ಹೆಚ್‌ಪಿ ಕಂಪೆನಿಯಿಂದ ಹೊಸ ಡೆಸ್ಕ್‌ಟಾಪ್‌ ಬಿಡುಗಡೆ! ಫೀಚರ್ಸ್‌ ಹೇಗಿದೆ ಗೊತ್ತಾ?

|

ಹೆಚ್‌ಪಿ ಕಂಪೆನಿ ಪ್ರತಿಷ್ಠಿತ ಕಂಪ್ಯೂಟರ್‌ ಬ್ರ್ಯಾಂಡ್‌ ಎನಿಸಿಕೊಂಡಿದೆ. ಈಗಾಗಲೇ ಹಲವು ಮಾದರಿಯ ಕಂಪ್ಯೂಟರ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ತನ್ನ HP ಆಂಪ್ಲಿಫೈ ಎಕ್ಸಿಕ್ಯುಟಿವ್ ಫೋರಮ್‌ನಲ್ಲಿ ಎರಡು PC ಗಳನ್ನು ಪರಿಚಯಿಸಿದೆ. ಇವುಗಳನ್ನು HP ಡ್ರಾಗನ್‌ಫ್ಲೈ ಫೋಲಿಯೊ G3 ಮತ್ತು ಹೆಚ್‌ಪಿ 34 ಆಲ್-ಇನ್-ಒನ್ ಡೆಸ್ಕ್‌ಟಾಪ್ ಎಂದು ಹೆಸರಿಸಲಾಗಿದೆ. ಇದರಲ್ಲಿ HP ಡ್ರಾಗನ್‌ಫ್ಲೈ ಫೋಲಿಯೊ G3 ಟ್ಯಾಬ್ಲೆಟ್-ಕಮ್-ಲ್ಯಾಪ್‌ಟಾಪ್ ಆಗಿದೆ. ಇನ್ನು HP 34 ಆಲ್-ಇನ್-ಒನ್ (AiO) ಡೆಸ್ಕ್‌ಟಾಪ್ ಪ್ರೀಮಿಯಂ ಮೆಟಲ್ ಫಿನಿಶ್ ಅನ್ನು ಹೊಂದಿದೆ.

ಹೆಚ್‌ಪಿ

ಹೌದು, ಹೆಚ್‌ಪಿ ಕಂಪೆನಿ ಭಾರತದಲ್ಲಿ ಹೊಸ HP ಡ್ರಾಗನ್‌ಫ್ಲೈ ಫೋಲಿಯೊ G3 ಮತ್ತು HP 34 ಆಲ್-ಇನ್-ಒನ್ ಡೆಸ್ಕ್‌ಟಾಪ್‌ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ HP 34 ಆಲ್-ಇನ್-ಒನ್ ಪಿಸಿಯು 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮರಾ HP ಕೀಸ್ಟೋನ್ ಕರೆಕ್ಷನ್‌ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಎರಡು ಪಿಸಿಗಳ ವಿಶೇಷತೆ ಏನು? ಇದರ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹೆಚ್‌ಪಿ ಡ್ರಾಗನ್‌ಫ್ಲೈ ಫೋಲಿಯೊ G3

ಹೆಚ್‌ಪಿ ಡ್ರಾಗನ್‌ಫ್ಲೈ ಫೋಲಿಯೊ G3

ಹೆಚ್‌ಪಿ ಡ್ರಾಗನ್‌ಫ್ಲೈ ಫೋಲಿಯೊ G3 ಪಿಸಿ ನಯವಾದ ವಿನ್ಯಾಸವನ್ನು ಹೊಂದಿದೆ. ಇದು ಹೈಬ್ರಿಡ್ ವರ್ಕ್ ಮೋಡ್‌ಗೆ ಸೂಕ್ತವಾಗಿದೆ. ಇನ್ನು ಈ ಪಿಸಿ 13.5 ಇಂಚಿನ ಟಚ್-ಎನೇಬಲ್ಡ್
OLED ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1920x1280 ಪಿಕ್ಸೆಲ್ ರೆಸಲ್ಯೂಶನ್ ಮತ್ತು ಆಂಟಿ-ಗ್ಲೇರ್ ಲೇಪನವನ್ನು ಪಡೆದಿದೆ. ಹೆಚ್‌ಪಿ ಡ್ರಾಗನ್‌ಫ್ಲೈ ಫೋಲಿಯೊ G3 ಪಿಸಿಯು 12 ನೇ-ಜನ್ ಇಂಟೆಲ್ ಕೋರ್ ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 32GB RAM ಮತ್ತು 2TB ಇಂಟರ್ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಡ್ರಾಗನ್‌ಫ್ಲೈ

