ಇನ್ಮುಂದೆ ಇನ್‌ಸ್ಟಾಗ್ರಾಮ್‌ನಲ್ಲಿಯೇ ಸಿಗಲಿದೆ ಆನ್‌ಲೈನ್‌ ಶಾಪಿಂಗ್‌ ಅವಕಾಶ!

|

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಶಾಪಿಂಗ್‌ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಯಾವುದೇ ಪ್ರಾಡಕ್ಟ್‌ ಬೇಕಿದ್ದರೂ ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇವೆ. ಇದೇ ಕಾರಣಕ್ಕೆ ಆನ್‌ಲೈನ್‌ ಮಾರ್ಕೆಂಟಿಗ್‌ ಅನ್ನು ಇನ್ನಷ್ಟು ಸುಲಭ ಮಾಡುವುದಕ್ಕೆ ಅನೇಕ ಪ್ಲಾಟ್‌ಫಾರ್ಮ್‌ಗಳನ್ನು ಪ್ರಯತ್ನಿಸುತ್ತಲೇ ಬಂದಿವೆ. ಸದ್ಯ ಇದೀಗ ಮೆಟಾ ಕಂಪೆನಿ ತನ್ನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಇನ್‌ಸ್ಟಾಗ್ರಾಮ್‌ ಮೂಲಕ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ನೀಡಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ಬಳಕೆದಾರರು ಇನ್ಮುಂದೆ ಡೈರೆಕ್ಟ್‌ ಮೆಸೇಜ್‌ ಮೂಲಕವೇ ಶಾಪಿಂಗ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದಕ್ಕಾಗಿ ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮ್‌ನಿಂದ ವಸ್ತುಗಳನ್ನು ಖರೀದಿಸಲು ಹೊಸ ಮಾರ್ಗವನ್ನು ಪರಿಚಯಿಸುತ್ತಿದೆ. ಅದರಂತೆ ಬಳಕೆದಾರರು ತಮ್ಮ ಖರೀದಿಗೆ DM ಮೂಲಕವೇ ಪಾವತಿಸಲು ಅನುಮತಿಸಲಿದೆ ಎನ್ನಲಾಗಿದೆ. ಮೆಟಾ ಕಂಪೆನಿ ಸಿಇಒ ಮಾರ್ಕ್ ಜುಕರ್‌ಬರ್ಗ್ ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್‌ ಮೂಲಕ ಈ ಹೊಸ ಫೀಚರ್ಸ್‌ ಅನ್ನು ಘೋಷಿಸಿದ್ದಾರೆ.

ಇನ್‌ಸ್ಟಾಗ್ರಾಮ್‌

ಪ್ರಸ್ತುತ, ಈ ಫೀಚರ್ಸ್‌ ಅನ್ನು ಯುಎಸ್‌ನಲ್ಲಿ ಪರಿಚಯಿಸಲಾಗಿದೆ. ಯುಎಸ್‌ನಲ್ಲಿರುವ ಜನತೆ ತಮ್ಮ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ನಲ್ಲಿ ಡಿಎಂ ಮೂಲಕವೇ ಶಾಪಿಂಗ್‌ ಮಾಡುವುದಕ್ಕೆ ಅವಕಾಶ ಸಿಗಲಿದೆ. ಈ ಫೀಚರ್ಸ್‌ ಮುಂದಿನ ದಿನಗಳಲ್ಲಿ ಇತರೆ ದೇಶಗಳಲ್ಲಿಯೂ ಲಭ್ಯವಾಗುವ ಸಾಧ್ಯತೆಯಿದೆ. ಈ ಹೊಸ ಫೀಚರ್ಸ್‌ ಇ-ಕಾಮರ್ಸ್‌ ಮಾದರಿಯಲ್ಲಿಯೇ ಕಾರ್ಯನಿರ್ವಹಿಸಲಿದೆ. ಪ್ರಾಡಕ್ಟ್‌ಗಳನ್ನು ಸರ್ಚ್‌ ಮಾಡುವುದು, ಆಯ್ಕೆ ಮಾಡುವುದು ಸೇರಿದಂತೆ ಪಾವತಿ ಮಾಡುವ ಆಯ್ಕೆಗಳನ್ನು ಸಹ ನೀಡಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ ಡಿಎಂ ಮೂಲಕ ಶಾಪಿಂಗ್‌ ಮಾಡುವುದಕ್ಕೆ ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಇನ್‌ಸ್ಟಾಗ್ರಾಮ್

