ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ಫಜೀತಿ ತಂದಿಟ್ಟ ಸರ್ಕಾರದ ಹೊಸ ರೂಲ್ಸ್!!

|

ಭಾರತದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಇ ಕಾಮರ್ಸ್ ವಲಯದ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿದೆ. ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಕಂಟಕವಾಗಿ ಪರಿಣಮಿಸಿರುವ ವಿದೇಶಿ ಹೂಡಿಕೆಯಿರುವ ಇ-ಕಾಮರ್ಸ್ ಗಳ ಕೆಲವು ಮಾರುಕಟ್ಟೆ ತಂತ್ರಗಳಿಗೆ ಕೇಂದ್ರ ಸರ್ಕಾರ ಅಂಕುಶ ಹಾಕುವುದಕ್ಕೆ ತಯಾರಾಗಿದ್ದು, ದೇಶದಲ್ಲಿ ಅಗಾಧವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ವಲಯದಲ್ಲಿ ಭಾರತದ ಪ್ರಾಬಲ್ಯವನ್ನು ವೃದ್ಧಿಸಲು ಹೊಸ ನೀತಿಯನ್ನುಭಾರತ ಸರ್ಕಾರ ರೂಪಿಸುತ್ತಿದೆ ಎಂಬ ಸುದ್ದಿ ಹೊರಬಿದ್ದಿದೆ.

ಫೆ.2019 ರಿಂದ ಇ-ಕಾಮರ್ಸ್ ವ್ಯವಸ್ಥೆಗೆ ಈ ನಿಯಮ ಜಾರಿಗೆ ಬರಲಿದ್ದು, ವಿದೇಶಿ ನೇರ ಬಂಡವಾಳ ಹೂಡಿಕೆ ಇರುವ ಅಮೇಜಾನ್, ಫ್ಲಿಪ್ ಕಾರ್ಟ್ ನಂತಹ ಇ-ಕಾಮರ್ಸ್ ಸಂಸ್ಥೆಗಳ ಮಾರುಕಟ್ಟೆ ತಂತ್ರಗಳಿಗೆ ಕಡಿವಾಣ ಬೀಳಲಿದೆ. ಮುಂದಿನ ದಿನಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಇರುವ ಇ-ಕಾಮರ್ಸ್ ಸಂಸ್ಥೆಗಳು ಉದ್ಯಮ ಹಿತಾಸಕ್ತಿ ದೃಷ್ಟಿಯಿಂದ ಒಪ್ಪಂದ ಮಾಡಿಕೊಂಡು ಯಾವುದೇ ಉತ್ಪನ್ನಗಳನ್ನು ಎಕ್ಸ್ ಕ್ಲ್ಯೂಸಿವ್ ಆಗಿ ಮಾರಾಟ ಮಾಡುವಂತಿಲ್ಲ ಎಂದು ಹೇಳಿರುವುದು ಸ್ಥಳೀಯ ಇ-ಕಾಮರ್ಸ್ ಸಂಸ್ಥೆಗಳಿಗೆ ಸಮಾನವಾದ ಅವಕಾಶ ಸಿಗಲಿದೆ.

ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ಫಜೀತಿ ತಂದಿಟ್ಟ ಸರ್ಕಾರದ ಹೊಸ ರೂಲ್ಸ್!!

ಅಮೆಜಾನ್, ಫ್ಲಿಪ್‌ಕಾರ್ಟ್ ಸೆರಿದಂತೆ ದೊಡ್ಡ ದೊಡ್ಡ ಆನ್‌ಲೈನ್ ಮಾರಾಟ ಕಂಪೆನಿಗಳಿಗೆ ನಿಯಂತ್ರಣ ಹೇರಲು ಭಾರತ ಸರ್ಕಾರ ಸಜ್ಜಾಗಿದೆ. ಸ್ವದೇಶಿ ಕಂಪನಿಗಳು ಹಾಗೂ ಉತ್ಪಾದನೆಯನ್ನು ಉತ್ತೇಜಿಸುವಂತಹ ನಿಯಮಗಳನ್ನು ತರಲು ಸರ್ಕಾರ ನಿರ್ಧರಿಸಿದೆ. ದೇಶ ಮೊದಲು ಅಭಿಪ್ರಾಯದಲ್ಲಿ ರೂಪಿಸಲು ಹೊರಟಿರುವ ಈ ಕ್ರಮ ಚೀನಾದ ಮಾರುಕಟ್ಟೆ ತಂತ್ರವನ್ನು ಹೋಲುತ್ತಿದೆ.ಹಾಗಾದರೆ, ಇ ಕಾಮರ್ಸ್ ವಲಯದ ಸುಧಾರಣೆಗೆ ಕೇಂದ್ರ ಸರಕಾರ ಮುಂದಾಗಿರುವುದೇಕೆ? ಇದರಿಂದ ಆಗಬಹುದಾದ ಪರಿಣಾಮಗಳೇನು ಎಂಬುದನ್ನು ಮುಂದೆ ಓದಿ.

