ಐಫೋನ್‌ 13 ಬೆಲೆ ಇಳಿಕೆ!..ಎಲ್ಲಿ ಖರೀದಿಸಿದರೆ ಹೆಚ್ಚಿನ ಡಿಸ್ಕೌಂಟ್‌ ಸಿಗುತ್ತೆ?

|

ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಕೊಡುಗೆ ನೀಡುತ್ತಲೇ ಗ್ರಾಹಕರನ್ನು ಆಕರ್ಷಿಸುತ್ತವೆ. ಮುಖ್ಯವಾಗಿ ಹೈ ಎಂಡ್‌ ಫೋನ್‌ಗಳಿಗೂ ಬೊಂಬಾಟ್‌ ರಿಯಾಯಿತಿ ನೀಡಿ ಶಾಪಿಂಗ್ ಪ್ರಿಯರು ಹುಬ್ಬೇರಿಸುವಂತೆ ಮಾಡುತ್ತವೆ. ಸದ್ಯ ಈ ಎರಡು ಪ್ಲಾಟ್‌ಫಾರ್ಮ್‌ಗಳಲ್ಲಿ ಆಪಲ್‌ ಸಂಸ್ಥೆಯ ಐಫೋನ್‌ 13 ಫೋನಿಗೆ ಆಫರ್‌ ಲಭ್ಯವಿದ್ದು, ಭಾರೀ ಡಿಸ್ಕೌಂಟ್‌ ದರದಲ್ಲಿ ಐಫೋನ್‌ ಖರೀದಿಸಬಹುದಾಗಿದೆ.

Apple iPhone 13

ಹೌದು, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಗಳಲ್ಲಿ ಐಫೋನ್‌ 13 (Apple iPhone 13) ಅನ್ನು ಡಿಸ್ಕೌಂಟ್‌ನಲ್ಲಿ ಖರೀದಿ ಮಾಡಬಹುದಾಗಿದೆ. ಈ ಐಫೋನಿಗೆ ಇದೀಗ ಭಾರೀ ರಿಯಾಯತಿ, ಎಕ್ಸ್‌ಚೇಂಜ್ ಆಫರ್‌ ಹಾಗೂ ಬ್ಯಾಂಕ್‌ ಕೊಡುಗೆಗಳು ಲಭ್ಯ ಇವೆ. ಇನ್ನು ಐಫೋನ್‌ 13 ಖರೀದಿ ಮಾಡಲು ಅಮೆಜಾನ್‌ (Amazon) ತಾಣ ಉತ್ತಮವೇ? ಅಥವಾ ಫ್ಲಿಪ್‌ಕಾರ್ಟ್‌ (Flipkart) ಪ್ಲಾಟ್‌ಫಾರ್ಮ್ ಉತ್ತಮವೇ ಅಥವಾ ಆಪಲ್‌ ಸ್ಟೋರ್‌ ಯೋಗ್ಯವೇ? ಇಲ್ಲಿದೆ ಮಾಹಿತಿ. ಮುಂದೆ ಓದಿರಿ.

ಅಮೆಜಾನ್‌ನಲ್ಲಿ ಲಭ್ಯವಿರುವ ಆಫರ್ ಏನು?

ಅಮೆಜಾನ್‌ನಲ್ಲಿ ಲಭ್ಯವಿರುವ ಆಫರ್ ಏನು?

ಅಮೆಜಾನ್ ತಾಣದಲ್ಲಿ (Amazon) ನಲ್ಲಿ, ಐಫೋನ್‌ 13 ಫೋನಿನ 128GB ಸ್ಟೋರೇಜ್‌ ವೇರಿಯಂಟ್‌ 66900ರೂ. ಗೆ ಲಭ್ಯವಿದೆ. ರಿಟೇಲ್ ಬೆಲೆಗೆ ಹೋಲಿಸಿದರೆ 3,000ರೂ. ಕಡಿಮೆಯಾಗಿದೆ. ಇನ್ನು ಗ್ರಾಹಕರು ತಮ್ಮ ಹಳೆಯ ಫೋನ್‌ ಅನ್ನು ವಿನಿಮಯ ಮಾಡಿಕೊಳ್ಳಲು ಯೋಜಿಸುತ್ತಿರುವವರು ಸುಮಾರು 14050ರೂ. ವರೆಗೆ ಎಕ್ಸ್‌ಚೇಂಜ್ ಕೊಡುಗೆ ಸಿಗಲಿದೆ.

