ನಿಮ್ಮ ಮುಂದಿನ ಪಾಸ್ ಪೋರ್ಟ್ ನ ಒಳಗೆ ಚಿಪ್ ಇರುವ ಸಾಧ್ಯತೆ

By Gizbot Bureau
|

ಪಾಸ್ ಪೋರ್ಟ್ ಮಾಡಿಸಿಕೊಳ್ಳುವುದು ಆನ್ ಲೈನ್ ಮೂಲಕ ಸುಲಭವಾಗುತ್ತಿದೆ ನಿಜ. ಅದಕ್ಕಾಗಿ ಯಾರದ್ದೋ ಕೈಕಾಲು ಹಿಡಿದು ಒದ್ದಾಡುವ ಅಗತ್ಯ ಈಗ ಇಲ್ಲವಾಗಿದೆ. ಅಷ್ಟೇ ಅಲ್ಲ ಪಾಸ್ ಪೋರ್ಟ್ ತಯಾರಿಕೆಯಲ್ಲಿ ಆಗುತ್ತಿದ್ದ ಲಂಚಗುಳಿತನವನ್ನು ನಿಲ್ಲಿಸುವುದಕ್ಕೂ ಕೂಡ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ಇನ್ನು ಪಾಸ್ ಪೋರ್ಟ್ ಅದೆಷ್ಟು ಸೆಕ್ಯೂರ್ ಆಗುತ್ತದೆ ಎಂದರೆ ಯಾವುದೇ ವ್ಯಕ್ತಿ ಪಾಸ್ ಪೋರ್ಟ್ ಹಿಡಿದು ಯಾವುದೇ ದೇಶಕ್ಕೆ ಪ್ರಯಾಣಿಸಿದರೂ ಕೂಡ ಅದರ ಮಾಹಿತಿ ಸರ್ಕಾರದ ಬಳಿ ಇರಲಿದೆ. ಅಷ್ಟೇ ಅಲ್ಲ ಆತ ಯಾವ ದೇಶದ ಯಾವ ಮೂಲೆಯಲ್ಲಿ ನಿಂತಿದ್ದಾನೆ ಎಂಬುದೂ ಕೂಡ ತಿಳಿಯುತ್ತದೆ. ಹೇಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ಸುಧಾರಿತ ಭದ್ರತಾ ವ್ಯವಸ್ಥೆ:

ಸುಧಾರಿತ ಭದ್ರತಾ ವ್ಯವಸ್ಥೆ:

ಮುಂದಿನ ದಿನಗಳಲ್ಲಿ ಸುಧಾರಿತ ಭದ್ರತಾ ವೈಶಿಷ್ಟ್ಯತೆಯನ್ನು ಅಳಡಿಸುವ ನಿಟ್ಟಿನಲ್ಲಿ ಪ್ರಯಾಣದ ದಾಖಲಾತಿಗಳು ಅನುಕೂಲವಾಗುವಂತಹ ವ್ಯವಸ್ಥೆಯುಳ್ಳ ಇ-ಪಾಸ್ ಪೋರ್ಟ್ ಗಳನ್ನು ಆದ್ಯತೆಯ ಮೇರೆಗೆ ಜಾರಿಗೆ ತರುವುದಕ್ಕೆ ತಮ್ಮ ಸಚಿವಾಲಯವು ಪ್ರಸ್ತಾವನೆ ಸಲ್ಲಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರಾಗಿರುವ ಎಸ್ ಜೈ ಶಂಕರ್ ತಿಳಿಸಿದ್ದಾರೆ.