ಮೆಟಾ ಕಂಪೆನಿ ತನ್ನ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಾದ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ವಾಟ್ಸಾಪ್‌ ಅನ್ನು ಎಲ್ಲಾ ವಲಯದಲ್ಲಿಯೂ ಪ್ರಭಾವ ಬೀರುವಂತೆ ಮಾಡಲು ಮುಂದಾಗಿದೆ. ಇದಕ್ಕಾಗಿ ತನ್ನ ಪ್ಲಾಟ್‌ಫಾರ್ಮ್‌ಗಳಲ್ಲಿ ಹೊಸ ಮಾದರಿಯ ಆಯ್ಕೆಗಳನ್ನು ನೀಡುತ್ತಿದೆ. ಇದಕ್ಕೆ ಹೊಸ ಸೇರ್ಪಡೆ ಇನ್‌ಸ್ಟಾಗ್ರಾಮ್‌ ಡಿಎಂ ಮೂಲಕ ಶಾಪಿಂಗ್‌ ಮಾಡುವ ಆಯ್ಕೆಯಾಗಿದೆ. ಏಕೆಂದರೆ ಮೆಟಾ ಕಂಪೆನಿ ಹೇಳಿಕೊಂಡಿರುವಂತೆ ಇನ್‌ಸ್ಟಾಗ್ರಾಮ್‌, ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಪ್ರತಿ ವಾರ ಒಂದು ಬಿಲಿಯನ್ ಜನರು ಬ್ಯುಸಿನೆಸ್‌ ಸಂದೇಶಗಳನ್ನು ಕಳುಹಿಸುತ್ತಾರೆ ಎನ್ನಲಾಗಿದೆ. ಇದರಿಂದ ಶಾಪಿಂಗ್‌ ಆಯ್ಕೆಯನ್ನು ನೀಡುವುದರಿಂದ ಇದು ಇನ್ನಷ್ಟು ಪರಿಣಾಮಕಾರಿಯಾಗಲಿದೆ ಅನ್ನೊದು ಮೆಟಾ ಕಂಪೆನಿಯ ಪ್ಲಾನ್‌ ಆಗಿದೆ.

ಬ್ರೌಸಿಂಗ್

ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಿರುವ ಹೊಸ ಶಾಪಿಂಗ್‌ ಫೀಚರ್ಸ್‌ ನಿಮಗೆ ಉತ್ಪನ್ನಗಳನ್ನು ಬ್ರೌಸಿಂಗ್ ಮಾಡುವುದು, ಸ್ಟೋರೀಸ್‌ ಮೂಲಕ ಇಂಟರ್‌ ಆಕ್ಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ರೆವೆನ್ಯೂ ಜನರೇ‍ಷನ್‌ಗೆ ಸಹಾಯ ಮಾಡಲಿದೆ. ಜೊತೆಗೆ ಅಪ್ಲಿಕೇಶನ್‌ನಲ್ಲಿ ಪಾವತಿ ಗೇಟ್‌ವೇ ಅನ್ನು ಕಂಟ್ರೋಲ್‌ ಮಾಡುವುದಕ್ಕೆ ಅನುಮತಿಸಲಿದೆ. ಇದಲ್ಲದೆ ಅಪ್ಲಿಕೇಶನ್‌ನಲ್ಲಿ ಸಂಯೋಜಿಸಲಾದ ಎಲ್ಲಾ ಸೌಲಭ್ಯಗಳಿಂದಾಗಿ ಇದು ಸಂಪೂರ್ಣ ಇ-ಕಾಮರ್ಸ್ ಸಲ್ಯೂಶನ್‌ ಆಗಿ ಕಾರ್ಯನಿರ್ವಹಿಸಲಿದೆ.

