ಸುದ್ದಿಯ ಸಾಚಾತನ ಪತ್ತೆ ಹಚ್ಚಲು ಗೂಗಲ್‌ನಲ್ಲಿ ಈ ಕ್ರಮಗಳನ್ನು ಅನುಸರಿಸಿರಿ!

|

ಇತ್ತೀಚಿನ ಯಾವುದೇ ಮಾಹಿತಿ ಬೇಕಿದ್ದರೂ ಅಂತರ್‌ಜಾಲದಲ್ಲಿ ದೊರೆಯಲಿದೆ. ಹಾಗಂತ ಆನ್‌ಲೈನ್‌ನಲ್ಲಿ ಲಭ್ಯವಾಗುವ ಮಾಹಿತಿ ಎಲ್ಲವೂ ಸತ್ಯ ಎಂದು ಸಹ ಹೇಳಲಾಗುವುದಿಲ್ಲ. ಏಕೆಂದರೆ ಅಂತರ್ಜಾಲದಲ್ಲಿ ನಕಲಿ ಸುದ್ದಿಗಳನ್ನು ಹರಡುವ ಟೀಮ್‌ಗಳು ಕೂಡ ಇವೆ. ಅಂತರ್ಜಾಲವು ತನ್ನ ಬಳಕೆದಾರರಿಗೆ ಕೆಲವೊಮ್ಮೆ ತಪ್ಪಾದ ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಪ್ರತಿದಿನವೂ ಪ್ರಸ್ತುತಪಡಿಸಬಹುದು. ಆದರೆ ಬಳಕೆದಾರರು ತಾವು ಪಡೆದುಕೊಂಡಿರುವ ಮಾಹಿತಿಯ ಬಗ್ಗೆ ಖಚಿತತೆ ಇಲ್ಲದಿದ್ದರೆ ಅವರು ಅದನ್ನು ಪರಿಶೀಲಿಸಬಹುದು.

ಆನ್‌ಲೈನ್‌

ಹೌದು, ಆನ್‌ಲೈನ್‌ನಲ್ಲಿ ದೊರೆಯುವ ಕೆಲವು ಮಾಹಿತಿ ನಕಲಿ ಸುದ್ದಿ ಆಗಿರುವ ಸಾದ್ಯತೆ ಕೂಡ ಇರುತ್ತದೆ. ಇದೇ ಕಾರಣಕ್ಕೆ ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ಅಥವಾ ನಕಲಿ ಸುದ್ದಿಗಳನ್ನು ಪರಿಶೀಲಿಸಲು ಗೂಗಲ್ ಬಳಕೆದಾರರನ್ನು ಅನುಮತಿಸುತ್ತದೆ. ಗೂಗಲ್‌ನ ಟೂಲ್ಸ್‌ಗಳನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಪತ್ತೆ ಹಚ್ಚಬಹುದಾಗಿದೆ. ಇಮದು ಇಂಟರ್‌ನ್ಯಾಷನಲ್‌ ಫ್ಯಾಕ್ಟ್‌ ಚೆಕ್‌ ಡೇ ಪ್ರಯುಕ್ತ ಬಳಕೆದದಾರರು ಸುದ್ದಿಯಲ್ಲಿ ಸತ್ಯಾಂಶ ಇದೆಯಾ ಇಲ್ಲವಾ ಅನ್ನೊದನ್ನ ಹೇಗೆ ಖಚಿತಪಡಿಸಿಕೊಳ್ಳಬಹುದು ಅನ್ನೊದಕ್ಕೆ ಗೂಗಲ್ ಕೆಲವು ಸಲಹೆಗಳನ್ನು ಹಂಚಿಕೊಂಡಿದೆ. ಆ ಸಲಹೆಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ಅಥವಾ ನಕಲಿ ಸುದ್ದಿಗಳನ್ನು ಪರಿಶೀಲಿಸುವುದು ಹೇಗೆ?

