ನಥಿಂಗ್‌ ಫೋನ್‌ (1) ಪ್ರಿ ಆರ್ಡರ್‌ ಮಾಡುವ ಮುನ್ನ ಈ ಸ್ಟೋರಿ ಓದಿರಿ!

|

ಕಳೆದ ಕೆಲವು ದಿನಗಳಿಂದ ಟೆಕ್‌ ವಲಯದಲ್ಲಿ ನಥಿಂಗ್ ಫೋನ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಇದೇ ಮೊದಲ ಭಾರಿಗೆ ಮೊಬೈಲ್‌ ಮಾರುಕಟ್ಟೆಗೆ ಎಂಟ್ರಿ ನೀಡುತ್ತಿರುವ ನಥಿಂಗ್‌ ಫೋನ್‌ ಬಿಡುಗಡೆಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ತನ್ನ ವಿಭಿನ್ನ ಹೆಸರು ಹಾಗೂ ವಿಶೇಷ ವಿನ್ಯಾಸದ ಕಾರಣಕ್ಕೆ ಸದ್ದು ಮಾಡ್ತಿದೆ. ಈಗಾಗಲೇ ಹಲವು ಮೊಬೈಲ್‌ ಬ್ರ್ಯಾಂಡ್‌ಗಳು ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸುತ್ತಿವೆ, ಇದರ ನಡುವೆ ನಥಿಂಗ್‌ ಫೋನ್‌ ಕೂಡ ಹೊಸ ಟ್ರೆಂಡ್‌ ಸೆಟ್‌ ಮಾಡುವ ಗುರಿಯನ್ನು ಹೊಂದಿದೆ.

ನಥಿಂಗ್‌ ಫೋನ್‌ (1)

ಹೌದು, ನಥಿಂಗ್‌ ಫೋನ್‌ (1) ಲಾಂಚ್‌ ಡೇಟ್‌ ಹತ್ತಿರ ಬರ್ತಿದ್ದ ಹಾಗೇ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ. ಸದ್ಯ ನಥಿಂಗ್‌ ಫೋನ್‌ (1) ಭಾರತದಲ್ಲಿ ಪ್ರಿ ಆರ್ಡರ್‌ ಮಾಡುವುದರ ಬಗ್ಗೆ ಸಾಕಷ್ಟು ವಿವರಗಳು ಕಾಣಿಸಿಕೊಂಡಿವೆ. ಈಗಾಗಲೇ ಆನ್‌ಲೈನ್‌ನಲ್ಲಿ ನಥಿಂಗ್‌ ಫೋನ್‌ (1) ಫೀಚರ್ಸ್‌ಗಳು ಸೋರಿಕೆಯಾಗಿವೆ. ಇದೀಗ ಟಿಪ್‌ಸ್ಟರ್ ಮುಕುಲ್ ಶರ್ಮಾ ನಥಿಂಗ್‌ ಫೋನ್‌ (1) ಅಧಿಕೃತ ಅನಾವರಣಕ್ಕೆ ಮುಂಚಿತವಾಗಿ ಭಾರತೀಯ ಮಾರುಕಟ್ಟೆಯ ಪ್ರಿ-ಆರ್ಡರ್ ಪಾಸ್ ವಿವರಗಳನ್ನು ಸೋರಿಕೆ ಮಾಡಿದ್ದಾರೆ.

ನಥಿಂಗ್‌

ಭಾರತದಲ್ಲಿ ನಥಿಂಗ್‌ ಫೋನ್‌ (1) ಪ್ರಿ ಆರ್ಡರ್‌ ಮಾಡುವುದಕ್ಕೆ ನೀವು ಪಾಸ್‌ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ. ನೀವು ನಥಿಂಗ್ ಫೋನ್ ಅನ್ನು ಪ್ರಿ ಆರ್ಡರ್‌ ಮಾಡುವುದಕ್ಕೆ ಏನೆಲ್ಲಾ ಮಾಡಬೇಕು ಎನ್ನುವ ವಿವರಗಳನ್ನು ಟಿಪ್‌ಸ್ಟರ್‌ ಮುಕುಲ್‌ ಶರ್ಮಾ ಸೋರಿಕೆ ಮಾಡಿದ್ದಾರೆ. ಅಲ್ಲದೆ ಫೋನ್‌ ಬುಕ್‌ ಮಾಡುವಾಗ ಭದ್ರತಾ ಠೇವಣಿಯನ್ನು ಪಾವತಿಸಬೇಕು ಎನ್ನುವ ಅಂಶವನ್ನು ಕೂಡ ಬಹಿರಂಗಪಡಿಸಿದ್ದಾರೆ. ಹಾಗಾದ್ರೆ ನಥಿಂಗ್‌ ಫೋನ್‌ (1) ಅನ್ನು ನೀವು ಪ್ರಿ-ಆರ್ಡರ್ ಮಾಡಬೇಕಾದರೆ ಪ್ರಿ ಆರ್ಡರ್‌ ಪಾಸ್ ಬುಕ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ನಥಿಂಗ್ ಫೋನ್ (1) ಪ್ರಿ-ಆರ್ಡರ್ ಪಾಸ್

