ನೋಕಿಯಾ ಪ್ರಿಯರಿಗೆ ಭರ್ಜರಿ ಸುದ್ದಿ!..ಈ ಆಫರ್ ಕೆಲವೇ ದಿನಗಳು ಮಾತ್ರ!!

|

ಭಾರತದಲ್ಲಿ ಮೊಬೈಲ್ ಮಾರಾಟವನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಜನಪ್ರಿಯ ನೋಕಿಯಾ ಕಂಪೆನಿ ಭರ್ಜರಿ ಸುದ್ದಿ ನೀಡಿದೆ. ನೋಕಿಯಾದ ಜನಪ್ರಿಯ ಮಧ್ಯಮ ಬಜೆಟ್ ಸ್ಮಾರ್ಟ್‌ಫೋನ್ ಆಗಿರುವ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಮೇಲೆ ಬರೋಬ್ಬರಿ 8,000 ರೂ. ಡಿಸ್ಕೌಂಟ್ಸ್ ನೀಡಿ ಗಮನಸೆಳೆದಿದೆ. ಜೊತೆಗೆ ಈ ಆಫರ್ ಕೆಲವೇ ದಿನಗಳು ಮಾತ್ರ ಲಭ್ಯ ಎಂದು ತಿಳಿಸಿದೆ.

ಹೌದು, ನೋಕಿಯಾ 7 ಪ್ಲಸ್‌ ಉತ್ತರಾಧಿಕಾರಿಯಾಗಿ ಎಚ್ಎಂಡಿ ಗ್ಲೋಬಲ್ ಅನಾವರಣಗೊಳಿದ್ದ 'ನೋಕಿಯಾ 8.1' ಸ್ಮಾರ್ಟ್‌ಫೋನ್ ಇದೀಗ ಬೆಲೆ ಕಳೆದುಕೊಂಡಿದ್ದು, 26,999 ರೂ.ಗಳಿಗೆ ಬಿಡುಗಡೆಯಾದ್ದ ಸ್ಮಾರ್ಟ್‌ಫೋನನ್ನು ಈಗ ಕೇವಲ 20,999 ರೂ.ಗಳಿಗೆ ಖರೀದಿಸಬಹುದಾಗಿದೆ. ಈ ಆಫರ್ ಮೇ 13 ರಂದು ಆರಂಭವಾಗಿದ್ದು, ಇದೇ ಮೇ 18 ರಂದು ಮುಕ್ತಾಯವಾಗಲಿದೆ.

ನೋಕಿಯಾ ಪ್ರಿಯರಿಗೆ ಭರ್ಜರಿ ಸುದ್ದಿ!..ಈ ಆಫರ್ ಕೆಲವೇ ದಿನಗಳು ಮಾತ್ರ!!

ಹಾಗಾಗಿ, ನೋಕಿಯಾ ಇಂಡಿಯಾ ಇ ಕಾಮರ್ಸ್ ತಾಣಕ್ಕ ಭೇಟಿ ನೀಡಿ ಮೊಬೈಲ್ ಪ್ರಿಯರು ಅತ್ಯಂತ ಕಡಿಮೆ ಬೆಲೆಗೆ 'ನೋಕಿಯಾ 8.1' ಅನ್ನು ಖರೀದಿಸಬಹುದು. ಹಾಗಾದರೆ, HDR10 ಬೆಂಬಲದೊಂದಿಗೆ 6.18ಇಂಚಿನ ಪ್ಯೂರ್ ಡಿಸ್‌ಪ್ಲೇ, ಸ್ನ್ಯಾಮ್‌ಪ್ಡ್ರಾಗನ್ 710 ಪ್ರೊಸೆಸರ್, ಆಂಡ್ರಾಯ್ಡ್ 9 ಪೈನಂತಹ ವಿಶೇಷತೆಗಳ ಈ ಫೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಡಿಸ್‌ಪ್ಲೇ!

'ನೋಕಿಯಾ 8.1' ಸ್ಮಾರ್ಟ್‌ಫೋನ್ 18.7:9 ಆಕಾರ ಅನುಪಾತದಲ್ಲಿ 6.18-ಇಂಚಿನ ಪೂರ್ಣ ಹೆಚ್‌ಡಿ + (1080x2244 ಪಿಕ್ಸೆಲ್ಗಳು) ಡಿಸ್‌ಪ್ಲೇನನ್ನು ಹೊಂದಿದ್ದು, ಶೇ. 81.5 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತ, ಹೆಚ್‌ಡಿಆರ್ 10 ಬೆಂಬಲ, 500 ಎನ್ಟಿಟಿಗಳ ಗರಿಷ್ಟ ಹೊಳಪು ಮತ್ತು 96 ಪ್ರತಿಶತ ಬಣ್ಣದ ಗ್ಯಾಮಟ್ ಸಾಮರ್ಥ್ಯವನ್ನು ಹೊಂದಿರುವಂತಹ ಅದ್ಬುತ ಡಿಸ್‌ಪ್ಲೇ ಇದಾಗಿದೆ.

