ಐಪಿಎಲ್ 2019: ಈ ಡಿಟಿಹೆಚ್ ಸೇವೆಗಳಲ್ಲಿ ಕ್ರೀಡಾ ಚಾನಲ್ ಗಳು ಉಚಿತ

By Gizbot Bureau
|

ದೇಶದ ಅತೀ ದೊಡ್ಡ ಕ್ರಿಕೆಟ್ ಇವೆಂಟ್ ಐಪಿಎಲ್ 017 ಆರಂಭವಾಗಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಐಪಿಎಲ್ ಪಂದ್ಯಾವಳಿಯ ಲಾಭ ಪಡೆದು, ಈಗಾಗಲೇ ಆರಂಭವಾಗಿರುವ ಹೊಸ ನಿಯಮಾವಳಿಗಳಿಂದ ಕಳೆದುಕೊಂಡಿರುವ ನೋಡುಗರನ್ನು ಮರಳಿ ಪಡೆಯುವ ಉದ್ದೇಶವನ್ನು ಹೊಂದಿರುವ ಡಿಟಿಹೆಚ್ ಸರ್ವೀಸ್ ಪ್ರೊವೈಡರ್ ಗಳು ಸ್ಪೋರ್ಟ್ಸ್ ಚಾನಲ್ ಗಳನ್ನು ಉಚಿತವಾಗಿ ನೀಡುವುದಕ್ಕೆ ಮುಂದಾಗಿದ್ದಾರೆ.

ಕೆಲವು ದಿನಗಳಿಗೆ ಸೀಮಿತವಾಗಿರುವ ಆಫರ್:

ಕೆಲವು ದಿನಗಳಿಗೆ ಸೀಮಿತವಾಗಿರುವ ಆಫರ್:

ಟೆಲಿಕಾಂ ಟಾಕ್ ತಿಳಿಸಿರುವಂತೆ ಏರ್ ಟೆಲ್ ಡಿಜಿಟಲ್ ಟಿವಿ ಮತ್ತು ಟಾಟಾ ಸ್ಕೈ ಈಗಾಗಲೇ ಕೆಲವು ಸ್ಪೋರ್ಟ್ಸ್ ಚಾನಲ್ ಗಳನ್ನು ಉಚಿತವಾಗಿ ನೀಡುತ್ತಿದೆ. ಆದರೆ ಈ ಆಫರ್ ಕೆಲವು ದಿನಗಳಿಗೆ ಮಾತ್ರವೇ ಸೀಮಿತವಾಗಿರುತ್ತದೆ ಮತ್ತು ಆಫರ್ ಅಂತ್ಯಗೊಂಡ ನಂತರ ಗ್ರಾಹಕರು ಈ ಚಾನಲ್ ಗಳಿಗೆ ಪಾವತಿಯನ್ನು ಮಾಡಬೇಕಾಗುತ್ತದೆ.

ಯಾವ ಚಾನಲ್ ಗಳು ಉಚಿತ:

ಯಾವ ಚಾನಲ್ ಗಳು ಉಚಿತ:

ಟಾಟಾ ಸ್ಕೈ ಬಳಕೆದಾರರಿಗೆ ಉಚಿತ ಚಾನಲ್ ಗಳ ಬಗ್ಗೆ ಈಗಾಗಲೇ ಮೆಸೇಜ್ ಗಳನ್ನು ಕಳುಹಿಸಲಾಗಿದೆ. ಇದರಲ್ಲಿ ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ಟ್ ಸ್ಪೋರ್ಟ್ಸ್ 1 ತಮಿಳು. ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ಟ್ ಸ್ಪೋರ್ಟ್ಸ್ 1 ಕನ್ನಡ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ ಇದರಲ್ಲಿ ಲಭ್ಯವಾಗುತ್ತದೆ.

ಎಷ್ಟು ದಿನ ಉಚಿತ?

ಎಷ್ಟು ದಿನ ಉಚಿತ?

ಮೆಸೇಜ್ ನಲ್ಲಿ ಮಾರ್ಚ್ 23 ರಿಂದ ಮೇ 19 ರ ವರೆಗೆ ಬಳಕೆದಾರರು ಈ ಚಾನಲ್ ಗಳನ್ನು ಉಚಿತವಾಗಿ ವೀಕ್ಷಿಸಬಹುದು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ ಪ್ರಾದೇಶಿಕ ಸರ್ಕಲ್ ನಲ್ಲಿರುವ ಗ್ರಾಹಕರು ಕೂಡ ಈ ಆಫರ್ ನ್ನು ಎಂಜಾಯ್ ಮಾಡಬಹುದು.

