ಆಫ್‌ಲೈನ್‌ನಲ್ಲಿ ಗೂಗಲ್‌ ಮ್ಯಾಪ್‌ ಮತ್ತು ನ್ಯಾವಿಗೇಷನ್ ಬಳಸುವುದು ಹೇಗೆ ಗೊತ್ತಾ?

|

ನಿಮಗೆ ಯಾವುದೇ ಮಾಹಿತಿ ಬೇಕಿದ್ದರೂ ಥಟ್‌ ಅಂತಾ ನೆನಪಾಗೊದೆ ಸರ್ಚ್ ಇಂಜಿನ್‌ ದೈತ್ಯ ಗೂಗಲ್‌. ಸದ್ಯ ಗೂಗಲ್‌ ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನ ಪರಿಚಯಿಸುತ್ತಾ ತನ್ನ ಜನಪ್ರಿಯತೆಯನ್ನ ವಿಸ್ತಾರ ಮಾಡಿಕೊಳ್ಳುತ್ತಲೇ ಇದೆ. ಇನ್ನು ನಿಮಗೆಲ್ಲಾ ಗೊತ್ತಿರುವಂತೆ ಗೂಗಲ್‌ ಬಳಕೆದಾರರ ಅನುಕೂಲಕ್ಕಾಗಿ ಅವರಿಗೆ ಮಾರ್ಗಗಳ ಮಾರ್ಗದರ್ಶನ ನೀಡುವುದಕ್ಕಾಗಿ ಇಲ್ಲವೇ ನೀವು ಯಾವುದೇ ಸ್ಥಳಕ್ಕೆ ತಲುಪಬೇಕಾದರೂ ಸಹಾಯವಾಗಲು ಗೂಗಲ್‌ ಮ್ಯಾಪ್‌ ಅನ್ನು ಪರಿಚಯಿಸಿದೆ. ಅಷ್ಟೇ ಅಲ್ಲ ನೀವಯು ಸೂಕ್ತ ಸ್ಥಳವನ್ನ ತಲುಪಲು ನಿಮಗೆ ದಾರಿ ತೋರುವ ನ್ಯಾವಿಗೇಷನ್‌ ಅನ್ನು ಸಹ ಪರಿಚಯಿಸಿರೋದು ನಿಮಗೆಲ್ಲಾ ಗೊತ್ತೇ ಇದೆ. ಆದರೆ ನೀವು ಇಂಟರ್‌ನೆಟ್‌ ಇಲ್ಲದೆ ಹೋದರೂ ಗೂಗಲ್‌ ಮ್ಯಾಪ್‌ ಬಳಸಬಹುದಾ? ಇಲ್ಲವಾ ಇದಕ್ಕೆ ಉತ್ತರವನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಗೂಗಲ್‌

