ಗೂಗಲ್ ಅಸಿಸ್ಟಂಟ್‌ನಲ್ಲಿ ವಾಯಿಸ್‌ ಬದಲಿಸುವುದು ಹೇಗೆ?...ಹೀಗೆ ಮಾಡಿ

|

ಗೂಗಲ್ ಅಸಿಸ್ಟಂಟ್‌ ಅನ್ನು ಗೂಗಲ್ ಅಭಿವೃದ್ಧಿಪಡಿಸಿದ ವರ್ಚುವಲ್ ಅಸಿಸ್ಟಂಟ್‌ ಸಾಫ್ಟ್‌ವೇರ್ ಆಗಿದ್ದು, ಮೊಬೈಲ್ ಮತ್ತು ಸ್ಮಾರ್ಟ್‌ಹೋಮ್ ಡಿವೈಸ್‌ಗಳಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಇದು ಕೆಲಸ ಮಾಡಲಿದ್ದು, ಹೆಚ್ಚು ಆಕರ್ಷಕವಾಗಿದೆ. ಅದರಂತೆ ಯಾವಾಗಲೂ ಗೂಗಲ್‌ ಅಸಿಸ್ಟಂಟ್‌ ನಲ್ಲಿ ಮಹಿಳಾ ವಾಯ್ಸ್‌ ಕೇಳಿ ಕೇಳಿ ಸಾಕಾಗಿದ್ದರೆ ಅದಕ್ಕೆ ಇಲ್ಲಿ ಪರಿಹಾರ ಮಾರ್ಗ ಸೂಚಿಸಲಾಗಿದೆ.

ಆಂಡ್ರಾಯ್ಡ್‌

ಹೌದು, ನೀವು ನಿಮ್ಮ ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಗೂಗಲ್ ಅಸಿಸ್ಟಂಟ್‌ ಬಳಕೆ ಮಾಡಲು ಮುಂದಾದರೆ ಸಾಮಾನ್ಯವಾಗಿ ಡಿಫಾಲ್ಸ್‌ ಆಗಿರುವ ಸ್ತ್ರೀ ಧ್ವನಿ ನಿಮಗೆ ಕೇಳಿಸುತ್ತದೆ. ಕೆಲವರು ಈ ವಾಯ್ಸ್‌ ಕೇಳಿ ಕೇಳಿ ಬೇಸರಗೊಂಡಿರಬಹುದು. ನೀವು ಈ ರೀತಿ ಬೇಸರ ಪಡುವ ಬದಲು ಹೊಸತನ ಪಡೆಯಲು ಮುಂದಾದರೆ ಈ ವರದಿಯಲ್ಲಿ ನೀಡಲಾಗಿರುವ ಮಾಹಿತಿಯನ್ನು ಗಮನವಿಟ್ಟು ಓದಿ ನಂತರ ವಾಯ್ಸ್‌ ಅನ್ನು ಬದಲಾಯಿಸುವ ಬಗ್ಗೆ ತಿಳಿದುಕೊಳ್ಳಿ.

ಗೂಗಲ್ ಅಸಿಸ್ಟಂಟ್‌

ಗೂಗಲ್ ಅಸಿಸ್ಟಂಟ್‌ನಲ್ಲಿ ಪುರುಷ ಧ್ವನಿಯ ಆಯ್ಕೆ ಸಹ ಇದ್ದು, ಇದನ್ನು ನೀವು ಸುಲಭವಾಗಿ ಬಳಕೆ ಮಾಡಬಹುದಾಗಿದೆ. ಪುರುಷ ಧ್ವನಿಗೆ ಗೂಗಲ್‌ ಅಸಿಸ್ಟಂಟ್‌ ಅನ್ನು ಬದಲಾಯಿಸುವುದರಿಂದ ಹೊಸ ಅನುಭವ ಪಡೆಯಬಹುದಾಗಿದೆ. ಇನ್ನುಳಿದಂತೆ ಗೂಗಲ್‌ ಅಸಿಸ್ಟಂಟ್‌ ಮೂಲಕ ಮನೆಯಲ್ಲಿನ ಸ್ಮಾರ್ಟ್‌ ಡಿವೈಸ್‌ಗಳನ್ನೂ ಸಹ ನಿಯಂತ್ರಣ ಮಾಡಬಹುದಾಗಿದೆ. ಅದರಲ್ಲೂ ಕೊಠಡಿಯ ದೀಪಗಳನ್ನು ಆಫ್ ಮಾಡಲು, ಮನೆಯಲ್ಲಿನ ಸ್ಪೀಕರ್‌, ಫ್ಯಾನ್‌ ಹಾಗೂ ಇನ್ನಿತರೆ ಡಿವೈಸ್‌ಗಳು ನಿಯಂತ್ರಣ ಮಾಡಬಹುದಾಗಿದೆ.

