Gmail ನಲ್ಲಿ ಗೂಗಲ್‌ ಮೀಟ್ ಟ್ಯಾಬ್ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹಲವು ಫೀಚರ್ಸ್‌ಗಳನ್ನ ಪರಿಚಯಿಸಿದೆ. ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿರುವ ಗೂಗಲ್‌ ಕೆಲವು ದಿನಗಳ ಹಿಂದೆ, ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಗೂಗಲ್ ಮೀಟ್ ವಿಡಿಯೋ ಕಾನ್ಫರೆನ್ಸ್ ಪ್ಲಾಟ್‌ಫಾರ್ಮ್ ಅನ್ನು ಪರಿಚಯಿಸಿತ್ತು. ಅಲ್ಲದೆ ಇದನ್ನು ಗೂಗಲ್‌ ಮೀಟ್‌ ಅನ್ನು ಜಿಮೇಲ್ ಅಪ್ಲಿಕೇಶನ್‌ ಎರಡನ್ನು ಸಹ ಸಂಯೋಜನೆ ಮಾಡಿದೆ. ಇದರಿಂದ ನೀವು ಜಿಮೇಲ್‌ ಟ್ಯಾಬ್‌ನಲ್ಲಿಯೇ 'mails' ಮತ್ತು 'meet' ಎಂದು ತೋರಿಸುವ ದೊಡ್ಡ ಟ್ಯಾಬ್ ಅನ್ನು ಕಾಣಬಹುದಾಗಿದೆ.

ಗೂಗಲ್‌

ಹೌದು, ಗೂಗಲ್‌ ಮೀಟ್‌ ವಿಡಯೋ ಕಾನ್ಫರೆನ್ಸ್‌ ಪ್ಲಾಟ್‌ಫಾರ್ಮ್‌ ಇದೀಗ ಗೂಗಲ್‌ನ ಜಿಮೇಲ್‌ನಲ್ಲಿಯೂ ಸಹ ಲಭ್ಯವಿದೆ. ಜಿಮೇಲ್‌ ಟ್ಯಾಬ್‌ನಲ್ಲಿಯೂ ಕೂಡ ನೀವು ಗೂಗಲ್‌ ಮೀಟ್‌ ಅನ್ನು ಕಾಣಬಹುದಾಗಿದೆ. ಅಲ್ಲದೆ ಗೂಗಲ್‌ ಮೀಟ್‌ನ engagement ಅನ್ನು ಹೆಚ್ಚಿಸಲು ಮತ್ತು ಆಫೀಸ್ ವೀಡಿಯೊ ಕರೆಗಳನ್ನು ಸುಲಭಗೊಳಿಸಲು ಇದು ಸುಲಭಮಾರ್ಗವಾಗಿದೆ. ಆದರೂ ಇದು ಕೆಲವರಿಗೆ ಕಿರಿಕಿರಿ ಉಂಟುಮಾಡಬಹುದು. ಇದೇ ಕಾರಣಕ್ಕೆ ಜಿಮೇಲ್‌ನಲ್ಲಿರುವ ಗೂಗಲ್‌ ಮೀಟ್‌ ಅನ್ನು ಡಿಸೆಬಲ್‌ ಮಾಡೋಕೆ ಕೆಲವರು ಪ್ರಯತ್ನಿಸುತ್ತಾರೆ. ಹಾಗಾದ್ರೆ ಇದನ್ನು Android ಮತ್ತು iOS ಎರಡರಲ್ಲೂ ಮೀಟ್ ಟ್ಯಾಬ್ ಅನ್ನು ನಿಷ್ಕ್ರಿಯ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Android ನಲ್ಲಿ ಗೂಗಲ್‌ ಮೀಟ್‌ ಟ್ಯಾಬ್‌ ಡಿಸೆಬಲ್‌ ಮಾಡವುದು ಹೇಗೆ?

Android ನಲ್ಲಿ ಗೂಗಲ್‌ ಮೀಟ್‌ ಟ್ಯಾಬ್‌ ಡಿಸೆಬಲ್‌ ಮಾಡವುದು ಹೇಗೆ?

ಹಂತ 1: Gmail ಒಳಗೆ, ಮೇಲಿನ ಎಡ ಮೂಲೆಯಲ್ಲಿರುವ ಮೂರು-ಸಾಲಿನ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಸೆಟ್ಟಿಂಗ್ಸ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ನಂತರ, ನೀವು ‘ಮೀಟ್‌' ಟ್ಯಾಬ್ ನೋಡಲು ಬಯಸದ ಖಾತೆಯನ್ನು ಟ್ಯಾಪ್ ಮಾಡಿ.

