ಇನ್‌ಸ್ಟಾಗ್ರಾಮ್ ರೀಲ್ಸ್‌ನಲ್ಲಿ ಹೊಸ ಫೀಚರ್ಸ್‌; ಇನ್ಮುಂದೆ ಶೆಡ್ಯೂಲ್‌ ಮಾಡಬಹುದು

|

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್ ಈಗಾಗಲೇ ಹಲವು ನವೀಕರಣವನ್ನು ಪಡೆದಿದೆ. ಈ ನಡುವೆ ಈಗ ಮತ್ತೆ ಹೊಸ ಫೀಚರ್ಸ್‌ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಲಾಗಿದ್ದು, ಈ ಮೂಲಕ ಕ್ರಿಯೇಟರ್ಸ್‌ ಗಳು ತಮ್ಮ ಪೋಸ್ಟ್‌ ಅನ್ನು ಶೆಡ್ಯೂಲ್‌ ಮಾಡಬಹುದಾಗಿದೆ. ಹಾಗೆಯೇ ತಮ್ಮ ರೀಲ್ಸ್‌ಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಬಹುದಾದ ಆಯ್ಕೆಯನ್ನೂ ಸಹ ಪಡೆಯಲಿದ್ದಾರೆ.

ಇನ್‌ಸ್ಟಾಗ್ರಾಮ್‌

ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯಿಸಲಾಗಿರುವ ಈ ಫೀಚರ್ಸ್‌ಗಳಲ್ಲಿ ಕ್ರಿಯೇಟರ್ಸ್‌ ತಮ್ಮ ರೀಲ್ ಅನ್ನು ಪಬ್ಲಿಷ್ ಮಾಡಿ ನಂತರ ಅಚಿವ್‌ಮೆಂಟ್‌ಅನ್ನು ಅನ್‌ಲಾಕ್ ಮಾಡಿದಾಗ ಅವರಿಗೆ ಸೂಚನೆ ಲಭ್ಯವಾಗುತ್ತವೆ. ಇದರ ಜೊತೆಗೆ ಇನ್‌ಸ್ಟಾಗ್ರಾಮ್‌ ನಲ್ಲಿ ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡುವ ಆಯ್ಕೆಯನ್ನೂ ಸಹ ನೀಡಲಾಗಿದ್ದು, ಈ ಮೂಲಕ ನೀವು ಯಾವಾಗ ನಿಮ್ಮ ರೀಲ್‌ ಅಥವಾ ಫೋಟೋ, ವಿಡಿಯೋ ಪಬ್ಲಿಷ್‌ ಆಗಬೇಕೋ ಆ ದಿನಾಂಕ ಹಾಗೂ ಸಮಯಕ್ಕೆ ಶೆಡ್ಯೂಲ್ ಮಾಡಬಹುದು.

ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಿ

ಪೋಸ್ಟ್‌ಗಳನ್ನು ಶೆಡ್ಯೂಲ್ ಮಾಡಿ

ನೀವು ಇನ್‌ಸ್ಟಾಗ್ರಾಮ್‌ ನಿಂದ ನೇರವಾಗಿ ನಿಮ್ಮ ರೀಲ್ಸ್‌, ಫೋಟೋ ಅಥವಾ ಇತರೆ ವಿಷಯಗಳನ್ನು ಶೆಡ್ಯೂಲ್ ಮಾಡಬಹುದಾಗಿದೆ. ಈ ಶೆಡ್ಯೂಲ್ ಅನ್ನು 75 ದಿನಗಳ ಮುಂಚಿತವಾಗಿಯೇ ಮಾಡಬಹುದಾದ ಆಯ್ಕೆ ನೀಡಲಾಗಿದ್ದು, ಇದಕ್ಕಾಗಿ ಈ ಕ್ರಮ ಅನುಸರಿಸಿ.

ಬಯಸಿದ ಪೋಸ್ಟ್ ಅನ್ನು ರಚಿಸಿದ ನಂತರ ನೀವು 'ಅಡ್ವಾನ್ಸಡ್ ಸೆಟ್ಟಿಂಗ್ಸ್‌' ಆಯ್ಕೆ ಮೇಲೆ ಟ್ಯಾಪ್ ಮಾಡಿ. ನಂತರ ಅದರಲ್ಲಿ 'ಶೆಡ್ಯೂಲ್ ದಿಸ್ ಪೋಸ್ಟ್' ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಗಮನಿಸಿ.

