ಹೊಸ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಇನ್‌ಸ್ಟಾಗ್ರಾಮ್‌! ಇದರ ಉಪಯೋಗ ಏನು?

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಬಳಕೆದಾರರ ನೆಚ್ಚಿನ ಫೋಟೋ ಮತ್ತು ವಿಡಿಯೋ ಶೇರಿಂಗ್‌ ಅಪ್ಲಿಕೇಶನ್‌ ಆಗಿ ಗುರುತಿಸಿಕೊಂಡಿದೆ. ಇದೇ ಕಾರಣಕ್ಕೆ ಕಾಲಕಾಲಕ್ಕೆ ತಕ್ಕಂತೆ ಹೊಸ ಮಾದರಿಯ ಫೀಚರ್ಸ್‌ಗಳನ್ನು ಇನ್‌ಸ್ಟಾಗ್ರಾಮ್‌ ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಳಕೆದಾರರಿಗೆ ಹೊಸ ಕ್ಯಾಂಡಿಡ್‌ ಚಾಲೆಂಜಸ್‌ ಎಂಬ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಕ್ಯಾಂಡಿಡ್‌ ಚಾಲೆಂಜಸ್‌ ಎನ್ನುವ ಫೀಚರ್ಸ್‌ ಪರಿಚಯಿಸಲು ಮುಂದಾಗಿದೆ. ಇದು BeReal ಎಂಬ ಜನಪ್ರಿಯ ಫ್ರೆಂಚ್ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಮಾದರಿಯನ್ನು ಹೊಂದಿದೆ. ಇದು ಬಳಕೆದಾರರಿಗೆ ಫೋಟೋ ಕ್ಲಿಕ್‌ ಮಾಡುವಾಗ ಹೊಸ ಅನುಭವ ನೀಡಲಿದೆ ಎನ್ನಲಾಗಿದೆ. ಅಲ್ಲದೆ ಡೈಲಿ ನೋಟಿಫಿಕೇಶನ್‌ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹಾಗಾದ್ರೆ ಈ ಫೀಚರ್ಸ್‌ ಹೇಗೆ ಕಾರ್ಯನಿರ್ವಹಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಪ್ಲಾಟ್‌ಫಾರ್ಮ್‌ ಸೇರಲಿರುವ ಕ್ಯಾಂಡಿಡ್ ಚಾಲೆಂಜಸ್‌ ಫೀಚರ್ಸ್ ಮೂಲಕ ಬಳಕೆದಾರರು ತಮ್ಮ ಸುತ್ತಮುತ್ತಲಿನ ಫೋಟೋ ಕ್ಲಿಕ್ಕಿಸುವಾಗ ದಿನಕ್ಕೆ ಒಮ್ಮೆ ನೋಟಿಫಿಕೇಶನ್‌ ಅನ್ನು ನೋಡುತ್ತಾರೆ. ಅಲ್ಲದೆ ಪ್ರಾಂಪ್ಟ್ ಪಡೆದಾಗಲೆಲ್ಲಾ, ಮುಂಭಾಗ ಮತ್ತು ಹಿಂಭಾಗದ ಇನ್‌ಸ್ಟಾಗ್ರಾಮ್‌ ಕ್ಯಾಮೆರಾಗಳು ತೆರೆದುಕೊಳ್ಳಲಿವೆ. ಇದರಿಂದ ಫೋಟೋವನ್ನು ಕ್ಲಿಕ್‌ ಮಾಡಲು ಎರಡು ನಿಮಿಷಗಳ ವಿಂಡೋ ಲಭ್ಯವಾಗಲಿದೆ. ಇದರಲ್ಲಿ ಕ್ಲಿಕ್‌ಮಾಡುವ ಚಿತ್ರಗಳು ಮೇನ್‌ಪೇಜ್‌ ಸ್ಟೋರೀಸ್‌ ವಿಭಾಗದಲ್ಲಿ ಗೋಚರಿಸುತ್ತವೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ BeReal ಅಪ್ಲಿಕೇಶನ್‌ ಮಾದರಿಯನ್ನು ಹೊಂದಿದೆ ಎನ್ನುವುದಕ್ಕೆ ಪ್ರಮುಖ ಕಾರಣ ಎಂದರೆ ಇದು ಎರಡು ನಿಮಿಷಗಳ ಅವಧಿಯ ನಂತರ ವಿಂಡೋ ಕ್ಲೋಸ್‌ ಮಾಡುವುದು. ಎರಡು ನಿಮಿಷಗಳಲ್ಲಿ ಫೋಟೋ ಕ್ಲಿಕ್ ಮಾಡಲು ಬಳಕೆದಾರರನ್ನು ಪ್ರೇರೇಪಿಸುತ್ತದೆ. ಈ ಚಿತ್ರಗಳನ್ನು ಅವರ ಸ್ನೇಹಿತರು ಸಹ ಹಂಚಿಕೊಳ್ಳಬಹುದು, ಅಲ್ಲದೆ ದಿನದೊಳಗೆ ಡಿಸ್‌ಅಪಿಯರ್‌ ಕೂಡ ಆಗಲಿದೆ. ಜೊತೆಗೆ ಒಂದೇ ಸಮಯದಲ್ಲಿ ಫ್ರಂಟ್‌ ಮತ್ತು ಬ್ಯಾಕ್‌ ಎರಡು ಕ್ಯಾಮೆರಾಗಳನ್ನು ಬಳಸುವುದಕ್ಕೆ ಅವಕಾಶ ನೀಡಲಿದೆ. ಇದು ಬಳಕೆದಾರರನ್ನು ಇನ್ನಷ್ಟು ಆಕರ್ಷಿಸಬಹುದು ಎನ್ನಲಾಗಿದೆ. ಸದ್ಯ ಈ ಫೀಚರ್ಸ್‌ ಯಾವಾಗ ಲಭ್ಯವಾಗಲಿದೆ ಎಂಬುದರ ಬಗ್ಗೆ ಇನ್ನು ಯಾವುದೇ ಮಾಹಿತಿ ಅಧಿಕೃತವಾಗಿಲ್ಲ.

