'ಹೈಪರ್‌ಲೂಪ್' ಪ್ಯಾಡ್‌ ಮಾದರಿಯ ವಿಡಿಯೊ ಬಿಡುಗಡೆ!..ಹೇಗಿದೆ ವಿಶ್ವದ ವೇಗದ ಸಾರಿಗೆ?

ನಿರ್ವಾತ ವಾತಾವರಣವನ್ನು ಕಲ್ಪಿಸಿರುವ ಕೊಳವೆ ಮಾರ್ಗವನ್ನು ನಿರ್ಮಿಸಿ, ಅದರೊಳಗೆ ಪ್ರಯಾಣಿಕರು ಕುಳಿತ ಸಣ್ಣ ವಾಹನವೊಂದು ವಿಮಾನಕ್ಕಿಂತಲೂ ವೇಗವಾಗಿ ಸಂಚರಿಸಬಹುದಾದ ‘ಹೈಪರ್‌ಲೂಪ್‌’ ತಂತ್ರಜ್ಞಾನದ ಬಗ್ಗೆ ನೀವು ಈಗಾಗಲೇ ಕೇಳಿದ್ದೀರಾ ಅಲ್ಲವೇ.?

|

ನಿರ್ವಾತ ವಾತಾವರಣವನ್ನು ಕಲ್ಪಿಸಿರುವ ಕೊಳವೆ ಮಾರ್ಗವನ್ನು ನಿರ್ಮಿಸಿ, ಅದರೊಳಗೆ ಪ್ರಯಾಣಿಕರು ಕುಳಿತ ಸಣ್ಣ ವಾಹನವೊಂದು ವಿಮಾನಕ್ಕಿಂತಲೂ ವೇಗವಾಗಿ ಸಂಚರಿಸಬಹುದಾದ 'ಹೈಪರ್‌ಲೂಪ್‌' ತಂತ್ರಜ್ಞಾನದ ಬಗ್ಗೆ ನೀವು ಈಗಾಗಲೇ ಕೇಳಿದ್ದೀರಾ ಅಲ್ಲವೇ.? ಈ ಭವಿಷ್ಯದ ಸಾರಿಗೆ ವ್ಯವಸ್ಥೆಯ ಹೈಪರ್‌ಲೂಪ್ ಪ್ಯಾಡ್ ತಾಯಾರಾಗಿದೆ.!

ಸದ್ಯಕ್ಕೆ ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಅರ್ಧ ಕಿ.ಮೀ. ಉದ್ದದ ಕೊಳವೆ ಮಾರ್ಗ ನಿರ್ಮಿಸಲಾಗಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಸಮುದ್ರ ಮಟ್ಟಕ್ಕಿಂತ 2 ಲಕ್ಷ ಅಡಿಯಷ್ಟು ಮೇಲೆ ಎಷ್ಟು ಒತ್ತಡವಿದೆಯೋ ಅಷ್ಟು ಒತ್ತಡವನ್ನು ಈ ಕೊಳವೆಯಲ್ಲಿ ಸೃಷ್ಟಿಸಲಾಗಿದೆ. ಅಂದುಕೊಂಡಂತೆ ಎಲ್ಲವೂ ಜಾರಿಯಾದರೆ ಶೀಘ್ರವೇ ಹೈಪರ್‌ಲೂಪ್ ಪ್ರಯಾಣ ಶುರುವಾಗಲಿದೆ.

'ಹೈಪರ್‌ಲೂಪ್' ಪ್ಯಾಡ್‌ ಮಾದರಿಯ ವಿಡಿಯೊ ಬಿಡುಗಡೆ!..ಹೇಗಿದೆ ವಿಶ್ವದ ವೇಗದ ಸಾರಿಗೆ

ವಸ್ತುಗಳನ್ನು ಒಂದು ಕೊಳವೆಯಲ್ಲಿ ಅತ್ಯಂತ ವೇಗದಲ್ಲಿ ರವಾನಿಸುವ ಈ ತಂತ್ರಜ್ಞಾನವನ್ನು ಜನರನ್ನು ಮತ್ತು ಸರಕನ್ನು ದೂರದೂರಿಗೆ ಸಾಗಣೆ ಮಾಡಲು ಯಾಕೆ ಬಳಸಬಾರದು ಎಂದು ಯೋಚಿಸಿ ಕೆಲಸ ಆರಂಭಿಸಿದ ಅಮೆರಿಕದ ಉದ್ಯಮಿ, ಸ್ಪೇಸ್‌ ಎಕ್ಸ್‌ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್ ಮಸ್ಕ್ ಕನಸು ನನಸಾಗುವತ್ತ ಅಭಿವೃದ್ದಿ ಬಹಳ ವೇಗವಾಗಿ ನಡೆಯುತ್ತಿದೆ.