ಆನ್‌ಲೈನ್‌ನಲ್ಲಿ ತಪ್ಪು ಮಾಹಿತಿ ಅಥವಾ ನಕಲಿ ಸುದ್ದಿಗಳನ್ನು ಪರಿಶೀಲಿಸುವುದು ಹೇಗೆ?

1. ಮಾಹಿತಿಯ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ
ಆನ್‌ಲೈನ್‌ನಲ್ಲಿ ನೀವು ಪಡೆದುಕೊಳ್ಳುವ ಯಾವುದೇ ಮಾಹಿತಿಯ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ಪರಿಶೀಲಿಸುವುದು ಇನ್ನು ಉತ್ತಮ. ಲೇಖನದ ಬಲಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಕ್ಲಿಕ್ ಮಾಡುವುದರ ಮೂಲಕ ಲೇಖಕರು ಅಥವಾ ವೆಬ್‌ಸೈಟ್‌ನ ಮೂಲದ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಎಂದು ಗೂಗಲ್ ಹೇಳಿದೆ. ಸದ್ಯ ಈ ಟೂಲ್‌ ಯುಎಸ್‌ನಲ್ಲಿ ಮಾತ್ರ ಲಭ್ಯವಿದೆ.

2. ಇಮೇಜ್‌ ಅಧಿಕೃತವಾಗಿದೆಯೇ ಎಂದು ಪರಿಶೀಲಿಸಿ

2. ಇಮೇಜ್‌ ಅಧಿಕೃತವಾಗಿದೆಯೇ ಎಂದು ಪರಿಶೀಲಿಸಿ

ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಫಾರ್ವರ್ಡ್ ಮಾಡಲಾದ ಫೋಟೋಗಳೆಲ್ಲಾ ಸತ್ಯವಾಗಿರುತ್ತವೆ ಎಂದು ನಂಬುವಂತಿಲ್ಲ. ಕೆಲವೊಮ್ಮೆ ಜನರನ್ನು ದಾರಿ ತಪ್ಪಿಸುವ ಫೋಟೋಗಳು ಕೂಡ ಇರಲಿವೆ. ಇದೇ ಕಾರಣಕ್ಕೆ ಫೋಟೋವನ್ನು ರೈಟ್‌ ಕ್ಲಿಕ್ ಮಾಡುವ ಮೂಲಕ ಮತ್ತು "ಚಿತ್ರಕ್ಕಾಗಿ ಗೂಗಲ್‌ನಲ್ಲಿ ಹುಡುಕಿ" ಆಯ್ಕೆ ಮಾಡುವ ಮೂಲಕ ಬಳಕೆದಾರರು ಚಿತ್ರವು ಅಧಿಕೃತವಾಗಿದೆಯೇ ಎಂದು ಪರಿಶೀಲಿಸಬಹುದು ಎಂದು ಗೂಗಲ್ ಹೇಳಿದೆ. ಮೊಬೈಲ್ ಬಳಕೆದಾರರು ಸ್ವಲ್ಪ ಸಮಯದವರೆಗೆ ಚಿತ್ರವನ್ನು ಟ್ಯಾಪ್‌ ಮಾಡುವ ಸತ್ಯಾಸತ್ಯತೆ ಪರಿಶೀಲಿಸಬಹುದು. ಈ ಚಿತ್ರವು ಮೊದಲು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆಯೇ ಮತ್ತು ಅದು ಕಾಣಿಸಿಕೊಂಡ ಸಂದರ್ಭವನ್ನು Google ಪರಿಶೀಲಿಸುತ್ತದೆ.