ಟ್ಯಾಪ್‌

'Schedule This Post' ಮೇಲೆ ಟ್ಯಾಪ್‌ ಮಾಡಿದ ನಂತರ ನಿಮ್ಮ ಪೋಸ್ಟ್‌ ಯಾವಾಗ ಪಬ್ಲಿಷ್‌ ಆಗಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಅಲ್ಲಿ ನೀಡಲಾದ ದಿನಾಂಕ ಹಾಗೂ ಸಮಯವನ್ನು ಸೆಲೆಕ್ಟ್ ಮಾಡಿಕೊಳ್ಳಿ. ನಂತರ ಇನ್‌ಸ್ಟಾಗ್ರಾಮ್‌ನ ಪೋಸ್ಟ್‌ ವಿಭಾಗಕ್ಕೆ ಮರಳಿ. ಅಲ್ಲಿ 'ಶೆಡ್ಯೂಲ್' ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ನೀವು ಟ್ಯಾಪ್‌ ಮಾಡಿದರೆ ನೀವು ನಿಗದಿ ಪಡಿಸಿದ ದಿನಾಂಕ ಹಾಗೂ ಸಮಯದಲ್ಲಿ ನಿಮ್ಮ ಪೋಸ್ಟ್‌ ಪಬ್ಲಿಷ್‌ ಆಗುತ್ತದೆ.

ರೀಲ್ಸ್‌ ಅಚಿವ್‌ಮೆಂಟ್‌ (Achievements )

ರೀಲ್ಸ್‌ ಅಚಿವ್‌ಮೆಂಟ್‌ (Achievements )

ಅಚಿವ್‌ಮೆಂಟ್‌ಅನ್ನು ಅನ್‌ಲಾಕ್ ಮಾಡುವ ಗುರಿಯನ್ನು ತಲುಪಬೇಕೆಂದರೆ ನೀವು ವಿಭಿನ್ನ ರೀಲ್ಸ್ ಶೈಲಿಗಳನ್ನು ಪ್ರಯತ್ನಿಸಬೇಕಿದೆ. ಅದರಂತೆ ಈ ರೀಲ್ಸ್ ಅಚಿವ್‌ಮೆಂಟ್‌ ನಿಮ್ಮನ್ನು ಹೆಚ್ಚಾಗಿ ಪ್ರೋತ್ಸಾಹಿಸುತ್ತವೆ. ಈ ರೀತಿಯ ಕೆಲಸಗಳನ್ನು ಮಾಡುವ ಮೂಲಕ ನೀವು ರೀಲ್ಸ್ ಅಚಿವ್‌ಮೆಂಟ್‌ ಅನ್‌ಲಾಕ್ ಮಾಡಬಹುದು.

ಆಡ್ ಯುವರ್ಸ್

ಆಡ್ ಯುವರ್ಸ್ ಸ್ಟಿಕ್ಕರ್, ಕೊಲಾಬ್ಸ್ ಟೂಲ್ ಅಥವಾ ರೀಮಿಕ್ಸ್ ಫೀಚರ್ಸ್‌ ಮೂಲಕ ಇನ್ನೊಬ್ಬ ಕ್ರಿಯೇಟರ್ಸ್‌ ಜೊತೆಗೆ ರೀಲ್ಸ್‌ ಮಾಡಬೇಕಿದೆ. ಹಾಗೆಯೇ ರೀಲ್‌ಗಳನ್ನು ಹೆಚ್ಚು ಸುದ್ದಿಯಲ್ಲಿರುವಂತೆ ಮಾಡಲು ಸಮುದಾಯದ ಜೊತೆಗೆ ಪೋಲ್‌ಗಳು, ರಸಪ್ರಶ್ನೆಗಳು, ಇತ್ಯಾದಿಗಳಂತಹ ಸಂವಾದಾತ್ಮಕ ಸ್ಟಿಕ್ಕರ್‌ಗಳ ಮೂಲಕ ಸಂಪರ್ಕದಲ್ಲಿರಬೇಕಿದೆ.

ಟ್ರೆಂಡಿಂಗ್

ಇದರ ಜೊತೆಗೆ ಟ್ರೆಂಡಿಂಗ್ ಆಡಿಯೋ ಅಥವಾ ಎಫೆಕ್ಟ್‌ಗಳನ್ನು ಬಳಸಿಕೊಂಡು ಸಂಭಾಷಣೆಗೆ ಸೇರಿಕೊಳ್ಳಬೇಕಿದೆ. ಜೊತೆಗೆ ಒಂದು ವಾರದಲ್ಲಿ ಒಂದಕ್ಕಿಂತ ಹೆಚ್ಚು ರೀಲ್ ಮಾಡುವ ಮೂಲಕ ತಮ್ಮ ಸೃಜನಾತ್ಮಕ ಸ್ಟ್ರೀಕ್ ಅನ್ನು ಮುಂದುವರೆಸಿದರೆ ನಿಮ್ಮ ಅಚಿವ್‌ಮೆಂಟ್‌ ಅನ್‌ಲಾಕ್‌ ಮಾಡಬಹುದಾಗಿದೆ.

