ಗೂಗಲ್ ರಿಪೋರ್ಟ್: ಭಾರತೀಯರಿಗೆ ಮದುವೆಗಿಂತ ಇದರಲ್ಲಿ ಹೆಚ್ಚು ಆಸಕ್ತಿಯಂತೆ!!

|

ಕಳೆದ ಕೆಲ ದಿನಗಳ ಹಿಂದೆ ಬಹುತೇಕ ಭಾರತೀಯರು ಗೂಗಲ್ ಅಸಿಸ್ಟೆಂಟ್ ಅನ್ನು ಮದುವೆಯಾಗಲು ಕೇಳಿದ್ದನ್ನು ಗೂಗಲ್ ಬಹಿರಂಗಪಡಿಸಿತ್ತು. ಇದನ್ನು ನೋಡಿದವರು ಭಾರತೀಯರು ಮದುವೆಯಾಗುವ ಮೂಡ್‌ನಲ್ಲಿ ಇದ್ದಾರೆ ಎಂದು ತಿಳಿದಿದ್ದರು. ಆದರೆ, ಗೂಗಲ್‌ ಬಿಡುಗಡೆ ಮಾಡಿರುವ ಇತ್ತೀಚಿನ ರಿಪೋರ್ಟ್ ಒಂದು ಇದನ್ನು ಸುಳ್ಳಾಗಿಸಿದೆ. ದೇಶದ ಯುವ ಜನಾಂಗ ಮದುವೆಗಿಂತ ಡೇಟಿಂಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಇದೀಗ ಬಿಡುಗಡೆಯಾಗಿರುವ ಗೂಗಲ್ ರಿಪೋರ್ಟ್ ತಿಳಿಸಿದೆ.

ಹೌದು, ಗೂಗಲ್‌ ಬಿಡುಗಡೆ ಮಾಡಿರುವ ಇತ್ತೀಚಿನ ರಿಪೋರ್ಟ್ ಒಂದರ ಪ್ರಕಾರ, ದೇಶದ ಯುವ ಜನಾಂಗ ಮದುವೆಗಿಂತ ಡೇಟಿಂಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ತಿಳಿಸಿದೆ. ಈ ವರದಿಯ ಪ್ರಕಾರ ಹೆಚ್ಚಿನ ಭಾರತೀಯರು ಗೂಗಲ್​ನಲ್ಲಿ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾರೆ. ಒಟ್ಟು ಹುಡುಕಾಟದ ಶೇ.40 ರಷ್ಟು ಮಂದಿ ಡೇಟಿಂಗ್ ಪಾಟರ್ನರ್​ಗಾಗಿ ಸರ್ಚ್​ ಇಂಜಿನ್​ನಲ್ಲಿ ಜಾಲಾಡಿದ್ದಾರೆ. ಇದು ಮದುವೆ ಸಂಬಂಧಕ್ಕಾಗಿ ಅಂತರ್ಜಾಲದ ಮೊರೆ ಹೋದವರಿಗಿಂತ ಹೆಚ್ಚು ಎಂದು ರಿಪೋರ್ಟ್ ತಿಳಿಸಿದೆ.

ಗೂಗಲ್ ರಿಪೋರ್ಟ್: ಭಾರತೀಯರಿಗೆ ಮದುವೆಗಿಂತ ಇದರಲ್ಲಿ ಹೆಚ್ಚು ಆಸಕ್ತಿಯಂತೆ!!

ಗೂಗಲ್ ಇಯರ್ ಇನ್​ ಸರ್ಚ್​ ಇಂಡಿಯಾ: ಇನ್​ಸೈಟ್ಸ್ ಫರ್ ಬ್ರ್ಯಾಂಡ್ಸ್​ ಬಿಡುಗಡೆ ಮಾಡಿರುವ ಈ ರಿಪೋರ್ಟ್‌ನಲ್ಲಿ ಭಾರತೀಯ ಯುವ ತಲೆಮಾರು 2018 ರಲ್ಲಿ ಗೂಗಲ್​ನಲ್ಲಿ ಯಾವ ವಿಷಯದ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು ಎಂಬ ಬಗ್ಗೆ ವರದಿ ಮಾಡಿದೆ. 2017 ಕ್ಕೆ ಹೋಲಿಸಿದರೆ ಕಳೆದ ವರ್ಷ ಭಾರತದಲ್ಲಿ ಮ್ಯಾಟ್ರಿಮೊನಿಗಿಂತ ಡೇಟಿಂಗ್ ಪಾರ್ಟನರ್​ ಹುಡುಕಾಟ ಹೆಚ್ಚಾಗಿರುವುದು ಕಂಡು ಬಂದಿದೆ. ಇದು ಕೇವಲ ಮೆಟ್ರೊ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಹ ರಿಪೋರ್ಟ್ ತಿಳಿಸಿದೆ.

