ಈ ಮೂರು ಆಪ್‌ಗಳ ಬಗ್ಗೆ ಎಚ್ಚರಿಸಿದ ಗೂಗಲ್‌; ಇಂದೇ ಅನ್‌ಇನ್‌ಸ್ಟಾಲ್‌ ಮಾಡಿಬಿಡಿ!

|

ಗೂಗಲ್ ಸಂಸ್ಥೆಯು ತನ್ನ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ಕಾಲಕಾಲಕ್ಕೆ ತನ್ನ ಸೇವೆಗಳನ್ನು ಪರಿಸ್ಕರಿಸುತ್ತದೆ. ಯಾಕೆಂದರೆ ಗೂಗಲ್‌ ಪ್ಲೇ ಸ್ಟೋರ್‌ಗೆ ಕಳ್ಳರು ನುಸುಳುವುದಲ್ಲದೇ ನಿಮ್ಮ ಡೇಟಾವನ್ನು ವಶಕ್ಕೆ ಪಡೆದು ನಿಮ್ಮನ್ನು ಕಾಡಲು ಮುಂದಾಗುತ್ತಾರೆ. ಈ ಕಾರಣಕ್ಕೆ ಕೆಲವು ತಿಂಗಳ ಹಿಂದಷ್ಟೇ ಹಲವಾರು ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಲಾಗಿತ್ತು. ಇದರ ನಡುವೆಯೇ ಈಗ ಮತ್ತೆ ಮೂರು ಆಪ್‌ಗಳ ಬಗ್ಗೆ ಗೂಗಲ್‌ ಎಚ್ಚರಿಸಿದೆ. ನಿಮ್ಮ ಬಳಿ ಈ ಆಪ್‌ಗಳಿದ್ದರೆ ತಕ್ಷಣವೇ ರಿಮೂವ್‌ ಮಾಡಿ.

ಗೂಗಲ್‌ ಪ್ಲೇ ಸ್ಟೋರ್‌

ಹೌದು, ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ 3 ಆಪ್‌ಗಳ ಹೆಸರನ್ನು ಗೂಗಲ್‌ ತಿಳಿಸಿದೆ. ಹಾಗೆಯೇ ಯಾವುದೇ ರೀತಿಯಲ್ಲೂ ಈ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಬಾರದು ಎಂದು ಎಚ್ಚರಿಕೆ ನೀಡಿದೆ. ಹಾಗಿದ್ರೆ, ಯಾವುವು ಆ ಮೂರು ಆಪ್‌ಗಳು, ಅವುಗಳಿಂದ ಸ್ಮಾರ್ಟ್‌ಫೋನ್‌ಗೆ ಆಗುವ ಅನಾನುಕೂಲತೆ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

2 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌

2 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಲ್‌

ಗೂಗಲ್‌ ಮಾಹಿತಿ ಪ್ರಕಾರ ಈ ಮೂರು ಆಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಗ್ರಾಹಕರು ಸುಮಾರು 2 ಮಿಲಿಯನ್‌ಗಿಂತಲೂ ಹೆಚ್ಚು ಡೌನ್‌ಲೋಡ್‌ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಮೂರು ಆಪ್‌ಗಳು ಅತ್ಯಂತ ಅಪಾಯಕಾರಿ ಆಪ್‌ ಎಂದು ತಿಳಿಸಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಗೂಗಲ್ ಈ 3 ಆಪ್ ಗಳನ್ನು ಇನ್ ಸ್ಟಾಲ್ ಮಾಡಿಕೊಂಡಿರುವವರು ಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಯಾಕೆಂದರೆ, ಈ ಮೂರು 'ರಿಮೋಟ್' ಆಪ್‌ಗಳಾಗಿದ್ದು, ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಮಾಹಿತಿಯನ್ನು ಕದಿಯುವ ಹ್ಯಾಕರ್‌ಗಳಿಗೆ ರಿಮೋಟ್ ಕಂಟ್ರೋಲ್ ಆಯ್ಕೆ ಒದಗಿಸುತ್ತವೆ ಎಂದು ತಿಳಿಸಿದೆ.

ಯಾವುವು ಆ ಮೂರು ಆಪ್‌ಗಳು ?

ಯಾವುವು ಆ ಮೂರು ಆಪ್‌ಗಳು ?

ಯಾವುದೇ ಕಾರಣಕ್ಕೂ ಸಹ ಈ ಆಪ್‌ಗಳನ್ನು ಯಾವ ಮೂಲದಿಂದಲೂ ಇನ್‌ಸ್ಟಾಲ್‌ ಮಾಡಿಕೊಳ್ಳಬೇಡಿ ಎಂದು ತಿಳಿಸಿರುವ ಗೂಗಲ್‌ ಅವುಗಳ ಹೆಸರನ್ನು ಬಹಿರಂಗಡಿಸಿದೆ. ಲೇಜಿ ಮೌಸ್, ಟೆಲಿಪ್ಯಾಡ್ ಹಾಗೂ ಪಿಸಿ ಕೀಬೋರ್ಡ್ ಆಪ್‌ಗಳು ಈಗಾಗಲೇ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇದ್ದರೆ ತಕ್ಷಣವೇ ಅನ್‌ಇನ್‌ಸ್ಟಾಲ್‌ ಮಾಡುವುದನ್ನು ಮರೆಯಬೇಡಿ.

