂ IVR ಮೂಲಕ ಕಾಲರ್‌ ಟ್ಯೂನ್‌ ಅನ್ನು ಡಿ ಆಕ್ಟಿವೇಟ್‌ ಮಾಡಬಹುದಾಗಿದೆ. ಈ ಮೂರು ಕ್ರಮಗಳ ಮೂಲಕ ಜಿಯೋ ಕಾಲರ್‌ ಟ್ಯೂನ್ ನಿಲ್ಲಿಸಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

ಎಸ್‌ಎಂಎಸ್ ಮೂಲಕ ಜಿಯೋ ಕಾಲರ್ ಟ್ಯೂನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಎಸ್‌ಎಂಎಸ್ ಮೂಲಕ ಜಿಯೋ ಕಾಲರ್ ಟ್ಯೂನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ನಿಮ್ಮ ಸಂಖ್ಯೆಯಿಂದ ಜಿಯೋ ಕಾಲರ್ ಟ್ಯೂನ್‌ ತೆಗೆದುಹಾಕಲು ನೀವು 56789 ಗೆ ಸ್ಟಾಪ್‌ ಎಂದು ಟೈಪ್ ಮಾಡುವ ಮೂಲಕ SMS ಕಳುಹಿಸಬಹುದು. ಅಲ್ಲದೆ ನಿಮ್ಮ JioTune ಚಂದಾದಾರಿಕೆಯನ್ನು ನಿಷ್ಕ್ರಿಯಗೊಳಿಸುವ ಆಯ್ಕೆಯನ್ನು ಆರಿಸಿ. ಇದಾದ ನಂತರ ನಿಮ್ಮ ಜಿಯೋ ಕಾಲರ್‌ ಟ್ಯೂನ್‌ ನಿಷ್ಕ್ರೀಯಗೊಳ್ಳಲಿದೆ. ನಿಷ್ಕ್ರಿಯಗೊಳಿಸಿದ ನಂತರ, ನಿಮ್ಮ ಜಿಯೋ ಸಂಖ್ಯೆಯಲ್ಲಿ ಕಾಲರ್‌ ಟ್ಯೂನ್‌ ನಿಷ್ಕ್ರೀಯಗೊಂಡ ದೃಡೀಕರಣ ಟೆಕ್ಸ್ಟ್‌ ಮೆಸೇಜ್‌ ಬರಲಿದೆ.

ಮೈಜಿಯೊ ಅಪ್ಲಿಕೇಶನ್ ಮೂಲಕ ಜಿಯೋ ಕಾಲರ್ ಟ್ಯೂನ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಮೈಜಿಯೊ ಅಪ್ಲಿಕೇಶನ್ ಮೂಲಕ ಜಿಯೋ ಕಾಲರ್ ಟ್ಯೂನ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ:1 ನಿಮ್ಮ ಸಾಧನದಲ್ಲಿ ಜಿಯೋ ಅಪ್ಲಿಕೇಶನ್ ಅನ್ನು ತೆರೆಯಿರಿ.

ಹಂತ:2 ಮೆನುಗೆ ಹೋಗಿ ಮತ್ತು ನೀವು JioFiber ಆಯ್ಕೆಯ ಮೇಲಿರುವ ‘JioTunes' ಅನ್ನು ಕಾಣಬಹುದು.

ಹಂತ:3 ಆಯ್ಕೆಯನ್ನು ಟ್ಯಾಪ್ ಮಾಡಿ ಮತ್ತು ಅದು ನಿಮ್ಮನ್ನು ‘ನನ್ನ ಚಂದಾದಾರಿಕೆ' ಪುಟಕ್ಕೆ ಕರೆದೊಯ್ಯುತ್ತದೆ.

ಹಂತ:4 ನೀವು ಪರದೆಯ ಕೆಳಭಾಗದಲ್ಲಿ ‘ನಿಷ್ಕ್ರಿಯಗೊಳಿಸಿ ಜಿಯೋ ಟ್ಯೂನ್' ಅನ್ನು ಕಾಣುತ್ತೀರಿ, ಗುಂಡಿಯನ್ನು ಟ್ಯಾಪ್ ಮಾಡಿ ಮತ್ತು ನೀವು ಜಿಯೋ ಟ್ಯೂನ್ ಅನ್ನು ನಿಷ್ಕ್ರಿಯಗೊಳಿಸಲು ಬಯಸುತ್ತೀರಾ ಅಥವಾ ಇಲ್ಲವೇ ಎಂದು ಕೇಳುತ್ತದೆ.

ಹಂತ:5 ‘ಹೌದು' ಆಯ್ಕೆಮಾಡಿ ಮತ್ತು ನಿಮ್ಮ ವಿನಂತಿಯನ್ನು ಸ್ವೀಕರಿಸಿದ ನಂತರ ನೀವು ದೃಡೀಕರಣ ಪಾಪ್-ಅಪ್ ಅನ್ನು ಸ್ವೀಕರಿಸುತ್ತೀರಿ.

ಐವಿಆರ್ ಮೂಲಕ ಜಿಯೋ ಕಾಲರ್ ಟ್ಯೂನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಐವಿಆರ್ ಮೂಲಕ ಜಿಯೋ ಕಾಲರ್ ಟ್ಯೂನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಐವಿಆರ್ ಮೂಲಕ ಜಿಯೋ ಕಾಲರ್ ಟ್ಯೂನ್‌ ಅನ್ನು ತೆಗೆದುಹಾಕಲು ನಿಮ್ಮ ಜಿಯೋ ಸಂಖ್ಯೆಯಿಂದ 155223 ಅನ್ನು ಡಯಲ್ ಮಾಡಿ ಮತ್ತು ಜಿಯೋ ಟ್ಯೂನ್ಸ್ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಐವಿಆರ್ ಅನ್ನು ಅನುಸರಿಸಿ. ಜಿಯೋ ಟ್ಯೂನ್ಸ್ ಚಂದಾದಾರಿಕೆ ನಿಷ್ಕ್ರಿಯಗೊಂಡ ನಂತರ, ನಿಮ್ಮ ಜಿಯೋ ಸಂಖ್ಯೆಯಲ್ಲಿ ದೃಡೀಕರಣ SMS ಬರಲಿದೆ. ಈ ಮೂಲಕ ನಿಮ್ಮ ಜಿಯೋ ಕಾಲರ್‌ ಟ್ಯೂನ್‌ ಅನ್ನು ಸ್ಥಗಿತಗೊಳಿಸಬಹುದಾಗಿದೆ.

Best Mobiles in India

English summary
In case you are tired of the same old caller tune, here's a simple step-by-step guide you can check to remove caller tune from your Jio number.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X