ಸಂಗಾತಿಗಾಗಿ ಗೂಗಲ್​ನಲ್ಲಿ ಹುಡುಕಾಟ ನಡೆಸಿರುವ ಭಾರತೀಯರು ಒಟ್ಟು ಹುಡುಕಾಟದ ಶೇ.40 ರಷ್ಟು ಮಂದಿ ಡೇಟಿಂಗ್ ಪಾಟರ್ನರ್​ಗಾಗಿ ಸರ್ಚ್​ ಇಂಜಿನ್​ನಲ್ಲಿ ಜಾಲಾಡಿದ್ದಾರೆ. ಇದೇ ವೇಳೆ ಮದುವೆ ಸಂಬಂಧಕ್ಕಾಗಿ ಅಂತರ್ಜಾಲದ ಮೊರೆ ಹೋದವರು ಕೇವಲ ಶೇ.13 ರಷ್ಟು ಮಂದಿ ಮಾತ್ರ ಎಂದು ವರದಿಯಲ್ಲಿ ಹೇಳಲಾಗಿದೆ. ಅಂದರೆ ದೇಶದ ಯುವ ಜನಾಂಗ ಮದುವೆಗಿಂತ ಡೇಟಿಂಗ್​ನತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಇಂಟರ್ನೆಟ್​ ಸೌಲಭ್ಯವಿರುವ ಸಣ್ಣ ಪುಟ್ಟ ಪಟ್ಟಣಗಳ ಜನರ ಪಾಲು ಕೂಡ ಇದರಲ್ಲಿ ಹೆಚ್ಚಿದೆ.

ಗೂಗಲ್ ರಿಪೋರ್ಟ್: ಭಾರತೀಯರಿಗೆ ಮದುವೆಗಿಂತ ಇದರಲ್ಲಿ ಹೆಚ್ಚು ಆಸಕ್ತಿಯಂತೆ!!

ಇತರೆ ನಗರಗಳಲ್ಲೂ ಮೆಟ್ರೋ ನಗರಗಳಿಗಿಂತ ಆನ್​ಲೈನ್ ಹುಡುಕಾಟ ವೇಗವಾಗಿ ಬೆಳೆಯುತ್ತಿದೆ. ಮೆಟ್ರೋ ನಗರಗಳಿಗೆ ಹೋಲಿಸಿದರೆ, ಇತರೆ ನಗರಗಳ ಜನರು ವಿಮೆ, ಸೌಂದರ್ಯ ಮತ್ತು ಪ್ರವಾಸೋದ್ಯಮದ ಕುರಿತು ಅಂತರ್ಜಾಲದಲ್ಲಿ ಹೆಚ್ಚು ಶೋಧನೆ ಮಾಡುತ್ತಿದ್ದಾರೆ ಎಂಬ ವಿಷಯ ಈ ವರದಿಯಿಂದ ತಿಳಿದು ಬಂದಿದೆ. ಇನ್ನು ವರದಿಯಲ್ಲಿ ತಿಳಿಸಿರುವಂತೆ ಗೂಗಲ್​ನಲ್ಲಿ 'Near Me'(ನನ್ನ ಹತ್ತಿರದ) ಶೋಧವು ಶೇ.75 ರಷ್ಟು ಹೆಚ್ಚಾಗಿದ್ದು, ಹಾಗೆಯೇ ಕೆಲಸದ ಹುಡುಕಾಟ ಶೇ.100ರಷ್ಟು ಜಾಸ್ತಿಯಾಗಿದೆ ಎಂದು ತಿಳಿಸಿದೆ.

ಓದಿರಿ: ನೋಕಿಯಾ ಪ್ರಿಯರಿಗೆ ಭರ್ಜರಿ ಸುದ್ದಿ!..ಈ ಆಫರ್ ಕೆಲವೇ ದಿನಗಳು ಮಾತ್ರ!!

Best Mobiles in India

English summary
Indians are searching 'dating' more than 'matrimony': Google. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X