ಇದರಲ್ಲಿ

ಇದರಲ್ಲಿ ನೀವು ಉತ್ಪನ್ನಗಳನ್ನು ನೋಡುವುದರಿಂದ ಹಿಡಿದು, ಆಯ್ಕೆಮಾಡುವವರೆಗೆ ಮತ್ತು ಈಗ ಪಾವತಿಸುವವರೆಗೆ ಎಲ್ಲಾ ರೀತಿಯ ಅವಕಾಶವನ್ನು ನೀಡಲಿದೆ. ಅಂದರೆ ನಿಮಗೆ ಬೇಕಾದ ಪ್ರಾಡಕ್ಟ್‌ ಆಯ್ಕೆಯ ಕುರಿತು ಬ್ಯುಸಿನೆಸ್‌ ಸಂದೇಶವನ್ನು ಕಳುಹಿಸಲು ನೀವು ಕಸ್ಟಮೈಸೇಶನ್‌ಗಳ ಕುರಿತು ಚಾಟ್ ಮಾಡಬೇಕಾಗುತ್ತದೆ. ನಂತರ ನಿಮ್ಮ ಚಾಟ್‌ನಿಂದ ನಿಮ್ಮ ಆರ್ಡರ್ ಅನ್ನು ಮಾಡಬಹುದು, ಹಾಗೆಯೇ ಅದೇ ಚಾಟ್ ಥ್ರೆಡ್‌ನಲ್ಲಿ, ನಿಮ್ಮ ಆರ್ಡರ್ ಅನ್ನು ಟ್ರ್ಯಾಕ್ ಮಾಡುವುದಕ್ಕೆ ಅವಕಾಶ ಸಿಗಲಿದೆ. ಜೊತೆಗೆ ನಿಮ್ಮ ಖರೀದಿಗಳನ್ನು ಪೂರ್ಣಗೊಳಿಸಲು ನೀವು ಮೆಟಾ ಪೇ ಅನ್ನು ಬಳಸಬಹುದಾಗಿದೆ.

ಫೀಚರ್ಸ್‌

ಮೆಟಾ ಕಂಪೆನಿ ಪರಿಚಯಿಸಿರುವ ಈ ಹೊಸ ಫೀಚರ್ಸ್‌ ಸಣ್ಣ ವ್ಯಾಪಾರ ಮಾಲೀಕರಿಗೆ ಉಪಯುಕ್ತವಾಗಲಿದೆ. ಇದರಿಂದ ತಮ್ಮ ಪ್ರಾಡಕ್ಟ್‌ಗಳ ಬಗ್ಗೆ ಇನ್‌ಸ್ಟಾಗ್ರಾಮ್‌ ಸ್ಟೋರೀಸ್‌ನಲ್ಲಿ ಶೇರ್‌ ಮಾಡಬಹುದು. ಸ್ಟೋರೀಸ್‌ ಮೂಲಕ ಗ್ರಾಹಕರು ಡಿಎಂ ಕಳುಹಿಸಿದರೆ, ಡಿಎಂ ಮೂಲಕವೇ ಶಾಪಿಂಗ್‌ ಮಾಡಬಹುದು. ಅಲ್ಲದೆ ಗ್ರಾಹಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದಕ್ಕೆ ವ್ಯಾಪಾರ ಮಾಲೀಕರಿಗೆ ಅವಕಾಶವನ್ನು ನೀಡಲಾಗಿದೆ. ಇದರಿಂದ ಖರೀದಿ ವಿವರಗಳನ್ನು ಖಚಿತಪಡಿಸಲು ನೈಜ ಸಮಯದಲ್ಲಿ ಗ್ರಾಹಕರೊಂದಿಗೆ ಚಾಟ್ ಮಾಡಬಹುದು.