'ನೋಕಿಯಾ 8.1' ಪ್ರೊಸೆಸರ್!

'ನೋಕಿಯಾ 8.1' ಪ್ರೊಸೆಸರ್!

ನೋಕಿಯಾ 8.1 ಸ್ಮಾರ್ಟ್‌ಫೋನಿನಲ್ಲಿ ಆಕ್ಟಾ-ಕೋರ್ 2.2GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 soc ಪ್ರೊಸೆಸರ್ ಅನ್ನು ಹೊಂದಿದೆ. ಇದು 4GB LPDDR4x RAM ಮತ್ತು 64GB ಅಂತರ್ಗತ ಸಂಗ್ರಹ ಸಾಮರ್ಥ್ಯವನ್ನು ಹೊಂದಿರುವುದನ್ನು ನೋಡಬಹುದಾಗಿದ್ದು, ಮೈಕ್ರೋ ಎಸ್‌ಡಿ ಕಾರ್ಡ್ ಸಹಾಯದಿಂದ 400 ಜಿಬಿ ವರೆಗಗೂ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಲಭ್ಯವಿದೆ.

'ನೋಕಿಯಾ 8.1' ಕ್ಯಾಮೆರಾ!

'ನೋಕಿಯಾ 8.1' ಕ್ಯಾಮೆರಾ!

Zeiss ಆಪ್ಟಿಕ್ಸ್, 1.4-ಮೈಕ್ರಾನ್ ಪಿಕ್ಸೆಲ್ಸ್, ಡ್ಯುಯಲ್-ಎಲ್ಇಡಿ ಫ್ಲ್ಯಾಷ್ ಒಳಗೊಂಡ 12-ಮೆಗಾಪಿಕ್ಸೆಲ್ ಮತ್ತು ಡೆಪ್ತ್ ಚಿತ್ರಗಳಿಗಾಗಿ ಮಾಧ್ಯಮಿಕ 13-ಮೆಗಾಪಿಕ್ಸೆಲ್ ಸ್ಥಿರ-ಫೋಕಸ್ ಲೆನ್ಸ್ ರಿಯರ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇನ್ನು 0.9-ಮೈಕ್ರಾನ್ ಪಿಕ್ಸೆಲ್‌ಗಳೊಂದಿಗೆ 20 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವಿದ್ದು, ಕ್ಯಾಮೆರಾ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ಬ್ಯಾಟರಿ ಮತ್ತು ಇತರೆ ಫೀಚರ್ಸ್?

ನೋಕಿಯಾ 8.1 ಸ್ಮಾರ್ಟ್‌ಪೋನ್ 18W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯದ 3,500mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಜೊತೆಗೆ ಆಂಡ್ರಾಯ್ಡ್ ಪೈ, 4G ವೋಲ್ಟ್, Wi-Fi 802.11ac, VoWiFi, ಬ್ಲೂಟೂತ್ v5.0, GPS/ A-GPS, 3.5mm ಹೆಡ್‌ಫೋನ್ ಜ್ಯಾಕ್, USB Type-C ಪೋರ್ಟ್‌ನಂತರ ಇತ್ತೀಚಿನ ಫೀಚರ್ಸ್‌ಗಳನ್ನು ಹೊಂದಿದ್ದು, ಒಟ್ಟು 178 ಗ್ರಾಂ ಭಾರವಿದೆ.

'ನೋಕಿಯಾ 8.1' ಲಭ್ಯತೆ!

'ನೋಕಿಯಾ 8.1' ಲಭ್ಯತೆ!

ವಿಶ್ವದಾಧ್ಯಂತ ಅಂದಾಜು 31,900 ರೂಪಾಯಿಗಳ ಆಸುಪಾಸಿನಲ್ಲಿ ಬಿಡುಗಡೆಯಾಗಿದ್ದ 'ನೋಕಿಯಾ 8.1', ಭಾರತದಲ್ಲಿ ಮಾತ್ರ ಕೇವಲ 26,999 ರೂಪಾಯಿಗಳಿಗೆ ಬಿಡುಗಡೆಯಾಗಿ ಅಚ್ಚರಿಮೂಡಿಸಿತ್ತು. ಇದೀಗ ಬ್ಲೂ, ಸಿಲ್ವರ್, ಸ್ಟೀಲ್, ಕಾಪರ್, ಐಯಾನ್ ಸ್ಟೀಲ್ ಡ್ಯುಯಲ್ ಟೋನ್ ಬಣ್ಣಗಳಲ್ಲಿ ನೋಕಿಯಾ 8.1' ಕೇವಲ 10,999 ರೂ.ಗಳಿಗೆ ಸ್ಮಾರ್ಟ್‌ಫೋನ್ ಲಭ್ಯವಿದೆ.

Best Mobiles in India

English summary
Nokia 8.1 (4GB RAM) is available at Rs. 20,999 after a discount of Rs. 6,000 while 6GB RAM variant is listed at Rs. 25,999 after an off of Rs. 4,000. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X