ಕ್ರಿಯೇಟರ್ಸ್‌

ಇನ್ನು ಕ್ರಿಯೇಟರ್ಸ್‌ ತಮ್ಮ ರೀಲ್ಸ್‌ ಅನ್ನು ಪ್ರಕಟಿಸಿದ ನಂತರ ಅಚಿವ್‌ಮೆಂಟ್‌ ಅನ್‌ಲಾಕ್ ಮಾಡಿದರೆ ಅವರಿಗೆ ಮಾಹಿತಿ ನೀಡಲಾಗುತ್ತದೆ. ಜೊತೆಗೆ ಹೆಚ್ಚಿನ ಮಾಹಿತಿ ಬೇಕು ಎಂದರೆ ನೋಟಿಫಿಕೇಶನ್‌ನಲ್ಲಿ 'ವ್ಯೂ' ಆಯ್ಕೆ ಮೇಲೆ ಟ್ಯಾಪ್‌ ಮಾಡಬಹುದು.

ನಿಮ್ಮ ಅಚಿವ್‌ಮೆಂಟ್‌ ಈ ರೀತಿ ವೀಕ್ಷಿಸಿ

ನಿಮ್ಮ ಅಚಿವ್‌ಮೆಂಟ್‌ ಈ ರೀತಿ ವೀಕ್ಷಿಸಿ

ಅಚಿವ್‌ಮೆಂಟ್‌ ಅನ್‌ಲಾಕ್ ಮಾಡುವ ರೀಲ್ಸ್‌ ಅನ್ನು ನೀವು ಪೋಸ್ಟ್ ಮಾಡಿದಾಗ, ನಿಮ್ಮ ಡಿಸ್‌ಪ್ಲೇ ಕೆಳಭಾಗದಲ್ಲಿ ಒಂದು ನೋಟಿಫಿಕೇಶನ್‌ ಬರುತ್ತದೆ. ನಂತರ ಅದರ ಮೇಲೆ ಟ್ಯಾಪ್‌ ಮಾಡಿ. ಇದರ ಹೊರತಾಗಿ ಇನ್ನೂ ಹೆಚ್ಚಿನ ಮಾಹಿತಿ ಬೇಕು ಎಂದರೆ ಪ್ರೊಫೈಲ್‌ಗೆ ಹೋಗಿ ಅಲ್ಲಿ ಕೆಳಗಿನ ಬಲಭಾಗದಲ್ಲಿರುವ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ. ನಂತರ ನಿಮ್ಮ ಪ್ರೊಫೈಲ್ ಮಾಹಿತಿಯ ಕೆಳಗೆ 'ರೀಲ್ಸ್‌' ಎಂಬ ಆಯ್ಕೆ ಮೇಲೆ ಕ್ಲಿಕ್‌ ಮಾಡಿ.

ರೀಲ್ಸ್

ಇನ್ನು ಯಾವ ರೀಲ್ಸ್ ವಿವರ ಬೇಕೋ ಅದರ ಮೇಲೆ ಟ್ಯಾಪ್ ಮಾಡಿ, ಅಲ್ಲಿ 'ಮೋರ್‌ ಆಕ್ಷನ್‌ ' ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿದರೆ ರೀಲ್‌ಗಾಗಿ ನೀವು ಗಳಿಸಿದ ಅಚಿವ್‌ಮೆಂಟ್‌ ನೋಡಬಹುದು. ಹಾಗೆಯೇ ಅನ್‌ಲಾಕ್ ಮಾಡಿದ ಎಲ್ಲಾ ಅಚಿವ್‌ಮೆಂಟ್‌ ವೀಕ್ಷಿಸಬೇಕು ಎಂದುಕೊಂಡರೆ ಇಲ್ಲಿಯೇ ಕಾಣಿಸಿಕೊಳ್ಳುವ 'See all achievements' ಮೇಲೆ ಟ್ಯಾಪ್ ಮಾಡಿ.

Best Mobiles in India

English summary
There have already been many updates on Meta owned Instagram. In between now there is an option to schedule posts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X