ಮೆಸೆಂಜರ್‌

ಇನ್ನು ಮೆಟಾ ಕಂಪೆನಿ ಇತ್ತೀಚಿಗೆ ತನ್ನ ಮೆಸೆಂಜರ್‌ ಅಪ್ಲಿಕೇಶನ್‌ನಲ್ಲಿ ಹೊಸದಾಗಿ ಕಾಲ್ಸ್‌ ಟ್ಯಾಬ್‌ ಅನ್ನು ಪರಿಚಯಿಸಿದೆ. ಇದರಿಂದ ಸಂಪರ್ಕದ ಬಲಭಾಗದಲ್ಲಿರುವ ಆಡಿಯೋ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ ಮೆಸೆಂಜರ್ ಬಳಕೆದಾರರು ಕರೆ ಮಾಡಬಹುದಾಗಿದೆ. ಮೆಸೆಂಜರ್ ಬಳಕೆದಾರರು ಎರಡು ವಿಭಿನ್ನ ವಿಧಾನಗಳನ್ನು ಬಳಸಿಕೊಂಡು ಹೊಸ ಕಾಲ್ಸ್‌ ಟ್ಯಾಬ್ ಬಳಸಿ ಕರೆಗಳನ್ನು ಮಾಡಬಹುದು. ಇದರಲ್ಲಿ ಮೊದಲ ವಿಧಾನ ಸೂಚಿಸಿದ ಸಂಪರ್ಕವಾಗಿದೆ. ಎರಡನೇಯದು ಸೂಚಿಸಲಾಗದ ಸಂಪರ್ಕಗಳಿಗೆ ಕರೆ ಮಾಡುವುದಾಗಿದೆ. ಸೂಚಿಸಲಾದ ಸಂಪರ್ಕಗಳ ಪಟ್ಟಿಯಲ್ಲಿ ನೀವು ಹುಡುಕುತ್ತಿರುವ ಸಂಪರ್ಕವು ಗೋಚರಿಸದಿದ್ದರೆ, ಸಂಪರ್ಕವನ್ನು ಹುಡುಕಲು ಮತ್ತು ಕರೆ ಮಾಡಲು ನೀವು ವ್ಯಾಪಕ ಸರ್ಚ್‌ ಮಾಡಬೇಕಾಗುತ್ತದೆ.

ಸೂಚಿಸಿದ ಸಂಪರ್ಕಗಳಿಗೆ ಕರೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ:

ಸೂಚಿಸಿದ ಸಂಪರ್ಕಗಳಿಗೆ ಕರೆ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿರಿ:

ಹಂತ:1 ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ಮೆಸೆಂಜರ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ:2 ಕಾಲ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ನೀವು ಕಾಲ್‌ ಮಾಡಲು ಬಯಸುವ ಕಂಟ್ಯಾಕ್ಟ್‌ ಕೆಳಗೆ ಸ್ಕ್ರಾಲ್ ಮಾಡಿ.
ಹಂತ:4 ಕೊನೆಯದಾಗಿ, ನೀವು ಕರೆ ಮಾಡಲು ಬಯಸುವ ಸಂಪರ್ಕದ ಮುಂದೆ ಆಡಿಯೋ ಕರೆ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡಿ.

ಸೂಚಿಸಲಾಗದ ಸಂಪರ್ಕಗಳಿಗೆ ಕರೆ ಮಾಡುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ.

ಸೂಚಿಸಲಾಗದ ಸಂಪರ್ಕಗಳಿಗೆ ಕರೆ ಮಾಡುವುದಕ್ಕೆ ಈ ಕ್ರಮಗಳನ್ನು ಅನುಸರಿಸಿ.

ಹಂತ:1 ನಿಮ್ಮ ಆಂಡ್ರಾಯ್ಡ್‌ ಅಥವಾ ಐಫೋನ್‌ನಲ್ಲಿ ಮೆಸೆಂಜರ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ಕಾಲ್ಸ್‌ ಟ್ಯಾಬ್ ಅನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಸ್ಕ್ರೀನ್‌ ಮೇಲಿನ ಬಲ ಮೂಲೆಯಲ್ಲಿರುವ ಪ್ಲಸ್ ಐಕಾನ್ ಅನ್ನು ಟ್ಯಾಬ್ ಮಾಡಿ.
ಹಂತ:4 ಸರ್ಚ್‌ ಲಿಸ್ಟ್‌ನಲ್ಲಿ ನೀವು ಹುಡುಕುತ್ತಿರುವ ಸಂಪರ್ಕದ ಹೆಸರನ್ನು ಟೈಪ್ ಮಾಡಿ.
ಹಂತ:5 ಇದೀಗ ಕರೆ ಮಾಡಲು ಸಂಪರ್ಕದ ಬಲಭಾಗದಲ್ಲಿ ಗೋಚರಿಸುವ ಆಡಿಯೊ ಕರೆ ಅಥವಾ ವೀಡಿಯೊ ಕರೆ ಆಯ್ಕೆಯನ್ನು ಟ್ಯಾಪ್ ಮಾಡಿ.

Best Mobiles in India

Read more about:
English summary
Instagram is introducing a new path to purchase items items right from the DMs

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X