ಏನಿದು ಇ-ಸಿಮ್?.ಉಪಯೋಗ ಏನು? ಐಫೋನ್‌ನಲ್ಲಿ ಎಷ್ಟು ಇ-ಸಿಮ್ ಬಳಸಬಹುದು?
ಇ-ಸಿಮ್ ಪದವನ್ನು ಈಗಾಗಲೇ ನೀವು ಕೇಳಿರುತ್ತೀರಿ. ಇದು ಆಂತರೀಕ ರೂಪದಲ್ಲಿದ್ದು, ಭೌತಿಕವಾಗಿ ಬಳಕೆ ಮಾಡಲು ಲಭ್ಯವಿರುವುದಿಲ್ಲ. ಜನಪ್ರಿಯ ಆಪಲ್ ಸಂಸ್ಥೆಯು ಸಹ ಈಗಾಗಲೇ ತನ್ನ ಕೆಲವು ಐಫೋನ್ ಮಾಡೆಲ್‌ಗಳಿಗೆ ಇ-ಸಿಮ್ ಬೆಂಬಲ ನೀಡಿದೆ. ಅದೇ ರೀತಿ ಇತ್ತೀಚಿಗೆ ಬಿಡುಗಡೆ ಆಗಿರುವ ನೂತನ ಐಫೋನ್ 14 ಸರಣಿಯ ಫೋನ್‌ಗಳು ಇ-ಸಿಮ್ ಸಪೋರ್ಟ್ ಒಳಗೊಂಡಿವೆ.

ಫೋನ್‌ಗಳಲ್ಲಿ ಭೌತಿಕ ಸಿಮ್ ಸ್ಲಾಟ್ ಆಯ್ಕೆ ತೆಗೆದು, ಇ-ಸಿಮ್ ಸೌಲಭ್ಯ ಪರಿಚಯಿಸಿರುವ ಸಂಸ್ಥೆಗಳಲ್ಲಿ ಆಪಲ್ ಅಷ್ಟೇ ಇಲ್ಲ. ಸ್ಯಾಮ್‌ಸಂಗ್ ಸಹ ತನ್ನ ಗ್ಯಾಲಕ್ಸಿ Z ಫೋಲ್ಡ್ ಮತ್ತು ಗ್ಯಾಲಕ್ಸಿ Z ಫ್ಲಿಪ್ ಸ್ಮಾರ್ಟ್‌ಫೋನ್‌ಗಳಲ್ಲಿ ಇ-ಸಿಮ್ ಆಯ್ಕೆಯನ್ನು ನೀಡಿದೆ. ಅದಾಗ್ಯೂ, ಕೆಲವು ಬಳಕೆದಾರರಿಗೆ ಈ ಇ-ಸಿಮ್ ಬಳಕೆ ಬಗ್ಗೆ ಹಾಗೂ ಅದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಹಾಗಾದರೆ, ಏನಿದು ಇ-ಸಿಮ್? ಇದರ ಕಾರ್ಯ ಹೇಗೆ? ಒಂದು ಐಫೋನ್‌ನಲ್ಲಿ ಎಷ್ಟು ಇ-ಸಿಮ್ ಬಳಕೆ ಮಾಡಬಹುದು? ಎಂಬಿತ್ಯಾದಿ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಏನಿದು ಇ-ಸಿಮ್ (eSIM)?
ಸದ್ಯ ಮೊಬೈಲ್ ಮಾರುಕಟ್ಟೆಯಲ್ಲಿ eSIM ಗಮನ ಸೆಳೆದಿದೆ. ಅಂದಹಾಗೇ eSIM ಎಂದರೆ ಎಂಬೆಡೆಡ್-ಚಂದಾದಾರರ ಗುರುತು ಮಾಡ್ಯೂಲ್ ಆಗಿದೆ. (Embedded-Subscriber Identity Module). ಇನ್ನು ಸರಳವಾಗಿ ಹೇಳುವುದಾದರೆ, ಇದು ಬೆಂಬಲಿತ ಸಾಧನದಲ್ಲಿ ಸಕ್ರಿಯಗೊಳಿಸಲಾದ ವರ್ಚುವಲ್ ಸಿಮ್ ಕಾರ್ಡ್ ಆಗಿದೆ. ಇ-ಸಿಮ್ ಆಯ್ಕೆಯಲ್ಲಿ ಬಳಕೆದಾರರು ಬಾಹ್ಯವಾಗಿ ಯಾವುದೇ ಸಿಮ್ ಸೆರಿಸುವ ಅಗತ್ಯ ಇರದು.