ಈಗಾಗಲೇ ಬಹಿರಂಗವಾಗಿರುವ ಮಾಹಿತಿ ಪ್ರಕಾರ ನಥಿಂಗ್ ಫೋನ್ (1) ಭಾರತದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಜುಲೈ 12 ರಂದು ಬಿಡುಗಡೆಯಾಗಲಿದೆ. ಅದೇ ದಿನ ನಥಿಂಗ್ ಫೋನ್ (1) ಖರೀದಿಸಲು ಬಯಸುವ ಗ್ರಾಹಕರು ಫ್ಲಿಪ್‌ಕಾರ್ಟ್‌ಗೆ ಲಾಗ್‌ ಇನ್‌ ಮಾಡಿ, ನಥಿಂಗ್ ಫೋನ್ (1) ಮಾದರಿಯನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೆ ಪ್ರಿ-ಆರ್ಡರ್ ಪಾಸ್ ಪಡೆಯಲು ಭದ್ರತಾ ಠೇವಣಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.

ಅಂದರೆ ನಥಿಂಗ್ ಫೋನ್ (1) ಅನ್ನು ಪ್ರಿ ಆರ್ಡರ್‌ ಮಾಡಲು ಬಯಸುವವರು ಮೊದಲಿಗೆ 2,000 ರೂಪಾಯಿಗಳನ್ನು ಭದ್ರತಾ ಠೇವಣಿಯಾಗಿ ಪಾವತಿಸಬೇಕಾಗುತ್ತದೆ. ಭದ್ರತಾ ಠೇವಣಿಯನ್ನು ಪಾವತಿಸುವ ಮೂಲಕ ಪ್ರಿ-ಆರ್ಡರ್ ಪಾಸ್ ಅನ್ನು ಖರೀದಿಸಬೇಕಾಗುತ್ತದೆ. ಇನ್ನು ಪ್ರಿ-ಆರ್ಡರ್‌ ಪಾಸ್‌ ಬುಕ್ಕಿಂಗ್‌ಗಾಗಿ ತೆರೆಯಲಾಗುವ ಫ್ಲಿಪ್‌ಕಾರ್ಟ್‌ ವಿಂಡೋ ಅದೇ ದಿನ 9:00PM ಕ್ಕೆ ತೆರೆಯುತ್ತದೆ. ಇದರ ಮೂಲಕ ನೀವು ನಥಿಂಗ್ ಫೋನ್ (1) ಅನ್ನು ಮುಂಗಡವಾಗಿ ಆರ್ಡರ್ ಮಾಡಲು ಸಾಧ್ಯವಾಗುತ್ತದೆ. ಒಂದು ವೇಳೆ ನೀವು ಈ ಪಾಸ್ ಅನ್ನು ಪಡೆದುಕೊಳ್ಳಲು ವಿಫಲವಾದರೆ, ನಂತರದ ಹಂತದಲ್ಲಿ ನೀವು ನಥಿಂಗ್ ಫೋನ್ ಅನ್ನು ಪ್ರಿ ಆರ್ಡರ್ ಮಾಡಲು ಸಾಧ್ಯವಾಗುವುದಿಲ್ಲ.

ನಥಿಂಗ್

ಇನ್ನು ನೀವು ನಥಿಂಗ್ ಫೋನ್ (1) ಖರೀದಿಸುವ ಮುನ್ನವೇ ಪ್ರಿ ಆರ್ಡರ್‌ಗಾಗಿ ಪಾವತಿಸುವ ಭದ್ರತಾ ಠೇವಣಿ ಹಣ ಫೋನ್‌ನ ಅಂತಿಮ ಬೆಲೆಯಿಂದ ಕಡಿತಗೊಳಿಸಲಾಗುವುದು ಎಂದು ಹೇಳಲಾಗಿದೆ. ಇದರ ಜೊತೆಗೆ, ಪ್ರಿ ಆರ್ಡರ್‌ ಪಾಸ್ ಅನ್ನು ಖರೀದಿಸು ಗ್ರಾಹಕರಿಗೆ ಕೆಲವು ವಿಶೇಷ ಬಹುಮಾನಗಳು ಕೂಡ ಲಭ್ಯವಾಗಲಿದೆ, ಇದರಲ್ಲಿ ಫ್ರೀಯಾಗಿ ಮೊಬೈಲ್‌ ಪಡೆದುಕೊಳ್ಳುವ ಅವಕಾಶವೂ ಕೂಡ ದೊರೆಯಲಿದೆ. ಅಂದರೆ ನಥಿಂಗ್ ಫೋನ್ (1) ಅನ್ನು ಖರೀದಿಸಲು ಬಯಸುವವರು ಪ್ರಿ ಆರ್ಡರ್‌ ಮಾಡುವಾಗ ಲಭ್ಯವಾಗುವ ಬಹುಮಾನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಪ್ರೀಯಾಗಿ ದೊರೆಯುವ ಅವಕಾಶವನ್ನು ಸಹ ನೀಡಲಾಗಿದೆ.

