ಹ್ಯಾಕರ್‌ಗಳ ಕಪಿಮುಷ್ಠಿಯಿಂದ ನಿಮ್ಮ ಖಾತೆಯ ಸಂರಕ್ಷಣೆ ಹೇಗೆ?

By Suneel
|

ಪ್ರಸ್ತುತ ದಿನಗಳಲ್ಲಿ ಅಂತರ್ಜಾಲದ ಬಳಕೆಯನ್ನು ನಾವು ಒಂದಿಲ್ಲೊಂದು ಕೆಲಸಗಳಿಗಾಗಿ ಮಾಡುತ್ತಿರುತ್ತೇವೆ. ಸಂವಹನ, ಮಾಹಿತಿ ಸಂಗ್ರಹಣೆ, ಬ್ಯಾಂಕ್ ಖಾತೆಗಳ ನಿರ್ವಹಣೆ ಹೀಗೆ ನಮ್ಮ ದೈನಂದಿನ ಜೀವನದಲ್ಲಿ ಅಂತರ್ಜಾಲದ ಬಳಕೆ ಸರ್ವೇ ಸಾಮಾನ್ಯವಾಗಿದೆ. ಆದರೆ ಇವುಗಳಿಂದ ನಮಗೆ ಸಹಾಯ ಹೇಗಿದೆಯೋ ಅಂತೆಯೇ ಅಪಾಯ ಕೂಡ ಇದೆ ಎಂಬುದನ್ನು ನೀವು ಮನಗಾಣಲೇಬೇಕು.

ಓದಿರಿ:ಆಂಡ್ರಾಯ್ಡ್ ಬಳಕೆದಾರರು ಪರಮ ಸುಖಿಗಳು

ಹೌದು ಹ್ಯಾಕರ್‌ಗಳಂತಹ ದುಷ್ಕರ್ಮಿಗಳು ನಿಮ್ಮ ಖಾತೆಯನ್ನು ಕಬಳಿಸಿ ನಿಮ್ಮನ್ನು ವಂಚಿಸುವ ಇಲ್ಲವೇ ಅಪಾಯಕ್ಕೆ ಸಿಲುಕಿಸುವ ಪ್ರಕರಣಗಳು ಇದೀಗ ಹೆಚ್ಚು ಹೆಚ್ಚು ಬೆಳಕಿಗೆ ಬರುತ್ತಿದೆ. ಒಂದು ಪ್ರಕರಣ ಎಂಬಂತೆ ಸೆಪ್ಟೆಂಬರ್ ತಿಂಗಳಿನಲ್ಲಿ ಮುಂಬೈ ಮೂಲದ ಬ್ಯುಸಿನೆಸ್ ಮ್ಯಾನ್ ಒಬ್ಬರ ಇಮೇಲ್ ಹ್ಯಾಕ್ ಮಾಡಿ 23 ಲಕ್ಷ ಹಣವನ್ನು ವಂಚಿಸಲಾಗಿದೆ. ಇಂತಹುದೇ ಘಟನೆಗಳು ಈಗೀಗ ಹೆಚ್ಚು ಹೆಚ್ಚು ಕಂಡುಬರುತ್ತಿದ್ದ ಇಂತಹ ಕೃತ್ಯಗಳಿಂದ ಬಚಾವಾಗಲು ಹ್ಯಾಕರ್‌ಗಳ ಸಂಚಿನ ಮಾರ್ಗವನ್ನು ನಾವು ಇಂದಿನ ಲೇಖನದಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಕ್ರೇಜಿ ಇಮೇಲ್‌ಗಳು

ಕ್ರೇಜಿ ಇಮೇಲ್‌ಗಳು

ನೆಟ್ ಬಳಕೆದಾರರು ತಮ್ಮ ವೈಯಕ್ತಿಕ ಬಳಕೆಗಾಗಿ ಇಮೇಲ್ ಅನ್ನು ಬಳಸುತ್ತಾರೆ. ತಮ್ಮ ಮೋಸದ ಜಾಲದಲ್ಲಿ ಬೀಳಿಸುವುದಕ್ಕಾಗಿ ಹ್ಯಾಕರ್‌ಗಳು ಇಂತಹ ಇಮೇಲ್‌ಗಳನ್ನು ಸುಲಭವಾಗಿ ಬಳಸುತ್ತಾರೆ.

