ಯೂಟ್ಯೂಬ್‌ನಿಂದ ದುಡ್ಡಿನ ಹೊಳೆ ಹೇಗೆ?

By Suneel
|

ನೀವು ಕೂಡ ಯೂಟ್ಯೂಬ್ ನಲ್ಲಿ ಹಣ ಗಳಿಸಬಹುದು, ಪ್ರತಿದಿನ ಸಾವಿರಾರು ರೂಪಾಯಿಗಳವರೆಗೆ ಹಣವನ್ನು ಕುಳಿತ್ತಲೇ ಗಳಿಸಬಹುದಾಗಿದೆ. ನೀವು ನಿಮ್ಮ ಮೋಜಿಗಾಗಿ, ಮನೋರಂಜನೆಗಾಗಿ ಮಾಡುವ ವೀಡಿಯೊಗಳಿಂದಲೇ ಹಣ ಗಳಿಸಬಹುದು. ನಿಮ್ಮ ವೀಡಿಯೊಗಳನ್ನು ಯುಟ್ಯೂಬ್‌ನಲ್ಲಿ ಅಪಲೋಡ್ ಮಾಡಿ ಮತ್ತು ಯೂಟ್ಯುಬ್ ಜಾಹೀರಾತುಗಳಿಂದ ನಿರಂತರವಾಗಿ ಹಣ ಗಳಿಸಿ ಅದು ಸುಲಭವಾಗಿ, ಅದಕ್ಕಾಗಿ ಈ ಕೆಳಗಿನ ನಮ್ಮ ಮಾರ್ಗದರ್ಶನಗಳನ್ನು ಪಾಲಿಸಿ.

ಓದಿರಿ: ಹ್ಯಾಕರ್‌ಗಳ ಕಪಿಮುಷ್ಠಿಯಿಂದ ನಿಮ್ಮ ಖಾತೆಯ ಸಂರಕ್ಷಣೆ ಹೇಗೆ?

ನಿಮ್ಮದೇ ಆದ ಸ್ವಂತ ಚಾನಲ್ ಹೊಂದಿ

ನಿಮ್ಮದೇ ಆದ ಸ್ವಂತ ಚಾನಲ್ ಹೊಂದಿ

ನಿಮ್ಮದೆ ಆದ ಸ್ವಂತ ಯೂಟ್ಯೂಬ್ ಚಾನಲ್ ಹೊಂದಲು ಮೊದಲು ನಿಮ್ಮದೊಂದು ಯೂಟ್ಯೂಬ್ ಖಾತೆಯನ್ನುತೆರೆಯಿರಿ ಅಥವಾ ನಿಮ್ಮದೊಂದು ಜಿಮೇಲ್ ಖಾತೆಯನ್ನು ಹೊಂದಿದ್ದರು ಕೂಡ ನಡೆಯುತ್ತದೆ.

ಯೂಟ್ಯೂಬ್ ಸೆಟ್ಟಿಂಗ್

ಯೂಟ್ಯೂಬ್ ಸೆಟ್ಟಿಂಗ್

ನಿಮ್ಮ ಖಾತೆಯ ಯೂಟ್ಯೂಬ್ ಸೆಟ್ಟಿಂಗ್‌ಗಳ ನ್ಯಾವಿಗೇಟ್ ಸಹಾದಿಂದ ನಿಮಗೆ ಬೇಕಾದಂತಹ ಕೀವರ್ಡ್‌ಗಳನ್ನು ರಚಿಸಿಕೊಳ್ಳಿ. ನೆನಪಿರಲಿ ನಿಮ್ಮ ವಿಷಯಕ್ಕೆ ಸಂಬಂಧಿಸಿದಂತಹ ಕೀವರ್ಡ್‌ಗಳನ್ನು ಮಾತ್ರ ಬಳಸಿ.

