ಇದು ನಿಮಗೆ ಗೊತ್ತಾ?..ನಿಮ್ಮ ಫೋನಿನಲ್ಲಿ ಬಟನ್‌ ಕ್ಲಿಕ್ ಮಾಡದೇ ಫೋಟೊ ತೆಗೆಯಬಹುದು!

|

ಫೋನ್‌ಗಳಲ್ಲಿ ಕ್ಯಾಮೆರಾ ಆಯ್ಕೆಯು ಪ್ರಮುಖ ಹೈಲೈಟ್ಸ್‌ಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಸೆನ್ಸಾರ್‌ ಕಾಣಬಹುದಾಗಿದೆ. ಅದರಲ್ಲಿಯೂ ಆಪಲ್‌ ಸಂಸ್ಥೆಯ ಐಫೋನ್‌ಗಳಲ್ಲಿನ ಕ್ಯಾಮೆರಾ ಗುಣಮಟ್ಟಕ್ಕೆ ಬಹುತೇಕ ಎಲ್ಲರೂ ಫಿದಾ ಆಗುತ್ತಾರೆ. ಇನ್ನು ನೀವೇನಾದರೂ ಐಫೋನ್‌ (iPhone) ಬಳಕೆದಾರರಾಗಿದ್ದರೆ, ಇನ್ಮುಂದೆ ಫೊಟೊ ಸೆರೆಹಿಡಿಯುವಾಗ ಫೋನಿನಲ್ಲಿ ಶಟರ್ ಬಟನ್‌ ಕ್ಲಿಕ್ ಮಾಡುವ ಅಗತ್ಯ ಇಲ್ಲವೇ ಇಲ್ಲ.

 ಶಟರ್ ಬಟನ್ ಒತ್ತದೇ/ ಕ್ಲಿಕ್ ಮಾಡದೇ

ಹೌದು, ಐಫೋನ್‌ಗಳಲ್ಲಿ (iPhone) ಫೋಟೊ ಸೆರೆಹಿಡಿಯುವಾಗ ಶಟರ್ ಬಟನ್ ಒತ್ತದೇ/ ಕ್ಲಿಕ್ ಮಾಡದೇ ಫೋಟೊ ತೆಗೆಯಬಹುದು. ಕೆಲವು ಐಫೋನ್‌ ಬಳಕೆದಾರರಿಗೆ ಈ ಬಗ್ಗೆ ತಿಳಿದಿರಬಹುದು. ಆದರೆ ಅದಾಗ್ಯೂ, ಅನೇಕ ಬಳಕೆದಾರರಿಗೆ ಇದು ಅಚ್ಚರಿ ಎನಿಸುವ ಸಂಗತಿಯೇ ಆಗಿದೆ. ಶಟರ್ ಬಟನ್ ಕ್ಲಿಕ್ ಮಾಡದೇ ಫೋಟೊ ತೆಗೆಯುವುದು ಹೇಗೆ ಎಂದು ಯೋಚಿಸುತ್ತಿದ್ದಿರಾ?..ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಮುಂದೆ ಓದಿರಿ

ಟೈಮರ್ ಸೆಟ್ ಮಾಡುವ ಅಗತ್ಯ ಇಲ್ಲ!

ಟೈಮರ್ ಸೆಟ್ ಮಾಡುವ ಅಗತ್ಯ ಇಲ್ಲ!

ಬಳಕೆದಾರರು ಟೈಮರ್ ಸೆಟ್ ಮಾಡಿ ಸಹ ಶಟರ್ ಬಟನ್‌ ಕ್ಲಿಕ್ ಮಾಡದೇ ಸೆರೆಹಿಡಿದ ಫೋಟೊ ಸೆರೆಯಿಡಿಬಹುದು. ಆದರೆ ಈ ವಿಧಾನದಲ್ಲಿ ಫೋಟೊಗಳು ಅತ್ಯುತ್ತಮ ವಾಗಿ ಮೂಡಿಬರುತ್ತವೆ ಎಂದು ಹೇಳಲಾಗದು. ಅಲ್ಲದೇ ಕೆಲಲವು ಸಂದರ್ಭಗಳಲ್ಲಿ ಟೈಮ್ ಸೆಟ್ ಮಾಡಿ ಫೋಟೊ ತೆಗೆಸಿಕೊಳ್ಳಬೇಕಾದ ಸ್ಥಳಕ್ಕೆ ಹೋಗಿ ನಿಲ್ಲಲೂ ಆಗದೆ ಇರಬಹುದು. ಇಂತಹ ವೇಳೆ ಸಿರಿ ಮೂಲಕ ಫೋಟೊ ತೆಗೆಯುವುದು ಸಹಾಯಕ ಎನಿಸಲಿದೆ.

ಶಟರ್ ಬಟನ್ ಕ್ಲಿಕ್ ಮಾಡದೇ ಫೋಟೊ ತೆಗೆಯಿರಿ!

ಶಟರ್ ಬಟನ್ ಕ್ಲಿಕ್ ಮಾಡದೇ ಫೋಟೊ ತೆಗೆಯಿರಿ!

