ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

|

ಪ್ರಸ್ತುತ ದೇಶದ ಟೆಲಿಕಾಂ ವಲಯದಲ್ಲಿ ದೈತ್ಯ ಎಂದೆನಿಸಿಕೊಂಡಿರುವ ಜಿಯೋ, ಟೆಲಿಕಾಂ ಮಾತ್ರವಲ್ಲ ಇತರೆ ವಲಯಗಳಲ್ಲೂ ಕೂಡ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇನ್ನು ಈಗಾಗಲೇ ದೇಶದ ಫೋನ್‌ ವಲಯದಲ್ಲಿ ಜಿಯೋ ಫೀಚರ್ ಫೋನ್‌ ಅನ್ನು ಬಿಡುಗಡೆ ಮಾಡಿರೋದು ನಿಮಗೆಲ್ಲಾ ಗೊತ್ತೇ ಇದೆ. ಸದ್ಯ ದೇಶದಲ್ಲಿ ಜಿಯೋ ಎರಡು ಮಾದರಿಯ ಜಿಯೋ ಫೀಚರ್‌ ಫೋನ್‌ ಅನ್ನು ಬಿಡುಗಡೆ ಮಾಡಿದೆ. ದೇಶದ ಎಲ್ಲಾ ಫೋನ್‌ ಬಳಕೆದಾರರು 4G ನೆಟ್‌ವರ್ಕ್ ಅನ್ನು ಬಳಸಬೇಕು ಅನ್ನೊದು ರಿಲಾಯನ್ಸ್ ಜಿಯೋ ಬಯಸಿದೆ. ಇನ್ನು ಈ ಜಿಯೋ ಫೋನ್‌ ಯುಟ್ಯೂಬ್‌, ವಾಟ್ಸಾಪ್‌, ಫೇಸ್‌ಬುಕ್‌ ಅನ್ನು ಸಹ ಬೆಂಬಲಿಸಲಿದೆ.

ರಿಲಯನ್ಸ್‌ ಜಿಯೋ

ಹೌದು, ರಿಲಯನ್ಸ್‌ ಜಿಯೋ ಪರಿಚಯಿಸಿರುವ ಜಿಯೋ ಫೀಚರ್‌ ಫೋನ್‌ಗಳು ಜನಪ್ರಿಯ ಜಿಯೋ ಫೋನ್‌ ಕೂಡ ಪ್ರಮುಖವಾಗಿದೆ. ಜಿಯೋ ಪರಿಚಯಿಸಿರುವ ಎರಡೂ ಫೋನ್‌ಗಳು ವಾಟ್ಸಾಪ್, ಯೂಟ್ಯೂಬ್, ಗೂಗಲ್ ಮ್ಯಾಪ್‌ ಮತ್ತು ಇನ್ನೂ ಹಲವಾರು ಅಪ್ಲಿಕೇಶನ್‌ಗಳೊಂದಿಗೆ ಬರುತ್ತವೆ. ಇನ್ನು ಜಿಯೋ ಫೊನ್‌ನಲ್ಲಿ ಜಿಯೋ ಕಾಲ್‌ ರೆಕಾರ್ಡಿಂಗ್‌ ಅಪ್ಲಿಕೇಶನ್‌ ಅನ್ನು ಸಹ ಬಳಸಬಹುದಾಗಿದೆ. ಆದಾಗ್ಯೂ, ನೀವು ಇನ್ನೂ ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಅನ್ನು ಜಿಯೋ ಫೋನ್‌ನಲ್ಲಿ ಬಳಸುವುದು ಹೇಗೆ ಅನ್ನೊ ಗೊಂದಲ ಕೆಲವರಲ್ಲಿ ಇರುತ್ತೆ. ಹಾಗಾದ್ರೆ ಜಿಯೋ ಫೋನ್‌ನಲ್ಲಿ ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಬಳಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವುದು ಹೇಗೆ?

ಹಂತ 1: ಮೊದಲು, ನಿಮ್ಮ ಫೋನ್‌ನಲ್ಲಿರುವ ಜಿಯೋ ಅಪ್ಲಿಕೇಶನ್‌ಗಳ ಸ್ಟೋರ್‌ಗೆ ನೀವು ಹೋಗಬೇಕಾಗುತ್ತದೆ.
ಹಂತ 2: ನಂತರ, ನೀವು ಜಿಯೋ ಕಾಲ್ ರೆಕಾರ್ಡಿಂಗ್ ಅಪ್ಲಿಕೇಶನ್ ಅನ್ನು ನೋಡಬೇಕು.
ಹಂತ 3: ಅದರ ನಂತರ, ನೀವು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಟ್ಯಾಪ್ ಮಾಡಬೇಕು.
ಹಂತ 4: ನಂತರ, ನೀವು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿದರೆ ನೀವು ಚೆಕ್‌ಬಾಕ್ಸ್ ಅನ್ನು ಟಿಕ್ ಮಾಡಬೇಕು.
ಹಂತ 5: ಈಗ, ನೀವು ಜಿಯೋ ಫೋನ್ ಕರೆ ಅಪ್ಲಿಕೇಶನ್ ಅನ್ನು ಬಳಸಬಹುದು.

ಜಿಯೋ ಫೋನ್‌ಗಳಲ್ಲಿ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?

ಜಿಯೋ ಫೋನ್‌ಗಳಲ್ಲಿ ಕರೆಗಳನ್ನು ರೆಕಾರ್ಡ್ ಮಾಡುವುದು ಹೇಗೆ?

ನಿಮ್ಮ ಜಿಯೋ ಫೋನ್‌ನಲ್ಲಿ ಕರೆಗಳನ್ನು ರೆಕಾರ್ಡ್ ಮಾಡಲು ನೀವು ಈ ಹಂತಗಳನ್ನು ಅನುಸರಿಸಬೇಕು.
ಹಂತ 1: ಮೊದಲು, ನೀವು ಕರೆಯನ್ನು ಆರಿಸಬೇಕಾಗುತ್ತದೆ, ನಂತರ recoding ಸ್ವಯಂಚಾಲಿತವಾಗಿ ಪ್ರಾರಂಭವಾಗುತ್ತದೆ.
ಹಂತ 2: ಅದು ಮುಗಿದ ನಂತರ, ನಿಮ್ಮ ಕರೆಯನ್ನು ನಿಮ್ಮ ಫೀಚರ್‌ ಫೋನ್‌ನಲ್ಲಿ ಫೈಲ್ ವಿಭಾಗದಲ್ಲಿ ದಾಖಲಿಸಲಾಗುತ್ತದೆ.
ಹಂತ 3: ನಂತರ, ನಿಮಗೆ ಬೇಕೆನಿಸಿದಾಗ ದಿನಾಂಕ, ಹೆಸರು ಮತ್ತು ಟೈಂ ಪ್ರಕಾರ ರೆಕಾರ್ಡಿಂಗ್ ಅನ್ನು ಹುಡುಕಲು ನಿಮಗೆ ಅವಕಾಸವನ್ನು ಸಹ ನೀಡಿದೆ.

Best Mobiles in India

Read more about:
English summary
However, if you are still looking for ways to use the Jio call recording app, then you should go through these tips and tricks.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X