ಇನ್‌ಸ್ಟಾಗ್ರಾಮ್‌ ಖಾತೆಯನ್ನು ಫೇಸ್‌ಬುಕ್‌ಗೆ ಲಿಂಕ್ ಮಾಡುವುದು ಹೇಗೆ?

|

ಇದು ಸೊಶೀಯಲ್‌ ಮೀಡಿಯಾ ಜಮಾನ. ಟೆಕ್ನಾಲಜಿ ಆಪ್ಡೇಟ್‌ ಆದಂತೆ ಹೊಸ ಮಾದರಿಯ ಆಪ್ಡೇಟ್‌ಗಳನ್ನ ಸೊಶೀಯಲ್‌ ಮೀಡಿಯಾ ಆಪ್‌ಗಳು ನೀಡುತ್ತಲೇ ಇವೆ. ಸದ್ಯ ಜನಪ್ರಿಯ ಸೊಶೀಯಲ್‌ ಮೀಡಿಯಾ ಆಪ್‌ಗಳಲ್ಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಕೂಡ ಸೇರಿವೆ. ಇನ್ನು ಈ ಎರಡು ಆಪ್‌ಗಳು ಬಳಕೆದಾರರಿಗೆ ಹಲವಾರು ಫೀಚರ್ಸ್‌ಗಳನ್ನು ಪರಿಚಯಿಸಿವೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ನಿವು ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದರೆ, ನಿಮ್ಮ ಹೊಸ ಫೋಟೋಗಳನ್ನು ನೇರವಾಗಿ ಫೇಸ್‌ಬುಕ್‌ನಲ್ಲೂ ಕೂಡ ಶೇರ್‌ ಮಾಡಬಹುದು. ಈ ಎರಡು ಅಕೌಂಟ್‌ಗಳನ್ನು ಲಿಂಕ್‌ ಮಾಡಲು ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಮ್‌ ಆಪ್‌ಗಳು ಅವಕಾಶ ನೀಡಿವೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ಎರಡು ಖಾತೆಗಳನ್ನು ನೀವು ಹೊಂದಿದ್ದು, ಎರಡು ಖಾತೆಗಳಲ್ಲಿ ಒಂದೇ ಬಾರಿಗೆ ನೀವು ಫೋಟೋಗಳನ್ನ ಶೇರ್‌ ಮಾಡಬಹುದಾಗಿದೆ.ಈ ಎರಡೂ ಖಾತೆಗಳನ್ನು ಲಿಂಕ್ ಮಾಡಲು ಅವಕಾಶವಿರುವುದರಿಂದ ನೀವು ಎರಡು ಬಾರಿ ಫೋಟೋಗಳನ್ನು ಹಂಚಿಕೊಳ್ಳಬೇಕಾಗಿಲ್ಲ, ಅದು ನಿಮ್ಮ ಸಮಯವನ್ನು ವ್ಯರ್ಥ ಮಾಡುತ್ತದೆ. ನೀವು ಎರಡೂ ಸೊಶೀಯಲ್ ಮೀಡಿಯಾ ಅಕೌಂಟ್‌ಗಳನ್ನು ಲಿಂಕ್ ಮಾಡಿದರೆ, ನೀವು ಪಾಸ್‌ವರ್ಡ್ ಅನ್ನು ನಮೂದಿಸದೆ ಸುಲಭವಾಗಿ Instagram ಗೆ ಲಾಗ್ ಇನ್ ಮಾಡಬಹುದಾಗಿದೆ.

ಫೇಸ್‌ಬುಕ್

ಇನ್ನು ನೀವು ನಿಮ್ಮ ಖಾತೆಗಳನ್ನು ಲಿಂಕ್ ಮಾಡುವುದರಿಂದ ನಿಮ್ಮ ಫೇಸ್‌ಬುಕ್ ಸ್ನೇಹಿತರಿಗೆ ನಿಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್ ಅನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಹಾಗಾದ್ರೆ ನೀವು ನಿಮ್ಮ Instagram ಖಾತೆಯನ್ನು ನೀವು ಫೇಸ್‌ಬುಕ್‌ನೊಂದಿಗೆ ಹೇಗೆ ಲಿಂಕ್ ಮಾಡಬಹುದು ಅಥವಾ ಅನ್‌ಲಿಂಕ್ ಮಾಡಬಹುದು ಅನ್ನುವುದನ್ನು ಹಂತ ಹಂತವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

Instagram ಮತ್ತು Facebook ಖಾತೆಯನ್ನು ಲಿಂಕ್ ಮಾಡುವುದು ಹೇಗೆ?