ಚಿಕ್ಕದಾಗಿರಲಿ

ಚಿಕ್ಕದಾಗಿರಲಿ

ನಿಮ್ಮ ಬಳಕೆದಾರ ಹೆಸರು ಆದಷ್ಟು ಚಿಕ್ಕದಾಗಿ ಮತ್ತು ನಿಮ್ಮನ್ನು ಸುಲಭವಾಗಿ ಗುರುತಿಸುವಂತಿರಲಿ. ನಿಮ್ಮ ನಿಜವಾದ ಹೆಸರನ್ನು ಬಳಸುವುದರಿಂದ ಜನರು ನಿಮ್ಮನ್ನು ಬಹು ಬೇಗ ಗುರುತಿಸುತ್ತಾರೆ. ಒಂದು ವೇಳೆ ನೀವು ಇನ್ನೊಂದು ಖಾತೆ ಸೃಷ್ಟಿಸಿದರೂ ಕೂಡ ಜನ ನಿಮ್ಮನ್ನು ಗುರುತಿಸುತ್ತಾರೆ.

ವಿಷಯಗಳನ್ನು ಸೇರಿಸಿ

ವಿಷಯಗಳನ್ನು ಸೇರಿಸಿ

ನೀವು ಯಾವ ವಿಷಯವನ್ನು ತೋರಿಸಲು ಇಷ್ಟಪಡುತ್ತೀರೊ ಅದನ್ನು ಮೊದಲು ಸೇರಿಸಿ. ನೀವು ನಿಯಮಿತವಾಗಿ ಮತ್ತು ಸ್ಪಷ್ಟವಾದ ವೀಡಿಯೊಗಳನ್ನು ನಿರಂತರವಾಗಿ ಅಪ್‌ಲೋಡ್ ಮಾಡುತ್ತಿರಬೇಕು. ನೀವು ಮೊದಲ ಬಾರಿಗೆ ಒಳ್ಳೆಯ ವೀಡಿಯೊ ಅಪ್‌ಲೋಡ್ ಮಾಡಲು ಸಾಧ್ಯವಾಗದಿರಬಹುದು, ಆದರೆ ನಿರಂತರವಾಗಿ ಪ್ರಯತ್ನಿಸಿ ಯಶಸ್ಸು ಖಂಡಿತ

ಒಳ್ಳೆಯ ಕ್ಯಾಮೆರಾ

ಒಳ್ಳೆಯ ಕ್ಯಾಮೆರಾ

ನೀವು ಅಪ್‌ಲೋಡ್ ಮಾಡುವ ನಿಮ್ಮ ವೀಡಿಯೋಗಳು ಒಂದು ಒಳ್ಳೆಯ ಕ್ಯಾಮೆರಾ, ಸಂಕಲನ(ಎಡಿಟಿಂಗ್), ಉತ್ತಮವಾದ ಸಂಕಲನ(ಎಡಿಟಿಂಗ್) ತಂತ್ರಾಂಶಗಳನ್ನು ಬಳಸಿ. ಕ್ಯಾಮರಾದಿಂದ ವೀಡಿಯೊ ಮಾಡುವಾಗ ಟ್ರೈಪಾಡ್‌ನ್ನು ಬಳಸಿ, ಇದರಿಂದ ನಿಮ್ಮ ಚಿತ್ರ ಅಲುಗಾಡದಂತೆ ಸುಂದರವಾಗಿ ಮೂಡಿಬರುತ್ತದೆ. ವೀಡಿಯೊ ಮಾಡುವಾಗ ಬೆಳಕಿನ ಬಗ್ಗೆ ಗಮನವಿರಲಿ. ನಿಮ್ಮ ಒಳ್ಳೆಯ ವೀಡಿಯೊಗಳು ನಿಮಗೆ ಬಹಳಷ್ಟು ವೀಕ್ಷಕರನ್ನು ತಂದುಕೊಡುತ್ತದೆ.