ಇ ಪಾಸ್ ಪೋರ್ಟ್ ಗೆ ಸಲಹೆ:

ಇ ಪಾಸ್ ಪೋರ್ಟ್ ಗೆ ಸಲಹೆ:

ಏಳನೇ ಪಾಸ್ ಪೋರ್ಟ್ ಸೇವಾ ದಿವಸ್ ನಲ್ಲಿ ಮಾತನಾಡಿದ ಜೈಶಂಕರ್ ನಾಗರೀಕರಿಗೆ ಇ ಪಾಸ್ ಪೋರ್ಟ್ ಗಳನ್ನು ನೀಡುವ ಯೋಜನೆಗೆ ಸಂಬಂಧಿಸಿದಂತೆ ಸಚಿವಾಲಯವು ಇಂಡಿಯಾ ಸೆಕ್ಯುರಿಟಿ ಪ್ರೆಸ್ ನೊಂದಿಗೆ ಚರ್ಚಿಸಿದೆ ಎಂದು ತಿಳಿಸಿದ್ದಾರೆ. ಇ ಪಾಸ್ ಪೋರ್ಟ್ ಗಳನ್ನು ತಯಾರಿಸುವ ನಿಟ್ಟಿನಲ್ಲಿ ನಾವು ಸಲಹೆ ನೀಡುತ್ತಿದ್ದೇವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪಾಸ್ ಪೋರ್ಟ್ ಪುಸ್ತಕದಲ್ಲಿ ಸುಧಾರಿತ ಭದ್ರತಾ ವೈಶಿಷ್ಟ್ಯತೆಯು ಆದ್ಯತೆ ಮೇರೆಗೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

ಪಾಸ್ ಪೋರ್ಟ್ ಸೇವಾ ಕೇಂದ್ರ:

ಪಾಸ್ ಪೋರ್ಟ್ ಸೇವಾ ಕೇಂದ್ರ:

ಇನ್ನು ಹಿಂದಿನ ಸರ್ಕಾರದ ಅಧಿಕಾರದ ಅವಧಿಯಲ್ಲಿ ಮಾಡಿದ ಯಾವುದೇ ಲೋಕಸಭಾ ಕ್ಷೇತ್ರದಲ್ಲಿ ಹೊಸ ಪೋಸ್ಟ್ ಆಫೀಸ್ ಪಾಸ್ ಪೋರ್ಟ್ ಸೇವಾ ಕೇಂದ್ರ(POPSK) ಗಳನ್ನು ತೆರೆಯುವ ಪ್ರಕ್ರಿಯೆಯನ್ನು ಅದೇ ರೀತಿ ಮುಂದುವರಿಸುವ ಬದ್ಧತೆಯನ್ನು ಸಚಿವಾಲಯವು ತೋರಲಿದೆ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ..

ಹೊಸ ಆಫೀಸ್ ಗಳ ಅನಾವರಣ:

ಹೊಸ ಆಫೀಸ್ ಗಳ ಅನಾವರಣ:

ಈಗಾಗಲೇ ಪ್ರಕಟಿಸಿರುವ ಕೆಲವು POPSK ಬಿಡುಗಡೆಗಾಗಿ ಅಗತ್ಯವಾಗಿರುವ ಔಪಚಾರಿಕ ಕೆಲಸಗಳನ್ನು ಎರಡೂ ಸಚಿವಾಲಯಗಳು ಮುಗಿಸಿವೆ. ಇನ್ನು ಹೆಚ್ಚಿನ ಪಾಸ್ ಪೋರ್ಟ್ ಆಫೀಸ್ ಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸುವ ಭರವಸೆಯನ್ನು ಕೂಡ ಸಚಿವಾಲಯ ನೀಡಿದೆ. ಪಾಸ್ ಪೋರ್ಟ್ ವಿಚಾರದಲ್ಲಿ ಕಳೆದ ಐದು ವರ್ಷದಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಪಾರದರ್ಶಕ, ಪರಿಣಾಮಕಾರಿ,ಸಮಯೋಚಿತ,ವಿಶ್ವಾಸಾರ್ಹ,ಭರವಸೆಯ ಮತ್ತು ಜವಾಬ್ದಾರಿಯುತವಾಗಿರುವ ಸಾರ್ವಜನಿಕ ಸೇವಾ ವಿತರಣಾ ಕೆಲಸವು ನಡೆಯಲಿದೆ ಎಂದು ಜೈಶಂಕರ್ ತಿಳಿಸಿದ್ದಾರೆ.