ಆಪಲ್‌ ಐಫೋನ್‌ಗಳಲ್ಲಿ ಸಿರಿ (Siri) ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ ಇದೆ. ಸಿರಿ ವಾಯಿಸ್‌ ಅಸಿಸ್ಟಂಟ್‌ ಸೌಲಭ್ಯ ಬಳಸುವ ಮೂಲಕ ಬಳಕೆದಾರರು ಶಟರ್ ಬಟನ್ ಕ್ಲಿಕ್ ಮಾಡದೇ, ಬರೀ ವಾಯಿಸ್‌ ಕಮಾಂಡ್‌/ ಧ್ವನಿ ಮೂಲಕ ಫೋಟೊ ತೆಗೆಯಬಹುದು. ಹಾಗಾದರೇ ಸಿರಿ ವಾಯಿಸ್‌ ಅಸಿಸ್ಟಂಟ್‌ ಬಳಸಿ ಫೋಟೊ ತೆಗೆಯುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಐಫೋನ್‌ನಲ್ಲಿ ಸಿರಿ ಮೂಲಕ ಫೋಟೊ ತೆಗೆಯಲು ಹೀಗೆ ಮಾಡಿ:

ಐಫೋನ್‌ನಲ್ಲಿ ಸಿರಿ ಮೂಲಕ ಫೋಟೊ ತೆಗೆಯಲು ಹೀಗೆ ಮಾಡಿ:

* ಮೊದಲಿಗೆ, ಐಫೋನ್‌ನಲ್ಲಿ ಶಾರ್ಟ್‌ಕಟ್‌ಗಳ ಅಪ್ಲಿಕೇಶನ್ ತೆರೆಯಿರಿ.
* ಬಳಿಕ, ಸ್ಕ್ರೀನ್‌ ಕೆಳಭಾಗದಲ್ಲಿರುವ ಗ್ಯಾಲರಿ ಆಯ್ಕೆ ಮೇಲೆ ಟ್ಯಾಪ್ ಮಾಡಿ.
* ನಂತರ ಕಾಣಿಸುವ ಸ್ಕ್ರೀನ್‌ನಲ್ಲಿ, 'Say Cheese' ಶಾರ್ಟ್‌ಕಟ್‌ಗಾಗಿ ಸರ್ಚ್ ಮಾಡಿರಿ.
* ಆ ಬಳಿಕ, ಶಾರ್ಟ್‌ಕಟ್ ಸೇರಿಸಿ.

Hey Siri, Say Cheese

* ಸಾಮಾನ್ಯವಾಗಿ ಇದು ಹಿಂದಿನ ಕ್ಯಾಮರಾಗೆ ಶಾರ್ಟ್‌ಕಟ್ ಹೊಂದಿರುತ್ತದೆ. ಆದರೆ ನೀವು ಅದನ್ನು ಮುಂಭಾಗಕ್ಕೆ (ಸೆಲ್ಫಿ) ಚೇಂಜ್‌ ಮಾಡಿ.
* ಕ್ಯಾಮೆರಾವನ್ನು ಸೆಟ್ ಮಾಡು ಸೆಟ್ಟಿಂಗ್ಸ್‌ ಆಯ್ಕೆ ಟ್ಯಾಪ್ ಮಾಡಿ.
* ಕೊನೆಯದಾಗಿ, Hey Siri, Say Cheese ಎಂದು ಹೇಳಿ
* ಸಿರಿ ತಾನಾಗಿಯೇ ಫೋಟೊವನ್ನು ಕ್ಲಿಕ್ ಮಾಡುತ್ತದೆ.

ಫೋಟೋ ಮತ್ತು ವೀಡಿಯೊಗಳಿಗಾಗಿ ಇತರೆ ವಾಯಿಸ್‌ ಕಮಾಂಡ್‌ಗಳು:

ಫೋಟೋ ಮತ್ತು ವೀಡಿಯೊಗಳಿಗಾಗಿ ಇತರೆ ವಾಯಿಸ್‌ ಕಮಾಂಡ್‌ಗಳು:

ಬಳಕೆದಾರರು ಐಫೋನ್‌ ನಲ್ಲಿ ಸಿರಿ (Siri) ಮೂಲಕ ಫೋಟೋಗಳು ಮತ್ತು ವೀಡಿಯೊಗಳನ್ನು ಸೆರೆಹಿಡಿಯಲು ಇತರೆ ಕೆಲವು ವಾಯಿಸ್‌ ಕಮಾಂಡ್‌ಗಳನ್ನು ಸಹ ಬಳಕೆ ಮಾಡಬಹುದು. ಈ ಕುರಿತಂತೆ ಕೆಲವು ಸಾಮಾನ್ಯ ವಾಯಿಸ್‌ ಕಮಾಂಡ್‌ ಮಾಹಿತಿ ಇಲ್ಲಿದೆ.

Take a Square picture.

* ಹೇ ಸಿರಿ, ಟೆಕ್‌ ಎ ಫೋಟೊ ಅಥವಾ ಹೇ ಸಿರಿ, ಟೆಕ್‌ ಎ ಫೋಟೊ. ಈ ವಾಯಿಸ್‌ ಕೇಳಿ, ಸಿರಿ ಕ್ಯಾಮೆರಾವನ್ನು ತೆರೆಯುತ್ತದೆ.
* ಹೇ ಸಿರಿ, Take a Square picture.
* ಹೇ ಸಿರಿ, Take a Panoramic picture
* ಹೇ ಸಿರಿ, Record a video.
* ಹೇ ಸಿರಿ, Take a slo-mo video.

Best Mobiles in India

English summary
How to take an iPhone Photo with Siri Voice Commands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X