ಇನ್‌ಸ್ಟಾಗ್ರಾಮ್‌

ಇನ್‌ಸ್ಟಾಗ್ರಾಮ್‌ ಈಗಾಗಲೇ ಡ್ಯುಯಲ್‌ ಕ್ಯಾಮೆರಾ ಆಯ್ಕೆಗಳನ್ನು ನೀಡಿದೆ. ಇದರಿಂದ ಮುಂಭಾಗ ಮತ್ತು ಹಿಂಭಾಗದ ಕ್ಯಾಮರಾಗಳನ್ನು ಏಕಕಾಲದಲ್ಲಿ ಏನನ್ನಾದರೂ ರೆಕಾರ್ಡ್ ಮಾಡಲು ಮತ್ತು ಅದಕ್ಕೆ ಅವರ ಪ್ರತಿಕ್ರಿಯೆಯನ್ನು ಬಳಸಲು ಅನುಮತಿಸುತ್ತದೆ. ಈ ಆಯ್ಕೆಯ ಮೂಲಕ 'ಡ್ಯುಯಲ್' ರೀಲ್ಸ್‌ ಮಾಡುವುದಕ್ಕೆ ಸಾದ್ಯವಾಗಲಿದೆ. ಎರಡೂ ಫೀಡ್‌ಗಳು ಟ್ವಿಚ್ ಸ್ಟ್ರೀಮ್‌ಗೆ ಹೋಲುವ ಸ್ಕ್ರೀನ್‌ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ.

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಡ್ಯುಯಲ್ ವಿಡಿಯೋ ಕ್ರಿಯೆಟ್‌ ಮಾಡುವುದು ಹೇಗೆ?

ಇನ್‌ಸ್ಟಾಗ್ರಾಮ್‌ ರೀಲ್ಸ್‌ನಲ್ಲಿ ಡ್ಯುಯಲ್ ವಿಡಿಯೋ ಕ್ರಿಯೆಟ್‌ ಮಾಡುವುದು ಹೇಗೆ?

* ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಮೇಲ್ಭಾಗದಲ್ಲಿರುವ ಪ್ಲಸ್ ಐಕಾನ್ ಮೇಲೆ ಕ್ಲಿಕ್ ಮಾಡಿ. ಈಗ, 'ರೀಲ್' ಮೇಲೆ ಟ್ಯಾಪ್ ಮಾಡಿ.
* ಎಡಭಾಗದಲ್ಲಿ ಅನೇಕ ಐಕಾನ್‌ಗಳು ಇರುತ್ತವೆ. ಹೆಚ್ಚಿನ ಆಯ್ಕೆಗಳನ್ನು ತೋರಿಸಲು ಕೆಳಗಿನ ಬಾಣದ ಗುರುತನ್ನು ಟ್ಯಾಪ್ ಮಾಡಿ.
* ಈಗ, 'ಡ್ಯುಯಲ್' ಎಂದು ಲೇಬಲ್ ಮಾಡಲಾದ ಕ್ಯಾಮರಾ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ನಿಮ್ಮ ವೀಡಿಯೊವನ್ನು ರೆಕಾರ್ಡ್ ಮಾಡಲು ಮಧ್ಯದಲ್ಲಿರುವ ರೀಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.
* ಒಮ್ಮೆ ಪೂರ್ಣಗೊಂಡ ನಂತರ, ನೀವು ಎಫೆಕ್ಟ್‌ ಅಥವಾ ಮ್ಯೂಸಿಕ್‌ ಅನ್ನು ಸೇರಿಸಬಹುದು.

ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ರೀಲ್ಸ್‌ಗಳನ್ನು ಡೌನ್‌ಲೋಡ್‌ ಮಾಡುವುದು ಹೇಗೆ?

ಹಂತ: 1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್‌ ತೆರೆಯಿರಿ.
ಹಂತ: 2 ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ವಿಭಾಗಕ್ಕೆ ಹೋಗಿ.
ಹಂತ: 3 ನಂತರ, ನಿಮ್ಮ ಡಿವೈಸ್‌ನಲ್ಲಿ ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ಗಳ ಲಿಂಕ್ ಅನ್ನು ಕಾಪಿ ಮಾಡಿ.
ಹಂತ: 4 ಇದೀಗ ರೀಲ್ಸ್ ಡೌನ್‌ಲೋಡರ್ ಅಪ್ಲಿಕೇಶನ್ ತೆರೆಯಿರಿ ಮತ್ತು ನೀವು ಡೌನ್‌ಲೋಡ್ ಮಾಡಲು ಬಯಸುವ ರೀಲ್‌ನ ಲಿಂಕ್ ಅನ್ನು ಪೇಸ್ಟ್‌ ಮಾಡಿರಿ.
ಹಂತ: 5 ಇದಾದ ನಂತರ ನೀವು ಡೌನ್‌ಲೋಡ್ ಬಟನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.

Best Mobiles in India

Read more about:
English summary
Instagram is working on a new feature called Candid Challenges.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X