ಮನೆಯ ಹತ್ತಿರವೇ ಪಾಸ್ ಪೋರ್ಟ್ ಆಫೀಸ್:

ಮನೆಯ ಹತ್ತಿರವೇ ಪಾಸ್ ಪೋರ್ಟ್ ಆಫೀಸ್:

ಪ್ರತಿ ವರ್ಷ 1 ಕೋಟಿಗೂ ಅಧಿಕ ಪಾಸ್ ಪೋರ್ಟ್ ನ್ನು ನೀಡಲಾಗುತ್ತಿದೆ. ಆ ನಿಟ್ಟಿನಲ್ಲಿ ಜನವರಿ 2017 ರಿಂದ ಸುಮಾರು 412 POPSK ಗಳನ್ನು ತೆರೆಯಲಾಗಿದೆ. ಆ ಕಾರಣಕ್ಕಾಗಿ ಕಮ್ಯುನಿಕೇಷನ್ ಸಚಿವರಾಗಿರುವ ರವಿಶಂಕರ್ ಪ್ರಸಾದ್ ಗೆ ಜೈಶಂಕರ್ ಧನ್ಯವಾದ ಅರ್ಪಿಸಿದರು. 93 ಪಾಸ್ ಪೋರ್ಟ್ ಸೇವಾ ಕೇಂದ್ರದ ಜೊತೆಗೆ ಒಟ್ಟು PSK ದೇಶದಲ್ಲಿ 505 ಆಗಿದೆ. ಸಾಮಾನ್ಯ ಜನರಿಗೆ ತಮ್ಮ ಮನೆಯ ಹತ್ತಿರವೇ ಪಾಸ್ ಪೋರ್ಟ್ ಸೇವಾ ಕೇಂದ್ರ ಇದೀಗ ಲಭ್ಯವಾಗುತ್ತಿದೆ. ಹಾಗಾಗಿ ವಿದೇಶಿ ಪ್ರಯಾಣ ಮಾಡಬಯಸುವವರು ಹತ್ತಿರದಲ್ಲೇ ಪಾಸ್ ಪೋರ್ಟ್ ಸಲ್ಲಿಕೆ ಮಾಡುವ ಅವಕಾಶವಿದೆ.

ಡಿಜಿಟಲ್ ಇಂಡಿಯಾ:

ಡಿಜಿಟಲ್ ಇಂಡಿಯಾ:

ನಾಗರೀಕ ಕೇಂದ್ರದ ಯೋಜನೆಗಾಗಿ ಎಂಇಎ ಮತ್ತು ಪೋಸ್ಟ್ ಡಿಪಾರ್ಟ್ಮೆಂಟ್ ನಡುವಿನ ಸಹಭಾಗಿತ್ವವನ್ನು ಉದಾಹರಿಸಿ ಜೈಶಂಕರ್ ಮಾತನಾಡಿದರು. ಡಿಜಿಟಲ್ ಇಂಡಿಯಾ ಯೋಜನೆಯಡಿ ಸರ್ಕಾರವು ತಂತ್ರಜ್ಞಾನ ಬಳಕೆಯ ಅಭಿವೃದ್ಧಿ ಮತ್ತು ಟೂಲ್ಸ್ ಗಳ ಬಳಕೆಯನ್ನು ಅಧಿಕವಾಗಿಸಲಿದೆ ಎಂದು ಹೇಳಿದರು.