ಗೂಗಲ್‌ ಪ್ಲೇ ಸ್ಟೋರ್‌ ಯಾಕೆ ಇಂತಹ ಆಪ್‌ಗಳಿಗೆ ಅನುಮತಿ ನೀಡಿದೆ?

ಗೂಗಲ್‌ ಪ್ಲೇ ಸ್ಟೋರ್‌ ಯಾಕೆ ಇಂತಹ ಆಪ್‌ಗಳಿಗೆ ಅನುಮತಿ ನೀಡಿದೆ?

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಎಲ್ಲಾ ಆಪ್‌ಗಳು ಸುರಕ್ಷಿತ ಅಪ್ಲಿಕೇಶನ್‌ಗಳು ಎಂದು ಎಂದಿಗೂ ಸಹ ಗೂಗಲ್‌ ಖಾತರಿಪಡಿಸುವುದಿಲ್ಲ.ಆದರೆ ಕಾಲಕಾಲಕ್ಕೆ ತಕ್ಕಂತೆ ಎಲ್ಲಾ ಆಪ್‌ಗಳನ್ನು ಪರಿಶೀಲನೆ ಒಳಪಡಿಸುತ್ತದೆ. ಕೆಲವೊಮ್ಮೆ ಆರಂಭದಲ್ಲಿ ಒಂದು ಉದ್ದೇಶದಿಂದ ಗೂಗಲ್‌ ಆಪ್‌ ಸ್ಟೋರ್‌‌ಗೆ ಎಂಟ್ರಿಯಾಗುವ ಆಪ್‌ಗಳು ಕಾಲನಂತರದಲ್ಲಿ ತಮ್ಮ ಉದ್ದೇಶವನ್ನೇ ಬದಲಿಸಿಕೊಂಡು ಬಳಕೆದಾರರಿಗೆ ಸಂಕಷ್ಟ ತಂದೊಡ್ಡುತ್ತವೆ. ಇದು ಗೂಗಲ್‌ಗೆ ತಲೆನೋವಿನ ಕೆಲಸವೂ ಹೌದು.

ನೀವು ಮಾಡಬೇಕಿರುವುದೇನು?

ನೀವು ಮಾಡಬೇಕಿರುವುದೇನು?

ಸಾಮಾನ್ಯವಾಗಿ ಯಾವುದೇ ಆಪ್‌ ಇನ್‌ಸ್ಟಾಲ್‌ ಮಾಡಲು ಮುಂದಾದಾಗ ನೀವು ಸ್ವಲ್ಪ ಜಾಗರೂಕತೆ ವಹಿಸಬೇಕಿದೆ. ಆಪ್‌ ಡೌನ್‌‌ಲೋಡ್‌ ಮಾಡುವ ಮುನ್ನವೇ ಆ ಆಪ್‌ಗೆ ಸಂಬಂಧಿಸಿದ ರೇಟಿಂಗ್‌ ಗಮನಿಸಿ ಹಾಗೂ ಆ ಆಪ್‌ಗೆ ಕೊಡಲಾದ ಕಮೆಂಟ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ಇದಿಷ್ಟೇ ಅಲ್ಲದೆ ಎಷ್ಟು ಜನ ಆಪ್‌ ಇನ್‌ಸ್ಟಾಲ್‌ ಮಾಡಿಕೊಂಡಿದ್ದಾರೆ ಎನ್ನುವುದನ್ನೂ ಗಮನಿಸಿ. ಈ ಮೂಲಕ ನಿಮ್ಮ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಬಹುದು.

ಎಲ್ಲದಕ್ಕೂ ಅನುಮತಿ ಕೊಡಬೇಡಿ

ಎಲ್ಲದಕ್ಕೂ ಅನುಮತಿ ಕೊಡಬೇಡಿ

ಯಾವುದೇ ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡಿಕೊಂಡರೂ ಆ ಆಪ್‌ಗಳ ಉದ್ದೇಶಕ್ಕೆ ತಕ್ಕಂತೆ ಕೆಲವು ವಿಭಾಗಕ್ಕೆ ಅನುಮತಿ ಕೇಳುತ್ತವೆ. ಆದರೆ ಕೆಲವು ಆಪ್‌ಗಳು ಉದ್ದೇಶವನ್ನು ಬಿಟ್ಟು ಎಲ್ಲಾ ರೀತಿಯ ವಿಭಾಗದಲ್ಲೂ ಅನುಮತಿ ಕೇಳುವುದುಂಟು. ಇದನ್ನು ಗಂಭೀರವಾಗಿ ಪರಿಗಣಿಸಿ ಅಗತ್ಯ ಇದ್ದರೆ ಮಾತ್ರ ಬೇಕಾದ ವಿಭಾಗಗಳಿಗೆ ಅನುಮತಿ ನೀಡಿ. ಇಲ್ಲವಾದರೆ ನಿಮ್ಮ ಫೋಟೋ, ಬ್ಯಾಂಕ್‌ ವಿವರ ಹಾಗೂ ನಿಮ್ಮ ಫೋನ್‌ ಸಂಖ್ಯೆಗಳು ಸುಲಭವಾಗಿ ಹ್ಯಾಕರ್‌ಗಳಿಗೆ ತಿಳಿಯುತ್ತದೆ. ಈ ಮೂಲಕ ನೀವು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.

Best Mobiles in India

English summary
Immediately delete these popular apps now from your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X