BSNLನಿಂದ ಬಿಗ್‌ ಆಫರ್‌! ಖಾಸಗಿ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳಿಗೆ ಬಿಗ್‌ ಶಾಕ್‌!

|

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಹಲವು ಅತ್ಯುತ್ತಮ ಬ್ರಾಡ್‌ಬ್ಯಾಂಡ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಮೂಲಕ ಖಾಸಗಿ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳಿಗೂ ಪೈಪೋಟಿ ನೀಡಿದೆ. BSNL ಪ್ರಸ್ತುತ ತನ್ನ ಭಾರತ್ ಫೈಬರ್ ಮತ್ತು ಡಿಜಿಟಲ್ ಸಬ್‌ಸ್ಕ್ರೈಬರ್‌ ಲೈನ್ (DSL) ಸೇವೆಯನ್ನು ನೀಡುತ್ತಿದೆ. ಇದೀಗ ಭಾರತ್ ಫೈಬರ್ ಮತ್ತು ಡಿಜಿಟಲ್ ಚಂದಾದಾರರ ಲೈನ್ ಸೇವೆಗಳಲ್ಲಿ ಗ್ರಾಹಕರಿಗೆ ನಾಲ್ಕು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆಯನ್ನು ನೀಡಲು ಮುಂದಾಗಿದೆ. ಲ್ಯಾಂಡ್‌ಲೈನ್ ಮತ್ತು ಬ್ರಾಡ್‌ಬ್ಯಾಂಡ್ ಓವರ್ ವೈ-ಫೈ (BBoWiFi) ಚಂದಾದಾರರಿಗೂ ಈ ಕೊಡುಗೆ ಮಾನ್ಯವಾಗಿದೆ.

ಬಿಎಸ್‌ಎನ್‌ಎಲ್‌

ಹೌದು, ಬಿಎಸ್‌ಎನ್‌ಎಲ್‌ ತನ್ನ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ನಾಲ್ಕು ತಿಂಗಳುಗಳ ಕಾಲ ಉಚಿತವಾಗಿ ನೀಡುವುದಾಗಿ ಘೋಷಿಸಿದೆ. ಈ ಮೂಲಕ ಖಾಸಗಿ ಬ್ರಾಡ್‌ಬ್ಯಾಂಡ್‌ ಸಂಸ್ಥೆಗಳಿಗೆ ಬಿಗ್‌ ಶಾಕ್‌ ನೀಡಿದೆ. ನಾಲ್ಕು ತಿಂಗಳ ಉಚಿತ ಬ್ರಾಡ್ ಬ್ಯಾಂಡ್ ಸೇವೆ ಮೂಲಕ ತನ್ನ ಗ್ರಾಹಕರನ್ನು ಸೆಳೆಯಲು ಬಿಎಸ್‌ಎನ್‌ಎಲ್‌ ಪ್ಲಾನ್‌ ರೂಪಿಸಿದೆ. ಹಾಗಾದ್ರೆ ಬಿಎಸ್‌ಎನ್‌ಎಲ್‌ ಬ್ರಾಡ್‌ಬ್ಯಾಂಡ್‌ ಸೇವೆಯನ್ನು ಉಚಿತವಾಗಿ ಪಡೆಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

BSNL

ಪ್ರಾರಂಭಿಕ ಹಂತದಲ್ಲಿ BSNL ತನ್ನ ಭಾರತ್ ಫೈಬರ್, DSL, ಸ್ಥಿರ ದೂರವಾಣಿ ಮತ್ತು BBoWiFi ಗ್ರಾಹಕರಿಗೆ ನಾಲ್ಕು ತಿಂಗಳ ಉಚಿತ ಬ್ರಾಡ್‌ಬ್ಯಾಂಡ್ ಸೇವೆಯನ್ನು 36 ತಿಂಗಳ ಸೇವೆಗೆ ಮುಂಗಡವಾಗಿ ಪಾವತಿಸಲು ವರದಿ ಮಾಡಿದೆ. ಇದರಿಂದ 36 ತಿಂಗಳ ಸೇವೆ 40 ತಿಂಗಳವರೆಗೆ ಸೇವೆಗಳನ್ನು ನೀಡಲಿದೆ. ಏಕಕಾಲಕ್ಕೆ 24 ತಿಂಗಳ ಮುಂಗಡ ಬಾಡಿಗೆ ಪಾವತಿಸುವ ಗ್ರಾಹಕರಿಗೆ ಮೂರು ತಿಂಗಳ ಹೆಚ್ಚುವರಿ ಉಚಿತ ಸೇವೆಯನ್ನು ನೀಡಲಾಗುತ್ತಿದೆ. 12 ತಿಂಗಳುಗಳ ಮುಂಚಿತವಾಗಿ ಬಾಡಿಗೆ ಪಾವತಿಸುವ ಚಂದಾದಾರರು ಹೆಚ್ಚುವರಿ ತಿಂಗಳ ಸೇವೆಗಳನ್ನು ಉಚಿತವಾಗಿ ಪಡೆಯಲು ಅರ್ಹರಾಗಿರುತ್ತಾರೆ.