ಇ-ಸಿಮ್ (eSIM) ಪರಿಕಲ್ಪನೆಯು ಸ್ಮಾರ್ಟ್‌ಫೋನ್‌ನ ಆಂತರಿಕ ಮೆಮೊರಿಯಂತೆಯೇ ಆಗಿದೆ. ಬಳಕೆದಾರರು ಇಂಟರ್ನೆಟ್ ಮೆಮೊರಿಯನ್ನು ತೆಗೆದುಹಾಕಲು ಅಥವಾ ಅದನ್ನು ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಅದರಲ್ಲಿ ಪ್ರಮುಖ ಮಾಹಿತಿ/ ಡೇಟಾವನ್ನು ಸೇವ್ ಮಾಡಬಹುದು. ಅದೇ ರೀತಿ, ಇ-ಸಿಮ್ ಸಹ ಬಳಕೆದಾರರ ಗುರುತಿನ ಮಾಡ್ಯೂಲ್ ಆಗಿದ್ದು, ಇದನ್ನು ಟೆಲಿಕಾಂ ಸಂಸ್ಥೆಗಳು ಸಕ್ರಿಯಗೊಳಿಸುತ್ತಾರೆ.

ಇ-ಸಿಮ್ ಕಾರ್ಡ್ ಬಳಕೆದಾರರ ಸಿಮ್ ಕಾರ್ಡ್‌ನ ಡಿಜಿಟಲ್ ನಕಲು ರೂಪವಾಗಿದೆ. ಒಂದೇ ಮೊಬೈಲ್ ಸಂಖ್ಯೆಗೆ ಇ-ಸಿಮ್ ಮತ್ತು ಭೌತಿಕ ಸಿಮ್ ಎರಡನ್ನೂ ಹೊಂದಲು ಸಾಧ್ಯವಿಲ್ಲ. ಬಳಕೆದಾರರು ಇ-ಸಿಮ್ ಸಕ್ರಿಯ ಮಾಡಿದರೆ, ಅವರ ಭೌತಿಕ ಸಿಮ್ ಕಾರ್ಡ್ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂದಹಾಗೇ ಇ-ಸಿಮ್‌ಗೂ ವೇಗದ ಇಂಟರ್ನೆಟ್ ಸೇವೆಗೆ ಪೂರಕ ಆಗಿರುವುದಿಲ್ಲ ಎಂಬುದನ್ನು ಗಮನಿಸಿ.

ಇ-ಸಿಮ್‌ಗಳನ್ನು ಭೌತಿಕವಾಗಿ ಬದಲಾಯಿಸುವುದು ಸಾಧ್ಯವಿಲ್ಲ. ಒಂದು ಬಳಕೆದಾರರು ವೇಳೆ ಇ-ಸಿಮ್ ಅನ್ನು ಸ್ವ್ಯಾಪ್ ಮಾಡಲು ಬಯಸಿದರೆ, ಅಧಿಕೃತ ಟೆಲಿಕಾಂ ಆಪರೇಟರ್ ಸಂಪರ್ಕಿಸಬೇಕಾಗುತ್ತದೆ. ಹಾಗೆಯೇ ಇ-ಸಿಮ್ ಅನ್ನು ಇನ್ನೊಂದು ಫೋನ್‌ನೊಂದಿಗೆ ಶೇರ್ ಮಾಡಲು/ ಬದಲಾಯಿಸಲು ಸಹ ಸಾಧ್ಯವಿಲ್ಲ. ಆದರೆ ಇ-ಸಿಮ್ ಅನ್ನು ಸ್ಮಾರ್ಟ್‌ಫೋನ್ ಮತ್ತು ಅದರೊಂದಿಗೆ ಲಿಂಕ್ ಆಗಿರುವ ಸ್ಮಾರ್ಟ್‌ವಾಚ್‌ನೊಂದಿಗೆ ಶೇರ್ ಮಾಡಬಹುದಾಗಿದೆ.