ಸ್ಮಾರ್ಟ್

ಇನ್ನು ಈ ಸ್ಮಾರ್ಟ್ ಅಸಿಸ್ಟಂಟ್‌ ಅನ್ನು ಗೂಗಲ್‌ ಪರಿಚಯಿಸಿದಾಗಿನಿಂದ ಸ್ತ್ರೀ ಧ್ವನಿಯನ್ನು ಹೊಂದಿತ್ತು. ಇದಾದ ನಂತರ ಅಂದರೆ 2017 ರಲ್ಲಿ ಗೂಗಲ್ ಪುರುಷ ಧ್ವನಿಯನ್ನು ಸಹ ಪರಿಚಯಿಸಿದೆ. ಆದರೂ ಗೂಗಲ್‌ ಸ್ತ್ರೀ ಧ್ವನಿಯನ್ನ ಡೀಫಾಲ್ಟ್ ಆಗಿ ಹೊಂದಿಸಲಾಗಿದ್ದು, ಬಹಳ ಜನರಿಗೆ ಇದರ ಬಗ್ಗೆ ಅರಿವಿರುವುದಿಲ್ಲ. ಹೀಗಾಗಿ ಹೇಗೆ ಪುರುಷ ಧ್ವನಿಗೆ ಬದಲಾಯಿಸಬಹುದು ಎಂಬ ವಿವರವನ್ನು ಹಂತಹಂತವಾಗಿ ವಿವರಿಸಲಾಗಿದೆ ಗಮನಿಸಿ.

ಹಂತ 1

ಹಂತ 1

ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೆಟ್ಟಿಂಗ್ ಆಯ್ಕೆ ಮೇಲೆ ಟ್ಯಾಪ್‌ ಮಾಡಿ ನಂತರ ಕೆಳಗೆ ಸ್ಕ್ರಾಲ್ ಮಾಡಿದರೆ ಅದರಲ್ಲಿ 'ಗೂಗಲ್‌ ಟ್ಯಾಬ್' ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ಹಂತ 2

ಹಂತ 2

ಗೂಗಲ್‌ ಟ್ಯಾಬ್ ಮೇಲೆ ಟ್ಯಾಪ್‌ ಮಾಡಿದ ನಂತರ ಗೂಗಲ್‌ ಆಪ್‌ಗಾಗಿ 'ಸೆಟ್ಟಿಂಗ್‌' ಅನ್ನು ಆಯ್ಕೆ ಮಾಡಿ. ಇದರ ನಂತರ ಗೂಗಲ್ ಫಿಟ್, ಗೂಗಲ್ ಪ್ಲೇ, ಸಂಪರ್ಕಗಳು, ಗೂಗಲ್‌ ಸರ್ಚ್‌ ಮತ್ತು ಗೂಗಲ್‌ ಅಸಿಸ್ಟಂಟ್‌ ಸೇರಿದಂತೆ ಇನ್ನಿತರೆ ಆಪ್‌ಗಳು ಕಾಣಿಸುತ್ತವೆ. ಅದರಲ್ಲಿ 'ಸರ್ಚ್‌, ಅಸಿಸ್ಟಂಟ್‌ ಆಂಡ್ ವಾಯ್ಸ್‌‌' ಆಯ್ಕೆ ಮೇಲೆ ಟ್ಯಾಪ್‌ ಮಾಡಿ.

ಹಂತ 3

ಹಂತ 3

'ಸರ್ಚ್‌, ಅಸಿಸ್ಟಂಟ್‌ ಅಂಡ್‌ ವಾಯ್ಸ್‌‌' ಮೇಲೆ ಟ್ಯಾಪ್‌ ಮಾಡಿದ ನಂತರ ಹಲವು ಆಯ್ಕೆಗಳ ಕಾಣಿಸಿಕೊಳ್ಳುತ್ತವೆ. ಈಗ ನೀವು ಸ್ಕ್ರಾಲ್ ಮಾಡಿದರೆ ಅಲ್ಲಿ 'ಗೂಗಲ್‌ ಅಸಿಸ್ಟಂಟ್‌ ' ಕಾಣಿಸುತ್ತದೆ. ಅದರ ಮೇಲೆ ಟ್ಯಾಪ್‌ ಮಾಡಿ.

ಹಂತ 4

ಹಂತ 4

'ಗೂಗಲ್‌ ಅಸಿಸ್ಟಂಟ್‌' ಮೇಲೆ ಟ್ಯಾಪ್‌ ಮಾಡಿದ ಮೇಲೆ 'ಅಸಿಸ್ಟಂಟ್‌ ವಾಯ್ಸ್ ಆಂಡ್ ಸೌಂಡ್ಸ್' ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದರಲ್ಲಿ ಎರಡು ರೀತಿಯ ವಾಯ್ಸ್‌ಗಳ ಆಯ್ಕೆ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಪುರುಷ ಧ್ವನಿಗೆ ಕಿತ್ತಳೆ ಬಣ್ಣದ ಐಕಾನ್‌ ಇರಲಿದ್ದು, ಸ್ತ್ರೀ ಧ್ವನಿ ಕೆಂಪು ಬಣ್ಣದ ಐಕಾನ್‌ ಹೊಂದಿದೆ. ಈಗ ನಿಮಗೆ ಬೇಕಾಗಿರುವ ವಾಯ್ಸ್‌ ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಪುರುಷ ಧ್ವನಿಗೆ ಬದಲಾಯಿಸಲು ಕಿತ್ತಳೆ ಬಣ್ಣದ ವೃತ್ತದ ಮೇಲೆ ಟ್ಯಾಪ್ ಮಾಡಿ.

Best Mobiles in India

English summary
Google Assistant is a virtual assistant software developed by Google. In between, you can also hear the male voice of the Google Assistant.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X