Instagram ಮತ್ತು Facebook ಖಾತೆಯನ್ನು ಲಿಂಕ್ ಮಾಡುವುದು ಹೇಗೆ?

ಹಂತ 1: ನೀವು ನಿಮ್ಮ Instagram ಪ್ರೊಫೈಲ್‌ಗೆ ಹೋಗಿ ಮತ್ತು ಮೂರು-ಚುಕ್ಕೆಗಳ ಮೆನು ಟ್ಯಾಪ್ ಮಾಡಿ. ನಂತರ ನೀವು ಸೆಟ್ಟಿಂಗ್ಸ್‌ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

ಹಂತ 2: ಖಾತೆ> ಲಿಂಕ್ ಮಾಡಿದ ಖಾತೆಗಳನ್ನು ಟ್ಯಾಪ್ ಮಾಡಿ.

ಹಂತ 3: ಫೇಸ್‌ಬುಕ್ ಟ್ಯಾಪ್ ಮಾಡಿ ಮತ್ತು ನಿಮ್ಮ ಫೇಸ್‌ಬುಕ್ ಲಾಗಿನ್ ಮಾಹಿತಿಯನ್ನು ನಮೂದಿಸಿ. ಒಮ್ಮೆ ನೀವು ಖಾತೆಗಳನ್ನು ಲಿಂಕ್ ಮಾಡಿದ ನಂತರ, ನೀವು ಶೀರ್ಷಿಕೆಯನ್ನು ಸೇರಿಸುವ ಅದೇ ಪರದೆಯಿಂದ ಯಾವುದೇ ಪೋಸ್ಟ್ ಅನ್ನು ಫೇಸ್‌ಬುಕ್‌ಗೆ ಹಂಚಿಕೊಳ್ಳುವ ಆಯ್ಕೆಯನ್ನು ಸಹ ನೀವು ಪಡೆಯಬಹುದಾಗಿದೆ.

ನಿಮ್ಮ ಫೇಸ್‌ಬುಕ್ ಖಾತೆಗೆ ಅನ್‌ಲಿಂಕ್ ಮಾಡುವುದು ಹೇಗೆ?

ನಿಮ್ಮ ಫೇಸ್‌ಬುಕ್ ಖಾತೆಗೆ ಅನ್‌ಲಿಂಕ್ ಮಾಡುವುದು ಹೇಗೆ?

ಹಂತ 1: ನೀವು ನಿಮ್ಮ ಪ್ರೊಫೈಲ್‌ಗೆ ಹೋಗಿ ಮತ್ತು ಮೇಲಿನ ಬಲ ಮೂಲೆಯಲ್ಲಿ ಇರಿಸಲಾಗಿರುವ ಮೂರು-ಚುಕ್ಕೆಗಳ ಗುಂಡಿಯನ್ನು ಒತ್ತಿ.

ಹಂತ 2: ಸೆಟ್ಟಿಂಗ್‌ಗಳು> ಖಾತೆ> ಲಿಂಕ್ ಮಾಡಿದ ಖಾತೆಗಳನ್ನು ಟ್ಯಾಪ್ ಮಾಡಿ.

ಹಂತ 3: ಫೇಸ್‌ಬುಕ್ ಟ್ಯಾಪ್ ಮಾಡಿ, ತದನಂತರ "ಅನ್‌ಲಿಂಕ್ ಖಾತೆ" (ಐಫೋನ್) ಅಥವಾ "ಅನ್‌ಲಿಂಕ್" (ಆಂಡ್ರಾಯ್ಡ್) ಟ್ಯಾಪ್ ಮಾಡಿ. ನಂತರ ನೀವು ಖಚಿತಪಡಿಸಲು "Yes, Unlink" ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

Best Mobiles in India

English summary
We have listed the steps of how you can link or unlink your Instagram account with Facebook.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X