ಹೌದು, ನೀವು ಕೆಲವು ಹೊಸ ಸ್ಥಳಗಳಿಗೆ ಪ್ರಯಾಣಿಸುವಾಗ ಗೂಗಲ್‌ ಮ್ಯಾಪ್‌ ತುಂಬಾ ಅವಶ್ಯಕತೆಯಾಗಿದೆ. ಅಷ್ಟೇ ಅಲ್ಲ ತುಂಬಾ ಸಹಾಯಕವಾಗಿದೆ. ಇನ್ನು ಹೆಚ್ಚಿನ ಜನರು ಅಪ್ಲಿಕೇಶನ್‌ನ ನಿರ್ದೇಶನಗಳು ಮತ್ತು ಸೇವೆಗಳನ್ನು ಆನ್‌ಲೈನ್‌ನಲ್ಲಿ ಬಳಸುತ್ತಾರೆ. ಏಕೆಂದರೆ ನೀವು ಸಾಗುವ ಮಾರ್ಗದಲ್ಲಿ ಸೆಲ್ಯುಲಾರ್ ಸೇವೆಯನ್ನು ಪಡೆದುಕೊಳ್ಳಬೇಕಾದರೆ ಆನ್‌ಲೈನ್‌ ಸೇವೆ ಅಗತ್ಯ. ಹಾಗದರೆ ಗೂಗಲ್‌ ಮ್ಯಾಪ್‌ ಅನ್ನು ಆಪ್‌ಲೈನ್‌ ನಲ್ಲಿ ಇರುವಾಗ ಬಲಸಲು ಸಾಧ್ಯ ಇದೆಯಾ. ಹೌದು ಇದೆ ಅವಕಾಶ ಇದೆ. ಆದರೆ ಅದಕ್ಕಾಗಿ ನೀವು ಕೆಲವು ಕ್ರಮಗಳನ್ನ ಅನುಸರಿಸಬೇಕಾಗುತ್ತದೆ. ಅದು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಗೂಗಲ್ ಮ್ಯಾಪ್‌ ಗಳು ತಮ್ಮ ಕಾರ್ಯನಿರ್ವಹಣೆ ಮಾಡುವಾ ಸಣ್ಣ ಟ್ರಿಕ್ ಅನ್ನು ಅನುಮತಿಸುತ್ತದೆ, ಅದು ಏನೆಂದರೆ ಬಳಕೆದಾರರಿಗೆ ನಕ್ಷೆಗಳ ಡೇಟಾದ ಒಂದು ಭಾಗವನ್ನು ಆಫ್‌ಲೈನ್‌ನಲ್ಲಿ ತೆಗೆದುಹಾಕಲು ಮತ್ತು ಅದನ್ನು ಸ್ಥಳೀಯವಾಗಿ ತಮ್ಮ ಡಿವೈಸ್‌ಗಳಲ್ಲಿ ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಡೇಟಾವನ್ನು ಒಮ್ಮೆ ಆಫ್‌ಲೈನ್‌ನಲ್ಲಿ ಸಂಗ್ರಹಿಸಿದ ನಂತರ, ನೀವು ಆಫ್‌ಲೈನ್‌ನಲ್ಲಿ ತೆಗೆದುಕೊಂಡ ಪ್ರದೇಶದೊಳಗೆ ಈ ಎರಡೂ ಬಿಂದುಗಳು ಇರುವವರೆಗೆ, ಗೂಗಲ್ ಎ ಅಥವಾ ಪಾಯಿಂಟ್ ಎ ಗೆ ಬಿಂದುವಿಗೆ ಗೂಗಲ್ ಮ್ಯಾಪ್‌ ಅಥವಾ ನ್ಯಾವಿಗೇಶಷನ್‌ ಪ್ರವೇಶಿಸಲು ನಿಮಗೆ ಯಾವುದೇ ಇಂಟರ್ನೆಟ್ ನ ಅಗತ್ಯವಿರುವುದಿಲ್ಲ. ಅಷ್ಟಕ್ಕೂ ನಿಮ್ಮ ಫೋನ್‌ನಲ್ಲಿ ಮ್ಯಾಪ್‌ನ ಒಂದು ಭಾಗವನ್ನು ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ ಓದಿರಿ.

ಹಂತ 1: ಗೂಗಲ್ ಮ್ಯಾಪ್‌ಅನ್ನು ತೆರೆಯಿರಿ

ಹಂತ 1: ಗೂಗಲ್ ಮ್ಯಾಪ್‌ಅನ್ನು ತೆರೆಯಿರಿ

ಸಕ್ರಿಯ ಇಂಟರ್ನೆಟ್ ಸಂಪರ್ಕ ಹೊಂದಿರುವ ಗೂಗಲ್‌ ಮ್ಯಾಪ್‌ ಅನ್ನು ತರೆಯಬೇಕು. ನಂತರ ಮ್ಯಾಪ್‌ನ ಒಂದು ಭಾಗವನ್ನು ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಲು, ಈ ಡೇಟಾವನ್ನು ಡೌನ್‌ಲೋಡ್ ಮಾಡಲು ನಿಮಗೆ ಇಂಟರ್‌ನೆಟ್ ಸಂಪರ್ಕದ ಅಗತ್ಯವಿರುತ್ತದೆ. ನೀವು ಆಯ್ಕೆ ಮಾಡಿದ ಪ್ರದೇಶವನ್ನು ಅವಲಂಬಿಸಿ ಡೌನ್‌ಲೋಡ್ ಮಾಡುವುದಕ್ಕೆ ಸೂಕ್ತವಾದ ವೈ-ಫೈ ಕನೆಕ್ಟಿವಿಟಿ ಹೊಂದಿದ್ದರೆ ಉತ್ತಮ.

