ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!

|

ಕಳೆದ ಫೆಬ್ರವರಿಯಲ್ಲಿ ಮೈಕ್ರೋಸಾಫ್ಟ್ ಆಯೋಜಿಸಿದ್ದ ಕೃತಕ ಬುದ್ಧಿಮತ್ತೆ ಚಾಲೆಂಜ್‌ನಲ್ಲಿ ಬೆಂಗಳೂರಿನಲ್ಲಿ ಓದುತ್ತಿರುವ ಕೋಡಿಂಗ್ ಉತ್ಸಾಹಿ 'ಪ್ರತೀಕ್ ಮೊಹಪಾತ್ರ' ಅವರು ಮೂರನೇ ಸ್ಥಾನ ಗಳಿಸಿ ಇಡೀ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ಮೈಕ್ರೋಸಾಫ್ಟ್ ಆಯೋಜಿಸಿದ್ದ 'ಎಐ ಫಾರ್ ಗುಡ್ ಐಡಿಯಾ' ಚಾಲೆಂಜ್‌ನಲ್ಲಿ 'ಆರ್ಗನ್‌ಸೆಕ್ಯೂರ್' ಯಂತ್ರ ಕಲಿಕೆ ಕ್ರಮಾವಳಿಗಳ ಒಂದು ಅತ್ಯಾಧುನಿಕ ಸಾಧನೆಗಾಗಿ ಮೊಹಪಾತ್ರ ಅವರಿಗೆ ಮೂರನೇ ಸ್ಥಾನ ಒಲಿದುಬಂದಿದೆ. ಈ ಸಾಧನೆಯ ಲಾಭ ಮೊದಲು ಕರ್ನಾಟಕಕ್ಕೆ ಸಿಗಲಿದೆ.!

ಬೆಂಗಳೂರಿನಲ್ಲಿ ಓದುತ್ತಿರುವ 'ಪ್ರತೀಕ್' ಸಾಧನೆಗೆ ತಲೆಬಾಗಿತು ಮೈಕ್ರೋಸಾಫ್ಟ್!

ಹೌದು, ಸಮಾಜದ ಕೆಲವು ದೊಡ್ಡ ಅಡೆತಡೆಗಳನ್ನು ನಿಭಾಯಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಡೆವಲಪರ್‌ಗಳು, ವಿದ್ಯಾರ್ಥಿಗಳು ಮತ್ತು ಡೇಟಾ ವಿಜ್ಞಾನಿಗಳಿಗೆ ಮೈಕ್ರೋಸಾಫ್ಟ್ ಕರೆ ನೀಡಿತ್ತು. ಇದೀಗ ಇದರ ಫಲಿತಾಂಶಗಳು ಇದೀಗ ಹೊರಬಂದಿದ್ದು, ಕಾಲೇಜು ವಿದ್ಯಾರ್ಥಿಯಾಗಿರುವ ಪ್ರತೀಕ್ ಮೊಹಪಾತ್ರ ಅವರು ಅಂಗಾಗ ಕಸಿ ಅಗತ್ಯವಿರುವ ಜನರೊಂದಿಗೆ ನೈಜ-ಸಮಯದ ನವೀಕರಣಗಳನ್ನು ಒದಗಿಸುವಂತಹ ವಿಶೇಷ ಸಾಧನೆ ಮಾಡಿ ಮೂರನೇ ಸ್ಥಾನ ಗಳಿಸಿದ್ದಾರೆ. ಇದಕ್ಕೆ ಮೈಕ್ರೋಸಾಫ್ಟ್ ತಲೆಬಾಗಿದೆ.