ಇತ್ತೀಚೆಗೆ ತಂತ್ರಜ್ಞಾನದತ್ತ ಹೆಚ್ಚು ಮುಖ ಮಾಡುತ್ತಿರುವ ದುಬೈನಲ್ಲಿ ಈ ಹೈಪರ್‌ಲೂಪ್ ಪ್ಯಾಡ್‌ ಮಾದರಿಯನ್ನು ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಂದುಕೊಂಡಂತೆ ಎಲ್ಲವೂ ಜಾರಿಯಾದರೆ ದುಬೈ ಮತ್ತು ಅಬುಧಾಬಿ ನಡುವೆ 12 ನಿಮಿಷದಲ್ಲಿ ಪಯಣಿಸಬಹುದು. ಗಂಟೆಗೆ 10 ಸಾವಿರ ಪ್ರಯಾಣಿಕರು ಪಯಣಿಸಬಹುದು ಎಂದು ಅಂದಾಜು ಮಾಡಲಾಗಿದೆ.

'ಹೈಪರ್‌ಲೂಪ್' ಪ್ಯಾಡ್‌ ಮಾದರಿಯ ವಿಡಿಯೊ ಬಿಡುಗಡೆ!..ಹೇಗಿದೆ ವಿಶ್ವದ ವೇಗದ ಸಾರಿಗೆ

ಹೈಪರ್‌ಲೂಪ್ ಪ್ಯಾಡ್‌ಗೆ ವಿದ್ಯುತ್‌ ಮುನ್ನೂಕುವಿಕೆ (ಎಲೆಕ್ಟ್ರಿಕ್ ಪ್ರೊಪಲ್ಶನ್)ನಿಂದ ವೇಗೋತ್ಕರ್ಷ ನೀಡಿ, ಅಯಸ್ಕಾಂತೀಯ ತೇಲುವಿಕೆಯನ್ನು (ಮ್ಯಾಗ್ನೆಟಿಕ್ ಲೆವಿಟೇಶನ್) ಬಳಸಲಾಗುತ್ತಿದೆ. ಕೊಳವೆಯಲ್ಲಿ ಅಲ್ಲಲ್ಲಿ ಅಳವಡಿಸಲಾಗುವ ಮೋಟರ್‌ಗಳಿಂದ ವೇಗವನ್ನು ಹೆಚ್ಚು- ಕಡಿಮೆ ಮಾಡಬಹುದು ಎಂದು ಹೈಪರ್‌ಲೂಪ್ ತಂತ್ರಜ್ಞಾನ ತಂಡ ಹೇಳಿದೆ.

ಹೈಪರ್‌ಲೂಪ್ ತಂತ್ರಜ್ಞಾನವನ್ನು ಭಾರತದಲ್ಲಿಯೂ ತರುವ ಯೋಜನೆಗೆ 2-3 ಕಂಪನಿಗಳು ಭಾರತದಲ್ಲಿ ವಿವಿಧ ರಾಜ್ಯಗಳ ಸರ್ಕಾರಗಳನ್ನು ಸಂಪರ್ಕಿಸಿವೆ. ಬೆಂಗಳೂರಿನ ಏರೋ ಇಂಡಿಯಾ ಷೋನಲ್ಲಿ ಎಲಾನ್ ಮಸ್ಕ್ ಒಡೆತನದ ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟೇಶನ್ ಟೆಕ್ನಾಲಜೀಸ್‌ ಬೆಂಗಳೂರು- ಮೈಸೂರು ಮಧ್ಯೆ ಹೈಪರ್‌ಲೂಪ್ ಮಾರ್ಗ ನಿರ್ಮಾಣದ ಕನಸು ಬಿತ್ತಿರುವುದು ವೈರಲ್ ಕೂಡ ಆಗಿದೆ.

ಓದಿರಿ: ಉಚಿತವಾಗಿ ಅಂತರಾಷ್ಟ್ರೀಯ ಕರೆ ಮಾಡಲು ಇರುವ ಟಾಪ್ 5 ಬೆಸ್ಟ್ ಆಂಡ್ರಾಯ್ಡ್ ಆಪ್ಸ್!!

Best Mobiles in India

English summary
Virgin Hyperloop One, previously known as Hyperloop One before they secured a new investment from Richard Branson’s Virgin.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X