ಎಂಪಾಸ್ ಪೋರ್ಟ್:

ಎಂಪಾಸ್ ಪೋರ್ಟ್:

ಕಳೆದ ವರ್ಷದ ಪಾಸ್ ಪೋರ್ಟ್ ಸೇವಾ ದಿವಸದಲ್ಲಿ ಎಂಪಾಸ್ ಪೋರ್ಟ್ ಸೇವಾ ಮೊಬೈಲ್ ಆಪ್ ನ್ನು ಬಿಡುಗಡೆಗೊಳಿಸಿ ಯಾವುದೇ ಪ್ರದೇಶದಿಂದ ಆಪ್ ಮೊಬೈಲ್ ಮೂಲಕವೇ ಪಾಸ್ ಪೋರ್ಟ್ ಗೆ ಅಪ್ಲೈ ಮಾಡಬಹುದಾದ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಇವು ತಾಂತ್ರಿಕವಾಗಿ ಹೇಗೆ ಅರ್ಜಿದಾರರಿಗೆ ಸಹಕರಿಸುತ್ತಿವೆ ಎಂಬುದಾಗಿ ಜೈಶಂಕರ್ ತಿಳಿಸಿದ್ದಾರೆ.

ಉತ್ತಮ ಪ್ರದರ್ಶನದ ಆಫೀಸ್ ಗಳಿಗೆ ಬಹುಮಾನ:

ಉತ್ತಮ ಪ್ರದರ್ಶನದ ಆಫೀಸ್ ಗಳಿಗೆ ಬಹುಮಾನ:

ಯಾವೆಲ್ಲಾ ಪಾಸ್ ಪೋರ್ಟ್ ಆಫೀಸ್ ಗಳು ಉತ್ತಮ ಪ್ರದರ್ಶನವನ್ನು ತೋರಿವೆಯೋ ಅವರಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವನ್ನು ಕೂಡ ಜೈಶಂಕರ್ ಮಾಡಿದ್ದಾರೆ. ಜಲಂದರ್ ಪಾಸ್ ಪೋರ್ಟ್ ಆಫೀಸಿಗೆ ಮೊದಲ ಸ್ಥಾನ, ಕೊಚ್ಚಿನ್ ಪಾಸ್ ಪೋರ್ಟ್ ಆಫೀಸಿಗೆ ಎರಡನೇ ಸ್ಥಾನ ಮತ್ತು ಕೊಯಂಬತ್ತೂರ್ ಪಾಸ್ ಪೋರ್ಟ್ ಗೆ ಮೂರನೇ ಸ್ಥಾನವನ್ನು ಗಳಿಸಿವೆ.

ರಾಜ್ಯ ಪೋಲೀಸರ ಪಾತ್ರ:

ರಾಜ್ಯ ಪೋಲೀಸರ ಪಾತ್ರ:

ಪಾಸ್ ಪೋರ್ಟ್ ಗಳು ಸರಿಯಾದ ಸಮಯಕ್ಕೆ ನಾಗರೀಕರಿಗೆ ತಲುಪುವ ವಿಚಾರದಲ್ಲಿ ರಾಜ್ಯ ಪೋಲೀಸ್ ಅಧಿಕಾರಿಗಳ ಪಾತ್ರವು ಮಹತ್ವಪೂರ್ಣವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.

ಸರಾಸರಿ ಸಮಯದ ಇಳಿಕೆ:

ಸರಾಸರಿ ಸಮಯದ ಇಳಿಕೆ:

ಪೋಲೀಸ್ ವೆರಿಫಿಕೇಷನ್ ಗೆ 2018 ರಿಂದ ಸರಾಸರಿ ಸಮಯ ತೆಗೆದುಕೊಳ್ಳುವಿಕೆಯು 19 ದಿನಗಳಿಗೆ ಇಳಿಕೆಯಾಗಿದೆ. ಈ ದಿನವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಮಾಡುವ ಉದ್ದೇಶವನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಆಂದ್ರ ಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯದ ಸಾಧನೆ ಪ್ರಶಂಸನೀಯ ಎಂದು ಅವರು ತಿಳಿಸಿದ್ದಾರೆ.

Most Read Articles
Best Mobiles in India

Read more about:
English summary
Indian passports to have e-chip in future

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more