ಬಿಎಸ್‌ಎನ್‌ಎಲ್‌ನಲ್ಲಿ ಹೆಚ್ಚುವರಿ ಸೇವೆಗಳ ಆಫರ್‌ ಪಡೆಯುವುದು ಹೇಗೆ?

ಬಿಎಸ್‌ಎನ್‌ಎಲ್‌ನಲ್ಲಿ ಹೆಚ್ಚುವರಿ ಸೇವೆಗಳ ಆಫರ್‌ ಪಡೆಯುವುದು ಹೇಗೆ?

ಬಿಎಸ್‌ಎನ್‌ಎಲ್‌ನಲ್ಲಿ ಹೆಚ್ಚುವರಿ ಸೇವೆಗಳ ಆಫರ್‌ ಪಡೆಯಲು, ಗ್ರಾಹಕರು ಟೋಲ್ ಫ್ರೀ ಸಂಖ್ಯೆ 1800003451500ಗೆ ಕರೆ ಮಾಡಬೇಕು. ಇಲ್ಲವೇ ಮುಂಗಡ ಬಾಡಿಗೆ ಪಾವತಿಸಿದ ನಂತರ ನಿಮ್ಮ ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ ಭೇಟಿ ನೀಡಬೇಕಾಗುತ್ತದೆ. ಬಿಎಸ್‌ಎನ್‌ಎಲ್ ಫ್ರೀ ಸೇವಾ ಕೊಡುಗೆಯ ಹೊರತಾಗಿ ಇತ್ತೀಚೆಗೆ ತನ್ನ ಎಲ್ಲಾ ಭಾರತ್ ಫೈಬರ್ ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಕ್ರಮಬದ್ಧಗೊಳಿಸಿದೆ. ಸದ್ಯ ಭಾರತ್ ಫೈಬರ್ ಪ್ಲಾನ್‌ಗಳು ಈಗ 449ರೂ.ಗಳಿಂದ ಆರಂಭವಾಗಿ 1,499ರೂ.ಗಳಿಗೆ ಲಭ್ಯವಿದೆ.

BSNL

ಇನ್ನು BSNL ಇತ್ತೀಚೆಗಷ್ಟೇ ಅಸ್ತಿತ್ವದಲ್ಲಿರುವ ಲ್ಯಾಂಡ್‌ಲೈನ್ ಬಳಕೆದಾರರಿಗೆ ತನ್ನ ಆಫರ್‌ಗಳಲ್ಲಿ ಒಂದನ್ನು ಮತ್ತೆ ಪರಿಚಯಿಸಿದೆ. ತನ್ನ ಎಲ್ಲಾ ಕಾಪರ್ ಲ್ಯಾಂಡ್‌ಲೈನ್ ಬಳಕೆದಾರರಿಗೆ ಅದೇ ಸಂಖ್ಯೆಯೊಂದಿಗೆ ಭಾರತ್ ಫೈಬರ್ FTTH ಸಂಪರ್ಕಕ್ಕೆ ಹೋಗಲು ಹಣಕಾಸಿನ ಪ್ರೋತ್ಸಾಹವನ್ನು ನೀಡಲು ಮುಂದಾಗಿದೆ. ಈ ಆಫರ್ ಅಡಿಯಲ್ಲಿ, ಅಕ್ಟೋಬರ್ 6 ರಿಂದ 90 ದಿನಗಳವರೆಗೆ ಮಾನ್ಯತೆ ಸಿಗಲಿದೆ. ಕಂಪನಿಯು ತನ್ನ ಗ್ರಾಹಕರಿಗೆ ಫೈಬರ್ ಸಂಪರ್ಕಕ್ಕೆ ವಲಸೆ ಬಂದ ನಂತರ ಮೊದಲ ಆರು ತಿಂಗಳಿಗೆ ಮಾಸಿಕ ಬಿಲ್‌ಗಳಲ್ಲಿ 100 ರೂಪಾಯಿ ರಿಯಾಯಿತಿ ನೀಡಲಿದೆ.