ಏರ್ ಟೆಲ್ ನಲ್ಲಿ ಉಚಿತವಾಗಿರುವ ಚಾನಲ್ ಗಳು:

ಏರ್ ಟೆಲ್ ನಲ್ಲಿ ಉಚಿತವಾಗಿರುವ ಚಾನಲ್ ಗಳು:

ಇದೇ ರೀತಿ ಏರ್ ಟೆಲ್ ಡಿಜಿಟಲ್ ಟಿವಿ ಕೂಡ ಉಚಿತ ಪ್ರಿವ್ಯೂ ಚಾನಲ್ ನ್ನು ಈಗಾಗಲೇ ಇರುವ ಗ್ರಾಹಕರಿಗೆ ಮತ್ತು ಹೊಸದಾಗಿ ಸೇರ್ಪಡೆಯಾಗುವ ಗ್ರಾಹಕರಿಗೆ ನೀಡುತ್ತಿದೆ. ಪ್ರಾರಂಭಿಕವಾಗಿ ಸ್ಟಾರ್ ಸ್ಪೋರ್ಟ್ಸ್ 1 ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ ಮೇ 19, 2019 ರ ವರೆಗೆ ಹೊಸ ಬಳಕೆದಾರರಿಗೆ ಲಭ್ಯವಾಗುತ್ತದೆ ಎಂದು ಹೇಳಲಾಗಿತ್ತು.

ವಿಸ್ತರಿಸಿದ ನಂತರ ಏರ್ ಟೆಲ್ ನಲ್ಲಿರುವ ಚಾನಲ್ ಗಳು:

ವಿಸ್ತರಿಸಿದ ನಂತರ ಏರ್ ಟೆಲ್ ನಲ್ಲಿರುವ ಚಾನಲ್ ಗಳು:

ನಂತರ ಇದನ್ನು ವಿಸ್ತರಿಸಲಾಗಿದ್ದು ಈಗಾಗಲೇ ಏರ್ ಟೆಲ್ ನಲ್ಲಿರುವ ಬಳಕೆದಾರರು ಕೂಡ ಈ ಸ್ಪೋರ್ಟ್ಸ್ ಚಾನಲ್ ಗಳನ್ನು ಪಡೆಯಲಿದ್ದಾರೆ ಎಂದು ಹೇಳಲಾಯಿತು. ಇದರಲ್ಲಿ ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್, ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು, ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಬಾಂಗ್ಲಾ ಚಾನಲ್ ಗಳು ಉಚಿತವಾಗಿ ಸಿಗುತ್ತದೆ.

ಡಿ2ಹೆಚ್ ನಲ್ಲೂ ಕೂಡ ಆಫರ್:

ಡಿ2ಹೆಚ್ ನಲ್ಲೂ ಕೂಡ ಆಫರ್:

ಟೆಲಿಕಾಂ ಟಾಕ್ ಹೇಳಿರುವಂತೆ ಇನ್ನೊಂದು ಡಿಟಿಹೆಚ್ ಪ್ರೊವೈಡರ್ D2h ಕೂಡ ಹೊಸ ಹೊಸ ಭಾಷೆಯ ಫೀಡ್ ನ್ನು ಸ್ಟಾರ್ ಸ್ಪೋರ್ಟ್ಸ್ 2 ಗಾಗಿ ಪ್ರಕಟಿಸಿದೆ. ಇದರಲ್ಲಿ 5 ಭಾಷೆಗಳ ಫೀಡ್ ನ್ನು ಸ್ಟಾರ್ ಸ್ಪೋರ್ಟ್ಸ್ 2 ಹೊಂದಿರುತ್ತದೆ ಮತ್ತು ಹಿಂದಿ, ಇಂಗ್ಲೀಷ್, ತಮಿಳು,ಕನ್ನಡ ಮತ್ತು ಬಾಂಗ್ಲಾ ಭಾಷೆಗಳು ಇದರಲ್ಲಿ ಒಳಗೊಂಡಿರುತ್ತದೆ.

Best Mobiles in India

Read more about:
English summary
IPL 2019: These DTH service providers are offering sports channel for free

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X