ಹಂತ 4: ‘ಮೀಟ್' ಸಬ್‌ ಡಿವಿಷನ್‌ ಅಡಿಯಲ್ಲಿ, ‘Show the Meet tab for video calling' ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

ಐಫೋನ್‌ ನಲ್ಲಿ ಗೂಗಲ್‌ ಮೀಟ್‌ ಟ್ಯಾಬ್‌ ಡಿಸೆಬಲ್‌ ಮಾಡವುದು ಹೇಗೆ?

ಐಫೋನ್‌ ನಲ್ಲಿ ಗೂಗಲ್‌ ಮೀಟ್‌ ಟ್ಯಾಬ್‌ ಡಿಸೆಬಲ್‌ ಮಾಡವುದು ಹೇಗೆ?

ಹಂತ 1: Gmail ಒಳಗೆ, ಮೇಲಿನ ಎಡ ಮೂಲೆಯಲ್ಲಿರುವ ಮೂರು-ಸಾಲಿನ ಹ್ಯಾಂಬರ್ಗರ್ ಮೆನುವಿನಲ್ಲಿ ಟ್ಯಾಪ್ ಮಾಡಿ.

ಹಂತ 2: ಕೆಳಗೆ ಸ್ಕ್ರಾಲ್ ಮಾಡಿ ಮತ್ತು ‘ಸೆಟ್ಟಿಂಗ್ಸ' ಆಯ್ಕೆಯನ್ನು ಟ್ಯಾಪ್ ಮಾಡಿ.

ಹಂತ 3: ನಂತರ, ನೀವು ‘ಮೀಟ್‌' ಟ್ಯಾಬ್ ನೋಡಲು ಬಯಸದ ಖಾತೆಯನ್ನು ಟ್ಯಾಪ್ ಮಾಡಿ.

ಹಂತ 4: ‘General' ಸಬ್‌ ಡಿವಿಷನ್‌ ಅಡಿಯಲ್ಲಿ Show the Meet tab for video calling' ಆಯ್ಕೆಯನ್ನು ನಿಷ್ಕ್ರಿಯಗೊಳಿಸಿ.

Gmail

ಇನ್ನು ಈ ಎಲ್ಲಾ ಖಾತೆಗಳಿಗೆ ಏಕಕಾಲದಲ್ಲಿ ಅದನ್ನು ನಿಷ್ಕ್ರಿಯಗೊಳಿಸಲು ಯಾವುದೇ ಮಾರ್ಗವಿಲ್ಲದ ಕಾರಣ ನಿಮ್ಮ ಪ್ರತಿಯೊಂದು ಖಾತೆಗಳಿಗೆ ನೀವು ಈ ಹಂತಗಳನ್ನು ಅನುಸರಿಸಬೇಕಾಗಿರುತ್ತದೆ. ಹಾಗೇ ನೋಡುವುದಾದರೆ Gmail ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮತ್ತೊಂದು ಫೀಚರ್ಸ್‌ ಅನ್ನು ಪರಿಚಯಿಸಲು ಪ್ಲ್ಯಾನ್‌ ರೂಪಿಸುತ್ತಿದೆ. ದೃಡೀಕರಿಸಿದ ಲೋಗೊಗಳು, ಇಮೇಲ್ ವಂಚನೆಯನ್ನು ತಡೆಗಟ್ಟಲು ಹೊಸ ಟೆಕ್ನಾಲಜಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಗೂಗಲ್ ಕಳೆದ ವರ್ಷ ಸಂದೇಶ ಗುರುತಿಸುವಿಕೆ ಅಥವಾ ಬಿಐಎಂಐಗಾಗಿ ಬ್ರಾಂಡ್ ಸೂಚಕಗಳನ್ನು ಸೇರಿತ್ತು. ಇದರ ಪರಿಣಾಮ ಇದೀಗ ದೃಡೀಕರಿಸಿದ ಲೋಗೊಗಳು ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ.

Best Mobiles in India

Read more about:
English summary
While this is one of Google’s ways to push engagement on Meet and make office video calls easier, it might just be annoying for some. Fortunately, there’s a way to disable it on both Android and iOS.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X