ಲಾಕ್‌ಡೌನ್ ಸಮಯದಲ್ಲಿ ಹೇಗಿರಬೇಕು ಅನ್ನೊದಕ್ಕೆ ಗೂಗಲ್‌ನಿಂದ ಟಿಪ್ಸ್‌ !

|

ಕೋವಿಡ್ -19 ಇಡೀ ಜಗತ್ತನೇ ಕಾಡುತ್ತಿದೆ. ಇದೇ ಕಾರಣಕ್ಕೆ ಬಹುತೇಕ ರಾಷ್ಟ್ರಗಳಲ್ಲಿ ಏಕಾಏಕಿ ಜನರು ಹೊರಬಾರದಂತೆ ಲಾಕ್‌ಡೌನ್‌ ಆದೇಶವನ್ನ ಘೊಷಣೆ ಮಾಡಲಾಗಿದೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಇಂತಹದೊಂದು ದಿನವೂ ಎದುರಾಗಲಿದೆ ಅನ್ನೊದನ್ನ ಕೂಡ ಭಾವಿಸಿದ ನಮ್ಮ ಜನರು ತಮ್ಮ ಮನೆ ಮತ್ತು ಮನೆಯಿಂದ ದೂರವಿರಲು ಸಾಕಷ್ಟು ಪಡುತ್ತಲೆ ಇದ್ದಾರೆ. ಇದಿಷ್ಟೇ ಅಲ್ಲ ತಮ್ಮ ಕುಟುಂಬ ಮತ್ತು ಸ್ನೇಹಿತರಿಂದ ದೂರವಿದ್ದಾರೆ. ಜೊತೆಗೆ ವಿಶ್ವದಾದ್ಯಂತದ ವಿಮಾನ ಪ್ರಯಾಣ ಕೂಡ ರದ್ದಾಗುವುದರಿಂದ ಮತ್ತು ಸಾಮಾಜಿಕ ದೂರವಿದ್ದಾರೆ.

ಕುಟುಂಬ

ಇನ್ನು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸದ್ಯದ ಪರಿಸ್ಥಿತಿಯಲ್ಲಿ ಸಾಕಷ್ಟು ಆಪ್‌ಗಳು ಹಾಗೂ ಮಾರ್ಗಗಳು ಇದ್ದರೂ ಕೂಡ ವಿರಳ ಎನ್ನಬಹುದಾಗಿದೆ. ಆದರೂ ಕೂಡ ಆಡಿಯೋ ಮತ್ತು ವೀಡಿಯೊ ಕರೆಗಳು ಜನರು ಸಂಪರ್ಕದಲ್ಲಿರಲು ಸಹಾಯ ಮಾಡುತ್ತಿವೆ, ಆದರೆ ಕೆಲವೊಮ್ಮೆ ಅವು ಸಾಕಾಗುವುದಿಲ್ಲ. ಆದ್ದರಿಂದ ಜನರು ತಮ್ಮ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ಮತ್ತು ಸುರಕ್ಷಿತ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವಾಗ ಅವರ ದೈನಂದಿನ ಚಟುವಟಿಕೆಗಳ ಭಾಗವಾಗಿರಲು ಸಹಾಯ ಮಾಡಲು ಗೂಗಲ್ ಕೂಡ ಒಂದು ಕೆಲವು ಟಿಪ್ಸ್‌ ಹಾಗೂ ಟೆಕ್ನಿಕ್‌ ಅನ್ನು ಪಟ್ಟಿ ಮಾಡಿದೆ. ಅಷ್ಟಕ್ಕೂ ಗೂಗಲ್‌ ನೀಡಿರುವ ಟಿಪ್ಸ್‌ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್ ಹೋಮ್ ಅಪ್ಲಿಕೇಶನ್ ಬಳಸಿ.

ಗೂಗಲ್ ಹೋಮ್ ಅಪ್ಲಿಕೇಶನ್ ಬಳಸಿ.

ಸದ್ಯ ಲಾಕ್‌ಡೌನ್‌ ಸಮಯದಲ್ಲಿ ಮನೆಗಳಲ್ಲಿ ನಿವು ಹೇಗೆ ಕಾಲ ಕಳೆಯಬೇಕು ಅನ್ನೊದನ್ನ ಗೂಗಲ್‌ ಟಿಪ್ಸ್‌ ನೀಡಿದೆ. ಇದಕ್ಕೆ ತಕ್ಕಂತೆ ಗೂಗಲ್‌ನ ಕೆಲವು ಆಪ್ಲಿಕೇಶನ್‌ಗಳನ್ನ ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ತಕ್ಕಂತೆ ಗೂಗಲ್ ಹೋಮ್ ಅಪ್ಲಿಕೇಶನ್ ಪ್ರಸಾರ ಫೀಚರ್ಸ್‌ ಅನ್ನು ಹೊಂದಿದೆ, ಅದು ನಿಮ್ಮ ಕಚೇರಿಯಲ್ಲಿ ಇಲ್ಲವೇ ನೀವು ದೂರದಲ್ಲಿ ಇದ್ದರೂ ಸಹ ನಿಮ್ಮ ಮನೆಯಲ್ಲಿ ಕನೆಕ್ಟ್‌ ಆಗಿರುವ ಹೋಮ್‌ ಡಿವೈಸ್‌ಗಳ ಮೂಲ ಬಳಕೆದಾರರ ತಮ್ಮ ಸಂದೇಶಗಳನ್ನ ನಿಡಬಹುದಾಗಿದೆ.