ಇ-ಸಿಮ್ ಉಪಯೋಗಗಳೇನು?
ಇ-ಸಿಮ್ (eSIM) ಬಳಕೆದಾರರಿಗೆ ಕೆಲವು ಅತ್ಯುತ್ತಮ ಪ್ರಯೋಜನಗಳನ್ನು ಒದಗಿಸುತ್ತದೆ. ಒಂದು ವೇಳೆ ಬಳಕೆದಾರರ ಐಫೋನ್ ಕಳ್ಳತನವಾಗಿದ್ದರೆ, ಕಳ್ಳರು ಸಿಮ್ ಅನ್ನು ತೆಗೆದುಹಾಕಲು ಮತ್ತು ಅದನ್ನು ಆಕ್ಸಸ್ ಮಾಡಲು ಸಾಧ್ಯವಿಲ್ಲ (ಐಫೋನ್ ಲಾಕ್ ಆಗಿದ್ದರೆ).

ಐಫೋನ್ 14 ಸರಣಿಯಲ್ಲಿ ಎಷ್ಟು ಇ-ಸಿಮ್ ಸಂಗ್ರಹಿಸಬಹುದು?
ಐಫೋನ್ 14 ಸರಣಿಯಲ್ಲಿ ಬಳಕೆದಾರರು ಸುಮಾರು ಎಂಟು ಇ-ಸಿಮ್‌ಗಳನ್ನು ಸಂಗ್ರಹಿಸಬಹುದು ಎಂದು ಆಪಲ್ ಹೇಳಿದೆ. ಆದರೆ ಬಳಕೆದಾರರು ಒಂದೇ ಸಮಯದಲ್ಲಿ ಎರಡು ಇ-ಸಿಮ್ ಮಾತ್ರ ಸಕ್ರಿಯವಾಗಿ ಇಟ್ಟುಕೊಳ್ಳಬಹುದು. ಹಾಗೆಯೇ ಬಳಕೆದಾರರು ಡೇಟಾ ರೋಮಿಂಗ್ ಆನ್ ಮತ್ತು ಆಫ್ ಮಾಡಬಹುದಾಗಿದೆ. ಅದಕ್ಕಾಗಿ ಸೆಟ್ಟಿಂಗ್‌ಗಳು > ಸೆಲ್ಯುಲಾರ್ > ಸೆಲ್ಯುಲಾರ್ ಡೇಟಾ ಆಯ್ಕೆ.

ಯುಎಸ್‌ನಲ್ಲಿ ಖರೀದಿಸಿದ ಐಫೋನ್ 14 ಭಾರತದಲ್ಲಿ ಇ-ಸಿಮ್ ಸಪೋರ್ಟ್ ಸಿಗುತ್ತಾ?
ಒಂದು ವೇಳೆ ಬಳಕೆದಾರರು ಯುನೈಟೆಡ್ ಸ್ಟೇಟ್‌ನಲ್ಲಿ ಅನ್ಲಾಕ್ ಮಾಡಲಾದ ಐಫೋನ್ 14 ಮಾಡೆಲ್ ಅನ್ನು ಖರೀದಿಸಿದರೆ, ಆ ಫೋನ್ ಭಾರತದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ. ಆದರೆ ಬಳಕೆದಾರರು ಐಫೋನ್ ಅನ್ನು ಹೊಂದಿಸುವ ವೇಳೆ ಇ-ಸಿಮ್‌ಗಾಗಿ (eSIM) ವಿನಂತಿಯನ್ನು ಇರಿಸಬೇಕಾಗುತ್ತದೆ. ಅಲ್ಲದೇ ಸ್ಕ್ಯಾನ್ ಮಾಡಲು QR ಕೋಡ್ ಇದೆಯಾ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.


Click it and Unblock the Notifications