ಸ್ಪ್ಯಾಮ್ ಇಮೇಲ್‌

ಸ್ಪ್ಯಾಮ್ ಇಮೇಲ್‌

ಅಪರಿಚಿತ ವ್ಯಕ್ತಿಗಳಿಂದ ಬರುವಂತಹ ಸ್ಪ್ಯಾಮ್ ಇಮೇಲ್‌ಗಳು ಇವುಗಳಾಗಿದ್ದು ಲಾಟರಿ ಗಳಿಸಿ, ಹಣ ಹೂಡಿಕೆ ಮಾಡಿ ಮೊದಲಾದ ಆಮಿಷವನ್ನೊಡ್ಡುವ ಮೇಲ್‌ಗಳನ್ನು ಇವುಗಳು ಹೊಂದಿರುತ್ತವೆ.

ಕೆಂಪು ಬಾವುಟ

ಕೆಂಪು ಬಾವುಟ

ಇಂತಹ ಇ-ಮೇಲ್‌ಗಳಿಗೆ ಕೆಂಪು ಬಾವುಟ ತೋರಿಸಬೇಕು. ಕೆಲವೊಂದು ಇ-ಮೇಲ್‌ಗಳು ಅಟ್ಯಾಚ್‌ಮೆಂಟ್‌ಗಳನ್ನು ಹೊಂದಿದ್ದು ಅವುಗಳ ಮೇಲೆ ಕ್ಲಿಕ್ ಮಾಡಿದಾಗ ವೈರಸ್ ಹಾಗೂ ಸ್ಟೈವೇರ್‌ಗಳು ಇನ್‌ಸ್ಟಾಲ್ ಆಗುತ್ತವೆ.

ವಂಚಿತ ಇ-ಮೇಲ್‌

ವಂಚಿತ ಇ-ಮೇಲ್‌

ಇಂತಹ ವಂಚಿತ ಇ-ಮೇಲ್‌ಗಳಿಂದ ಪಾರಾಗಲು ಡಾಕ್ಯುಮೆಂಟ್‌ಗಳನ್ನು ಡೌನ್‌ಲೋಡ್ ಮಾಡಬಾರದು ಅಥವಾ ಅಪರಿಚಿತ ವ್ಯಕ್ತಿಗಳ ಪೂರ್ಣವಿಳಾಸ ಕೇಳಬೇಕು.

ನಕಲಿ ವೆಬ್‌ಸೈಟ್‌/ಅಪ್ಲಿಕೇಶನ್‌ಗಳು

ನಕಲಿ ವೆಬ್‌ಸೈಟ್‌/ಅಪ್ಲಿಕೇಶನ್‌ಗಳು

ಕೆಲವೊಂದು ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೊದಲು ಅವುಗಳನ್ನು ಪೂರ್ಣವಾಗಿ ಪರಿಶೀಲಿಸಬೇಕು.

ಬ್ಯಾಂಕ್ ವೆಬ್‌ಸೈಟ್‌ಗಳು

ಬ್ಯಾಂಕ್ ವೆಬ್‌ಸೈಟ್‌ಗಳು

ಕೆಲವೊಂದು ಬ್ಯಾಂಕ್ ವೆಬ್‌ಸೈಟ್‌ಗಳು ನಕಲಿಯಾಗಿ ರೂಪಿತವಾಗಿರುತ್ತವೆ. ಅವುಗಳು ಕೆಲವೊಮ್ಮೆ ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ಕೇಳುತ್ತವೆ. ಒಂದು ವೇಳೆ ನೀವು ಲಾಗಿನ್ ಐಡಿ ಮತ್ತು ಪಾಸ್‌ವರ್ಡ್‌ ನೀಡಿದಲ್ಲಿ ವೆಬ್‌ಸೈಟ್ ತಯಾರಕರು ನಿಮ್ಮ ಖಾತೆ ಪ್ರವೇಶ ಮಾಡಬಹುದು.

ನಕಲಿ ಬ್ಯಾಂಕ್ ವೆಬ್‌ಸೈಟ್‌

ನಕಲಿ ಬ್ಯಾಂಕ್ ವೆಬ್‌ಸೈಟ್‌

ನಕಲಿ ಬ್ಯಾಂಕ್ ವೆಬ್‌ಸೈಟ್‌ಗಳನ್ನು ಕಂಡುಹಿಡಿಯಲು ನಿಮಗೆ ಬಂದಿರುವ ಇ-ಮೇಲ್‌ನಲ್ಲಿನ ಬ್ಯಾಂಕ್ ವೆಬ್‌ ವಿಳಾಸ ಹಿಂದೆ 'https', ಎಂದು ಇರುವುದನ್ನು ಖಚಿತ ಮಾಡಿಕೊಳ್ಳಿ. ಈ ರೀತಿ ಬಳಸುವ ಬ್ಯಾಂಕ್‌ಗಳು ಸುರಕ್ಷಿತ ಪ್ರಮಾಣ ಪತ್ರ ಹೊಂದಿರುತ್ತವೆ. ಎಲ್ಲಾ ಬ್ಯಾಂಕ್‌ಗಳೂ ಈ ಪ್ರಮಾಣ ಪತ್ರ ಹೊಂದಿರುತ್ತವೆ.