ಯುಟ್ಯೂಬ್ ಹುಡುಕುವಿಕೆ

ಯುಟ್ಯೂಬ್ ಹುಡುಕುವಿಕೆ

ನೀವು ನಿಮ್ಮ ಚಾನಲ್‌ಗೆ ನಿಗದಿತ ವೇಳಾಪಟ್ಟಿಯನ್ನು ರಚಿಸಿಕಂಡು ಅದರಂತೆಯೇ ನಿಯಮಿತ ಸಮಯದಲ್ಲಿ ವೀಡಿಯೊ ಅಪ್‌ಲೋಡ ಮಾಡಿ ಇದರಿಂದ ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ನಿಮ್ಮ ವೀಡಿಯೊಗೆ ಸಂಬಂಧಪಟ್ಟ ಪ್ರಮುಖ ಪದಗಳನ್ನು ಟ್ಯಾಗ್ ಮಾಡಿ, ಇದರಿಂದ ಯುಟ್ಯೂಬ್ ಹುಡುಕುವಿಕೆಯಲ್ಲಿ ಸುಲಭವಾಗಿ ದೊರಕುತ್ತದೆ.

ವೀಕ್ಷಕರನ್ನು ಹೆಚ್ಚಿಸಿಕೊಳ್ಳಿ

ವೀಕ್ಷಕರನ್ನು ಹೆಚ್ಚಿಸಿಕೊಳ್ಳಿ

ನೀವು ಹಣ ಗಳಿಸಬೇಕಾದರೆ ನಿಮ್ಮ ಚಾನಲ್ ಅನ್ನು ಹಲವಾರು ಪ್ರೇಕ್ಷಕರ ನೋಡಬೇಕು. ಆಗಲೆ ನಿಮ್ಮ ಚಾನಲ್‌ನಲ್ಲಿ ಮೂಡುವ ಜಾಹೀರಾತುಗಳಿಂದ ನೀವು ಹೆಚ್ಚೆಚ್ಚು ಹಣ ಗಳಿಸಬಹುದು. ಪ್ರೇಕ್ಷಕರನ್ನು ಪಡೆಯಲು ಕೆಲವು ಉಪಾಯಗಳು. ಜನರಿಗೆ ಉಪಯೋಗ ಆಗುವಂತಹ ವಿಷಯಗಳ ಬಗ್ಗೆ ಅಪ್‌ಲೋಡ್ ಮಾಡಿ. ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್ ನಿಮ್ಮ ವೀಕ್ಷಕರ ಕಾಮೆಂಟ್ಸ್ ಮತ್ತು ಪ್ರಶ್ನೆಗಳಿಗೆ ಉತ್ತರಿಸಿ. ನಿಮ್ಮ ಸಂಪರ್ಕ ಸಂವಹನ ಸಾಧನದಿಂದ ಅತೀ ಹೆಚ್ಚು ವೀಕ್ಷಕರು ಇತ್ತ ಕಡೆ ಹೊರಳುತ್ತಾರೆ

ನಿಮ್ಮ ವೀಡಿಯೊದಿಂದ ಹಣಗಳಿಸಿ

ನಿಮ್ಮ ವೀಡಿಯೊದಿಂದ ಹಣಗಳಿಸಿ

ನಿಮ್ಮ ವೀಡಿಯೊ ಸಕ್ರಿಯವಾಗಿ ಯೂಟ್ಯೂಬಲ್ಲಿ ದಾಖಲಾದರೆ ನಿಮ್ಮ ಸ್ವಂತ ವೀಡಿಯೊ ಇದ್ಯಾವುದೋ ಇನ್ನೊಬ್ಬರ ವೀಡಿಯೊ ಅಲ್ಲಾ ಎನ್ನುವುದು ಖಚಿತವಾಗುತ್ತದೆ. ನಿಮ್ಮ ವೀಡಿಯೊ ಈಗ ಹಣ ಗಳಿಸಲು ಅರ್ಹತೆ ಗಳಿಸಿದೆ. ಅಂದರೆ ನಿಮ್ಮ ವೀಡಿಯೊದಲ್ಲಿ ಯೂಟ್ಯುಬ್ ತನ್ನ ಜಾಹೀರಾತುಗಳನ್ನು ಹಾಕಬಹುದಾಗಿದೆ. ನೀವು ನಿಮ್ಮ ವೀಡಿಯೊವನ್ನು "ಜಾಹೀರಾತುಗಳಿಂದ ಹಣಗಳಿಸಿ" ಎಂಬ ವಿಭಾಗದಲ್ಲಿ ಅಪ್‌ಲೋಡ್ ಮಾಡಿ