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ರಿಯಾಯಿತಿ ಎಷ್ಟು?

ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುವ ರಿಯಾಯಿತಿ ಎಷ್ಟು?

ಫ್ಲಿಪ್‌ಕಾರ್ಟ್‌ (Flipkart) ಇ ಕಾಮರ್ಸ್‌ ನಲ್ಲಿ, ಐಫೋನ್‌ 13 ಫೋನಿನ 128GB ಸ್ಟೋರೇಜ್‌ ವೇರಿಯಂಟ್‌ 66900ರೂ. ಗೆ ಲಭ್ಯವಿದೆ. ಹಾಗೆಯೇ ಗ್ರಾಹಕರು ತಮ್ಮ ಹಳೆಯ ಫೋನ್‌ ಅನ್ನು ವಿನಿಮಯ ಮಾಡಿಕೊಳ್ಳಲು ಯೋಜಿಸುತ್ತಿರುವವರು ಸುಮಾರು 18500ರೂ. ವರೆಗೆ ಎಕ್ಸ್‌ಚೇಂಜ್ ಕೊಡುಗೆ ಸಿಗಲಿದೆ. ಇದರೊಂದಿಗೆ ಕೆಲವು ಆಯ್ದ ಬ್ಯಾಂಕ್‌ಗಳಿಂದ ಇತರೆ ಕೊಡುಗೆಗಳು ಲಭ್ಯವಾಗಲಿವೆ.

ಆಪಲ್ ಸ್ಟೋರ್‌ನಲ್ಲಿ ಡಿಸ್ಕೌಂಟ್‌ ಎಷ್ಟಿದೆ?

ಆಪಲ್ ಸ್ಟೋರ್‌ನಲ್ಲಿ ಡಿಸ್ಕೌಂಟ್‌ ಎಷ್ಟಿದೆ?

ಖರೀದಿದಾರರು ಐಫೋನ್ 13 (iPhone 13) ಅನ್ನು ಆಪಲ್ ಸ್ಟೋರ್‌ನಿಂದ 69,900ರೂ. ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ 2,200ರೂ. ಗಳಿಂದ 58,730ರೂ. ಗಳವರೆಗೆ ಎಕ್ಸ್‌ಚೇಂಜ್ ಕೊಡುಗೆ ಲಭ್ಯವಾಗಲಿದೆ.

ಐಫೋನ್ 13 ಫೀಚರ್ಸ್

ಐಫೋನ್ 13 ಫೀಚರ್ಸ್

ಐಫೋನ್ 13 ಫೋನ್‌ 6.1 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. 1200 nits ಬ್ರೈಟ್ನೆಸ್‌ ಹೊಂದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ.

ಐಫೋನ್ 13

ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೊ ಸೆರೆಹಿಡಿಯಲು ನೆರವಾಗಲಿದೆ. ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿದೆ. ಇನ್ನು ಈ ಫೋನ್ ಪಿಂಕ್, ರೆಡ್, ಬ್ಲ್ಯಾಕ್, ವೈಟ್ ಸೇರಿದಂತೆ ಐದು ಬಣ್ಣಗಳಲ್ಲಿ ಲಭ್ಯವಾಗಲಿದೆ.

ಐಫೋನ್ 14 ಫೀಚರ್ಸ್‌

ಐಫೋನ್ 14 ಫೀಚರ್ಸ್‌

ಐಫೋನ್ 14 ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 1200 nits ಬ್ರೈಟ್ನಸ್‌ ಸಪೋರ್ಟ್‌ ಹಾಗೆಯೇ ಇದು ಡ್ಯುಯಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಮುಂಭಾಗದಲ್ಲಿ 12 ಮೆಗಾ ಪಿಕ್ಸಲ್‌ನ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇದು 128GB, 256GB ಮತ್ತು 512GB ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಐಫೋನ್‌ 14 ಫೋನ್ 5G ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ. ಇದು ಇ-ಸಿಮ್ ಆಯ್ಕೆ ಒಳಗೊಂಡಿದೆ.

Best Mobiles in India

English summary
iPhone 13 Price Cut: Amazon vs Flipkart vs Apple Store, check Offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X