'ಪ್ರತೀಕ್ ಮೊಹಪಾತ್ರ' ಅವರು ಕಂಡುಹಿಡಿದಿರುವ ಈ 'ಆರ್ಗನ್‌ಸೆಕ್ಯೂರ್' ತಂತ್ರಜ್ಞಾನವು ಇಲ್ಲಿಯವರೆಗೂ ಯಾರೂ ಮಾಡಿರದಂತಹ ವಿಶೇಷ ಆಲೋಚನೆಯಾಗಿದೆ. ಜನರಿಗೆ ಅಂಗಾಂಗ ಕಸಿ ಮತ್ತು ದಾನದ ಬಗ್ಗೆ ತ್ವರಿತವಾಗಿ ಹೊಂದಿಕೆಯಾಗುವ ಮಾಹಿತಿ ನೀಡುವ ಕಲಿಕೆ ಕ್ರಮಾವಳಿಗಳ ತಂತ್ರಜ್ಞಾನ ಇದಾಗಿದ್ದು, ಇದು ಭವಿಷ್ಯದ ಆಲೋಚನೆಯಾಗಿದೆ.! ಹಾಗಾದರೆ, 'ಎಐ ಫಾರ್ ಗುಡ್ ಐಡಿಯಾ' ಚಾಲೆಂಜ್‌ನಲ್ಲಿ ಗೆದ್ದ 'ಮೊಹಪಾತ್ರ' ಯಾರು? ಏನೀತನ ಸಾಧನೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಯಾರೀತ 'ಪ್ರತೀಕ್ ಮೊಹಪಾತ್ರ'?

ಯಾರೀತ 'ಪ್ರತೀಕ್ ಮೊಹಪಾತ್ರ'?

ಕೋಡಿಂಗ್ ಉತ್ಸಾಹಿಯಾಗಿರುವ ಪ್ರತೀಕ್ ಮೊಹಾಪಾತ್ರ ಅವರು ಬೆಂಗಳೂರಿನಲ್ಲಿ ಓದುತ್ತಿದ್ದಾರೆ. 14 ವರ್ಷ ವಯಸ್ಸಿನಿಂದಲೂ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸುತ್ತಿರುವ ಇವರು ತಂತ್ರಜ್ಞಾನವನ್ನು ಜೀವ ವಿಜ್ಞಾನಕ್ಕೆ ಅನ್ವಯಿಸಲು ತೀವ್ರ ಆಸಕ್ತಿ ಹೊಂದಿದ್ದಾರೆ. 'ಎಐ ಫಾರ್ ಗುಡ್ ಐಡಿಯಾ' ಚಾಲೆಂಜ್‌ನಲ್ಲಿ ಗೆದ್ದು ಸಾಧನೆ ಮಾಡುವ ಮೊದಲು ಇವರು 'ಡ್ರಗ್ ಸೇಫ್' ಎಂಬ ಅಪ್ಲಿಕೇಶನ್ಗಾಗಿ ಇಮ್ಯಾಜಿನ್ ಕಪ್ 2018 ನಲ್ಲಿ ಅವರು ಬಿಗ್ ಡೇಟಾ ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಏನಿದು ಆರ್ಗನ್ ಸೆಕ್ಯೂರ್?

ಏನಿದು ಆರ್ಗನ್ ಸೆಕ್ಯೂರ್?

ಆರ್ಗನ್ ಸೆಕ್ಯೂರ್ ಎನ್ನುವುದು ಯಂತ್ರ ಕಲಿಕೆ ಕ್ರಮಾವಳಿಗಳ ಒಂದು ಅತ್ಯಾಧುನಿಕ ಗುಂಪಾಗಿದ್ದು, ಅದು ಅಂಗ ದಾನಿಗಳಿಗೆ ತ್ವರಿತವಾಗಿ ಹೊಂದಿಕೆಯಾಗುತ್ತದೆ. ಇದನ್ನು ಸರಳ ಭಾಷೆಯಲ್ಲಿ ಹೇಳಬೇಕೆಂದರೆ, ಅಂಗಾಂಗ ದಾನಿಗಳಾಗಲು ಹೆಚ್ಚಿನ ಜನರನ್ನು ಪಡೆಯುವುದು ಮತ್ತು ಅಗತ್ಯವಿರುವ ಜನರು ಸರಿಯಾದ ಸಮಯದಲ್ಲಿ ಅಂಗಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಭಿವೃದ್ಧಿ ಮಾಡಿರುವ ವಿಶೇಷ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವಾಗಿ ಗಮನಸೆಳೆದಿದೆ.

ಸರಿಯಾದ ಸಮಯಕ್ಕೆ ಮಾಹಿತಿ!

ಸರಿಯಾದ ಸಮಯಕ್ಕೆ ಮಾಹಿತಿ!