ದೇಶೀಯ ಉತ್ಪಾದನೆಗೆ ಭಾರೀ ಉತ್ತೇಜನ

ದೇಶೀಯ ಉತ್ಪಾದನೆಗೆ ಭಾರೀ ಉತ್ತೇಜನ

ನೂತನ ಕರಡು ನೀತಿಯ ಪ್ರಕಾರ, ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಶಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಲಾಗುತ್ತಿದೆ. ಈ ರಿಯಾಯಿತಿಯು ವಿದೇಶಿ ಮೂಲದ ಇ-ಕಾಮರ್ಸ್ ಕಂಪನಿಗಳಿಗೆ ಹಾಗೂ ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಕಂಪನಿಗಳಿಗೆ ಸಿಗಲಾರದು.

ಭಾರತೀಯ ಸ್ಥಾಪಕರಿಗೆ ಹೆಚ್ಚು ಅಧಿಕಾರ

ಭಾರತೀಯ ಸ್ಥಾಪಕರಿಗೆ ಹೆಚ್ಚು ಅಧಿಕಾರ

ಭಾರತದಲ್ಲಿ ಶೇ.49 ರಷ್ಟು ಮೀರದಂತೆ ವಿದೇಶಿ ಹೂಡಿಕೆ ಹೊಂದಿರುವ ಇ-ಕಾಮರ್ಸ್ ಕಂಪನಿಗಳಲ್ಲಿ ಭಾರತೀಯ ಮೂಲದ ಸ್ಥಾಪಕರಿಗೆ ಹೆಚ್ಚಿನ ಹಕ್ಕು, ಅಧಿಕಾರ ಒದಗಿಸುವಂತಹ ಕರಡು ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದರಿಂದ ಭಾರತೀಯರೇ ಭಾರತೀಯ ಇ ಕಾಮರ್ಸ್ ಕಂಪೆನಿಯ ಆಡಳಿತಮಂಡಳಿಯನ್ನು ನಿಯಂತ್ರಿಸಲು ಸಾಧ್ಯವಾಗುವಂತಿರಲಿದೆ.

ಡೇಟಾ ಸಂಗ್ರಹ ಪರಿಶೀಲನೆ!

ಡೇಟಾ ಸಂಗ್ರಹ ಪರಿಶೀಲನೆ!

ಇ-ಕಾಮರ್ಸ್ ಕಂಪನಿಗಳ ಡೇಟಾ ಸಂಗ್ರಹದ ಪರಿಶೀಲನೆಗೆ ಕೇಂದ್ರ ಸರ್ಕಾರ ವ್ಯವಸ್ಥೆ ಕಲ್ಪಿಸುತ್ತಿದೆ. ಕಂಪನಿಗಳ ವಹಿವಾಟು, ಗ್ರಾಹಕ ಮಾಹಿತಿ ಇತ್ಯಾದಿ ವಿವರಗಳು ಇದರಲ್ಲಿ ಲಭ್ಯವಾಗಲಿದೆ. ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ಅಗತ್ಯ ಇದ್ದಾಗ ಭಾರತ ಸರಕಾರ ಈ ವಿವರಗಳನ್ನು ಪರಿಶೀಲಿಸಲಿದೆ. ಇದು ಗ್ರಾಹಕರ ಹಿತ ಕಾಪಾಡಲು ಸಹಾಯಕವಾಗಲಿದೆ.