ಬಿಎಸ್‌ಎನ್‌ಎಲ್‌

ಬಿಎಸ್‌ಎನ್‌ಎಲ್‌ ಸಂಸ್ಥೆ ತನ್ನ ಪ್ರಮೋಷನಲ್‌ ಪ್ಲಾನ್‌ ಅವಧಿಯನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಈ ಪ್ರಮೋಷನಲ್‌ ಪ್ಲಾನ್‌ನ ಅವಧಿ ಸೆಪ್ಟೆಂಬರ್ 28ಕ್ಕೆ ಕೊನೆಯಾಗಿತ್ತು. ಅದನ್ನು ಇನ್ನೂ 90 ದಿನಗಳವರೆಗೆ ವಿಸ್ತರಿಸಿದೆ. ಈ ಪ್ಲಾನ್‌ 0.5GB ದೈನಂದಿನ ಡೇಟಾ, ಅನಿಯಮಿತ ಕರೆಗಳು ಮತ್ತು ದಿನಕ್ಕೆ 100 SMS ಪ್ರಯೋಜನವನ್ನು ನೀಡಲಿದೆ. ಸದ್ಯ ಈ ಯೋಜನೆಯನ್ನು ಈಗ ಮೂರು ತಿಂಗಳವರೆಗೆ ವಿಸ್ತರಿಸಲಾಗಿದೆ.

ಬಿಎಸ್‌ಎನ್‌ಎಲ್‌

ಸದ್ಯ ಬಿಎಸ್‌ಎನ್‌ಎಲ್‌ ತನ್ನ ಪ್ರಮೋಷನಲ್‌ ಪ್ಲಾನ್‌ 699ರೂ ಪ್ಲಾನ್‌ ಅನ್ನು ಇದೀಗ ಜನವರಿವರೆಗೆ ವಿಸ್ತರಿಸಿದೆ. ಬಳಕೆದಾರರು ಈ ಪ್ರಿಪೇಯ್ಡ್ ಪ್ಲಾನ್‌ ಅನ್ನು ರಿಟೇಲ್‌ ಸ್ಟೋರ್‌ಗಳ ಮೂಲಕ, 123ಗೆ SMS ಕಳುಹಿಸುವ ಮೂಲಕ ಅಥವಾ USSD ಕಿರುಸಂಕೇತವನ್ನು ಡಯಲ್ ಮಾಡುವ ಮೂಲಕ ಪಡೆಯಬಹುದು. ಸದ್ಯ ಈ ಬೆಳವಣಿಗೆಯನ್ನು ಕೇರಳ ಟೆಲಿಕಾಂ ಮೊದಲು ವರದಿ ಮಾಡಿದೆ. ಇನ್ನು ಈ ಪ್ಲಾನ್‌ ಅನಿಯಮಿತ ಕರೆ ಹಾಗೂ ಡೈಲಿ 100 ಸಂದೇಶ ಪ್ರಯೋಜನವನ್ನು ಒಳಗೊಂಡಿದೆ. ಅಧಿಕ ಡೇಟಾ ಬಯಸದೆ ಅಧಿಕ ವ್ಯಾಲಿಡಿಟಿ ಬಯಸುವ ಬಳಕೆದಾರರಿಗೆ BSNL ನ 699 ರೂ.ಪ್ಲಾನ್‌ ಸೂಕ್ತವಾಗಿದೆ.

Most Read Articles
Best Mobiles in India

Read more about:
English summary
BSNL also has a free broadband service offer for those who can pay advance rent for 24 months.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X