ಆರ್ಗನ್ ಸೆಕ್ಯೂರ್ ತಂತ್ರಜ್ಞಾನವು ಅಂಗಾಂಗ ದಾನಿಗಳಾಗಲು ಹೆಚ್ಚಿನ ಜನರನ್ನು ಪಡೆಯಲು ಮತ್ತು ಅಗತ್ಯವಿರುವ ಜನರು ಸರಿಯಾದ ಸಮಯದಲ್ಲಿ ಅಂಗಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಇರುವ ಕೃತಕ ಬುದ್ಧಿಮತ್ತೆ ಕಲಿಕೆ ಕ್ರಮಾವಳಿಯಾಗಿದೆ. ಇದರ ಜೊತೆಗೆ ಅಂಗಾಂಗ ದಾನಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಬಳಕೆದಾರರಿಗೆ ಶಿಕ್ಷಣ ನೀಡುವ ಯೋಜನೆಯನ್ನು ಆರ್ಗನ್ ಸೆಕ್ಯೂರ್ ತಂತ್ರಜ್ಞಾನ ಹೊಂದಿದೆ.

ಅಲ್ಗಾರಿದಮ್ ಡೇಟಾಸೆಟ್

ಅಲ್ಗಾರಿದಮ್ ಡೇಟಾಸೆಟ್

ಅಂಗ ಸ್ವೀಕರಿಸುವವರು ದಾನಿಗಳ ಪಟ್ಟಿಯಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ನೈಜ-ಸಮಯದ ಶ್ರೇಯಾಂಕವನ್ನು ಬಳಸಬಹುದು. ನಿರೀಕ್ಷಿತ ವೆಚ್ಚಗಳು, ಹತ್ತಿರದ ಅಂಗ ಬ್ಯಾಂಕುಗಳು ಮತ್ತು ಇತರ ಸಂಬಂಧಿತ ವಿವರಗಳ ಮಾಹಿತಿಯೊಂದಿಗೆ, ರೋಗಿಗಳು ಮತ್ತು ಅವರ ಕುಟುಂಬಗಳು ಕಸಿ ಪ್ರಕ್ರಿಯೆ ಬೇಕಾದ ಅಲ್ಗಾರಿದಮ್ ಡೇಡಾಬೇಟ್ ಅನ್ನು ಈ ತಂತ್ರಜ್ಞಾನ ನೀಡುತ್ತದೆ. ಅಂಗ ಕಸಿಗಾಗಿ ಕಾಯುತ್ತಿರುವವರಿಗೆ ಅಗತ್ಯವಾದ ಶ್ರೇಣಿ ಮತ್ತು ಸಮಯದ ಮಾಹಿತಿಯನ್ನು ಒದಗಿಸುತ್ತದೆ.

ಆರ್ಗನ್ ಸೆಕ್ಯೂರ್ ಏಕೆ ಬೇಕು?

ಆರ್ಗನ್ ಸೆಕ್ಯೂರ್ ಏಕೆ ಬೇಕು?

ಸಂಭವನೀಯ ದಾನಿ ಅಪಘಾತವನ್ನು ಎದುರಿಸಿದರೆ ಅಥವಾ ತೀರಿಕೊಂಡರೆ, ಅಂಗಗಳನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಮಯಕ್ಕೆ ಡೇಟಾಬೇಸ್ ಅನ್ನು ಪರೀಕ್ಷಿಸಲು ಪ್ರಸ್ತುತ ಸುಲಭವಾದ ಮಾರ್ಗಗಳಿಲ್ಲ. ಹಾಗಾಗಿ, ಆರ್ಗನ್‌ಸೆಕ್ಯೂರ್‌ನೊಂದಿಗೆ ಇಂತಹ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇನ್ನು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೊದಲು ಆಸ್ಪತ್ರೆಗಳು ದಾನಿಗಳ ಗುರುತನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ

'ಮೊಹಪಾತ್ರ' ಹೇಳುವುದು ಏನು?

'ಮೊಹಪಾತ್ರ' ಹೇಳುವುದು ಏನು?