ನಥಿಂಗ್ ಫೋನ್ (1) ಫೀಚರ್ಸ್‌ ಹೇಗಿದೆ?

ನಥಿಂಗ್ ಫೋನ್ (1) ಫೀಚರ್ಸ್‌ ಹೇಗಿದೆ?

ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ ನಥಿಂಗ್ ಫೋನ್ (1) 6.55 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ OLED ಡಿಸ್‌ಪ್ಲೇ ಅನ್ನು ಹೊಂದಿರಲಿದೆ. ಇನ್ನು ಈ ಡಿಸ್‌ಪ್ಲೇ 2400 × 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಈ ಡಿಸ್‌ಪ್ಲೇ 90Hz ನ ಸ್ಕ್ರೀನ್ ರಿಫ್ರೆಶ್ ರೇಟ್‌ ಹೊಂದಿರುವ ಸಾಧ್ಯತೆಯಿದೆ. ಇದು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 7 Gen 1 ಪ್ರೊಸೆಸರ್‌ ಬಲವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಜೊತೆಗೆ ಅಡ್ರೆನೊ GPU ಸಪೋರ್ಟ್‌ ಸಹ ಪಡೆದಿರುವ ನಿರೀಕ್ಷೆಯಿದೆ. ಈ ಫೋನ್‌ ಆಂಡ್ರಾಯ್ಡ್ 12 ಆಧಾರಿತ ನಥಿಂಗ್ ಓಎಸ್‌ನಲ್ಲಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಲಾಗಿದೆ.

ಇದಲ್ಲದೆ ಈ ಸ್ಮಾರ್ಟ್‌ಫೋನ್ 8GB RAM ಮತ್ತು 128 GB ಯ ಸ್ಟೋರೇಜ್ ವೇರಿಯಂಟ್‌ ಆಯ್ಕೆಯಲ್ಲಿ ಬರಲಿದೆ ಎಂದು ಅಂದಾಜಿಸಲಾಗಿದೆ. ಇದು ಮಾತ್ರವಲ್ಲದೆ ಇದಕ್ಕೂ ಹೆಚ್ಚಿನ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಯಲ್ಲಿ ಬಂದರೂ ಅಚ್ಚರಿಯಿಲ್ಲ ಎಂದು ಸಹ ಹೇಳಲಾಗಿದೆ. ಇದರೊಂದಿಗೆ ಫೋನ್‌ನ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕಾಗಿ ಮೈಕ್ರೋ ಎಸ್‌ಡಿ ಕಾರ್ಡ್‌ ಬೆಂಬಲಿಸುವ ಅವಕಾಶವನ್ನು ನೀಡಲಿದೆ ಎನ್ನಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ. ಇದು 45W ವೈರ್ಡ್ ಚಾರ್ಜಿಂಗ್ ಚಾರ್ಜಿಂಗ್ ಬೆಂಬಲಿಸಲಿದೆ ಎಂದು ವರದಿಯಾಗಿದೆ. ಆದರೆ ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ವಿಶೇಷತೆ ಹೇಗಿರಲಿದೆ ಎಂಬುದರ ವಿವರ ಇನ್ನು ಬಹಿರಂಗವಾಗಿಲ್ಲ.

ಭಾರತದಲ್ಲಿ ಬೆಲೆ ಎಷ್ಟಿರಲಿದೆ?

ಭಾರತದಲ್ಲಿ ಬೆಲೆ ಎಷ್ಟಿರಲಿದೆ?

ನಥಿಂಗ್ ಫೋನ್‌ನ (1) ಸ್ಮಾರ್ಟ್‌ಫೋನ್‌ ಭಾರತದಲ್ಲಿ ಯಾವ ಬೆಲೆಯಲ್ಲಿ ಬರಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಫೋನ್‌ನ ಫೀಚರ್ಸ್‌ಗಳನ್ನು ಗಮನಿಸಿದರೆ ಈ ಫೋನ್‌ 40,000ರೂ.ಗಳಿಂದ 50,000ರೂ. ವರೆಗಿನ ಬೆಲೆಯಲ್ಲಿ ಲಭ್ಯವಾಗುವ ಸಾದ್ಯತೆಯಿದೆ. ಈಗಾಗಲೇ ನಥಿಂಗ್‌ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ ತನ್ನನ್ನು ಪ್ರೀಮಿಯಂ ಬ್ರ್ಯಾಂಡ್ ಎಂದು ಹೇಳಿರುವುದರಿಂದ ಬೆಲೆಯ ಬಗ್ಗೆ ನಿಖರತೆಯನ್ನು ಹೇಳಲು ಸಾಧ್ಯವಿಲ್ಲ.

Most Read Articles
Best Mobiles in India

English summary
The Nothing phone is expected to be priced between Rs 40,000 to Rs 50,000 in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X