3. ಒಂದಕ್ಕಿಂತ ಹೆಚ್ಚು ಮೂಲಗಳಿಗಾಗಿ ನೋಡಿ

3. ಒಂದಕ್ಕಿಂತ ಹೆಚ್ಚು ಮೂಲಗಳಿಗಾಗಿ ನೋಡಿ

ಬಳಕೆದಾರರು ಸುದ್ದಿ ಮೋಡ್‌ಗೆ ಬದಲಾಯಿಸಿದರೆ ಅಥವಾ ಗೂಗಲ್ ನ್ಯೂಸ್‌ನಲ್ಲಿ ವಿಷಯಕ್ಕಾಗಿ ಹುಡುಕಿದರೆ ಸುದ್ದಿ ತುಣುಕಿನ ಸಂಪೂರ್ಣ ಪ್ರಸಾರವನ್ನು ಪರಿಶೀಲಿಸಬಹುದು ಎಂದು ಗೂಗಲ್ ಹೇಳಿದೆ. ಸುದ್ದಿಗಳನ್ನು ಒಳಗೊಂಡಿರುವ ಸುದ್ದಿ ಸ್ಟೋರ್‌ನಲ್ಲಿ ನೋಡಲು ಬಳಕೆದಾರರು ಫುಲ್‌ರೇಂಜ್‌ ಮೇಲೆ ಕ್ಲಿಕ್ ಮಾಡಬಹುದು.

4. ಗೂಗಲ್‌ನ ಫ್ಯಾಕ್ಟ್-ಚೆಕರ್ ಬಳಸಿ

4. ಗೂಗಲ್‌ನ ಫ್ಯಾಕ್ಟ್-ಚೆಕರ್ ಬಳಸಿ

ಗೂಗಲ್ ಬಳಕೆದಾರರು ಕೀವರ್ಡ್ ಅನ್ನು ಟೈಪ್ ಮಾಡಬಹುದು. ಸುದ್ದಿ ಪ್ರಕಟಣೆ ಮತ್ತು ಗೂಗಲ್ ಪಟ್ಟಿ ಮಾಡಿದ ಫ್ಯಾಕ್ಟ್ ಚೆಕ್‌ಗಳಿಂದ ನ್ಯೂಸ್‌ ರೈಟ್‌ ಅನ್ನು ಹುಡುಕಬಹುದು. ಫ್ಯಾಕ್ಟ್ ಚೆಕ್ ಎಕ್ಸ್‌ಪ್ಲೋರರ್‌ನಲ್ಲಿ ವಿಷಯಕ್ಕಾಗಿ ವಿಸ್ತಾರವಾದ ಫ್ಯಾಕ್ಟ್ ಚೆಕ್ ಸರ್ಚ್‌ ಮಾಡಲು ಬಯಸುವ ಬಳಕೆದಾರರು, ಗೂಗಲ್ ಪ್ರಕಾರ ವಿಶ್ವದಾದ್ಯಂತ ಪ್ರತಿಷ್ಠಿತ ಪ್ರಕಾಶಕರಿಂದ 100,000 ಕ್ಕೂ ಹೆಚ್ಚು ಫ್ಯಾಕ್ಟ್ ಚೆಕ್‌ಗಳನ್ನು ಸಂಗ್ರಹಿಸುತ್ತಾರೆ.

5. ಹೇಳಿದ ಸ್ಥಳದಲ್ಲಿ ಈವೆಂಟ್ ನಡೆಯುತ್ತಿದೆಯೆ ಎಂದು ದೃಡೀಕರಿಸಿ

5. ಹೇಳಿದ ಸ್ಥಳದಲ್ಲಿ ಈವೆಂಟ್ ನಡೆಯುತ್ತಿದೆಯೆ ಎಂದು ದೃಡೀಕರಿಸಿ

ಗೂಗಲ್ ಅರ್ಥ್ ಅಥವಾ ಗೂಗಲ್ ನಕ್ಷೆಗಳಲ್ಲಿನ ಸ್ಥಳದ ರಸ್ತೆ ವೀಕ್ಷಣೆಯನ್ನು ಪರಿಶೀಲಿಸುವ ಮೂಲಕ ಒಂದು ಸ್ಥಳದಲ್ಲಿ ಈವೆಂಟ್ ನಡೆಯುತ್ತಿದೆಯೇ ಎಂದು ಬಳಕೆದಾರರು ಖಚಿತಪಡಿಸಬಹುದು ಎಂದು ಗೂಗಲ್ ಹೇಳಿದೆ.

Best Mobiles in India

English summary
International Fact Checking Day: Here are tips to spot fake news.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X