ಅಂಗಾಂಗ ದಾನದ ಮೂಲಕ ಒಬ್ಬ ವ್ಯಕ್ತಿಯು ಎಂಟು ಜನರಿಗೆ ಜೀವ ನೀಡಬಹುದು. ಆರ್ಗನ್ ಸೆಕ್ಯೂರ್ ಅಂಗದ ಅಗತ್ಯವಿರುವವರು ಸಮಯಕ್ಕೆ ಸ್ವೀಕರಿಸುವುದನ್ನು ಖಚಿತಪಡಿಸುತ್ತದೆ. ಆರಂಭಿಕ ಡೇಟಾಬೇಸ್ ಅನ್ನು ಸ್ಥಾಪಿಸಿ ನಿಖರತೆಯ ದರಗಳನ್ನು ಅಳೆಯಲು ನಾನು ಪ್ರಸಿದ್ಧ ಆಸ್ಪತ್ರೆಗಳೊಂದಿಗೆ ಪಾಲುದಾರರಾಗಲು ಪ್ರಯತ್ನಿಸುತ್ತೇನೆ. ಗುರಿ ನಿಖರತೆ ದರಗಳನ್ನು ಸಾಧಿಸಿದ ನಂತರ, ಆರ್ಗನ್‌ಸೆಕ್ಯೂರ್ ಅನ್ನು ಸಾರ್ವಜನಿಕರಿಗೆ ತಲುಪಿಸಲು ನಾನು ಯೋಜಿಸುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕಕ್ಕೆ ಮೊದಲ ಲಾಭ!

ಕರ್ನಾಟಕಕ್ಕೆ ಮೊದಲ ಲಾಭ!

ಮೊಹಪಾತ್ರ ಅವರು ಪ್ರಸ್ತುತ ಡೇಟಾಸೆಟ್‌ಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂಗಾಂಗ ದಾನಿಗಳಾಗಲು ಹೆಚ್ಚಿನ ಜನರನ್ನು ಪಡೆಯುವುದು ಮತ್ತು ಅಗತ್ಯವಿರುವ ಜನರು ಸರಿಯಾದ ಸಮಯದಲ್ಲಿ ಅಂಗಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅಂಗಾಂಗ ದಾನಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಬಳಕೆದಾರರಿಗೆ ಶಿಕ್ಷಣ ನೀಡುವುದರೊಂದಿಗೆ ಅಪ್ಲಿಕೇಶನ್ ಪ್ರಾರಂಭವಾಗುತ್ತದೆ. ಈ ಸೇವೆಯನ್ನು ಮೊದಲು ಕರ್ನಾಟಕದಲ್ಲಿ ನೀಡಲು ಮೊಹಪಾತ್ರ ಅವರು ಮುಂದಾಗಿದ್ದಾರೆ.

ಜೀವರಕ್ಷಕ ಮೊಹಪಾತ್ರ

ಜೀವರಕ್ಷಕ ಮೊಹಪಾತ್ರ

ಭಾರತದಲ್ಲಿ, ಖಾಸಗಿ ಆಸ್ಪತ್ರೆಗಳು ಹೃದಯ ಕಸಿಗಾಗಿ 10 ಲಕ್ಷದಿಂದ 30 ಲಕ್ಷ ರೂ.ಗಳವರೆಗೆ ಶುಲ್ಕ ವಿಧಿಸುತ್ತವೆ, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ವಿಷಯದಲ್ಲಿ, ಕಸಿ ವೆಚ್ಚವು 15 ಲಕ್ಷದಿಂದ 35 ಲಕ್ಷ ರೂ. ಆಗಿರಬಹುದು. ಇಷ್ಟಾದರೂ ಅಂಗಾಗಳಿಗಾಗಿ ಹುಡುಕಾಟ ಮಾಡಬೇಕಾಗುತ್ತದೆ. ಆದರೆ, ಮೊಹಪಾತ್ರ ಅವರ ಯೋಜನೆ ಯಶಸ್ವಿಯಾದರೆ, ಸಾವಿರಾರು ಜನರಿಗೆ ಈತ ಜೀವರಕ್ಷಕನಾಗುತ್ತಾರೆ. ಹಾಗೆಯೇ ಆಗಲಿ ಎಂದು ಆಶಿಸುತ್ತಾ...ಇವರಿಗೆ ನಮ್ಮದೊಂದು ಸಲ್ಯೂಟ್!

Best Mobiles in India

English summary
Microsoft had launched its AI for Good Idea Challenge in February this year and called for developers, students, and data scientists to use artificial intelligence to tackle some of society’s greatest obstacles. The results have now come out and a Bengaluru-based college student has made it to the top three.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X