HP ಡ್ರಾಗನ್‌ಫ್ಲೈ ಫೋಲಿಯೊ G3 ಬ್ಯುಸಿನೆಸ್‌ ದೃಷ್ಟಿಯಿಂದ HP ವುಲ್ಫ್ ಸೆಕ್ಯುರಿಟಿಯೊಂದಿಗೆ ಬರುತ್ತದೆ. ಇದರಿಂದ ಮಾಲ್‌ವೇರ್ ಮತ್ತು ಹ್ಯಾಕಿಂಗ್ ವಿರುದ್ಧ ಪ್ರೊಟೆಕ್ಷನ್‌ ಅನ್ನು ನೀಡಲಿದೆ. ಇದಲ್ಲದೆ ವೀಡಿಯೊ ಕರೆಗಳಿಗಾಗಿ 100-ಡಿಗ್ರಿ ವ್ಯೂ ನೀಡುವ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅವಡಿಸಲಾಗಿದೆ. ಯಾವುದೇ ಸ್ಥಾನದಲ್ಲಿ ಬೇಕಾದರೂ ಫ್ರೇಮ್‌ನಲ್ಲಿ ಇರಿಸಲು ಕ್ಯಾಮರಾ HP ಆಟೋ ಫ್ರೇಮ್ ಬೆಂಬಲವನ್ನು ಪಡೆಯುತ್ತದೆ. ಜೊತೆಗೆ ಬಳಕೆದಾರರು ಮೈಕ್ರೋಫೋನ್‌ನಿಂದ ದೂರದಲ್ಲಿದ್ದರೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು HP ಡೈನಾಮಿಕ್ ವಾಯ್ಸ್ ಲೆವೆಲಿಂಗ್ ಅನ್ನು ಒಳಗೊಂಡಿದೆ.

HP 34 ಆಲ್-ಇನ್-ಒನ್ ಡೆಸ್ಕ್‌ಟಾಪ್ PC

HP 34 ಆಲ್-ಇನ್-ಒನ್ ಡೆಸ್ಕ್‌ಟಾಪ್ PC

HP 34 ಆಲ್-ಇನ್-ಒನ್ ಡೆಸ್ಕ್‌ಟಾಪ್ PC 34 ಇಂಚಿನ 5K ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 5120x2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 12 ನೇ-ತಲೆಮಾರಿನ ಇಂಟೆಲ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಎನ್ವಿಡಿಯಾ ಜಿಫೋರ್ಸ್ ಆರ್‌ಟಿಎಕ್ಸ್ ಗ್ರಾಫಿಕ್ಸ್‌ ಕಾರ್ಡ್‌ ಅನ್ನು ಒಳಗೊಂಡಿದೆ. ಜೊತೆಗೆ 128GB DDR5 ವರೆಗೆ ಅಪ್‌ಗ್ರೇಡ್ ಮಾಡಬಹುದಾದ ಸ್ಟೋರೇಜ್‌ ಅನ್ನು ಪಡೆದಿದೆ.

HP

HP 34 ಆಲ್-ಇನ್-ಒನ್ ಡೆಸ್ಕ್‌ಟಾಪ್ PC ಕೀಸ್ಟೋನ್ ಕರೆಕ್ಷನ್ ಟೆಕ್ನಾಲಜಿಯನ್ನು ಒಳಗೊಂಡಿದೆ. ಈ ಕಂಪ್ಯೂಟರ್‌ ಮ್ಯಾಗ್ನೆಟಿಕ್ 16ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾವನ್ನು ಹೊಂದಿದೆ. ವೀಡಿಯೊ ಕಾನ್ಫರೆನ್ಸ್ ಕಾಲ್‌ ಟೈಂನಲ್ಲಿ ಬಳಕೆದಾರರಿಗೆ ವಿರಾಮ ಬೇಕಾದಾಗ, HP ಬಿ ರೈಟ್ ಬ್ಯಾಕ್ ಫೀಚರ್ಸ್‌ ಅವರ ವೀಡಿಯೊ ಫೀಡ್ ಅನ್ನು ಸ್ಥಿರ ಚಿತ್ರಕ್ಕೆ ಬದಲಾಯಿಸಲು ಅನುಮತಿಸುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹೆಚ್‌ಪಿ ಡ್ರಾಗನ್‌ಫ್ಲೈ ಫೋಲಿಯೊ G3 ಪಿಸಿ ಭಾರತದಲ್ಲಿ 2,01,000ರೂ. ಆರಂಭಿಕ ಬೆಲೆಯಲ್ಲಿ ಲಭ್ಯವಿದೆ. ಇನ್ನು HP 34 ಆಲ್‌-ಇನ್‌-ಒನ್‌ ಡೆಸ್ಕ್‌ಟಾಪ್ PC ಭಾರತದಲ್ಲಿ 1,75,999ರೂ.ಗಳ ಆರಂಭಿಕ ಬೆಲೆಯನ್ನು ಹೊಂದಿದೆ.
ಇದಲ್ಲದೆ ಹೆಚ್‌ಪಿ ಕಂಪೆನಿ HP Z32k G3 4K USB-C ಡಿಸ್‌ಪ್ಲೇಯನ್ನು ಸಹ ಅನಾವರಣಗೊಳಿಸಿದ್ದು, ಇದು ನವೆಂಬರ್‌ನಲ್ಲಿ 90,000ರೂ. ಆರಂಭಿಕ ಬೆಲೆಗೆ ಲಭ್ಯವಾಗುವ ನಿರೀಕ್ಷೆಯಿದೆ. ಇದಲ್ಲದೆ HP 965 4K ಸ್ಟ್ರೀಮಿಂಗ್ ವೆಬ್‌ಕ್ಯಾಮ್ 21,999ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಎಲ್ಲಾ ಹೊಸ ಸಾಧನಗಳು HP ಭಾರತದ ಅಧಿಕೃತ ಚಾನಲ್‌ಗಳ ಮೂಲಕ ಲಭ್ಯವಿರುತ್ತವೆ.

Best Mobiles in India

Read more about:
English summary
HP says the new HP Dragonfly Folio G3 comes with HP Wolf Security for Business that offers a defence against malware and hacking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X