ಗೂಗಲ್ ಆಡ್ಸೆನ್ಸ್ ನಿರ್ವಹಿಸಿ

ಗೂಗಲ್ ಆಡ್ಸೆನ್ಸ್ ನಿರ್ವಹಿಸಿ

ನೀವು ಆಡ್ಸೆನ್ಸ್ ವೆಬ್ಸೈಟ್ ನಲ್ಲಿ ಉಚಿತವಾಗಿ ಅನ್ನು ಗೂಗಲ್ ಆಡ್ಸೆನ್ಸ್ ಮಾಡಬಹುದು. ನೀವು ಇಲ್ಲಿ ಖಾತೆ ತೆರೆಯಲು ಕನಿಷ್ಟ 18 ವರ್ಷದವರಾಗಿರಬೇಕು. ಇಲ್ಲದ್ದಿದ್ದಲ್ಲಿ ವಯಸ್ಕರ ಸಹಾಯ ಪಡೆದುಕೊಳ್ಳಿ.ನೀವು ನಿಮ್ಮ ನಿಖರವಾದ ಮೇಲಿಂಗ್ ವಿಳಾಸ ಮತ್ತು ಪೇಪಾಲ್ ಅಥವಾ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಇದನ್ನು ಪರೀಶಿಲಿಸಿದ ನಂತರವೇ ಅಡ್ವಾನ್ಸ್ ನಮಗೆ ಹಣ ಕಳಿಸುವುದು. ನೀವು ಒಂದು ಕ್ಲಿಕಿಗೆ ಇಂತಿಷ್ಟು ಎಂಬ ಚಿಕ್ಕ ಮೊತ್ತವನ್ನು ಪಡೆಯಬಹುದು. ಮುಂದೆ ನಿಮ್ಮ ಚಾನಲನ ನೋಡುಗರು ಹೆಚ್ಚಾದಂತೆ ಹೆಚ್ಚು ಹಣ ಗಳಿಸಬಹುದು. ಪ್ರೇಕ್ಷಕರೆ ನಿಮ್ಮ ಹಣ ಗಳಿಕೆಯ ಕೀಲಿ ಕೈ ಆಗಿದ್ದಾರೆ

ನಿಮ್ಮ ವಿಶ್ಲೇಷಣೆಯನ್ನು ಪರಿಶೀಲಿಸಿ

ನಿಮ್ಮ ವಿಶ್ಲೇಷಣೆಯನ್ನು ಪರಿಶೀಲಿಸಿ

ನೀವು ನಿಮ್ಮ ವೀಡಿಯೊಗಳನ್ನು ಈಗಾಗಲೇ ಅಪ್‌ಲೋಡ್ ಮಾಡಿದ್ದರು ಕೂಡ ಮತ್ತೊಮ್ಮೆ ಅವುಗಳ ವಿಶ್ಲೇಷಣೆಯನ್ನು ಬದಲಿಸಬಹುದು.ನಿಮ್ಮ ಚಾನೆಲ್ ಮೆನುವಿನಲ್ಲಿ ಅನಾಲಿಟಿಕ್ಸ್ ಆಯ್ಕೆಯನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ನಿಮ್ಮ ಆದಾಯ, ಜಾಹೀರಾತು ಪ್ರದರ್ಶನ, ವೀಕ್ಷಕರ ಸಂಖ್ಯೆಯನ್ನು ನೋಡಬಹುದು ಇದನ್ನು ನೋಡಿಕೊಂಡು ನಿಮ್ಮ ವಿಷಯವನ್ನು ಬದಲಿಸಿಕೊಳ್ಳಬಹುದು ಅಥವಾ ಪ್ರೇಕ್ಷಕರನ್ನು ಸೆಳೆಯುವಂತೆ ಉತ್ತಮ ಪಡಿಸಿಕೊಳ್ಳಬಹುದು.

Best Mobiles in India

English summary
You are very much fond of You tube we know about that. Users are using youtube for watching video and downloading movies. But you know the amazing facts about how to earn money through this site. Today we are guiding you on this matter.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X