ಗೂಗಲ್ ಡ್ಯುಯೊ ಮೂಲಕ ವೀಡಿಯೊ ಚಾಟ್‌ ಮಾಡಿ.

ಗೂಗಲ್ ಡ್ಯುಯೊ ಮೂಲಕ ವೀಡಿಯೊ ಚಾಟ್‌ ಮಾಡಿ.

ಇದಲ್ಲದೆ ನಿಮ್ಮ ಕುಟುಂಬದವರ ಜೊತೆ ಒಟ್ಟಾಗಿ ಕುಳಿತು ತಿಂಡಿ ಮಾಡುವುದನ್ನ ಮಿಸ್‌ ಮಾಡಿಕೊಂಡಿದ್ದೀರಾ. ಹಾಗಾದ್ರೆ ತಡ ಯಾಕೆ ಗೂಗಲ್‌ ಡ್ಯುಯೊ ಬಳಸಿ ವೀಡಿಯೊ ಚಾಟ್‌ ಮೂಲಕ ಮನೆಯವರೊಂದಿಗಿನ ಅನುಭವವನ್ನು ಪಡೆಯಿರಿ ಎಮದು ಗೂಗಲ್‌ ಹೇಳಿದೆ. Google ಡ್ಯುಯೊದಲ್ಲಿ ಕರೆ ಮಾಡಿ ನಿಮ್ಮ ಸ್ನೇಹಿತರೊಂದಿಗೆ ನಿಮ್ಮ ವಿಕೆಂಡ್‌ ಪಾರ್ಟಿಯನ್ನು ಸಹ ಮಾಡಲು ಇದೇ ಟ್ರಿಕ್ ಅನ್ನು ಬಳಸಬಹುದು.

ಯೂಟ್ಯೂಬ್

ಇನ್ನು ಯೂಟ್ಯೂಬ್ ಮತ್ತು ಗೂಗಲ್ ಡಾಕ್ಸ್ ಬಳಸಿ ಸ್ನೇಹಿತರೊಂದಿಗೆ ಹರಟೆ ಹೊಡೆಯಬಹುದು. ನಿಮ್ಮ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು ಸುಲಭವಾದ ಮಾರ್ಗವೆಂದರೆ ಒಟ್ಟಿಗೆ ಅಡುಗೆ ಮಾಡುವುದು. YouTube ನಲ್ಲಿ ನಿಮ್ಮ ನೆಚ್ಚಿನ ಖಾದ್ಯವನ್ನು ತಯಾರಿಸಲು ನೀವು ಪ್ರತಿಯೊಬ್ಬರೂ ಸಾಮಾನ್ಯ ಪಾಕವಿಧಾನವನ್ನು ಅನುಸರಿಸಬಹುದು. ಪರ್ಯಾಯವಾಗಿ, ನೀವು Google ಡಾಕ್ಸ್ ಬಳಸಿ ಉತ್ತಮವಾಗಿ ತಯಾರಿಸುವ ಖಾದ್ಯದ ಪಾಕವಿಧಾನವನ್ನು ಹಂಚಿಕೊಳ್ಳಬಹುದು. ಮತ್ತು ನೀವು ಅದನ್ನು ಸಿದ್ಧಪಡಿಸಿದ ನಂತರ, ಸಿದ್ಧಪಡಿಸಿದ ಖಾದ್ಯದ ಫೋಟೋಗಳನ್ನು ಫೋಟೋಗಳು ಅಥವಾ ಡ್ರೈವ್‌ನಲ್ಲಿ ಶೇರ್‌ ಮಾಡಿಕೊಳ್ಳಬಹುದು. ಹೀಗೆ ಒಬ್ಬರೊಗೊಬ್ಬರು ತಮ್ಮ ನೆಚ್ಚಿನ ಹವ್ಯಾಸಗಳನ್ನ ಹಂಚಿಕೊಳ್ಳಲು ಗೂಗಲ್‌ನ ಟಿಪ್ಸ್‌ ಉಪಯುಕ್ತ ಎನಿಸುತ್ತವೆ.

Best Mobiles in India

English summary
Google has listed a bunch of tips and tricks to help people stay connected with their family and be a part of their everyday activities while maintaining a safe social distance. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X