ಕಠಿಣ ನಿಯಂತ್ರಕ ವ್ಯವಸ್ಥೆ

ಕಠಿಣ ನಿಯಂತ್ರಕ ವ್ಯವಸ್ಥೆ

ಭಾರತದ ಅರ್ಥ ವ್ಯವಸ್ಥೆ ಮೇಲೆ ಪ್ರಭಾವ ಬೀರುವಂತಹ ಇ-ಕಾಮರ್ಸ್ ಕಂಪನಿಗಳ ಸ್ವಾಧೀನ-ವಿಲೀನ ಪ್ರಕ್ರಿಯೆಗಳಲ್ಲಿ ಕಾಂಪಿಟೇಶನ್ ಕಮೀಶನ್ ಇತ್ಯಾದಿ ನಿಯಂತ್ರಕ ವ್ಯವಸ್ಥೆಗಳು ಕೂಲಂಕುಷ ನಿಗಾ ವಹಿಸಬೇಕು ಎಂದು ಕರಡು ತಿಳಿಸಿದೆ. ಅಮೆರಿಕಾದ ಚಿಲ್ಲರೆ ಮಾರಾಟದ ದಿಗ್ಗಜ ವಾಲ್‌ಮಾರ್ಟ್, ಫ್ಲಿಪ್‌ಕಾರ್ಟ್ ಖರೀದಿಸಿದ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ದರಗಳ ಮೇಲೆ ಪ್ರಭಾವ ಬೀರುವಂತಿಲ್ಲ.

ದರಗಳ ಮೇಲೆ ಪ್ರಭಾವ ಬೀರುವಂತಿಲ್ಲ.

ಆನ್‌ಲೈನ್‌ ವಲಯದ ಕಂಪನಿಗಳ ಸಮೂಹವು ತನ್ನ ಅಧೀನ ಕಂಪನಿ ಅಥವಾ ಸಂಬಂಧವಿರುವ ಕಂಪನಿಯ ಮೂಲಕ ಭಾರಿ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಇ-ಕಾಮರ್ಸ್‌ ದೈತ್ಯ ಕಂಪನಿಗಳ ರಿಟೇಲ್ ತಂತ್ರಗಾರಿಕೆಗೆ ಅಂಕುಶ ಬೀಳಲಿದೆ.

ಅಗ್ಗದ ದರದಲ್ಲಿ ಮಾರುವಂತಿಲ್ಲ!

ಅಗ್ಗದ ದರದಲ್ಲಿ ಮಾರುವಂತಿಲ್ಲ!

ಅಮೆಜಾನ್‌, ಫ್ಲಿಪ್‌ಕಾರ್ಟ್ ಮುಂತಾದ ಇ-ಕಾಮರ್ಸ್ ತಾಣಗಳಲ್ಲಿ ಭಾರಿ ಡಿಸ್ಕೌಂಟ್‌ಗಳಿಗೆ ಕಡಿವಾಣ ಬೀಳುವ ಆತಂಕ ಎದುರಾಗಿದೆ. ಮಾರುಕಟ್ಟೆಯ ದರದ ಮೇಲೆ ಪ್ರಭಾವ ಬೀರುವಂತ ಅಗ್ಗದ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡುವ ಪದ್ಧತಿಗೆ ನಿರ್ಬಂಧ ಹೇರಲಾಗಿದ್ದು, ಗ್ರಾಹಕ ಮತ್ತು ಉತ್ಪಾದಕರೀರ್ವರ ಕಾಪಾಡುವ ಹೊಣೆಯನ್ನು ಸರ್ಕಾರ ಹೊತ್ತಿದೆ.

ದರ ಕಡಿತಕ್ಕೆ ಅವಧಿ

ದರ ಕಡಿತಕ್ಕೆ ಅವಧಿ

ಇ-ಕಾಮರ್ಸ್ ಕಂಪನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಿದರೆ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಸಾಧ್ಯ ಎಂದು ಸಲಹೆ ಮಾಡಿದೆ. ಇದರಿಂದ ಇ-ಕಾಮರ್ಸ್ ದೈತ್ಯ ಕಂಪನಿಗಳ ರಿಟೇಲ್ ತಂತ್ರಗಾರಿಕೆಗೆ ಅಂಕುಶ ಬೀಳಲಿದೆ ಎಂದು ಹೇಳಲಾಗಿದೆ.

Best Mobiles in India

English summary
India will ban e-commerce companies such as Amazon.com and Walmart -owned Flipkart Group from selling products from companies in which they have an equity interest. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X