ಹಂತ 2: ‘ಆಫ್‌ಲೈನ್ ಮ್ಯಾಪ್‌ಗಳಿಗೆ' ಹೋಗಿ

ಹಂತ 2: ‘ಆಫ್‌ಲೈನ್ ಮ್ಯಾಪ್‌ಗಳಿಗೆ' ಹೋಗಿ

ಮೆನು ತೆರೆಯಲು ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಗೂಗಲ್‌ ಖಾತೆ ಪ್ರೊಫೈಲ್ ಚಿತ್ರವನ್ನು ಆಯ್ಕೆಮಾಡಿ. ‘ಆಫ್‌ಲೈನ್ ಮ್ಯಾಪ್‌ಗಳು' ವಿಭಾಗಕ್ಕೆ ಹೋಗಿ, ಅಲ್ಲಿ ನೀವು ಮೊದಲ ಬಾರಿಗೆ ಆಫ್‌ಲೈನ್‌ನಲ್ಲಿ ನಕ್ಷೆಯನ್ನು ಡೌನ್‌ಲೋಡ್ ಮಾಡುತ್ತಿದ್ದರೆ, ಈ ವಿಭಾಗದಲ್ಲಿ ನಿಮಗೆ ಲಭ್ಯವಿರುವ ಏಕೈಕ ಆಯ್ಕೆ ‘ನಿಮ್ಮ ಸ್ವಂತ ಮ್ಯಾಪ್‌ಅನ್ನು ಆರಿಸಿ'. ನಂತರ ಗೂಗಲ್ ಮ್ಯಾಪ್‌ಗಳ ಒಂದು ಭಾಗವನ್ನು ಆಫ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಅದರ ಮೇಲೆ ಕ್ಲಿಕ್ ಮಾಡಿ.

ಹಂತ 3: ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಬೇಕಾದ ಪ್ರದೇಶವನ್ನು ಆಯ್ಕೆಮಾಡಿ

ಹಂತ 3: ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಬೇಕಾದ ಪ್ರದೇಶವನ್ನು ಆಯ್ಕೆಮಾಡಿ

ಒಮ್ಮೆ ನೀವು ಆಫ್‌ಲೈನ್ ಮ್ಯಾಪ್‌ಗಳನ್ನು ಆಯ್ಕೆ ಮಾಡಿದರೆ, ನಿಮಗೆ ಪರದೆಯ ಮೇಲೆ ತೋರಿಸಲಾಗುತ್ತದೆ. ಆಫ್‌ಲೈನ್‌ನಲ್ಲಿ ತೆಗೆದುಕೊಳ್ಳಬೇಕಾದ ನಕ್ಷೆಗಳನ್ನು ಅಗತ್ಯವಿರುವ ಪ್ರದೇಶವನ್ನು ಆಯ್ಕೆ ಮಾಡಿ. ಗೂಗಲ್ ನಕ್ಷೆಗಳು ಒಂದೇ ಡೌನ್‌ಲೋಡ್‌ನಲ್ಲಿ ಒಂದೆರಡು ಸಂಪೂರ್ಣ ನಗರಗಳನ್ನು ಒಳಗೊಂಡಂತೆ ಮ್ಯಾಪ್‌ನ ಬಹುದೊಡ್ಡ ವಿಭಾಗಗಳನ್ನು ತೆಗೆದುಕೊಳ್ಳಬಹುದು. ಆದ್ದರಿಂದ, ನಿಮಗೆ ಬೇಕಾದ ಸ್ಥಳದ ಮ್ಯಾಪ್‌ಗಿಮತ ಹೆಚ್ಚಿನ ಮ್ಯಾಪ್‌ ಪ್ರದೇಶವನ್ನ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನಂತರ ನೀವು ತೆಗೆದುಕೊಂಡಿರುವ ಮ್ಯಾಪ್‌ನ ಎರಡು ಕಡೆಯ ಗಡಿಗಳನ್ನು ಹೊಂದಿಸಿದ ನಂತರ, ‘ಡೌನ್‌ಲೋಡ್' ಕ್ಲಿಕ್ ಮಾಡಿ.

ನ್ಯಾವಿಗೇಷನ್

ಈಗ ಈ ನಕ್ಷೆ ಮತ್ತು ಅದರಲ್ಲಿರುವ ಎಲ್ಲಾ ಮಾಹಿತಿಗಳು ನಿಮಗೆ ಅಗತ್ಯವಿರುವಾಗ ನಿಮ್ಮ ಫೋನ್‌ನಲ್ಲಿ ಆಫ್‌ಲೈನ್‌ನಲ್ಲಿ ಲಭ್ಯವಿರುತ್ತವೆ. ಅಷ್ಟೇ ಅಲ್ಲ ಇದರಿಂದ ನಿಮ್ಮ ನ್ಯಾವಿಗೇಷನ್ ಸಹ ಸರಳವಾಗಿರಲಿದೆ. ನೀವು ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡಿರುವ ಮ್ಯಾಪ್‌ನಲ್ಲಿ ಸೆಲ್ಯುಲಾರ್ ಸಂಪರ್ಕವನ್ನು ಹೊಂದಿರುವಾಗ ನೀವು ಸಾಮಾನ್ಯವಾಗಿ ಗೂಗಲ್ ಮ್ಯಾಪ್‌ನ ಅನ್ವಯದಂತೆ ಈ ಪ್ರದೇಶಗಳಲ್ಲಿ ನ್ಯಾವಿಗೇಷನ್‌ ಸೇವೆಯನ್ನ ಪಡೆಯಬಹುದಾಗಿರುತ್ತದೆ.

Most Read Articles
Best Mobiles in India

English summary
Check out how you can navigate safely even without an active internet connection using the Google Maps offline feature.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more