 ಡೆವಲಪರ್ ಹೆಸರು

ಡೆವಲಪರ್ ಹೆಸರು

ಇನ್‌ಸ್ಟಾಲ್ ಮಾಡಿಕೊಳ್ಳುವ ಅಪ್ಲಿಕೇಶನ್ ಡೆವಲಪರ್ ಹೆಸರು ತಿಳಿದುಕೊಳ್ಳಿ. ಆ ಮಾಹಿತಿ ಅಪ್ಲಿಕೇಶನ್ ಸ್ಟೋರ್‌ನಲ್ಲಿ ಲಭ್ಯವಿರುತ್ತದೆ. ನೀವು ಇನ್‌ಸ್ಟಾಲ್ ಮಾಡಹೊರಟಿರುವ ಅಪ್ಲಿಕೇಶನ್ ಬಗ್ಗೆ ವಿಮರ್ಶೆ ಓದಿಕೊಳ್ಳಿ. ಬ್ಯಾಂಕ್‌ ಅಪ್ಲಿಕೇಶನ್‌ಗಳನ್ನು ಅಧಿಕೃತ ಸ್ಟೋರ್‌ಗಳಿಂದ ಮಾತ್ರ ಡೌನ್‌ಲೋಡ್‌ ಮಾಡಿ ಉಪಯೋಗಿಸಿ.

ಉತ್ತಮ ಜಾಹಿರಾತುಗಳು ಸತ್ಯಕ್ಕೆ ಸನಿಹವೇ

ಉತ್ತಮ ಜಾಹಿರಾತುಗಳು ಸತ್ಯಕ್ಕೆ ಸನಿಹವೇ

ನೀವು ನೋಡಿದ ವಸ್ತುಗಳು, ಅಲ್ಲಿರುವ ಬೆಲೆಗೆ ಅಂದರೆ ಸಾಮಾನ್ಯವಾಗಿ ಕೇಳುವ ಬೆಲೆಗೆ ಸಿಗುವುದಾದರೆ ಕಂಡಿತ ಅದನ್ನು ಸ್ವಲ್ಪ ಪರಿಶೀಲಿಸಲೇ ಬೇಕು. ನೀವು ಅಂತರ್ಜಾಲದ ಮುಖಾಂತರ ರಿಯಾಯಿತಿ ಪಡೆಯಬಹುದು, ಆದರೆ ಚಿಲ್ಲರೆ ಬೆಲೆಗೆ 80 ಅಥವಾ 90% ರಿಯಾಯಿತಿ ಸಿಕ್ಕರೆ ಅದಕ್ಕೆ ಕೆಂಪು ಧ್ವಜ ತೋರಿಸಬೇಕು.

.ರಿಯಾಯಿತಿ ದರ

.ರಿಯಾಯಿತಿ ದರ

ರಿಯಾಯಿತಿ ದರ ಹಾಕುವ ಜನರು ಮೊದಲೇ ಹಣ ಕೇಳುವುದಿಲ್ಲ ಇದು ಒಂದು ರೀತಿ ಕೆಂಪು ಬಾವುಟ ತೋರಿಸಬಹುದಾದ ಸಂಗತಿ. ಕಳ್ಳತನ ಹಾಗೂ ಆಮದು ಮಾಡಿಕೊಂಡಿರುವ ವಸ್ತುಗಳಾಗಿರುತ್ತವೆ. ನಿಮಗೆ ಆ ವಸ್ತು ನಿಜವಾದದ್ದೇ ಎಂದೆನಿಸಿದಲ್ಲಿ ಮಾರಾಟಗಾರನ ಗುರುತಿನ ಪ್ರತಿ ತೆಗೆದುಕೊಳ್ಳುವುದನ್ನು ಮರೆಯಬೇಡಿ.

Best Mobiles in India

English summary
The internet is an integral part of our daily lives. We use it for communication, searching for information, making payments. Here are the some tips to over come out of this problems.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X